ಪೊಲೀಸರು ಆತ್ಮಸಾಕ್ಷಿಯಾಗಿ ಕರ್ತವ್ಯ ನಿರ್ವಹಿಸಿ: ಸುಬ್ರಹ್ಮಣ್ಯ ಜೆ.ಎನ್.
13ನೇ ತಂಡದ ಪೊಲೀಸ್ ಕಾನ್‌ಸ್ಟೆಬಲ್‌ಗಳ ನಿರ್ಗಮನ ಪಥ ಸಂಚಲನ
Team Udayavani, Feb 26, 2022, 5:31 AM IST
ಉಡುಪಿ: ಮಾನಸಿಕ, ದೈಹಿಕ ಒತ್ತಡವನ್ನು ಮೀರಿ ಆತ್ಮಸಾಕ್ಷಿಗೆ ಅನುಗುಣವಾಗಿ ಪೊಲೀಸರು ಕರ್ತವ್ಯ ನಿರ್ವಹಿಸಬೇಕು. ಮಹಾಭಾರತ, ರಾಮಾ ಯಣದ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸುಬ್ರಹ್ಮಣ್ಯ ಜೆ.ಎನ್. ಹೇಳಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ 13ನೇ ತಂಡದ ಪೊಲೀಸ್ ಕಾನ್‌ಸ್ಟೆಬಲ್‌ಗಳ ನಿರ್ಗಮನ ಪಥ ಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಶಿಕ್ಷಣ ಮುಗಿಸಿ ಪೊಲೀಸ್ ಸಶಸ್ತ್ರ ತಂಡಕ್ಕೆ ಸೇರಿ ಸಮಾಜಸೇವೆ ಮಾಡಲು ತಯಾರಾ ಗಿರುವ ಶಿಕ್ಷಣಾರ್ಥಿಗಳು ಉನ್ನತ ಗುರಿ ಇರಿಸಿಕೊಂಡು ಕಾರ್ಯ ಪ್ರವೃತ್ತ ರಾಗಬೇಕು. ದೈಹಿಕ ಸಹಿತ ಆರೋಗ್ಯ ವಿಚಾರ ದಲ್ಲಿ ಯಾವುದೇ ನಿರ್ಲಕ್ಷ್ಯ ತೋರದೆ ಮುಂದುವರಿಯಬೇಕು ಎಂದರು.
8 ತಿಂಗಳಿನಿಂದ 100 ಶಿಬಿರಾರ್ಥಿಗಳಿಗೆ ಹಲವು ಇಲಾಖೆಗಳಿಂದ ಸಂಪನ್ಮೂಲ ವ್ಯಕ್ತಿ ಗಳು ನಾನಾ ವಿಷಯಗಳ ಬಗ್ಗೆ ಮನವರಿಕೆ, ಹೊರಾಂ ಗಣದ ತರಬೇತಿ ನೀಡಿದ ಕುರಿತುಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್. ಟಿ. ಸಿದ್ದಲಿಂಗಪ್ಪ ವರದಿ ಮಂಡಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಪ್ರಶಿಕ್ಷಣಾರ್ಥಿ ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ ಬಹುಮಾನ ವಿತರಿಸ ಲಾಯಿತು. ಸಂಪನ್ಮೂಲ ವ್ಯಕ್ತಿಗಳಿಗೆ ಬಹುಮಾನ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಬಳಿಕ 100 ಜನರ ನಿರ್ಗಮಿತ ರಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ಎಸ್‌ಪಿ ಎನ್. ವಿಷ್ಣುವರ್ಧನ ಸ್ವಾಗತಿಸಿ, ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್ ವಂದಿಸಿ ದರು. ಕರಾವಳಿ ಕಾವಲು ಪಡೆಯ ಮನಮೋಹನ್ ರಾವ್ ನಿರೂಪಿಸಿದರು.
ಡಿಆರ್ ಡಿವೈಎಸ್‌ಪಿ ರಾಘವೇಂದ್ರ, ಜಿಲ್ಲೆಯ ವಿವಿಧ ವೃತ್ತಗಳ ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.
ಬಹುಮಾನ ವಿಜೇತರು
ಹೊರಾಂಗಣದಲ್ಲಿ ಪ್ರಥಮ ಆಕಾಶ ಎನ್.ಎಸ್. ಮಂಡ್ಯ, ದ್ವಿತೀಯ ಪ್ರಕಾಶ ಬೀದರ್, ತೃತೀಯ ಕುಮಾರಸ್ವಾಮಿ ಜಿ. ಚಿಕ್ಕಬಳ್ಳಾಪುರ, ಅನಿಲ್ ಕುಮಾರ್ ಎನ್.ಜಿ. ಚಿಕ್ಕಬಳ್ಳಾಪುರ, ಗುರಿ ಅಭ್ಯಾಸದಲ್ಲಿ ಪ್ರಥಮ ನಿಂಗಪ್ಪ ಶಿರಗುಪ್ಪಿ ಬೆಂಗಳೂರು ಗ್ರಾಮಾಂತರ, ದ್ವಿತೀಯ ಮಂಡ್ಯದ ಪರಶುರಾಮ ಎ.ಎಚ್., ತೃತೀಯ ಸುಜಿತ್ ವೈ.ವಿ., ಒಳಾಂಗಣ ದಲ್ಲಿ ಪ್ರಥಮ ಆಶಿಷ್ ಎಸ್.ಚಾಮರಾಜನಗರ, ದ್ವಿತೀಯ ಗುರುಪ್ರಸಾದ್ ಜಿ. ಚಾಮರಾಜನಗರ, ತೃತೀಯ ಆಂಜನೇಯ ಬೀದರ್, ಆಲ್‌ರೌಂಡರ್ ಮಂಡ್ಯದ ಆಕಾಶ ಎನ್.ಎಸ್. ಬಹುಮಾನ ಪಡೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.