OTT ವೇದಿಕೆಗಳಿಂದ ತಾರತಮ್ಯ ಎಚ್ಚೆತ್ತುಕೊಳ್ಳಬೇಕಿದೆ ಚಿತ್ರರಂಗ


Team Udayavani, Nov 29, 2023, 12:21 AM IST

OTT

ಕಳೆದ ಕೆಲವು ವರ್ಷಗಳಿಂದೀಚೆಗೆ ಜನಪ್ರಿಯವಾಗುತ್ತಿರುವ ಒಟಿಟಿ ಆನ್‌ಲೈನ್‌ ಪ್ಲಾಟ್‌ಫಾರ್ಮ್ ಕನ್ನಡ ಸಿನಿಮಾಗಳನ್ನು ನಿರಾಕರಿಸುತ್ತಿರುವ ಬಗೆಗೆ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸುವ ಮೂಲಕ ತಂತ್ರಜ್ಞಾನ ವೇದಿಕೆಗಳ ತಾರತಮ್ಯ ಧೋರಣೆಗೆ ಮತ್ತೂಮ್ಮೆ ಕನ್ನಡಿ ಹಿಡಿದಿದ್ದಾರೆ. ಗೋವಾದ ಪಣಜಿಯಲ್ಲಿ ನಡೆದ 54ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ದಿನ ದಲ್ಲಿ ಪಾಲ್ಗೊಂಡಿದ್ದ ರಿಷಬ್‌ ಶೆಟ್ಟಿ ಮಾತನಾಡಿ, ಒಟಿಟಿ ವೇದಿಕೆಗಳು ಅನುಸರಿಸುತ್ತಿರುವ ಇಬ್ಬಗೆಯ ನೀತಿಯ ಕುರಿತಂತೆ ಚಿತ್ರ ಜಗತ್ತಿನ ಗಮನ ಸೆಳೆದುದು ಒಂದಿಷ್ಟು ಚರ್ಚೆಗೆ ಗ್ರಾಸವಾಗಿದೆ.

ಬಹುತೇಕ ಒಟಿಟಿ ಪ್ಲಾಟ್‌ಫಾರ್ಮ್ ಗಳು ಟೆಕ್‌ ದಿಗ್ಗಜ ಕಂಪನಿ ಗಳ ಹಿಡಿತ ದಲ್ಲಿರುವು ದ ರಿಂದ ಇವುಗಳಿಗೆ ಹಣಗಳಿಕೆ ಯೊಂದೇ ಪ್ರಧಾನವಾಗಿದೆ. ಇದ ಕ್ಕಾಗಿ ಚಂದಾದಾರರ ಕೊರತೆ, ಮಾರುಕಟ್ಟೆ ಇಲ್ಲ ಎಂಬ ನೆಪಗಳನ್ನು ಮುಂದೊಡ್ಡಿ ಕನ್ನಡ ಸಹಿತ ಇತರ ಕೆಲವೊಂದು ಭಾಷೆಯ ಸಿನಿಮಾ ಗಳನ್ನು ಖರೀದಿಸಲು ಒಟಿಟಿ ವೇದಿಕೆಗಳು ಮುಂದಾಗುತ್ತಿಲ್ಲ. ಥಿಯೇಟರ್‌ಗಳಲ್ಲಿ ಕಡಿಮೆ ಮಾನ್ಯತೆ ಪಡೆದಿರುವ ಸಿನಿಮಾ ಗಳತ್ತ ಒಟಿಟಿ ವೇದಿಕೆಗಳು ತಲೆ ಹಾಕುತ್ತಿಲ್ಲ. ಸಿನಿಮಾ ಮಾಲ್‌ಗ‌ಳು, ಒಟಿಟಿ ಬಂದ ಬಳಿಕ ಸಣ್ಣ ಪುಟ್ಟ ಥಿಯೇಟರ್‌ಗಳು ಬಾಗಿಲು ಮುಚ್ಚಿವೆ. ಇದರಿಂದಾಗಿ ಸಣ್ಣ ಬಜೆಟ್‌ನ ಚಿತ್ರಗಳ ಪ್ರದರ್ಶನಕ್ಕೆ ಅವಕಾಶವೇ ಇಲ್ಲದಂತಾಗಿದೆ. ಇಂತಹ ಸಿನೆಮಾಗಳ ನಿರ್ಮಾಪಕರು ಇವು ಗಳನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಆಸಕ್ತಿ ತೋರಿದರೂ ಯಾವೊಂದೂ ಒಟಿಟಿ ವೇದಿಕೆಗಳು ಈ ಚಿತ್ರಗಳನ್ನು ಖರೀದಿಸಲು ಮುಂದಾಗುತ್ತಿಲ್ಲ. ಯಾವು ದೋ ಒಂದು ಚಲನಚಿತ್ರ ಖರೀದಿಸಿ ನಷ್ಟ ಅನುಭವಿಸಿದೆವು ಎಂಬ ಕಾರಣ ಮುಂದೊಡ್ಡಿ ಒಟಿಟಿ ಪ್ಲಾಟ್‌ಫಾರ್ಮ್ ಗಳು ಕಡಿಮೆ ಬಜೆಟ್‌ನ ಸಿನಿಮಾಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ.

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಕಡಿಮೆ ಬಜೆಟ್‌ನಲ್ಲಿ ತಯಾರಾದ ಸಿನೆಮಾಗಳು ಪ್ರೇಕ್ಷಕರ ಮನಗೆದ್ದು, ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಸ್ಥಾಪಿಸಿವೆ. ವಾಸ್ತವ ಪರಿಸ್ಥಿತಿ ಹೀಗಿದ್ದರೂ ಒಟಿಟಿ ವೇದಿಕೆಗಳು ಕನ್ನಡ ಸಿನಿಮಾ ಗಳನ್ನು ನಿರಾಕರಿಸುತ್ತಿರುವುದು ತೀರಾ ವಿಪರ್ಯಾಸ. ಸದ್ಯ ಕೆಲವು ನಿರ್ಮಾ ಪಕರು ಒಟಿಟಿಗೆಂದೇ ಚಿತ್ರಗಳನ್ನು ನಿರ್ಮಿಸಲು ಆಸಕ್ತಿ ತೋರತೊಡಗಿದ್ದಾರೆ. ಆದರೆ ಒಟಿಟಿ ವೇದಿಕೆಗಳು ಮಾತ್ರ ಕುಂಟು ನೆಪಗಳನ್ನು ಮುಂದೊಡ್ಡಿ ಅವುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿರುವುದು ಚಿತ್ರರಂಗಕ್ಕೆ ಬಲುದೊಡ್ಡ ಹಿನ್ನಡೆಯೇ ಸರಿ.

ರಿಷಬ್‌ ಶೆಟ್ಟಿ ಅವರು ಇಫಿ ಚಿತ್ರೋತ್ಸವ ತಾಣದಿಂದಲೇ ಒಟಿಟಿಯ ತಾರತಮ್ಯ ಧೋರಣೆಯ ಬಗೆಗೆ ಸಿನಿಮಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳ ಗಮನ ಸೆಳೆದದ್ದೇ ಅಲ್ಲದೆ ಇತ್ತ ತತ್‌ಕ್ಷಣ ಗಮನಹರಿಸಿ ಎಲ್ಲ ಭಾಷೆಗಳ ಚಿತ್ರಗಳಿಗೂ ಒಟಿಟಿ ವೇದಿಕೆಗಳಲ್ಲಿ ಮತ್ತು ಚಲನ ಚಿತ್ರೋತ್ಸವಗಳಲ್ಲಿ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹ ಮುಂದಿ ಟ್ಟಿರುವುದು ಉತ್ತಮ ಬೆಳವಣಿಗೆ. ಇತ್ತ ಚಿತ್ರರಂಗ ಮಾತ್ರವಲ್ಲದೆ ಕೇಂದ್ರ ಸರಕಾರ ಕೂಡ ತುರ್ತು ಗಮನಹರಿಸಿ ಕೇವಲ ಕನ್ನಡ ಸಹಿತ ಎಲ್ಲ ಭಾಷೆಗಳ ಚಲನ ಚಿತ್ರಗಳಿಗೂ ಒಟಿಟಿ ವೇದಿಕೆಗಳಲ್ಲಿ ಅವಕಾಶ ಕಲ್ಪಿಸಿಕೊಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಆ ಮೂಲಕ ಚಿತ್ರದ ಪ್ರದರ್ಶನಕ್ಕೂ ಮುನ್ನ ಅದರ ಹಣೆಬರಹ ಬರೆಯುವ ಒಟಿಟಿ ವೇದಿಕೆಗಳ ದಾಷ್ಟéìಕ್ಕೆ ಕಡಿವಾಣ ಹಾಕಬೇಕಿದೆ.

 

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ವಿದ್ಯಾರ್ಹತೆಗೆ ದೇಶವ್ಯಾಪಿ ಮಾನ್ಯತೆ, ಹೈಕೋರ್ಟ್‌ ತೀರ್ಪು ನ್ಯಾಯೋಚಿತ

13-editorial

Temperature: ಸಂಪಾದಕೀಯ-ತಾಪಮಾನ ಹೆಚ್ಚಳದ ಆತಂಕ: ಮುಂಜಾಗ್ರತೆಯೇ ಮದ್ದು

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

vidhana-Soudha

Editorial: ಪ್ರಾಥಮಿಕ ಶಾಲಾ ಶಿಕ್ಷಕರ ಪಠ್ಯೇತರ ಹೊರೆ ಇಳಿಸಿ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.