ಕಾಶ್ಮೀರ್ ಫೈಲ್ಸ್: ಕೈಗೆ ಬಿಜೆಪಿ ತಿರುಗೇಟು
90ರ ದಶಕದಲ್ಲಿ ನಡೆದಿದ್ದ ಘಟನೆಗಳ ಬಗ್ಗೆ ಟ್ವೀಟ್ ಮಾಡಿದ್ದ ಕೇರಳ ಕಾಂಗ್ರೆಸ್
Team Udayavani, Mar 15, 2022, 7:30 AM IST
ಅಮೆರಿಕದಲ್ಲಿನ ಮಲ್ಟಿಪ್ಲೆಕ್ಸ್‌ನಲ್ಲಿ "ದ ಕಾಶ್ಮೀರ್ ಫೈಲ್ಸ್' ಚಿತ್ರಕ್ಕೆ ಸಿಕ್ಕ ಭಾರೀ ಜನಸ್ಪಂದನೆ.
ಹೊಸದಿಲ್ಲಿ: ಇತ್ತೀಚೆಗೆ ಬಿಡುಗಡೆಯಾಗಿ ದೇಶಾದ್ಯಂತ ಕಿಚ್ಚು ಹೊತ್ತಿಸಿರುವ “ದ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಕೇರಳ ಕಾಂಗ್ರೆಸ್ ಮಾಡಿದ್ದ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ.
ಕಾಂಗ್ರೆಸ್‌ನ ಟ್ವೀಟ್‌ಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಕಣಿವೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗಲೇ ಇಂಥ ದುರ್ಘಟನೆಗಳು ನಡೆದಿವೆ ಎಂದು ತಿರುಗೇಟು ನೀಡಿದೆ. ಬಿಜೆಪಿಯಿಂದ ತೀಕ್ಷ್ಣ ಪ್ರತಿಕ್ರಿಯೆ ಬಂದ ಅನಂತರ ತನ್ನ ವಿವಾದಾತ್ಮಕ ಟ್ವೀಟ್ ಅನ್ನು ಕೇರಳ ಕಾಂಗ್ರೆಸ್ ಡಿಲೀಟ್ ಮಾಡಿದೆ.
ತೊಂಬತ್ತರ ದಶಕದಲ್ಲಿ ಕಾಶ್ಮೀರ ಕಣಿವೆಯಲ್ಲಿ ಆಗಿರುವ ಕಾಶ್ಮೀರಿ ಪಂಡಿತರ ಹತ್ಯಾಕಾಂಡ, ಸಾಮೂಹಿಕ ವಲಸೆಯ ಕಥಾವಸ್ತುವನ್ನು ಒಳಗೊಂಡಿರುವ ಈ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದ ಕೇರಳ ಕಾಂಗ್ರೆಸ್ ಘಟಕ, “1999ರಿಂದ 2007ರವರೆಗೆ ಕಣಿವೆಯಲ್ಲಿ 399 ಪಂಡಿತರಷ್ಟೇ ಹತ್ಯೆಗೀಡಾಗಿದ್ದಾರೆ. ಆದರೆ ಅದೇ ಅವಧಿಯಲ್ಲಿ ಸುಮಾರು 15 ಸಾವಿರ ಮುಸ್ಲಿಮರು ಹತ್ಯೆಗೀಡಾಗಿದ್ದರು. ಈ ಘಟನೆಗಳು ನಡೆದಾಗ ಕೇಂದ್ರದಲ್ಲಿ ಬಿಜೆಪಿ ಬೆಂಬಲಿತ ಸರಕಾರವೇ ಅಸ್ತಿತ್ವದಲ್ಲಿತ್ತು. ಆದರೂ ಅದನ್ನು ಸಮರ್ಪಕವಾಗಿ ನಿಭಾಯಿಸಲು ಆಗಲಿಲ್ಲ’ ಎಂದು ಟೀಕಿಸಿತು.
ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಕೇಂದ್ರದ ಮಾಜಿ ಸಚಿವ ಕೆ.ಜೆ. ಆಲೊ#àನ್ಸ್, “ಕಾಂಗ್ರೆಸ್ಸಿಗೆ ಇತಿಹಾಸ ಗೊತ್ತಿಲ್ಲ, ಕಣಿವೆ ರಾಜ್ಯದಿಂದ 1.5 ಲಕ್ಷ ಕಾಶ್ಮೀರಿ ಪಂಡಿತರನ್ನು ಹೇಗೆ ಹೊರದೊಬ್ಬಲಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಅಲ್ಲದೆ ಆಗ ಕಾಶ್ಮೀರದಲ್ಲಿ ಕಾಂಗ್ರೆಸ್ ಅಥವಾ ಕಾಂಗ್ರೆಸ್‌ನ ಮಿತ್ರ ಪಕ್ಷಗಳ ಸರಕಾರವೇ ಇತ್ತೆಂಬುದೂ ಎಲ್ಲರಿಗೆ ಗೊತ್ತಿದೆ’ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:ಅಸಮರ್ಪಕ ಮೌಲ್ಯಮಾಪನ: ಶಿಕ್ಷಕರ ವಿರುದ್ಧ ಕಠಿನ ಕ್ರಮ: ಸಚಿವ ಬಿ.ಸಿ. ನಾಗೇಶ್
ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಸಲಹೆಗಾರರಾದ ಕಂಚನ್ ಗುಪ್ತಾ ಪ್ರತಿಕ್ರಿಯಿಸಿದ್ದು, “1989ರ ಸೆಪ್ಟಂಬರ್‌ನಲ್ಲಿ ಕಾಶ್ಮೀರಿ ಪಂಡಿತರ ಮೇಲೆ ದಾಳಿಗಳು ಆರಂಭಗೊಂಡಿದ್ದವು. ಹಾಗಾಗಿ ಆ ವರ್ಷದ ನವೆಂಬರ್-ಡಿಸೆಂಬರ್ ಹೊತ್ತಿಗೆ ಪಂಡಿತರು ಕಾಶ್ಮೀರ ವನ್ನು ತೊರೆಯಬೇಕಾಯಿತು. ಆಗ ಅಲ್ಲಿಯೇ ಉಳಿದು ಕೊಂಡ ಕುಟುಂಬಗಳ ಮೇಲೆ 1990ರ ಜನವರಿಯ ಕರಾಳ ರಾತ್ರಿಯೊಂದರ ಸಂದರ್ಭದಲ್ಲಿ ಮತ್ತೆ ದಾಳಿಗಳಾ ದಾಗ ಪ್ರಾಯಶಃ ಜ. 20ರಂದು ಆ ಕುಟುಂಬಗಳು ಕಣಿವೆಯನ್ನು ತೊರೆದವು. ಇಂಥ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರದಲ್ಲಿ ಪ್ರಧಾನಿಯಾಗಿದ್ದ ವಿ.ಪಿ. ಸಿಂಗ್ ವಿಫಲವಾದರು’ ಎಂದು ಹೇಳಿದ್ದಾರೆ.
ಪೊಲೀಸರಿಗೆ ರಜೆ!: ದ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಮಧ್ಯಪ್ರದೇಶದ ಪೊಲೀಸರೂ ವೀಕ್ಷಿಸಲು ಅಲ್ಲಿನ ರಾಜ್ಯ ಸರಕಾರ ಅನುಕೂಲ ಕಲ್ಪಿಸಿದೆ. ಸಿನೆಮಾ ವೀಕ್ಷಣೆಗಾಗಿ ದಿನ ನಿಗದಿಪಡಿಸುವ ಪೊಲೀಸರಿಗೆ ಆ ದಿನದಂದು ರಜೆ ನೀಡುವುದಾಗಿ ಪ್ರಕಟಿಸಿದೆ.
ಸಿನೆಮಾ ವೀಕ್ಷಿಸಿದ ಹಿಮಂತ “ಪರಿವಾರ’: ಅಲ್ಲಿನ ಮುಖ್ಯಮಂತ್ರಿ ಹಿಮಂತ ಬಿಸ್ವಾಸ್ ಅವರು, ತಮ್ಮ ಸಂಪುಟ ಸಹೋದ್ಯೋಗಿಗಳು, ಬಿಜೆಪಿ ಶಾಸಕರು ಹಾಗೂ ಅಸ್ಸಾಂ ಸರಕಾರದಲ್ಲಿ ಭಾಗಿಯಾಗಿರುವ ಅಸೋಂ ಗಣ ಪರಿಷತ್, ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ ಪಕ್ಷದ ಶಾಸಕರೊಂದಿಗೆ ಗುವಾಹಟಿಯ ಮಲ್ಟಿಪ್ಲೆಕ್ಸ್ ಒಂದರಲ್ಲಿ ಈ ಸಿನೆಮಾ ವೀಕ್ಷಿಸಿದ್ದಾರೆ.
ದಾಖಲೆಯ ಗಳಿಕೆ
ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕುರಿತಾಗಿ ಮಾಡ ಲಾಗಿರುವ “ದಿ ಕಾಶ್ಮೀರ್ ಫೈಲ್ಸ್’ ಸಿನೆಮಾ ಭಾರ ತೀಯರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಬಿಡುಗಡೆಯಾದ ದಿನದಂದು 3.55 ಕೋಟಿ ರೂ. ಗಳಿಸಿದ್ದ ಸಿನೆಮಾ ರವಿವಾರದಂದು ಬರೋಬ್ಬರಿ 15.10 ಕೋಟಿ ರೂ. ಗಳಿಸಿದೆ. ರವಿವಾರ ರಾತ್ರಿಯ ವರೆಗೆ ಚಿತ್ರದ ಒಟ್ಟಾರೆ ಗಳಿಕೆ 27.15 ಕೋಟಿ ರೂ. ಆಗಿದೆ. ಕೊರೊನಾ ಮುನ್ನೆಚ್ಚರಿಕ ನಿಯಮಗಳು, “ರಾಧೆ ಶ್ಯಾಮ್’, “ಗಂಗೂಬಾಯಿ ಕಥಿಯಾವಾಡಿ’ ಸಿನೆಮಾಗಳ ಸ್ಪರ್ಧೆಯಿದ್ದರೂ ಕಾಶ್ಮೀರ್ ಫೈಲ್ಸ್ ಒಳ್ಳೆಯ ಗಳಿಕೆ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.