ನಂಬಿಕೆ, ಆತ್ಮವಿಶ್ವಾಸ ಬದುಕಿನ ಜೀವಾಳ
Team Udayavani, Mar 6, 2021, 6:20 AM IST
ಭರವಸೆ ಎಂದರೆ… ನನ್ನ ಬದುಕಿನ ಅತ್ಯಂತ ಒಳ್ಳೆಯ ಘಟನೆ ಇನ್ನಷ್ಟೇ ಸಂಭವಿಸಬೇಕಾಗಿದೆ ಎಂದು ಭಾವಿಸುವುದು. ಈ ಜೀವನವೇ ಹಾಗೆ ವಿಚಿತ್ರದಿಂದ ಕೂಡಿದೆ. ಬದುಕು ಅನೇಕ ತಿರುವುಗಳನ್ನು ಪಡೆದುಕೊಂಡು ಕ್ಷಣಕ್ಕೊಂದು ರೀತಿ ವರ್ತಿಸುತ್ತದೆ.
ಮಾನವ ಹೇಗೆ ಊಸರವಳ್ಳಿಯ ಹಾಗೇ ಕ್ಷಣಕ್ಕೊಂದು ಬಣ್ಣ ಬದಲಿಸುತ್ತಾನೋ ಹಾಗೇನೇ ಅವನ ಜೀವನವು ದೇವರ ಇಚ್ಛೆಯಂತೆ ದಿನಕ್ಕೊಂದು ಕಡೆಗೆ ವಾಲುತ್ತಿರುತ್ತದೆ. ಆದರೆ ನಮ್ಮಲ್ಲಿರುವ ನಂಬಿಕೆ, ಆತ್ಮವಿಶ್ವಾಸವನ್ನು ಯಾವತ್ತೂ ಕಳೆದುಕೊಳ್ಳಬಾರದು. ಯಾಕೆಂದರೆ ನಮ್ಮ ಪ್ರಯತ್ನಗಳೇ ಬದುಕನ್ನು ಬದ ಲಾಯಿಸುವ ಶಕ್ತಿಯುಳ್ಳದ್ದು. ಇದು ನಮ್ಮಲ್ಲಿ ಇರುತ್ತದೆ. ಬದುಕಿನ ಸೂಕ್ಷ್ಮ ವಿಷಯಗಳನ್ನು ಗಮನಿಸಿದಾಗಲೇ ನಮ್ಮವರು ಯಾರು?, ಹೊರಗಿನವರು ಯಾರು? ಎಂದು ತಿಳಿಯುತ್ತದೆ.
ನಮ್ಮವರು ಅಂತ ಇರುವವರು ಯಾವತ್ತೂ ನಮ್ಮ ಜತೆಗೆ ಕಷ್ಟ-ಸುಖ ಹಂಚಿಕೊಂಡು ಇರುತ್ತಾರೆ. ಆದರೆ ಅವರು ಕೂಡಾ ಅಪರಿಚಿತರ ರೀತಿ ವರ್ತಿಸಿದರೆ ಮಾತ್ರ ಮನಸ್ಸು ತಡೆದುಕೊಳ್ಳುವುದಿಲ್ಲ. ನಮ್ಮ ಅಂದ-ಚಂದ ನೋಡದೆ ನಾವು ಇದ್ದ ರೀತಿಯೇ ನಮ್ಮನ್ನು ಒಪ್ಪಿಕೊಳ್ಳುವ ಮನಸಿದೆ ಅಲ್ವಾ ಅದು ನಿಜವಾದ ಮನಸ್ಸು. ಹೊರತು ಬಾಹ್ಯ ಸೌಂದ ರ್ಯಕ್ಕೆ ಮರುಳಾಗೋ ಮನಸ್ಸುಗಳನ್ನು ನಂಬುವಂತಿಲ್ಲ.
ಮನಸ್ಸು ಎಂಬುದು ಮರ್ಕಟದಂತೆ, ಅದು ಬದಲಾಗುತ್ತಾ ಇರುತ್ತದೆ. ಆದರೆ ನಮ್ಮತನವನ್ನು ಯಾವತ್ತೂ ಬಿಟ್ಟು ಕೊಡಬಾರದು. ಬದುಕಲ್ಲಿ ಏಳು-ಬೀಳು, ನೋವು-ನಲಿವು, ಸುಖ-ದುಃಖ ಇವೆಲ್ಲವೂ ಸಾಮಾನ್ಯ. ಆದರೆ ಅವೆಲ್ಲವನ್ನು ಮೆಟ್ಟಿ ನಿಂತು ಸಫಲತೆಯನ್ನು ಹೊಂದಿ ಬಾಳುವುದು ಮುಖ್ಯ.
ಬಂಜರು ಭೂಮಿ, ಮರುಭೂಮಿ ಯಂತಹ ಸ್ಥಳವು ಸಹ ಪ್ರೀತಿಯ ಉಪಸ್ಥಿತಿಯಿಂದ ಸುಂದರವಾಗುತ್ತದೆ. ಅದಕ್ಕೆ ಅಲ್ವಾ ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು ಅನ್ನೋದು. ಪ್ರೀತಿ ಸಹನೆಗಳು ಜೀವನದ ಜತೆಗೆ ಹೆಜ್ಜೆ ಇಡುತ್ತಾ ಸಾಗಿದಂತೆ ಬದುಕು ಸುಂದರ ವಾಗುವುದರಲ್ಲಿ ಸಂದೇಹವಿಲ್ಲ. ಸಣ್ಣ ಸಣ್ಣ ಖುಷಿಯನ್ನು ಸಂಭ್ರಮಿಸಬೇಕು. ಯಾಕೆಂದರೆ ಪುಟ್ಟದೊಂದು ಆನಂದ ಬೆಟ್ಟದಷ್ಟು ಇರುವ ಸಮಸ್ಯೆಯಿಂದ ನಮ್ಮನ್ನು ಕ್ಷಣಕಾಲ ದೂರವಾಗಿಸಿ ನಮ್ಮ ಮೊಗದಲ್ಲಿ ನಗು ಮೂಡಿಸಲು ಸಹಕಾರಿಯಾಗುತ್ತದೆ.
ಬಂಡೆಕಲ್ಲು ಕೂಡಾ ಶಿಲ್ಪಿಯ ಉಳಿಯ ಏಟಿಗೆ ತನ್ನ ಮೂಲ ಸ್ವರೂಪವನ್ನು ತೊರೆದು ಸುಂದರ ಮೂರ್ತಿಯಾಗುತ್ತದೆ. ಜೀವ ಇಲ್ಲದಿರುವ ಕಲ್ಲೇ ಅಷ್ಟು ಸುಂದರವಾದ ರೂಪ ಪಡೆಯುವಾಗ ಜೀವ ಇರುವ ನಾವು ಸುಂದರ ಬದುಕನ್ನು ಮತ್ತೆ ರೂಪಿಸಲು ಶ್ರಮ ಪಡುವಲ್ಲಿ ತಪ್ಪಿಲ್ಲ. ನಂಬಿಕೆ, ಆತ್ಮವಿಶ್ವಾಸವೇ ಭರವಸೆಯ ಮೂಲ. ಇವೆರಡನ್ನೂ ನಾವು ಕಳೆದುಕೊಂಡದ್ದೇ ಆದಲ್ಲಿ ಭರವಸೆಯ ಆಶಾಕಿರಣ ಮೂಡುವುದಾದರೂ ಹೇಗೆ? ನಾವು ನಮ್ಮ ಮನಸ್ಸಿನಲ್ಲಿ ಯಾವುದೇ ತೆರನಾದ ಕೀಳರಿಮೆ ಬೆಳೆಸಿಕೊಂಡು ಕೈಕಟ್ಟಿ ಕುಳಿತಲ್ಲಿ ನಾವು ಬದುಕಿ ಪ್ರಯೋಜನವಾದರೂ ಏನು? ಒಂದಿಷ್ಟು ಭರವಸೆ, ಹೊಂಗನಸುಗಳೊಂದಿಗೆ ಗುರಿ ಸಾಧನೆಯತ್ತ ಪ್ರಯತ್ನದ ಮೂಲಕ ಶ್ರಮಿಸಿದ್ದೇ ಆದಲ್ಲಿ ನಮ್ಮ ಬದುಕು ಸಾರ್ಥಕವಾಗುತ್ತದೆ.
ನನ್ನವರು ಅಂತ ನನಗೆ ಯಾರೂ ಇಲ್ಲ ಅನ್ನೋ ಭಾವನೆ ಮನಸ್ಸಿನಲ್ಲಿ ಬಂದಾಗ ನನಗೆ ನಾನೇ ಎಲ್ಲ ಅನ್ನೋ ಆತ್ಮವಿಶ್ವಾಸವನ್ನು ಹೊಂದಿರಬೇಕೇ ಹೊರತು ನನಗಾರೂ ಇಲ್ಲ ಅಂತ ಚಿಂತೆ ಪಡಬಾರದು… ನಮ್ಮ ಬಳಿ ಸಾಧ್ಯವಿಲ್ಲ ಎನ್ನುವುದು ಯಾವುದೂ ಇಲ್ಲ. ಮನಸ್ಸು ಅಂಜುತ್ತದೆ ಅಷ್ಟೇ. ಧೈರ್ಯ ಮಾಡಿ ಮುಂದೆ ಸಾಗಿ ಗೆದ್ದರೆ ಇನ್ನೊಬ್ಬರಿಗೆ ಪಾಠ ಹೇಳಿಕೊಡಬಹುದು, ಸೋತರೆ ನಾವೇ ಪಾಠ ಕಲಿಯಬಹುದು.
- ಯಶೋಧಾ ಲತೀಶ್, ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.