ಮೊದಲ ಪ್ಲಾಸ್ಮಾ ಚಿಕಿತ್ಸೆ ಯಶಸ್ವಿ : ಕೋವಿಡ್ ಯುದ್ಧ ಗೆದ್ದ ದಿಲ್ಲಿ ಮೂಲದ ವ್ಯಕ್ತಿ
Team Udayavani, Apr 27, 2020, 1:00 PM IST
ದೇಶದಲ್ಲೇ ಮೊದಲ ಬಾರಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ಪಡೆದಿದ್ದ ದಿಲ್ಲಿಯ 49 ವರ್ಷದ ಕೋವಿಡ್ ರೋಗಿ, ಕಾಯಿಲೆಯಿಂದ ಸಂಪೂರ್ಣ ಗುಣ ಮುಖರಾಗಿ ಮನೆಗೆ ಮರಳಿದ್ದಾರೆ. ಏ. 4ರಂದು ಪೂರ್ವ ದಿಲ್ಲಿಯಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ಕೋವಿಡ್ ಗುಣಲಕ್ಷಣಗಳನ್ನು ಹೊಂದಿದ್ದ ಈ ವ್ಯಕ್ತಿ ದಾಖಲಾಗಿದ್ದರು. ಆದರೆ, ದಿನ ಕಳೆದಂತೆ ಅವರ ಆರೋಗ್ಯ ಹದಗೆಟ್ಟು ನ್ಯುಮೋನಿಯಾಕ್ಕೆ ತುತ್ತಾದರು. ನಂತರ, ಇವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು.
ಕುಟುಂಬದ ಮನವಿ: ವ್ಯಕ್ತಿಯ ಕುಟುಂಬವು ಆಸ್ಪತ್ರೆಯ ವೈದ್ಯರ ಬಳಿ, “ಸಹಾನುಭೂತಿ’ ಆಧಾರದಲ್ಲಿ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡುವಂತೆ ಮನವಿ ಮಾಡಿದರು. ಹಾಗಾಗಿ, ಮೂರು ವಾರಗಳ ಹಿಂದೆ ಕೋವಿಡ್ ದಿಂದ ಗುಣಮುಖರಾಗಿದ್ದ ಮಹಿಳಾ ದಾನಿಯೊಬ್ಬರಿಂದ ರಕ್ತವನ್ನು ಪಡೆದು ಅದರಿಂದ ಪ್ಲಾಸ್ಮಾವನ್ನು ಬೇರ್ಪಡಿಸಿ ನೀಡಲಾಗಿತ್ತು. ಪ್ಲಾಸ್ಮಾ ವನ್ನು ಪಡೆದು ದಿನಗಳೆದಂತೆ ಚೇತರಿಸಿಕೊಂಡರು.
ವೈದ್ಯರ ಶ್ಲಾಘನೀಯ ಕೆಲಸ
ಲಕ್ನೋದ ಕಿಂಗ್ ಜಾಜ್Õì ಮೆಡಿಕಲ್ ಯುನಿವರ್ಸಿಟಿಯ ವೈದ್ಯ ತೌಸೀಫ್ ಖಾನ್ ಸೋಂಕಿತರಿಗೆ ಪ್ಲಾಸ್ಮಾ ದಾನ ಮಾಡಲು ಮುಂದಾಗಿದ್ದಾರೆ. ಮಾ.17ರಂದು ಅವರಿಗೆ ಸೋಂಕು ದೃಢಪಟ್ಟಿತ್ತು. ಅವರು ಚಿಕಿತ್ಸೆ ಪಡೆದು ಏ.7ರಂದು ಡಿಸಾcರ್ಜ್ ಆಗಿದ್ದರು. ಹೀಗಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಗುಣಮುಖರಾದವರ ಪ್ಲಾಸ್ಮಾ ಕಣಗಳು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿವೆ. ಅವರನ್ನು ತಪಾಸಣೆಗೆ ಒಳಪಡಿಸಿದಾಗ ಅವರ ಪ್ಲಾಸ್ಮಾ ಕಣಗಳಲ್ಲಿ ಜೀವ ನಿರೋಧಕಗಳು ಉತ್ತಮ ಮಟ್ಟದಲ್ಲಿ ಇರುವುದು ಖಚಿತಪಟ್ಟಿದೆ. ಅವರ ದೇಹದಿಂದ ಪ್ಲಾಸ್ಮಾ ಪಡೆದು ಇಬ್ಬರು ರೋಗಿಗಳಿಗೆ ನೀಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ
Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.