![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Nov 22, 2023, 1:04 AM IST
ಹೊಸದಿಲ್ಲಿ: ಅರ್ಜೆಂಟೀನಾಕ್ಕೆ ಲಿಬರ್ಟಾಡ್ ಅವಾಂಜ ಪಕ್ಷದ ನಾಯಕ ಜೇವಿಯರ್ ಮಿಲೀ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅರ್ಜೆಂಟೀನಾ ಮತ್ತು ಅಮೆರಿಕ ಖಂಡದಲ್ಲಿ ಈ ವ್ಯಕ್ತಿ ಬಹಳ ಜನಪ್ರಿಯ. ಹೊರಜಗತ್ತಿಗೆ ಇವರ ಬಗ್ಗೆ ಬಹಳ ಗೊತ್ತಿಲ್ಲ. ವಿಶೇಷವೇನು ಗೊತ್ತಾ? ಈತನನ್ನು ಜನ ಹುಚ್ಚ, ಅರ್ಜೆಂಟೀನಾದ ಡೊನಾಲ್ಡ್ ಟ್ರಂಪ್, ತಾಂತ್ರಿಕ ಲೈಂಗಿಕತೆಯ ಸರ್ದಾರ ಎಂದೆಲ್ಲ ಕರೆಯುತ್ತಾರೆ. ಅಂತಹ ವ್ಯಕ್ತಿಯನ್ನೇ ಅರ್ಜೆಂಟೀನಾ ಮಂದಿ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆ ಮಾಡಿದ್ದಾರೆ.
ಅರ್ಜೆಂಟೀನಾದಲ್ಲಿ ಹಣದುಬ್ಬರ ಶೇ.143ಕ್ಕೇರಿದೆ, ಬಡತನ ವಿಪರೀತವಾಗಿದೆ. ಅಂತಹ ಹೊತ್ತಿನಲ್ಲಿ ಅರ್ಜೆಂಟೀನಾ ಮಂದಿ ಈ “ಹುಚ್ಚ”ನಿಗೆ ಮತ ಹಾಕಿ ಆಯ್ಕೆ ಮಾಡಿಕೊಂಡಿದ್ದಾರೆ. ಅದಕ್ಕೆ ಸರಿಯಾಗಿ ಮಿಲೀ, ಆರ್ಥಿಕತೆಯನ್ನು ಉಬ್ಬಿಸುತ್ತೇನೆ, ಸರಕಾರದ ಗಾತ್ರವನ್ನೇ ಕಡಿತ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಹಿಂದೆ ರಾಕ್ ಬ್ಯಾಂಡ್ ತಂಡದ ಸದಸ್ಯರಾಗಿದ್ದರು. ಹಲವು ಟಿವಿ ಕಾರ್ಯಕ್ರಮಗಳಲ್ಲಿ ಗರಗಸ ಹಿಡಿದುಕೊಂಡು ಕಾಣಿಸಿಕೊಂಡಿದ್ದಾರೆ. ಅವರ ಅಭಿಮಾನಿಗಳು ಅದನ್ನೇ ಸಂಕೇತವಾಗಿ ಬಳಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ ಪೋಪ್ ಫ್ರಾನ್ಸಿಸ್‌ರನ್ನು ಶತದಡ್ಡ, ಕೊಳಕು ಎಡಪಂಥೀಯ ಎಂದು ಕರೆದು, ಭೂಗತ ಪಾತಕಿ ಎಐ ಕೆಪೋನ್‌ರನ್ನು ದೊಡ್ಡ ಹೀರೋ ಎಂದು ವರ್ಣಿಸಿದ್ದಾರೆ.
ಸೂಪರ್ ಹೀರೋ ವೇಷದಲ್ಲೂ ಕಾಣಿಸಿಕೊಂಡಿರುವ ಮಿಲೀ, ಐವರು ಅರ್ಥಶಾಸ್ತ್ರಜ್ಞರ ಹೆಸರನ್ನೇ ತನ್ನ ಐದು ನಾಯಿಗಳಿಗೆ ಇಟ್ಟಿದ್ದಾರೆ. ಏನೇ ಮಾಡುವುದಿದ್ದರೂ ಈತ ಈ ನಾಯಿಗಳಿಂದಲೇ ಸಲಹೆ ಪಡೆಯುತ್ತಾರಂತೆ!
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.