ನಮ್ಮೊಳಗಿನ ನಾಟಕ ನಾವು ಬಯಸಿದಂತೆ ನಡೆಯಲಿ


Team Udayavani, Nov 24, 2020, 5:46 AM IST

ನಮ್ಮೊಳಗಿನ ನಾಟಕ ನಾವು ಬಯಸಿದಂತೆ ನಡೆಯಲಿ

ಬದುಕು ನಾಟಕ ರಂಗ ಎಂದರು ದಾಸರು. ನಮ್ಮ ಬದುಕಿನಲ್ಲಿ ನಾವು ಪ್ರೇಕ್ಷಕರಾಗಿರು ತ್ತೇವೆಯೇ, ನಟರಾಗಿರುತ್ತೇವೆಯೇ ಅಥವಾ ನಿರ್ದೇಶಕರಾಗುತ್ತೇವೆಯೇ ಅನ್ನುವುದು ಪ್ರಶ್ನೆ. ನಿರ್ದೇಶಕರಾದರೆ ಬದುಕು ಹಸನಾಗುತ್ತದೆ.

ಒಂದು ನಾಟಕ ಪ್ರದರ್ಶನ ಕಾಣುವಾಗ ಮೂರು ವರ್ಗದ ಜನರು ಸಾಕ್ಷಿಗಳಾಗುತ್ತಾರೆ. ಪ್ರೇಕ್ಷಕರದು ಒಂದನೆಯ ವರ್ಗ, ನಟರದ್ದು ಇನ್ನೊಂದು. ನಾಟಕ ಸಂಭವಿಸುವುದಕ್ಕೆ ಕಾರಣನಾದ ನಿರ್ದೇಶಕನದ್ದು ಮತ್ತೂಂದು. ಈ ಮೂರು ವರ್ಗದ ಮಂದಿಯಲ್ಲಿ ನಿರ್ದೇ ಶಕನಿಗೆ ನಾಟಕವು ಉಳಿದೆಲ್ಲರಿಗಿಂತ ಹೆಚ್ಚು ಚೆನ್ನಾಗಿ ಅರ್ಥವಾಗಿರುತ್ತದೆ, ಆತ ಎಲ್ಲರಿಗಿಂತ ಹೆಚ್ಚು ಆಳವಾಗಿ ನಾಟಕದಲ್ಲಿ ತೊಡಗಿಸಿ ಕೊಂಡಿರುತ್ತಾನೆ. ಏಕೆಂದರೆ, ಆತ ನಾಟಕವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡವನು, ಅದನ್ನು ಸೃಷ್ಟಿಸಿದವನು, ಅದು ಪ್ರದರ್ಶನ ಕಾಣುವಂತೆ ಮಾಡಿದವನು.

ನಟ-ನಟಿಯರಿಗೆ ಅವರವರ ಪಾತ್ರಗಳು ಮಾತ್ರ ಚೆನ್ನಾಗಿ ಗೊತ್ತಿರುತ್ತವೆ. ಪ್ರೇಕ್ಷಕರಿಗೆ ಇದ್ಯಾವುದೂ ಗೊತ್ತಿರುವು ದಿಲ್ಲ. ನಾಟಕ ರಂಗದ ಮೇಲೆ ಪ್ರದರ್ಶನ ಕಾಣುತ್ತಿದ್ದಂತೆ ಅವರು ನೋಡಿ ಆಶ್ಚರ್ಯ ಚಕಿತರಾಗುತ್ತಾರೆ, ನಗುತ್ತಾರೆ, ಅಳುತ್ತಾರೆ. ನಾಟಕ ನೋಡಿ ಅತೀ ಹೆಚ್ಚು ಭ್ರಮಿತ ರಾಗುವುದು ಪ್ರೇಕ್ಷಕರು. ಪ್ರೇಕ್ಷಕ ನಾಟಕದ ಒಟ್ಟು ಪ್ರಕ್ರಿಯೆಯಲ್ಲಿ ಅತ್ಯಂತ ಕಡಿಮೆ ತೊಡಗಿಸಿ ಕೊಂಡವನಾದರೂ ಅದರೊಡನೆ ಅತ್ಯಂತ ಹೆಚ್ಚು ಬಂಧಿಸಲ್ಪಡುವುದು ಆತನೇ. ನಟ ಇವತ್ತು ಒಂದು ಪಾತ್ರದಲ್ಲಿರಬಹುದು, ನಾಳೆ ಇನ್ನೊಂದಕ್ಕೆ ಬದಲಾಗಬಹುದು. ಅವರು ನಾಟಕ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರು ತ್ತಾರೆ ಆದರೆ ಪ್ರೇಕ್ಷಕನಿಗಿಂತ ಕಡಿಮೆ ಬಂಧಿಸ ಲ್ಪಟ್ಟಿರುತ್ತಾರೆ.

ನಿರ್ದೇಶಕ ಅತ್ಯಂತ ಹೆಚ್ಚು ತೊಡಗಿಸಿ ಕೊಂಡವನಾದರೂ ನಾಟಕದ ಜತೆಗೆ ಅತ್ಯಂತ ಕನಿಷ್ಠ ಮಟ್ಟದಲ್ಲಿ ಬಂಧಿಸಲ್ಪಟ್ಟಿರುತ್ತಾನೆ. ನಾಟಕ ನಡೆಸುತ್ತಿರುವುದು ಅವನು, ಆದರೆ ಅದರೊಳಗಿನ ಆಗುಹೋಗುಗಳಿಂದ ಕಿಂಚಿತ್ತೂ ಪ್ರಭಾವಿತನಾಗುವುದಿಲ್ಲ. ಯಾಕೆಂದರೆ, ನಾಟಕದ ಸೃಷ್ಟಿಕರ್ತ ಆತನೇ.

ನಮ್ಮ ಬದುಕಿನ ಅವಕಾಶಗಳು ಇವು, ಏಕೆಂದರೆ ಬದುಕು ಕೂಡ ಒಂದು ನಾಟಕವೇ. ನಾವು ನಟರಾಗಬಹುದು. ನಾಟಕ ಪ್ರದರ್ಶನ ದಲ್ಲಿ ಪೂರ್ತಿಯಾಗಿ ಮುಳುಗಿಹೋಗುವ ಪ್ರೇಕ್ಷಕರಾಗಬಹುದು ಅಥವಾ ಇಡಿಯ ನಾಟಕವನ್ನು ಹೇಗೆ ಬೇಕೋ ಹಾಗೆ ಕಟ್ಟಿ ಕೊಡುವ ನಿರ್ದೇಶಕನೂ ಆಗಬಹುದು. ನಾವು ಈ ಮೂರು ಆಯ್ಕೆಗಳಲ್ಲಿ ಯಾವು ದನ್ನೂ ಆರಿಸಿಕೊಳ್ಳಬಹುದು. ಆದರೆ ನಿರ್ದೇಶಕನಾದರೆ ಬದುಕನ್ನು ಹೇಗೆ ಬೇಕೋ ಹಾಗೆ ಮುನ್ನಡೆಸಬಹುದು. ಅದನ್ನು ಬಿಟ್ಟು ಇನ್ನುಳಿದ ಎರಡು ಆಯ್ಕೆಗಳನ್ನು ಆರಿಸಿ ಕೊಂಡರೆ ಬದುಕು ನಿಯಂತ್ರಣವಿಲ್ಲದ, ಅಂತ್ಯವಿಲ್ಲದ . ನಾಟಕವಾಗಬಹುದು.

ನಮ್ಮ ಬದುಕಿನ ನಾಟ ಕದಲ್ಲಿಯೂ ಎರಡು ಭಾಗ ಗಳಿವೆ. ಒಂದು ನಮ್ಮ ಒಳಗಿ ನದ್ದು, ಇನ್ನೊಂದು ಹೊರಗಿ ನದ್ದು. ನಮ್ಮ ಹೊರಗೆ ನಡೆಯುವ ನಾಟಕ ದಲ್ಲಿ ನಾವು ಹೇಳಿ ದಂತೆ ಕೇಳುವ “ನಟ- ನಟಿಯರು’ ಇರ ಲಾರರು; ಹಾಗಾಗಿ ಅದು ಶತ ಪ್ರತಿಶತ ನಾವು ಬಯಸಿದಂತೆ ನಡೆ ಯುವುದಿಲ್ಲ. ಆಗ ನಮ್ಮ ಒಳಗೆ, ಮನೋ ಭಾವನಾತ್ಮಕ ನೆಲೆಯಲ್ಲಿ ನಡೆಯುವ ನಾಟ ಕವೂ ನಿಯಂತ್ರಣ ತಪ್ಪಲಾರಂಭಿಸುತ್ತದೆ. ನಾವು ನಿರ್ದೇಶಕರಾಗಬೇಕಾಗಿರುವುದು ಇಲ್ಲೇ. ನಮ್ಮೊಳಗೆ ನಡೆಯುವ ನಾಟಕದ ಸೂತ್ರವನ್ನು ನಾವು ಕೈಯೊಳಗೆ ಇರಿಸಿಕೊಂಡು ನಮಗೆ ಬೇಕಾದಂತೆ ಮುನ್ನಡೆಸಬೇಕು.

ನಮ್ಮೊಳಗಿನ ನಾಟಕ ನಾವು ಬಯಸಿದಂತೆ ಮುನ್ನಡೆಯುವುದಕ್ಕಾಗಿ ತಾಲೀಮನ್ನು ಇಂದಿನಿಂದಲೇ ಆರಂಭಿಸೋಣ. ಒಳಗಿನ ನಟ -ನಟಿಯರು ನಾವು ಹೇಳಿದಂತೆ ಕೇಳಲಿ. ಒಟ್ಟು ನಾಟಕ ಹೇಗೆ ಇರಬೇಕು ಎಂಬ ಸ್ಪಷ್ಟ ಚಿತ್ರಣವನ್ನು ಕಲ್ಪಿಸಿಕೊಂಡು ಅದರಂತೆಯೇ ನಾಟಕ ಸಂಭವಿಸುವಂತೆ ಮಾಡಿ.

ಟಾಪ್ ನ್ಯೂಸ್

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.