ಸರಕಾರ ಸಂವಿಧಾನ ಪ್ರಕಾರವೇ ನಡೆಯಬೇಕು: ನಳಿನ್
Team Udayavani, May 10, 2022, 10:54 PM IST
ಮಣಿಪಾಲ: ನಮ್ಮದು ಹಾಗೂ ಪ್ರಮೋದ್ ಮುತಾಲಿಕರದ್ದು ವಿಚಾರಧಾರೆಗಳು ಒಂದೇ ಇದ್ದರೂ ಸರಕಾರ ಸಂವಿಧಾನಾತ್ಮಕವಾಗಿ ನಡೆಯ ಬೇಕಿರುವುದರಿಂದ ಕಾನೂನಾತ್ಮಕವಾಗಿ ಯಾವುದು ಸಾಧ್ಯವೋ ಅದನ್ನು ಸರಕಾರ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಮಣಿಪಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋರಾಟಗಾರರ ಮನೋಭಾವ ಬೇರೆ ಇರುತ್ತದೆ. ಅದರಂತೆ ಸರಕಾರ ನಡೆಯಲು ಸಾಧ್ಯವಿಲ್ಲ. ನಾವು ಅನೇಕ ಬಾರಿ ಸಂಘಟನಾತ್ಮಕವಾದ ಹಲವು ವಿಚಾರ ಹೇಳಿದಾಗ ಸರಕಾರಕ್ಕೆ ಮಾಡಲು ಸಾಧ್ಯವಾಗುವುದಿಲ್ಲ.
ಹೀಗಾಗಿ ಅಜಾನ್ ಕುರಿತು ಪ್ರಮೋದ್ ಮುತಾಲಿಕರು ಸಹಜವಾದ ಅಪೇಕ್ಷೆ ಯನ್ನು ವ್ಯಕ್ತಪಡಿಸಿದ್ದಾರೆ. ಸಂವಿಧಾನ, ಕಾನೂನಿನ ಅಡಿಯಲ್ಲಿ ನ್ಯಾಯಾಲಯದ ತೀರ್ಪಿನಂತೆ ಸರಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.
ಇದು ಮೋದಿಯುಗ
ನಮ್ಮ ಪಕ್ಷದ ಶಾಸಕರಾದ ಯತ್ನಾಳ್ ಪದೇಪದೆ ಅವರ ಹೇಳಿಕೆಯನ್ನು ಬದಲಿಸುತ್ತಿರುತ್ತಾರೆ. ಈ ಬಗ್ಗೆ ಕ್ರಮಕ್ಕೆ ಕೇಂದ್ರದ ಶಿಸ್ತುಪಾಲನ ಸಮಿತಿಗೆ ಕಳುಹಿಸಿಕೊಟ್ಟಿದ್ದೇವೆ. ಅಲ್ಲಿಂದಲೇ ಕ್ರಮ ಆಗಲಿದೆ. ನಾವು ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ವಿಸ್ತಾರಕ ಯೋಜನೆ ಪೂರ್ಣಗೊಂಡಿದೆ. ಬೂತ್ ಸಮಿತಿ, ಪೇಜ್ ಪ್ರಮುಖರ ನೇಮಕವೂ ಆಗಿದೆ. ಪಕ್ಷದ ರಾಷ್ಟ್ರೀಯ ನಾಯಕರ ಅಪೇಕ್ಷೆಯಂತೆ 150 ಸೀಟು ಮುಂದಿನ ಚುನಾವಣೆಯಲ್ಲಿ ಗೆದ್ದೆ ಗೆಲ್ಲುತ್ತೇವೆ. ಹಾಗೆಯೇ ಮುಂದೆಯೂ ಮೋದಿಯವರೇ ಪ್ರಧಾನಿಯಾಗಿರುತ್ತಾರೆ. ಇದು ಮೋದಿಯುಗ. ಜನ ಪರ ಸರಕಾರ ನಮ್ಮದು ಎಂದರು.
ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣವನ್ನು ರೀಡೂ ಮಾಡುವ ಸಂಬಂಧ ಮುಖ್ಯಮಂತ್ರಿಯವರಿಗೆ ಪಕ್ಷದಿಂದ ಈಗಾಗಲೇ ಸೂಚನೆ ನೀಡ ಲಾಗಿದೆ. ಅವರು ಕೂಡ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಈ ಕಾರ್ಯ ಆಗಲಿದೆ. ಭ್ರಷ್ಟಾಚಾರದ ವಿರುದ್ಧ ಸರಕಾರ ಕಠಿನ ಕ್ರಮ ತೆಗೆದುಕೊಳ್ಳಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.