ಅಂತಿಮ ದಿನದ ಎರಡೂ ಲೀಗ್ ಪಂದ್ಯ 7.30ಕ್ಕೆ ಆರಂಭ
ಏಕಕಾಲಕ್ಕೆ ಎರಡು ಐಪಿಎಲ್ ಪಂದ್ಯ!
Team Udayavani, Sep 29, 2021, 10:54 PM IST
ದುಬಾೖ: ಯುಎಇಯಲ್ಲಿ ಸಾಗುತ್ತಿರುವ ಐಪಿಎಲ್ 14ನೇ ಆವೃತ್ತಿ ಅಂತಿಮ ಹಂತದತ್ತ ಮುಖ ಮಾಡುತ್ತಿದೆ. ಈ ಸಂದರ್ಭದಲ್ಲಿ ಐಪಿಎಲ್ ಆಡಳಿತ ಮಂಡಳಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಒಂದೇ ಸಮಯದಲ್ಲಿ ಎರಡು ಪಂದ್ಯಗಳನ್ನು ನಡೆಸುವ ತೀರ್ಮಾನಕ್ಕೆ ಬಂದಿದೆ!
ಲೀಗ್ ಹಂತದ ಕೊನೆಯ ದಿನದ ಎರಡು ಪಂದ್ಯಗಳನ್ನು ಒಂದೇ ಸಮಯದಲ್ಲಿ ನಡೆಸಲು ನಿರ್ಧರಿಸಲಾಗಿದೆ. ವೇಳಾಪಟ್ಟಿಯ ಪ್ರಕಾರ ಅ. 8ರಂದು ಹೈದರಾಬಾದ್-ಮುಂಬೈ ನಡುವಿನ ಅಬುಧಾಬಿ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭವಾಗಬೇಕಿತ್ತು. ಬಳಿಕ ಆರ್‌ಸಿಬಿ-ಡೆಲ್ಲಿ ಮುಖಾಮುಖೀ ರಾತ್ರಿ 7.30ಕ್ಕೆ ನಡೆಯಬೇಕಿತ್ತು. ಆದರೆ ಈ ಎರಡೂ ಪಂದ್ಯಗಳನ್ನು 7.30ಕ್ಕೆ ಆರಂಭಿಸಲು ತೀರ್ಮಾನಿಸಲಾಗಿದೆ!
ಬಿಸಿಸಿಐ ಪ್ರಕಟನೆ
ಈ ಬಗ್ಗೆ ಬಿಸಿಸಿಐ ಮಾಧ್ಯಮ ಪ್ರಕಟನೆಯನ್ನು ಹೊರಡಿಸಿದೆ. ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಪ್ಲೇ ಆಫ್‌ಗೂ ಮುನ್ನ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳನ್ನು ಏಕಕಾಲದಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದೆ.
ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಹೆಚ್ಚಿನ ಪಂದ್ಯಗಳು “ಡಬಲ್ ಹೆಡ್ಡರ್’ ಆಗಿರುವ ಹಿನ್ನೆಲೆಯಲ್ಲಿ ಪ್ರಯೋಗಾರ್ಥವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.
ಇನ್ನೊಂದು ಸಾಧ್ಯತೆ…
ಇಲ್ಲಿ ಇನ್ನೊಂದು ಮುಂದಾಲೋಚನೆಯೂ ಇದೆ. ಪ್ಲೇ ಆಫ್ ಪ್ರವೇಶಕ್ಕೆ ಅಂತಿಮ ಲೀಗ್ ಪಂದ್ಯ ನಿರ್ಣಾಯಕವಾಗಿರುತ್ತದೆ. ಅಂದಿನ ಮುಂಬೈ-ಹೈದರಾಬಾದ್ ಪಂದ್ಯದ ಫಲಿತಾಂಶವನ್ನು ಗಮನಿಸಿ, ಡೆಲ್ಲಿ-ಆರ್‌ಸಿಬಿ ರನ್‌ರೇಟ್ ಲೆಕ್ಕಾಚಾರದಂತೆ ಆಡುವ ಸಾಧ್ಯತೆ ಇರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂಬುದೊಂದು ಲೆಕ್ಕಾಚಾರ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.