ಡ್ನೂಕ್ ದಂಪತಿಗೆ ರಾಜವಿದಾಯ
Team Udayavani, Feb 22, 2021, 6:30 AM IST
ಬ್ರಿಟನ್ ರಾಜಮನೆತನದಿಂದ ದೂರ ಉಳಿಯಲು ವರ್ಷದ ಹಿಂದೆಯೇ ನಿರ್ಧರಿಸಿದ್ದ ಬ್ರಿಟನ್‌ನ ರಾಜ ಕುಮಾರ ಡ್ನೂಕ್ ಹಾಗೂ ಅವರ ಪತ್ನಿ ಮೆಘನ್, ಆ ಮನೆತನದಿಂದ ಅಧಿಕೃತವಾಗಿ ಬಿಡುಗಡೆ ಸಿಕ್ಕಿದೆ. ಅದರ ಜತೆಗೆ, ರಾಜಮನೆತನದ ವತಿಯಿಂದ ಅವರಿಗೆ ವಹಿಸಲಾಗಿದ್ದ ಗುರುತರ ಜವಾಬ್ದಾರಿಗಳನ್ನು ರಾಜ ಮನೆತನ ಹಿಂಪಡೆದುಕೊಂಡಿದೆ. ಇನ್ನು ಮುಂದೆಂದೂ ಅವರು ರಾಜಮನೆತನಕ್ಕೆ ವಾಪಸ್ ಆಗುವ ಸಾಧ್ಯತೆಗಳೂ ಇಲ್ಲ ಎಂದು ಅರಮನೆ ಸ್ಪಷ್ಟವಾಗಿ ಹೇಳಿದೆ.
ಈಗ ನಿರ್ಧಾರವೇಕೆ?
ಹ್ಯಾರಿ ಮತ್ತು ಮೆಘನ್ ಜೋಡಿ, 2020ರಲ್ಲೇ ರಾಜ ಮನೆತನವನ್ನು ತೊರೆಯುವ ಬಗ್ಗೆ ಅಧಿಕೃತವಾಗಿ ಘೋಷಿಸಿತ್ತು. ಆಗ ಇವರ ಮನವಿಯನ್ನು ವರ್ಷದ ಅನಂತರ ಪರಿಶೀಲಿಸಲಾಗುವುದು ಎಂದು ರಾಜಮನೆ ತನ ಸೂಚಿಸಿತ್ತು. ಆ ಮೂಲಕ ಹ್ಯಾರಿ ಮತ್ತು ಮೆಘನ್‌ಗೆ ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸಲು ಒಂದು ವರ್ಷದ ಅವಕಾಶ ಕಲ್ಪಿಸಲಾಗಿತ್ತು. ವರ್ಷದ ಅನಂತರವೂ, ಹ್ಯಾರಿ ಮತ್ತು ಮೆಘನ್ ಅವರ ನಿರ್ಧಾರ ಬದಲಾಗಿಲ್ಲದ ಕಾರಣ, ಮನೆತನದಿಂದ ಅವರಿಬ್ಬರೂ ಹೊರಗುಳಿಯುವ ನಿರ್ಧಾರಕ್ಕೆ ಈಗ ಅಧಿಕೃತ ಮೊಹರು ಒತ್ತಲಾಗಿದೆ.
ಈಗ ಎಲ್ಲಿದ್ದಾರೆ?
ಸದ್ಯ ಹ್ಯಾರಿ ಮತ್ತು ಮೆಘನ್ ಇಬ್ಬರೂ ಅಮೆರಿಕ ಕ್ಯಾಲಿಫೋರ್ನಿಯಾದಲ್ಲಿ ವಾಸ ಮಾಡುತ್ತಿದ್ದಾರೆ. ಮೆಘನ್ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.
ಕೊನೆ ಪ್ರಯತ್ನವೂ ವಿಫಲ
ರಾಣಿ ಎಲಿಜಬೆತ್ 2 ಅವರು ಹ್ಯಾರಿ ಅವರೊಂದಿಗೆ ಈಗಾಗಲೇ ಚರ್ಚಿಸಿದ್ದು, ಅದರ ಆಧಾರದ ಮೇಲೆ ಹ್ಯಾರಿ ಅವರ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ಇನ್ನು ಮುಂದೆ ಮನೆತನದ ಯಾವುದೇ ಜವಾಬ್ದಾರಿ, ಕರ್ತವ್ಯಗಳನ್ನು ಹ್ಯಾರಿ ಮತ್ತು ಮೆಘನ್ ನಿಭಾಯಿಸುವಂತಿಲ್ಲ. ಆದರೆ ಕುಟುಂಬ ಸದಸ್ಯ ರಂತೆ ಬಂದು ಹೋಗಬಹುದಾಗಿದೆ.
ಉತ್ತರಾಧಿಕಾರದ ಅಧಿಕಾರವಿದೆಯೇ?
ಅರಮನೆಯ ನಿಯಮಗಳ ಪ್ರಕಾರ, ಹ್ಯಾರಿಗೆ ಉತ್ತರಾಧಿಕಾರದ ಅಧಿಕಾರವಿದೆ. ಅಂದರೆ, ಸರದಿ ಪ್ರಕಾರ, ಹ್ಯಾರಿ 6ನೇಯವರಾಗಿ ನಿಲ್ಲುತ್ತಾರೆ. ಅಂದರೆ, ಸದ್ಯ ರಾಣಿ ಎಲಿಜೆಬೆತ್ ಅವರಲ್ಲಿ ಅಧಿಕಾರವಿದೆ. ಉತ್ತರಾಧಿಕಾರದ ಮೊದಲ ಸಾಲಿನಲ್ಲಿ ಪ್ರಿನ್ಸ್ ಚಾರ್ಲ್ಸ್ ಮತ್ತು ಪತ್ನಿ ಕೆಮಿಲಿಯಾ ಇದ್ದಾರೆ. 2ನೇ ಸಾಲಿನಲ್ಲಿ ಡ್ನೂಕ್ ಆಫ್ ಕೆಂಬ್ರಿಡ್ಜ್ ಪ್ರಿನ್ಸ್ ವಿಲಿಯಂ ಮತ್ತು ಕೇಟ್ ಮಿಡಲ್‌ಸನ್, ಮೂರು, ನಾಲ್ಕು ಮತ್ತು ಐದನೇ ಸಾಲಿನಲ್ಲಿ ಕ್ರಮವಾಗಿ ಇವರ ಮೂರು ಮಕ್ಕಳು ಇದ್ದಾರೆ. ಇದಾದ ಮೇಲೆ ಹ್ಯಾರಿ 6ನೇಯವರಾಗಿ ಬರುತ್ತಾರೆ. ಒಂದು ವೇಳೆ ವಿಲಿಯಂ ಮತ್ತು ಕೇಟ್‌ಗೆ ಇನ್ನೊಂದು ಮಗುವಾದರೆ ಹ್ಯಾರಿ ಉತ್ತರಾಧಿಕಾರಿ ಸಾಲು ಮತ್ತಷ್ಟು ಕೆಳಗೆ ಇಳಿಯಲಿದೆ.
ಡ್ನೂಕ್ ಪದವಿಗಳು ರಾಣಿಗೆ ಹಸ್ತಾಂತರ
ರಾಜಮನೆತನದಿಂದ ಡ್ನೂಕ್ ಅವರು ಕ್ಯಾಪ್ಟನ್ ಜನರಲ್ ಆಫ್ ರಾಯಲ್ ಮರೈನ್ಸ್ ಸೇರಿದಂತೆ ಬ್ರಿಟನ್ ಸೇನೆಯ ಇನ್ನಿತರ ಕೆಲವು ಜವಾಬ್ದಾರಿ ಯುತ ಹುದ್ದೆಗಳಿಂದ ಡ್ನೂಕ್ ಅವರನ್ನು ತೆರವುಗೊಳಿಸಲಾಗಿದೆ. ಸೂಕ್ತ ವ್ಯಕ್ತಿಗಳಿಗೆ ಅಧಿಕಾರ ಹಸ್ತಾಂತರಗೊಳ್ಳುವವರೆಗೂ ಅವು ರಾಣಿಯ ಉಸ್ತುವಾರಿಯಲ್ಲೇ ಇರಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…
Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.