ಸಿಡಿದೆದ್ದರು ಜಾರಕಿಹೊಳಿ ಸಹೋದರರು
Team Udayavani, Nov 18, 2019, 3:10 AM IST
ರಾಜ್ಯದ ಗಮನ ಸೆಳೆದಿರುವ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರ ನಡುವಿನ ವಾಕ್ಸಮರ ಮುಂದುವರಿದಿದೆ. ಡಿ.5ರವರೆಗೆ ಲಖನ್ ನನ್ನ ತಮ್ಮನೇ ಅಲ್ಲ, ಶತ್ರು ಎಂದಿರುವ ರಮೇಶ ಮಾತಿನಿಂದ ಆಕ್ರೋಶಗೊಂಡಿರುವ ಲಖನ್ ಜಾರಕಿಹೊಳಿ, “ರಮೇಶ ನನ್ನ ಅಣ್ಣನೇ ಅಲ್ಲ, ಸಾಯುವವರೆಗೂ ಶತ್ರು’ ಎಂದು ಕಿಡಿ ಕಾರಿದ್ದಾರೆ. ಸಹೋದರನಿಗೆ ಸಾಥ್ ನೀಡಿರುವ ಸತೀಶ ಜಾರಕಿಹೊಳಿ ಕೂಡ “ರಮೇಶನ ತಲೆ ಯಾವಾಗ ಬೇಕಾದರೂ ಹ್ಯಾಂಗ್ ಆಗುತ್ತೆ ಬಿಡ್ರಿ’ ಎಂದು ಲೇವಡಿ ಮಾಡಿದ್ದಾರೆ. ರಮೇಶ ಮಾತಿನಿಂದ ಸಿಡಿದೆದ್ದ ಸಹೋದರರು ಬಿಜೆಪಿ ಅಭ್ಯರ್ಥಿ ವಿರುದ್ಧ ನಡೆಸಿರುವ ಟೀಕಾಸ್ತ್ರವಿದು.
ರಮೇಶ ನನ್ನ ಅಣ್ಣನೇ ಅಲ್ಲ, ಸಾಯುವವರೆಗೂ ಶತ್ರು
ಗೋಕಾಕ: “ನನಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಲು ರಮೇಶ ಜಾರಕಿಹೊಳಿ ಹರಸಾಹಸ ಪಟ್ಟಿದ್ದಾರೆ. ರಮೇಶ ನನ್ನ ಅಣ್ಣನೇ ಅಲ್ಲ, ಸಾಯುವವರೆಗೂ ಶತ್ರು’ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಟೀಕಾಪ್ರಹಾರ ನಡೆಸಿದ್ದಾರೆ. ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, “ಇಷ್ಟು ದಿನ ಪ್ರೀತಿಯ ತಮ್ಮ ಎನ್ನುತ್ತಿದ್ದ ರಮೇಶ, ಈಗ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಸಿಕ್ಕ ಮೇಲೆ ನನ್ನನ್ನು ತಮ್ಮ ಅಲ್ಲ ಅಂತಿದ್ದಾರೆ.
ದಿನಂಪ್ರತಿ ಅವರು ನೀಡುವ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ. ನಾನು, ಸತೀಶ್, ಕೃಷ್ಣ-ಅರ್ಜುನ ಇದ್ದಂತೆ. ಚಾಣಾ ಕ್ಷತನದಿಂದ ಚುನಾವಣೆಯನ್ನು ಎದುರಿ ಸುತ್ತೇವೆ’ ಎಂದರು. ರಮೇಶ ಅಳಿಯಂದಿರ ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ನಿರಂತರ. ಸೋಮವಾರ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ ಗೋಕಾಕ ಕ್ಷೇತ್ರವನ್ನು ಗೆಲ್ಲಿಸಿ, ಉಡುಗೊರೆಯಾಗಿ ಕೊಡುತ್ತೇವೆ ಎಂದರು.
ರಮೇಶನ ತಲೆ ಮೊಬೈಲ್ ಇದ್ದಂತೆ, ಆಗಾಗ ಹ್ಯಾಂಗ್ ಆಗುತ್ತೆ: ಸತೀಶ
ಗೋಕಾಕ: “ರಮೇಶನ ತಲೆಯಲ್ಲಿ ಮೆದುಳೇ ಇಲ್ಲ. ಅವನ ತಲೆ ಮೊಬೈಲ್ ಇದ್ದ ಹಾಗೆ. ಯಾವಾಗ ಬೇಕಾದರೂ ಹ್ಯಾಂಗ್ ಆಗುತ್ತದೆ. ಅವನನ್ನು ಯಾರೂ ಗಂಭೀರವಾಗಿ ಪರಿ ಗಣಿಸಬೇಡಿ’ ಎಂದು ಶಾಸಕ ಹಾಗೂ ಮಾಜಿ ಸಚಿವ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿ, “ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ರಮೇಶ ಮಂತ್ರಿ ಆಗಲು ಡಿಕೆಶಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಕಾರಣ. ರಮೇಶ ಓರ್ವ ಹುಚ್ಚ, ಆತನನ್ನೇಕೆ ಮಂತ್ರಿ ಮಾಡಿದಿರಿ ಎಂದು ಡಿಕೆಶಿ ಹಾಗೂ ಹೆಬ್ಬಾಳ್ಕರ್ ವಿರುದ್ಧ ನಾನೇ ಅಸಮಾಧಾನ ಗೊಂಡಿದ್ದೆ.
ಅದನ್ನು ಬಿಟ್ಟರೆ ಈ ಇಬ್ಬರ ಮಧ್ಯೆ ವೈಯಕ್ತಿಕ ದ್ವೇಷ ನನಗಿರಲಿಲ್ಲ’ ಎಂದರು. ರಮೇಶನೇ ಡಿಕೆಶಿಯನ್ನು ಮಂತ್ರಿ ಮಾಡಲು ಹೊರಟಿದ್ದರು. ಜತೆಗೆ, ಸಿದ್ದರಾಮಯ್ಯ ಅವರನ್ನು ಮತ್ತೂಮ್ಮೆ ಮುಖ್ಯ ಮಂತ್ರಿ ಮಾಡು ವುದಾಗಿ ರಮೇಶ ಹಲವು ಬಾರಿ ಹೇಳಿದ್ದರು. ಈಗ ಅವರೇ ಉಲ್ಟಾ ಹೊಡೆದು, ಸಿದ್ದರಾಮಯ್ಯ ಹಾಗೂ ಡಿಕೆಶಿ ವಿರುದ್ಧ ಮಾತನಾಡುತ್ತಿದ್ದಾರೆ. ಉಪಚುನಾವಣೆಯ ಪ್ರಚಾರಕ್ಕೆ ಡಿಕೆಶಿ ಹಾಗೂ ಹೆಬ್ಬಾಳ್ಕರ್ ಇಬ್ಬರನ್ನೂ ಕರೆಸುತ್ತೇವೆ. ಅವರೇ ರಮೇಶ ವಿರುದ್ಧ ತಮ್ಮ ಅಭಿಪ್ರಾಯ ಹೇಳುತ್ತಾರೆ ಎಂದರು.
25 ವರ್ಷ ಕೈ ಚೀಲ ಹಿಡಿದಿದ್ದಾನೆ: ಇನ್ನು ಕಾಂಗ್ರೆಸ್‌ನಲ್ಲಿ ಕೈ ಚೀಲ ಹಿಡಿಯಬೇಕು, ಬಾಗಿಲು ಕಾಯಬೇಕು ಅಂತವರಿಗೆ ಮಾತ್ರ ಬೆಲೆ ಎನ್ನುವ ರಮೇಶ ಸಹ 25 ವರ್ಷ ಕೈ ಚೀಲ ಹಿಡಿದಿದ್ದಾನೆ. ರಾಜಕೀಯ ದಲ್ಲಿ ಬೆಳೆಯುವುದಕ್ಕೆ ಗಾಡ್ ಫಾದರ್ ಬೇಕೇ ಬೇಕು. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಲ್ಲಿಯೂ ಈ ಸಂಸ್ಕೃತಿ ಇದೆ. ಕೈ ಚೀಲ ಹಿಡಿ ಯೋದು ಅಂದರೆ ಚಮಚಾ ಗಿರಿ ಮಾಡುವುದಲ್ಲ. ರಮೇಶ ಜಾರಕಿಹೊಳಿ ಬಿ. ಶಂಕರಾ ನಂದ ಅವರ ಕೈಚೀಲ ಹಿಡಿದು ಓಡಾಡಿ ದ್ದರು. ಹೆಬ್ಬಾಳ್ಕರ್, ಡಿಕೆಶಿ ಹಾಗೂ ರಮೇಶ ಜಾರಕಿಹೊಳಿ ಒಂದೇ ಗ್ರೂಪ್‌ನಲ್ಲಿ ಇದ್ದವರು. ನಂತರ ಅವರವರಲ್ಲಿಯ ಸಮಸ್ಯೆ ಯಿಂದಾಗಿ ರಮೇಶ ಹೊರ ಬಂದಿದ್ದಾರೆ ಎಂದರು.
ಇನ್ಮುಂದೆ ಊಟಕ್ಕೆ ಲಕ್ಷ್ಮೀ ಮನೆಗೇ ಹೋಗುತ್ತೇನೆ: “ರಮೇಶ ತನಗೆ ಹೇಗೆ ಬೇಕು ಹಾಗೆ ಬದಲಾಗುತ್ತಾನೆ. ಸುಳ್ಳು ಹೇಳುವುದರಲ್ಲಿ ಪಿ.ಎಚ್‌ಡಿ ಮಾಡಿದ್ದಾನೆ. ಲಕ್ಷ್ಮೀ ಹೆಬ್ಬಾಳ್ಕರ್ ಮನೆಗೆ ಈ ಹಿಂದೆ ಚಹಾ ಕುಡಿಯಲು ನಾನು ಹೋಗಿದ್ದು ನಿಜ. ಈಗ ಹೋಗಿಲ್ಲ, ಇನ್ನು ಮುಂದೆ ಹೋಗುತ್ತೇನೆ. ಗೋಕಾಕ ಉಸ್ತುವಾರಿಯ ಹೊಣೆಯನ್ನು ಲಕ್ಷ್ಮೀ ಹೆಬ್ಬಾಳ್ಕರ್ ಹೊತ್ತಿರುವುದರಿಂದ ಇನ್ಮುಂದೆ ಚಹಾ, ಊಟಕ್ಕೆ ಲಕ್ಷ್ಮೀ ಮನೆಗೇ ಹೋಗುತ್ತೇನೆ.
ಇನ್ಮುಂದೆ, ನಾನು ಡಿಕೆಶಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಒಂದೇ. ಮೊದಲಿನಿಂದ ರಮೇಶ ಜಾರಕಿಹೊಳಿ ಸ್ವಾರ್ಥಿ. ನಾನು ಮೊದಲಿನಿಂದಲೂ ರಮೇಶನನ್ನು ವಿರೋ ಧಿಸುತ್ತೇನೆ. ಲಖನ್ ಮೊದಲಿನಿಂದಲೂ ಕಾಂಗ್ರೆಸ್‌ನಲ್ಲಿಯೇ ಇದ್ದಾರೆ. ಸೋಮವಾರ ನಗರದಲ್ಲಿ ಮೆರವಣಿಗೆ ಮೂಲಕ ಸಾಗಿ ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಸಲಿದ್ದಾರೆ. ಜಿಲ್ಲೆಯ ನಾಯಕರು, ಕಾಂಗ್ರೆಸ್ ಚುನಾವಣಾ ವೀಕ್ಷಕ ಶಿವಾನಂದ ಪಾಟೀಲ್ ಆಗಮಿಸಲಿದ್ದಾರೆ’ ಎಂದು ಸತೀಶ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
MUST WATCH
ಹೊಸ ಸೇರ್ಪಡೆ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.