ಅಮರ ಪ್ರೇಮಕಾವ್ಯ


Team Udayavani, May 26, 2020, 4:48 AM IST

amara-prema

ಮಕ್ಕಳಾಗಲಿಲ್ಲವೆನ್ನುವ ಕಾರಣಕ್ಕೆ ಗಂಡನಿಂದ ಶೋಷಿಸಲ್ಪಟ್ಟು, ಊರ ಹಿರಿಯನಿಂದ ಮೋಸಕ್ಕೊಳಗಾಗಿ ವೇಶ್ಯಾಗೃಹಕ್ಕೆ ತಳ್ಳಲ್ಪಟ್ಟ ಯುವತಿ ಪುಷ್ಪಾ. ಆಕೆಯ ಚಂದದ ಧ್ವನಿಗೆ ಮರುಳಾಗಿ ಆಕೆಯಲ್ಲಿ ಅನುರಕ್ತನಾಗುವವನು  ಆನಂದ್‌  ಬಾಬು. ಮಡದಿಯ ನಿರ್ಲಕ್ಷ್ಯಕ್ಕೊಳಗಾಗಿ ತೊಳಲಾಡುವ ಆನಂದ್‌ ಬಾಬುವಿಗೆ ಮೊದಲ ನೋಟದಲ್ಲಿಯೇ ಪುಷ್ಪಾಳ ಮುಗಟಛಿತೆ, ಆಕೆಯ ಧ್ವನಿಯಲ್ಲಿನ ಮೋಹಕತೆ ಇಷ್ಟವಾಗುತ್ತದೆ.

ಪುಷ್ಪಾಳಿಗೂ ಆನಂದ್‌ನೆಡೆಗೆ ಪ್ರೇಮವಿದೆ.  ಪ್ರೇಮರಾಹಿತ್ಯದಿಂದ ನೊಂದ, ತಮ್ಮವರಿಂದ ತಿರಸ್ಕರಿಸಲ್ಪಟ್ಟ ಈ ಎರಡು ಜೀವಗಳು, ನವಿಲುಗರಿಯ ಭಾವಗಳೊಂದಿಗೆ ವೇಶ್ಯಾಗೃಹದ ನಶೆಯುಕ್ತ ಸಂಜೆಗಳಲ್ಲಿ ಮುಳುಗಿದ್ದಾಗಲೇ, ಈ ಪ್ರೇಮಕತೆಗೆ ಮೂರನೆಯವನಾಗಿ, ನಂದು ಎಂಬ ಹುಡುಗ ಸೇರಿಕೊಳ್ಳುತ್ತಾನೆ.  ಮಲತಾಯಿಯ ಕೈಯಲ್ಲಿ ಆಗಾಗ ಏಟು ತಿನ್ನುವ ಆ ಹುಡುಗನೆಡೆಗೆ ಪುಷ್ಪಾಳಿಗೆವಾತ್ಸಲ್ಯ. ಮಾತೃತ್ವದ ಮಮಕಾರ.

ಹೀಗೆ,  ಮೂರೇ ಮೂರು ಪ್ರಮುಖ ಪಾತ್ರಗಳನ್ನಿಟ್ಟುಕೊಂಡು 1972ರಲ್ಲಿ ತೆರೆಕಂಡ  ಸಿನಿಮಾದ ಹೆಸರು “ಅಮರ್‌ಪ್ರೇಮ…’. ಬಂಗಾಳಿ ಸಿನಿಮಾವೊಂದರ ರೀಮೆಕ್‌ ಆಗಿರುವ ಈ ಚಿತ್ರದ ಪ್ರಮುಖ ಪಾತ್ರಧಾರಿಗಳು ರಾಜೇಶ್‌ ಖನ್ನಾ ಮತ್ತು ಶರ್ಮಿಳಾ ಟ್ಯಾಗೋರ್‌. ಇವರಿಬ್ಬರ ಅಭಿನಯದ ಮಾಂತ್ರಿಕತೆಯನ್ನು ವಿವರಿಸುವುದು ಕಷ್ಟಸಾಧ್ಯ. ಅದರಲ್ಲೂ ಪರಿಸ್ಥಿತಿಯ ಕೈಗೊಂಬೆಯಾಗಿ ವೇಶ್ಯೆಯಾಗುವ ಪುಷ್ಪಾಳ ಪಾತ್ರದಲ್ಲಿ ಶರ್ಮಿಳಾ ಟ್ಯಾಗೋರ್‌ ಅಭಿನಯ ನಿಜಕ್ಕೂ ಅಧುºತ. ಆಕೆಯ ಮುಖದಲ್ಲಿ ವಿಷಾದ, ದು:ಖ, ಮಮಕಾರದಂತಹ ಭಾವಗಳ ಕದಲಿಕೆಯನ್ನು ನೋಡುವುದೇ ಒಂದು ಸೊಗಸು.

ರಾಜೇಶ್‌ ಖನ್ನಾರದ್ದು ಅದೇ ಎಂದಿನ ಲವಲವಿಕೆಯ ಪಾತ್ರ. ಇಷ್ಟೇ ಆಗಿದ್ದರೆ, “ಅಮರ್‌ಪ್ರೇಮ…’ ತುಂಬ ವಿಶೇಷವೆನ್ನಿಸುತ್ತಿರಲಿಲ್ಲ. ಆದರೆ, ಈ ಸಿನಿಮಾ ವಿಭಿನ್ನವಾಗಿ ನಿಲ್ಲುವುದು, ಪ್ರೇಮ ಎನ್ನುವ ಪದಕ್ಕೆ ಅಲ್ಲಿನ ವ್ಯಾಖ್ಯಾನದಿಂದ. ಇಲ್ಲಿ ಪ್ರೇಮವೆನ್ನುವುದು ಕೇವಲ ಗಂಡು ಹೆಣ್ಣುಗಳ ನಡುವಿನ ಆಕರ್ಷಣೆಯಲ್ಲ. ಪ್ರೇಮವೆಂದರೆ ಗೌರವ. ಪ್ರೇಮವೆಂದರೆ ವಾತ್ಸಲ್ಯ. ಪ್ರೇಮವೆಂದರೆ ಮಮಕಾರ. ಪ್ರೇಮವೆಂದರೆ  ಸ್ವಾರ್ಥವಿಲ್ಲದ ಸುಂದರ ನವಿರು ಭಾವಗಳ ಅನುಭೂತಿ.

ನಿರ್ದೇಶಕರು ಇದನ್ನೆಲ್ಲಾ ಅದ್ಭುತವಾಗಿ ತೆರೆಯ ಮೇಲೆ ತಂದಿದ್ದಾರೆ. ವೇಶ್ಯಾಗೃಹದ ವಸ್ತುವಿದ್ದರೂ ಸಣ್ಣಾತಿಸಣ್ಣ ಅಶ್ಲೀಲತೆಯ ಸೋಂಕಿಲ್ಲದ, ಒಂದೇ ಒಂದು ದ್ವಂದ್ವಾರ್ಥದ ಸಂಭಾಷಣೆಯಿಲ್ಲದ ಸಿನಿಮಾ. ಹಿಂದಿ ಸಿನಿರಂಗದ ಸಾರ್ವಕಾಲಿಕ ಶ್ರೇಷ್ಠ ಅನ್ನುವಂಥ ಹಾಡುಗಳು ಈ ಚಿತ್ರದಲ್ಲಿವೆ. ಬಿಡುಗಡೆಯಾದ 48 ವರ್ಷಗಳ ನಂತರವೂ ನೋಡುಗನ ಮನವನ್ನು ಭಾವುಕವಾಗಿ ಆವರಿಸಿಕೊಂಡು ಬಿಡುತ್ತದೆಂದರೆ, ಅದು ಸಿನಿತಂಡದ ಅದ್ಭುತ ಪ್ರತಿಭೆಗೆ  ಸಾಕ್ಷಿ.

* ಗುರುರಾಜ ಕೊಡ್ಕಣಿ ಯಲ್ಲಾಪುರ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.