ಕಣ್ಮರೆಯಾದ ನಕಾಶೆ
Team Udayavani, Jun 29, 2020, 5:07 AM IST
ನಕಾಶೆ ಅಂದರೆ ಹಿಂದಿನಿಂದಲೂ ಮನುಷ್ಯನಿಗೆ ಅದೇನೋ ಕುತೂಹಲ. ಬಹಳ ಹಿಂದಿನ ಕಾಲದಲ್ಲಿ ಸಮುದ್ರಯಾನ ಮಾಡುತ್ತಿದ್ದ ನಾವಿಕರಿಗೆ ದಾರಿದೀಪವಾಗಿದ್ದು ಇದೇ ನಕಾಶೆ. ನಿಧಿ ಅವಿತಿಡಲು, ನಿಧಿ ಪತ್ತೆ ಹಚ್ಚಲು ಅಗತ್ಯವಾಗಿ ಬೇಕಾ ಗಿದ್ದೇ ನಕಾಶೆ. ರಾಜ್ಯ- ದೇಶ ಗಳ ಗಡಿ, ವ್ಯಾಪ್ತಿ, ವಿಸ್ತಾರವೆಲ್ಲವನ್ನೂ ನಕಾಶೆಗಳು ತಿಳಿಸುತ್ತಿದ್ದವು. ಇದೀಗ, ಗೂಗಲ್ ಮ್ಯಾಪು, ಸ್ಯಾಟಲೆ„ಟ್ ನ್ಯಾವಿ ಗೇಷನ್ ಮತ್ತಿತರೆ ತಂತ್ರಜ್ಞಾನಗಳು ನಕಾಶೆಯ ಸ್ಥಾನವನ್ನು ತುಂಬಿವೆ.
ಹಿಂದೆಲ್ಲಾ ನಗರಗಳ ನಕಾಶೆಯನ್ನು ಬಸ್ ಸ್ಟಾಂಡು, ಪುಸ್ತಕ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಪಾಕೆಟ್ ನಲ್ಲಿ ಇಡಬಹುದಾಗಿದ್ದ ಆ ಕಾಗದದ ನಕಾಶೆಯನ್ನು ಬಿಡಿಸಿದರೆ, ನಗ ರದ ಚಿತ್ರಣ ಕಣ್ಮುಂದೆ ತೆರೆದು ಕೊಳ್ಳುತ್ತಿತ್ತು. ಈಗ, ಸ್ಮಾರ್ಟ್ ಫೋನಿನಲ್ಲಿ ಪ್ರಪಂಚದ ಯಾವುದೇ ಮೂಲೆಯನ್ನೂ ಕ್ಷಣ ಮಾತ್ರದಲ್ಲಿ ವೀಕ್ಷಿಸಬಹುದು. ಅಲ್ಲಿನ ಸರ್ಚ್ ಬಾಕ್ಸ್ ನಲ್ಲಿ ಸ್ಥಳದ ಹೆಸರನ್ನು ಟೆ„ಪ್ ಮಾಡಿದರೆ ಸಾಕು;
ನಕಾಶೆ ಝೂಮ್ ಇನ್ ಆಗಿ ಆ ಸ್ಥಳದ ಚಿತ್ರ ಬಳಕೆದಾರನ ಕಣ್ಮುಂದೆ ಇರುತ್ತದೆ. ಅದರಲ್ಲಿ ದಾರಿ ಮಾತ್ರವಲ್ಲ, ಮನೆಗಳು, ಅಂಗಡಿ ಮಳಿಗೆಗಳು, ಪ್ರವಾಸಿ ತಾಣ ಗಳು, ರೈಲು-ಬಸ್ ವೇಳಾಪಟ್ಟಿ ಹೀಗೆ ಎಲ್ಲವೂ ನಮೂದಾಗಿರು ತ್ತದೆ. ಆದರೂ, ಕಾಗದದ ನಕಾಶೆ ಬಿಡಿಸಿದಾಗ ಸಿಗುತ್ತಿದ್ದ ಖುಷಿ ಡಿಜಿಟಲ್ ನಕಾಶೆ ನೋಡಿದಾಗ ಸಿಗದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.