ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ
Team Udayavani, May 19, 2024, 7:45 AM IST
ಕಾರ್ಕಳ: ಕಾರ್ಕಳ ತಾಲೂಕಿನಲ್ಲಿ ಹಲವು ಕೆರೆಗಳಿವೆ. ಒಂದೊಂದು ಕೆರೆಯದ್ದೂ ಒಂದೊಂದು ಕತೆ. ಕೆಲವು ಕೆರೆಗಳಲ್ಲಿ ಹೂಳು ತುಂಬಿ ಕೆರೆಗಳ ಅಸ್ತಿತ್ವವೇ ಇಲ್ಲದೇ ಆಟದ ಮೈದಾನಗಳಾಗಿವೆ. ಕೆಲವು ಕೆರೆಗಳು ಕೊಳಚೆ ನೀರು, ಕಸ ಮೊದಲಾದ ಮಾಲಿನ್ಯಕ್ಕೆ ಒಳಗಾಗಿ ಚರಂಡಿಗಳಂತಾಗಿವೆ. ಈ ಎಲ್ಲ ಕೆರೆಗಳ ಪುನಶ್ಚೇತನಕ್ಕೆ ಕಾಳಜಿ ವಹಿಸಬೇಕು. ಆದರೆ ಅದಾಗುತ್ತಿಲ್ಲ. ಇಂಥದ್ದೇ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕೆರೆಗಳಲ್ಲಿ ಕಾಂತಾವರ-ಬೋಳ ಗ್ರಾಮದ ಗಡಿಭಾಗದಲ್ಲಿರುವ (ಒಂಜಾರಕಟ್ಟೆ) ಪ್ರಾಚೀನ ಕೆರೆ ಬಾವದ ಕೆರೆಯೂ ಒಂದು.
ಕಾಂತಾವರ- ಬೋಳ ಈ ಎರಡೂ ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಕೆರೆಯಿದು. ಕಡಂದಲೆ ಗ್ರಾಮಕ್ಕೂ ಸಂಪರ್ಕವಿದೆ. ಸುಮಾರು 1 ಎಕ್ರೆಯಷ್ಟು ವಿಶಾಲವಾಗಿದೆ. ಬಾವದಗುತ್ತು, ಒಂಜಾರಕಟ್ಟೆ, ಪಿಲಿಯೂರು ಪರಿಸರ ಕೃಷಿ ಭೂಮಿಗೆ ಹಾಗೂ 200ಕ್ಕೂ ಅಧಿಕ ಕುಟುಂಬಗಳಿರುವ ಜನವಸತಿ ಪ್ರದೇಶಕ್ಕೆ ನೀರು ಒದಗಿಸುತ್ತಿತ್ತು ಈ ಕೆರೆ. ಸುತ್ತಲಿನ ಅಂತರ್ಜಲ ಮಟ್ಟ ಹೆಚ್ಚಿಸುವುದರಲ್ಲೂ ಪ್ರಮುಖ ಪಾತ್ರ ವಹಿಸಿತ್ತು. ಹಸುರು ಕಾಡಿನ ಮಧ್ಯೆ ಇರುವ ಕೆರೆ. ತಗ್ಗು ಪ್ರದೇಶದಲ್ಲಿ ಇರುವ ಕಾರಣಕ್ಕೆ ಕಾಲ ಕ್ರಮೇಣ ನೆರೆಗೆ, ಭೂಕುಸಿತಕ್ಕೆ ಗುಡ್ಡದ ಮಣ್ಣು ಹರಿದು ಬಂದು ಕೆರೆಯ ಒಡಲು ಸೇರಿದ್ದರಿಂದ ಕೆರೆ ಸಂಪೂರ್ಣ ಮುಚ್ಚಿ ಮೈದಾನದಂತೆ ಕಾಣುತ್ತಿದೆ.
ಈ ಕೆರೆಯ ಅಭಿವೃದ್ಧಿ ಎರಡೂ ಪಂಚಾಯತ್‌ಗಳ ಸಮಾನ ಹೊಣೆಗಾರಿಕೆ. ಆದರೆ ಸತತ ನಿರ್ಲಕ್ಷ್ಯ, ಇಚ್ಛಾಶಕ್ತಿ ಕೊರತೆಯಿಂದ ಅಭಿವೃದ್ಧಿ ಆಗಿಲ್ಲ. ಬಿಡಿಗಾಸು ಅನುದಾನವನ್ನೂ ಮೀಸಲಿಟ್ಟಿಲ್ಲ. ಹೀಗಾಗಿ ಕೆರೆ ಈಗ ಬಡವಾಗಿದೆ.
ಎರಡೂ ಗ್ರಾಮ ಪಂಚಾಯತ್‌ಗಳ ಕೃಷಿ ಪ್ರದೇಶ, ಜನವಸತಿಗೆ ಈ ಕೆರೆ ಅತೀ ಅವಶ್ಯ. ಕೃಷಿ ಚಟುವಟಿಕೆಗೂ ಅನುಕೂಲವಾಗಲಿದೆ. ಕಡು ಬೇಸಗೆಯಲ್ಲಿ ಅಂತರ್ಜಲ ಮಟ್ಟ ಕುಸಿದು ಉಂಟಾ ಗುವ ಸಮಸ್ಯೆಗೂ ಇದು ಪರಿಹಾರವಾಗಬಲ್ಲುದು. ಇದರತ್ತ ಗ್ರಾಮ ಪಂಚಾಯತ್, ತಾಲೂಕು ಆಡಳಿತ, ಸಣ್ಣ ನೀರಾವರಿ ಇಲಾಖೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ.
ಅನ್ಯ ಇಲಾಖೆಗೆ ಹಂಚಿಹೋಗಿವೆ
ಕೆರೆಗಳ ಅಭಿವೃದ್ಧಿ ಇಲಾಖೆಗಳಿಗೆ ಹಂಚಿಹೋಗಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಗೂ ಕೆರೆಗಳು ಬರುತ್ತವೆ. ಸಂಬಂಧಿಸಿದ ಪಂಚಾಯತ್‌ಗಳು ಆಯಾ ಗ್ರಾಮದ ಕೆರೆಗಳ ಅಭಿವೃದ್ಧಿ ಕುರಿತಂತೆ ಇಲಾಖೆಗೆ ವರದಿ ನೀಡುತ್ತವೆ. ಅನುದಾನ ಆಧಾರದಲ್ಲಿ ಕೆರೆ ಅಭಿವೃದ್ಧಿಗೊಳಿಸಲಾಗುವುದು.
-ಸುರೇಂದ್ರನಾಥ್,
ಎಇಇ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ
ಕೆರೆ ಅಭಿವೃದ್ಧಿ ಮುಟ್ಟಿ ನೋಡಿಲ್ಲ
ಒಂದು ಬಾರಿಯೂ ಕೆರೆಯ ಅಭಿವೃದ್ಧಿ ಆಗಿಲ್ಲ. ಅಭಿವೃದ್ಧಿ ಆಗಬೇಕು ಎನ್ನುವ ಅಭಿಲಾಷೆ ನಮ್ಮಲ್ಲಿ ಇದ್ದರೂ ಅನುದಾನದ ಕೊರತೆಯಿಂದ ಸಾಧ್ಯ ವಾಗಿಲ್ಲ. ಬೇರೆ ಯಾರಿಗೂ ಇದರ ಬಗ್ಗೆ ಕಾಳಜಿ ಇಲ್ಲ. ಅನುದಾನ ದೊರೆತರೆ ಬೋಟ್, ಗಾರ್ಡನ್ ಹೀಗೆ ಅಭಿವೃದ್ಧಿಗೊಳಿಸಬಹುದು. ನಮ್ಮ ಕಡೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು.
-ಸುಧಾಕರ ಆಚಾರ್ಯ,
ಸಂಚಾಲಕರು, ಯಕ್ಷಾಕ್ಷರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಘ, ಕಾಂತಾವರ
-ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.