ಯಕ್ಷಗಾನ ಮೇಳಗಳ ದಿಗ್ವಿಜಯ ಆರಂಭ; ಇನ್ನೂ ಅಂತಿಮವಾಗದ ಪಾವಂಜೆ ಎರಡನೇ ಮೇಳ

ಮೂರನೇ ಡೇರೆ ಮೇಳ ಆರಂಭ

Team Udayavani, Nov 7, 2024, 7:45 AM IST

ಯಕ್ಷಗಾನ ಮೇಳಗಳ ದಿಗ್ವಿಜಯ ಆರಂಭ; ಇನ್ನೂ ಅಂತಿಮವಾಗದ ಪಾವಂಜೆ ಎರಡನೇ ಮೇಳ

ಕುಂದಾಪುರ: ಕರಾವಳಿಯ ಮೂಲೆ ಮೂಲೆಯಲ್ಲಿ ಚೆಂಡೆ ಸದ್ದಿನ ಅಬ್ಬರ ಕೇಳಿಸುವ ಯಕ್ಷಗಾನ ಮೇಳಗಳು ತಿರುಗಾಟಕ್ಕೆ ಹೊರಟಿವೆ. ಈಗಾಗಲೇ ಕೆಲವು ಮೇಳಗಳು ತಿರುಗಾಟ ಆರಂಭಿಸಿದ್ದರೆ, ನವೆಂಬರ್‌ 13ರಿಂದ 29ರ ನಡುವೆ ಇನ್ನಷ್ಟು ಮೇಳಗಳು ಸಂಚಾರ ಹೊರಡಲಿವೆ.

ಪ್ರತಿ ವರ್ಷವೂ ಹೊಸ ತಿರುಗಾಟ ಆರಂಭ ವಾಗುವ ಹೊತ್ತಿಗೆ ಯಕ್ಷಗಾನ ಪ್ರೇಮಿಗಳಲ್ಲಿ ಈ ಬಾರಿಯ ಹೊಸ ಪ್ರಸಂಗಗಳು ಯಾವುವು? ಕಲಾವಿದರು ಅದೇ ಮೇಳದಲ್ಲಿದ್ದಾರಾ? ಬೇರೆ ಮೇಳಗಳಿಗೆ ಸೇರಿದ್ದಾರೆಯೇ ಎಂಬ ಕುತೂಹಲಗಳು ಗರಿಗೆದರುತ್ತವೆ.

ಹೊಸ ಕಲಾವಿದರು ಮೇಳದಲ್ಲಿ ಸ್ಥಾನ ಪಡೆಯು ವುದು, ಈಗಾಗಲೇ ಮೇಳದಲ್ಲಿ ಇದ್ದವರಿಗೆ ವೇಷದ ಸ್ಥಾನದಲ್ಲಿ ಭಡ್ತಿ ದೊರೆಯು ವುದು, ಭಾಗವತರು ಹಾಗೂ ಹಿಮ್ಮೇಳ ಕಲಾ ವಿದರ ಬದಲಾವಣೆ, ಕಟೀಲಿನ 6 ಮೇಳಗಳಲ್ಲಿ ನಡೆಯುವ ಆಂತರಿಕ ವರ್ಗಾವಣೆ, ಆರಂಭವಾಗುವ ಹೊಸ ಮೇಳಗಳು, ಅದಕ್ಕೆ ಸೇರ್ಪಡೆಯಾಗುವ ಕಲಾವಿದರು ಯಾರು ಎಂಬುದರ ಬಗ್ಗೆ ಚರ್ಚೆ ನಡೆಯುತ್ತವೆ.

ಹೊರಟಿವೆ ಹಲವು ಮೇಳಗಳು
ಧರ್ಮಸ್ಥಳ ಮೇಳ ನ.3ರಿಂದ ಕ್ಷೇತ್ರದಲ್ಲಿ ಸೇವೆಯಾಟ ಆರಂಭಿಸಿದ್ದು, ನ.21ರಿಂದ ಕ್ಷೇತ್ರದ ಹೊರಗಡೆಗೆ ತಿರುಗಾಟ ಹೊರಡಲಿದೆ. ಕಮಲಶಿಲೆ ಮೇಳ ನ.5ರಂದು ಸೇವೆಯಾಟ ಆರಂಭಿಸಿದ್ದು ಬೆಂಗಳೂರಿನಲ್ಲಿ ನ. 17ರ ವರೆಗೆ ಬೆಂಗಳೂರಿನಲ್ಲಿ ಪ್ರದರ್ಶನ ನೀಡಲಿದೆ. ನ. 5ರಂದು ಹಟ್ಟಿಯಂಗಡಿ, ಪಾವಂಜೆ ಮೇಳ ನ.13, ಕೋಟ ಮೇಳ ನ.17, ಮಾರಣಕಟ್ಟೆ ಮೇಳ ನ.18ರಿಂದ, ಸಾಲಿಗ್ರಾಮ ನ. 18ರಿಂದ, ಹನುಮಗಿರಿ ಮೇಳ ನ.20ರಿಂದ, ಪೆರ್ಡೂರು ನ.20ರಿಂದ ತಿರುಗಾಟ ಶುರು ಮಾಡಲಿದೆ.
ಗೆಜ್ಜೆಗಿರಿ ಮೇಳ ನ.22ರಂದು ಸೇವೆಯಾಟ ಮಾಡಿ ಡಿ.25ರ ವರೆಗೆ ಗೋವಾ, ಗುಜರಾತ್‌, ಮುಂಬಯಿ ಮೊದಲಾದೆಡೆ ಪ್ರದರ್ಶನ ನೀಡಲಿದೆ.

ಗೋಳಿಗರಡಿ ಮೇಳ ನ.24ರಿಂದ, ಕಟೀಲು ಮೇಳ ನ.25ರಿಂದ, ಸೌಕೂರು ಮೇಳ ನ.27ರಿಂದ, ಸಿಗಂದೂರು ಮೇಳ ನ.27ರಿಂದ, ಹಾಲಾಡಿ ಮೇಳ ಡಿ.2ರಿಂದ, ಹಿರಿಯಡ್ಕ ಮೇಳ ಡಿ.14ರಿಂದ ತಿರುಗಾಟ ಆರಂಭಿಸಲಿವೆ. ಕೆಲವು ಮೇಳಗಳ ತಿರುಗಾಟಕ್ಕೆ ಇನ್ನಷ್ಟೇ ದಿನ ನಿಗದಿಯಾಗಬೇಕಿದೆ.
ಈ ಬಾರಿ ದೇವದಾಸ ಈಶ್ವರಮಂಗಲ ಅವರು ರಚಿಸಿರುವ ಪ್ರಶ್ನಾರ್ಥಕ ಚಿಹ್ನೆ (?) ಪ್ರಸಂಗವೂ ಪ್ರದರ್ಶನವಾಗಲಿದ್ದು, ಕುತೂಹಲ ಮೂಡಿಸಿದೆ.

ಈ ವರ್ಷದ ಹೊಸ ಪ್ರಸಂಗಗಳು
-ಧರ್ಮಸ್ಥಳ: ವಿಶ್ವವಂದ್ಯ ವಿನಾಯಕ, ಗಂಧರ್ವ ಕನ್ಯೆ
– ಸಾಲಿಗ್ರಾಮ: ಸಾಹಿತಿ ಪನ್ನಾಲಾಲ್‌ ಪಠೇಲರ ಗುಜರಾತಿ ಕಾದಂಬರಿ ಆಧಾರಿತ, ದೇವದಾಸ ಈಶ್ವರ ಮಂಗಲ ಅವರ ಶುಭಲಕ್ಷಣ -ಹನುಮಗಿರಿ: ವಾಸುದೇವ ರಂಗಾ ಭಟ್‌ ಕಥಾ ಸಂಯೋಜನೆ, ಪ್ರಸಾದ್‌ ಮೊಗೆಬೆಟ್ಟು ಪದ್ಯ ರಚನೆಯ ಸಾಕೇತ ಸಾಮ್ರಾ
-ಪೆರ್ಡೂರು: ಪ್ರೊ| ಪವನ್‌ ಕಿರಣ್‌ಕೆರೆ ಅವರ ಪರ್ಣಕುಟೀರ
-ಪಾವಂಜೆ: ಭಾರತ ವರ್ಷಿಣಿ
– ಹಿರಿಯಡಕ: ದೇವದಾಸ ಈಶ್ವರ ಮಂಗಲ ಅವರ ಜಾಜಿ ಮಲ್ಲಿಗೆ, ಪ್ರಶಾಂತ್‌ ಸಿ.ಕೆ. ರಚನೆ, ದಯಾನಂದ ಕೋಡಿಕಲ್‌ ಪದ್ಯ ರಚನೆಯ ಮಣಿ ಮಂಚೊದ ಮಂತ್ರಮೂರ್ತಿ
-ಸೌಕೂರು: ಕೊಕ್ಕರ್ಣೆ ಸದಾಶಿವ ಅಮೀನ್‌ ರಚನೆಯ ಭಗವತಿ ಭೈರವಿ, ಕೌಲಾಳಿ ಚಂದ್ರಶೇಖರ ಶೆಟ್ಟಿ ರಚನೆಯ ಮಂಗಳ ತರಂಗಿಣಿ, ಪ್ರಮೋದ್‌ ಪೂಜಾರಿ ಬೆಳ್ವೆ ರಚನೆಯ ಚಿತ್ತೇರಿ ಶ್ರೀವನದುರ್ಗೆ
-ಕಳವಾಡಿ: ಡಾ| ಬಸವರಾಜ ಶೆಟ್ಟಿಗಾರ್‌ ಅವರ ಕಳವಾಡಿ ಮಾರಿಕಾಂಬಾ ಕ್ಷೇತ್ರ ಮಹಾತೆ¾, ಯಕ್ಷಾನಂದ ಕುತ್ಪಾಡಿ ಅವರ ಕಾರುಣ್ಯ ಸ್ವಾಮಿ ಕೊರಗಜ್ಜ, ಶುಭಾಶಯ ಜೈನ್‌ ರಚನೆಯ ಕೆಂಪುಕೊಳ, ವಿದ್ಯಾಶ್ರೀ ಆಚಾರ್ಯ ಯಳಜಿತ್‌ ಅವರ ನಾಗ ನಿರ್ಮಲೆ
-ಸಸಿಹಿತ್ಲು: ದೇವದಾಸ ಈಶ್ವರ ಮಂಗಲ ಅವರ ಪೊರ್ಲುದ ಮರ್ಲೆದಿ, ವಸಂತ ಬಂಟ್ವಾಳ ರಚನೆ, ಕುಳಾಯಿ ಮಾಧವ ಭಂಡಾರಿ ಪದ್ಯ ರಚನೆಯ ಕಲ್ಜಿಗದ ಸತ್ಯ
-ನೀಲಾವರ: ಎಂ.ಕೆ. ರಮೇಶ ಆಚಾರ್ಯರ ಕನ್ನಡ ಕುಲರತ್ನ, ರಾಘವೇಂದ್ರ ಪೂಜಾರಿ ಗಿಳಿಯಾರು ರಚನೆಯ ಕಡಲ ಕಣ್ಮಣಿ -ಗೋಳಿಗರಡಿ: ಸುರೇಶ್‌ ಕುಲಾಲ್‌ ಹಂದಿಗದ್ದೆ ರಚನೆಯ ಶುಭ ಸಂಭ್ರಮ, ಶಿವಶಕ್ತಿ ಗುಳಿಗ, ಬಿ.ಕೆ. ಶ್ರೀನಿವಾಸ ಸಾಲಿಯಾನ್‌ ಬೋಂದೆಲ್‌ ರಚನೆಯ ಕಾರ್ಣಿಕದ ಕೊರಗಜ್ಜ, ಡಾ| ಬಸವರಾಜ್‌ ಶೆಟ್ಟಿಗಾರ್‌ ರಚನೆಯ ಜೋಗಿ ಜೆಡ್ಡು ಜಟ್ಟಿಗೇಶ್ವರ ಕ್ಷೇತ್ರ ಮಹಾತ್ಮೆ
-ಸಿಗಂದೂರು: ಪ್ರೊ| ಪವನ್‌ ಕಿರಣ್‌ಕೆರೆ ಅವರ ರಾಗ ಚಂದ್ರಿಕೆ
-ಗೆಜ್ಜೆಗಿರಿ: ದೇವದಾಸ ಈಶ್ವರ ಮಂಗಲ ಅವರ ಕಾಲ ಕಲ್ಜಿಗ, ನಿತಿನ್‌ ಕುಮಾರ್‌ ತೆಂಕಕಾರಂದೂರು ರಚನೆ, ಯೋಗೀಶ್‌ ರಾವ್‌ ಚಿಗುರುಪಾದೆ ಪದ್ಯರಚನೆಯ ಕುಲದೈವೊ ಬ್ರಹ್ಮ, ನಿತಿನ್‌ ಕುಮಾರ್‌ ತೆಂಕಕಾರಂದೂರು ರಚನೆ, ಮಾಧವ ಭಂಡಾರಿ ಕುಳಾಯಿ ಪದ್ಯರಚನೆಯ ಎಡೂ¾ರ ಮೊಗೇರ ಸತ್ಯೊಲು -ಹಾಲಾಡಿ: ಪ್ರೊ| ಪವನ್‌ ಕಿರಣ್‌ಕೆರೆ ರಚನೆಯ ಶುಭ ನಕ್ಷತ್ರ
-ಮೆಕ್ಕೆಕಟ್ಟು ಮೇಳ: ದೇವದಾಸ ಈಶ್ವರ ಮಂಗಲ ಅವರ ಪ್ರಶ್ನಾರ್ಥಕ ಚಿಹ್ನೆ, ಅಂಬಿಕಾ ವಕ್ವಾಡಿ ಕಥೆ, ಬೇಳೂರು ವಿಷ್ಣುಮೂರ್ತಿ ನಾಯಕ್‌ ಪದ್ಯ ರಚನೆಯ ಪ್ರೇಮ ಪಂಜರ

ಇನ್ನೊಂದು ಡೇರೆ ಮೇಳ ಆರಂಭ
ತೆಂಕುತಿಟ್ಟಿನಲ್ಲಿ ಪ್ರಸ್ತುತ ಯಾವುದೇ ಡೇರೆ ಮೇಳ ಇಲ್ಲ. ಬಡಗುತಿಟ್ಟಿನಲ್ಲಿ ಪೆರ್ಡೂರು ಹಾಗೂ ಸಾಲಿಗ್ರಾಮ ಡೇರೆ ಮೇಳಗಳಿದ್ದು, ಕಳೆದ ಬಾರಿ ಬಯಲಾಟ ಮೇಳವಾಗಿದ್ದ ಮೆಕ್ಕೆಕಟ್ಟು ಮೇಳ ಈ ಬಾರಿ ಡೇರೆ ಮೇಳವಾಗಲಿದೆ. ಬೈಂದೂರಿನ ಕಳವಾಡಿಯಿಂದ ನೂತನ ಮೇಳವೊಂದು ಆರಂಭವಾಗಲಿದೆ. ಪಾವಂಜೆ ಎರಡನೆ ಮೇಳ ಆರಂಭವಾಗುವ ಪ್ರಸ್ತಾವನೆ ಇದೆಯಾದರೂ ಇನ್ನೂ ಅಧಿಕೃತ ತೀರ್ಮಾನ ನಡೆದಿಲ್ಲ.

7,200 ಆಟ,
ದೇವಿ ಮಹಾತ್ಮೆಯೇ 1,000!
ಕರಾವಳಿಯಲ್ಲಿ 40ಕ್ಕೂ ಅಧಿಕ ಮೇಳ ಗಳಿದ್ದು, ಪ್ರತಿ ವರ್ಷ 7,200ಕ್ಕೂ ಅಧಿಕ ಆಟಗಳ ಪ್ರದರ್ಶನ ನಡೆಯುತ್ತದೆ. ಪೌರಾಣಿಕ, ಕ್ಷೇತ್ರ ಮಹಾತ್ಮೆಗಳ ಜತೆ, ಸಾಮಾಜಿಕ ಕಥಾ ಹಂದರದ ಪ್ರಸಂಗಗಳು ಮೇಳೈಸುತ್ತವೆ. 7,200ಕ್ಕೂ ಅಧಿಕ ಪ್ರದರ್ಶ ನಗಳಲ್ಲಿ 1,000ಕ್ಕೂ ಅಧಿಕ ಶ್ರೀ ದೇವಿ ಮಹಾತ್ಮೆಯೇ ಇರುತ್ತದೆ. ಕಟೀಲಿನ 6 ಮೇಳಗಳು ತಲಾ 100ರಂತೆ 600 ಪ್ರದ ರ್ಶನ ನೀಡಿದರೆ, ಮಂದಾರ್ತಿ, ಪಾವಂಜೆ, ಹನುಮಗಿರಿ ಸಹಿತ ಇತರ ಮೇಳಗಳು 400ಕ್ಕೂ ಅಧಿಕ ಪ್ರದರ್ಶನ ನೀಡುತ್ತವೆ.

ಟಾಪ್ ನ್ಯೂಸ್

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Sathish-jarakhoili

Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ

1-allu

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Udupi: ಕುದ್ರು ನೆಸ್ಟ್‌ ರೆಸಾರ್ಟ್‌ನಲ್ಲಿ ಬೆಂಕಿ ಅವಘಡ

Udupi: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Udupi: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

1-bharat

Bharatanatyam; ರಾಜ್ಯ ಮಟ್ಟದ ಶಿಷ್ಯವೇತನಕ್ಕೆ ಅದಿತಿ ಜಿ.ಮಂಡೀಚ,ಸ್ವಾತಿ ಆಯ್ಕೆ

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

12

Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ

Weightlifting: ಏಷ್ಯನ್‌ ವೇಟ್‌ ಲಿಫ್ಟಿಂಗ್‌; ಭಾರತಕ್ಕೆ ಎರಡು ಬೆಳ್ಳಿ

Weightlifting: ಏಷ್ಯನ್‌ ವೇಟ್‌ ಲಿಫ್ಟಿಂಗ್‌; ಭಾರತಕ್ಕೆ ಎರಡು ಬೆಳ್ಳಿ

15

Junior World Cup shooting: ಭಾರತದ ಆತಿಥ್ಯದಲ್ಲಿ ಜೂ. ವಿಶ್ವಕಪ್‌ ಶೂಟಿಂಗ್‌

1

Udupi: ಕುದ್ರು ನೆಸ್ಟ್‌ ರೆಸಾರ್ಟ್‌ನಲ್ಲಿ ಬೆಂಕಿ ಅವಘಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.