ಬಿಜೆಪಿಗೆ ಬಲ ನೀಡಿದ ಲಿಂಗಾಯತ ಟ್ರಂಪ್‌ಕಾರ್ಡ್‌

Team Udayavani, Dec 11, 2019, 3:08 AM IST

bjp-logo-2

ಹುಬ್ಬಳ್ಳಿ: ಉತ್ತರ ಕರ್ನಾಟಕದ 7 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಯಡಿ ಯೂರಪ್ಪ ಪ್ರಯೋಗಿಸಿದ ಲಿಂಗಾಯತ ಟ್ರಂಪ್‌ಕಾರ್ಡ್‌ ಬಿಜೆಪಿಗೆ ಬಹುದೊಡ್ಡ ಬಲ ತುಂಬಿದೆ. ಕಷ್ಟವೆನ್ನುವ ಕ್ಷೇತ್ರಗಳಲ್ಲೂ ಭರ್ಜರಿ ಗೆಲುವು ತಂದು ಕೊಟ್ಟಿದೆ. ಕೊನೇ ಗಳಿಗೆಯ ಯತ್ನ ಹಾಗೂ ಕಸರತ್ತು ನಿರೀಕ್ಷೆಗೂ ಮೀರಿದ ಯಶಸ್ಸು ನೀಡಿದೆ.

ಉತ್ತರದ 7 ಕ್ಷೇತ್ರಗಳಲ್ಲೂ ಗೆಲುವು ಖಚಿತ ಎಂಬ ಅಚಲ ವಿಶ್ವಾಸ ಬಿಜೆಪಿಗಿರಲಿಲ್ಲ. ಈ ರೀತಿ ದಯನೀ ಯ ವಾಗಿ ನೆಲಕಚ್ಚುತ್ತೇವೆಂದು ಕಾಂಗ್ರೆಸ್‌ ಸಹ ಅಂದು ಕೊಂಡಿರಲಿಲ್ಲ. ಆದರೆ, ಚುನಾವಣೆ ಪ್ರಚಾರ ವೇಳೆ ಸಿಎಂ ಯಡಿಯೂರಪ್ಪ ಪ್ರಯೋಗಿಸಿದ ಆ ಅಸ್ತ್ರ ಚುನಾವಣೆಯ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿತು. ರಾಜಕೀಯ ವಿರೋಧಿಗಳಿಗೆ ಆಘಾತ ಮೂಡಿಸಿತು.

ಏಳು ಕ್ಷೇತ್ರಗಳಲ್ಲಿ ಒಂದೆರಡು ಕ್ಷೇತ್ರಗಳು ಕಷ್ಟ ಎಂಬುದು ಬಿಜೆಪಿಯ ಹಲವರ ಅನಿಸಿಕೆಯಾಗಿತ್ತು. ಆದರೆ, ಲಿಂಗಾಯತ ಟ್ರಂಪ್‌ಕಾರ್ಡ್‌ ಪ್ರಯೋಗ, ಪಕ್ಷ ಹಾಗೂ ಸರ್ಕಾರದ ಅಳಿವು-ಉಳಿವು, ಯಡಿಯೂರಪ್ಪ ಸಿಎಂ ಪಟ್ಟ ಉಳಿಯಬೇಕೆಂಬ ವಿಚಾರಗಳೇ ಬಿಜೆಪಿಗೆ ನಿರೀಕ್ಷೆಗೂ ಮೀರಿದ ಜಯ ತಂದುಕೊಟ್ಟವು ಎಂದು ವ್ಯಾಖ್ಯಾನಿಸಲಾಗುತ್ತಿದೆ.

2 ಕ್ಷೇತ್ರ ಕಷ್ಟದಾಯಕ ಸ್ಥಿತಿ: ಉತ್ತರ ಕರ್ನಾಟಕದಲ್ಲಿ 2 ಕ್ಷೇತ್ರಗಳು ಕಷ್ಟವಾಗಿ ಗೋಚರಿಸಿದ್ದವು. ಮತ್ತೂಂದರಲ್ಲಿ ಲಿಂಗಾಯತ ಮತಗಳು ಕೈ ತಪ್ಪಬಹುದೆಂಬ ಆತಂಕ ಎದುರಾಗಿತ್ತು. ಆದರೆ, ಇವೆಲ್ಲವುಗಳನ್ನೂ ಮೆಟ್ಟಿ ನಿಂತು ಗೆಲುವು ತಂದಿದ್ದು ಮಾತ್ರ ಬಿಜೆಪಿಯ ಸಕಾಲಿಕ ತಂತ್ರಗಾರಿಕೆ. ಬೆಳಗಾವಿ ಜಿಲ್ಲೆಯ ಕಾಗವಾಡ, ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಬಿಜೆಪಿಗೆ ಸುಲಭವಾಗಿರಲಿಲ್ಲ.

ಕಾಗವಾಡದಲ್ಲಿ ಮತದಾನದ ಮೂರ್‍ನಾಲ್ಕು ದಿನ ಮೊದಲು ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಸುಮಾರು 107 ಬೂತ್‌ಗಳಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ಇದ್ದರೆ, 105 ಬೂತ್‌ಗಳಲ್ಲಿ ಬಿಜೆಪಿಗೆ ಮುನ್ನಡೆ ಇತ್ತು. ಸುಮಾರು 1,000ಕ್ಕೂ ಅಧಿಕ ಮತಗಳಿಂದ ಕಾಂಗ್ರೆಸ್‌ ಗೆಲ್ಲುವ ಸ್ಥಿತಿಯಿತ್ತು. ಕೊನೇ ಗಳಿಗೆಯಲ್ಲಿ ಕಾಂಗ್ರೆಸ್‌ನ ಲೀಡ್‌ ಸಹ ಹೆಚ್ಚಾಗಬಹುದೆಂದು ಅರಿತ ಬಿಜೆಪಿ ನಾಯ ಕರು ಕಾರ್ಯತಂತ್ರಕ್ಕಿಳಿದಿದ್ದರು. ಗೋಕಾಕ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ವಲಸೆ ಹೋಗುವ ಆತಂಕ ಎದುರಾಗಿತ್ತು. ಹಾವೇರಿ ಜಿಲ್ಲೆ ರಾಣಿಬೆನ್ನೂರಿನಲ್ಲೂ ಅನುಕೂಲಕರ ಸ್ಥಿತಿ ಇರಲಿಲ್ಲ.

ಸಿಎಂ ಬಳಸಿದ ಟ್ರಂಪ್‌ಕಾರ್ಡ್‌: ಸಿಎಂ ಯಡಿ ಯೂರಪ್ಪ ವೀರಶೈವ-ಲಿಂಗಾಯತ ಸಮಾಜ ಎಂದಿಗೂ ನನ್ನ ಕೈ ಬಿಡುವುದಿಲ್ಲ. ಸಿಎಂ ಸ್ಥಾನದಿಂದ ಕೆಳಗಿಸುವ ಅವಕಾಶವನ್ನು ಸಮಾಜ ನೀಡದು ಎಂದು ಬೆಳಗಾವಿ ಜಿಲ್ಲೆಯಲ್ಲಿ ಪ್ರಯೋಗಿಸಿದ ಭಾವನಾತ್ಮಕ ರೂಪದ ಲಿಂಗಾಯತ ಟ್ರಂಪ್‌ಕಾರ್ಡ್‌, ಏಳು ಕ್ಷೇತ್ರಗಳ ಮೇಲೂ ತನ್ನದೇ ಪರಿಣಾಮ ಬೀರಿತ್ತು.

ಕಾಗವಾಡದ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದ ಸಿಎಂ ಹಾಗೂ ಸಚಿವ ಜಗದೀಶ ಶೆಟ್ಟರ, ಮತದಾನದ ಮೂರು ದಿನ ಮೊದಲು ಸುಮಾರು 100-120 ಪ್ರಮುಖ ಲಿಂಗಾಯತ ನಾಯಕರ ಸಭೆ ನಡೆಸಿ ಮಹತ್ವದ ಸಂದೇಶ ರವಾನಿಸಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ರಾಜು ಕಾಗೆ ಅವರೊಂದಿಗೆ ಹೊಂದಾಣಿಕೆ ರಾಜಕೀಯ ಸಂಬಂಧ ಗಳನ್ನು ಮುರಿದು ಪಕ್ಷದ ಪರವಾಗಿಸುವ ಜಾಣ್ಮೆ ತೋರಿದ್ದರು. ಇದು ಕಾಂಗ್ರೆಸ್‌ ಕಡೆ ವಾಲಬಹುದಾಗಿದ್ದ ಗೆಲುವುನ್ನು ಬಿಜೆಪಿ ಕಿತ್ತುಕೊಂಡಿತು. ಅಷ್ಟೇ ಅಲ್ಲ, ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡಿತು.

ಅಥಣಿ ಹಾಗೂ ಕಾಗವಾಡದಲ್ಲಿ ತಮ್ಮದೇ ಪ್ರಭಾವ ಹೊಂದಿರುವ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುವುದು ಬೇಡ ಎಂಬ ಬೆಂಬಲಿಗರು, ಅಭಿಮಾನಿಗಳ ಅನಿಸಿಕೆಗಳನ್ನು ಬದಿಗೊತ್ತಿ ಎಲ್ಲರನ್ನೂ ಪಕ್ಷದ ಪರವಾಗಿ ಕೆಲಸಕ್ಕಿಳಿಯುವಂತೆ ಮಾಡಿದ್ದು ಸಹ ಎರಡು ಕ್ಷೇತ್ರಗಳ ಗೆಲುವು ಸುಲಭವಾಗಿಸಿತು.

ಕೈ ಹಿಡಿದ “ಪಕ್ಷ ಮೊದಲು’ ಎಂಬ ಅಸ್ತ್ರ: ಹಾವೇರಿ ಜಿಲ್ಲೆ ಹಿರೇಕೆರೂರು, ರಾಣಿಬೆನ್ನೂರು ಕ್ಷೇತ್ರದಲ್ಲೂ ಇದೇ ಲಿಂಗಾಯತ ಟ್ರಂಪ್‌ ಕಾರ್ಡ್‌ ಪರಿಣಾಮಕಾರಿಯಾಗಿ ಬಳಸಲಾಯಿತು. ರಾಣಿಬೆನ್ನೂರಿನಲ್ಲಿ ಲಿಂಗಾಯತ ಸಿಎಂ ಜತೆಗೆ, ಪಕ್ಷದೊಳಗಿನ ಅಸಮಾಧಾನ ತಣಿಸಲು “ಪಕ್ಷ ಮೊದಲು’ ಎಂಬ ಅಸ್ತ್ರದೊಂದಿಗೆ ಕಷ್ಟದ ಸ್ಥಿತಿ ಸುಲಭವಾಯಿತು.

ಇಲ್ಲಿ ಯಡಿಯೂರಪ್ಪ ನಾಮಬಲ ಜತೆಗೆ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಬಿ.ವೈ.ರಾಘವೇಂದ್ರ ಅವರ ಶ್ರಮವೂ ಸಾಕಷ್ಟಿದೆ. ಬಳ್ಳಾರಿ ಜಿಲ್ಲೆ ವಿಜಯನಗರ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ವರ್ತನೆಯಿಂದ ಮುನಿಸಿಕೊಂಡಿದ್ದ ವೀರಶೈವ-ಲಿಂಗಾಯತ ಸಮಾಜದವರನ್ನು ಸ್ಥಳೀಯ ಮುಖಂಡರ ಸಭೆ ನಡೆಸಿ, ಅಭ್ಯರ್ಥಿಗಿಂತ ಸಮಾಜದ ನಾಯಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಖ ನೋಡಿ ಎಂದು ಮುನಿಸು ಶಮನಗೊಳಿಸಲಾಗಿತ್ತು.

ಕಾಂಗ್ರೆಸ್‌ ಎಡವಿದ್ದೆಲ್ಲಿ?: ಬಿಜೆಪಿಯ ಈ ಸಂಘಟಿತ ಯತ್ನಗಳಿಗೆ ತದ್ವಿರುದ್ಧ ಎನ್ನುವಂತೆ ಕಾಂಗ್ರೆಸ್‌ನಲ್ಲಿ ನಾಯಕರಾದ ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌, ಒಂದೆರಡು ಕಡೆ ಡಿ.ಕೆ.ಶಿವಕುಮಾರ್‌ ಬಿಟ್ಟರೆ ಬೇರಾವ ನಾಯಕರೂ ಪ್ರಚಾರಕ್ಕಿಳಿಯಲಿಲ್ಲ. ಮತ ಸೆಳೆಯಬಹುದಾದ ಯಾವುದೇ ತಂತ್ರಗಾರಿಕೆ ಮಾಡಲಿಲ್ಲ.

ಕಾಂಗ್ರೆಸ್‌ನಲ್ಲಿ ಅನೇಕ ಕಡೆಗಳಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂಬುದಕ್ಕಿಂತ ಸೋಲಿಸುವುದು ಹೇಗೆಂಬ ನಿಟ್ಟಿನಲ್ಲಿಯೇ ಹೆಚ್ಚು ಯತ್ನಗಳು ನಡೆದವು. ಜೆಡಿಎಸ್‌ ಗೋಕಾಕ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿತ್ತಾದರೂ ಅದು ಕೇವಲ ಒಂದೆರಡು ಸಲದ ಪ್ರಚಾರಕ್ಕೆ ಸೀಮಿತವಾಗಿದ್ದು ಬಿಟ್ಟರೆ ಅಭ್ಯರ್ಥಿ ಪರ ಮಹತ್ವದ ಯತ್ನಗಳು ಕೈಗೊಳ್ಳಲಿಲ್ಲ. ಇದೆಲ್ಲದರ ಲಾಭ ತನ್ನದಾಗಿಸಿಕೊಂಡ ಬಿಜೆಪಿ ಕೊನೆ ಗಳಿಗೆಯಲ್ಲಿ ತನ್ನೆಲ್ಲ ಶ್ರಮವನ್ನು ವಿನಿಯೋಗಿಸಿ ಉತ್ತಮ ಫ‌ಸಲು ಪಡೆಯಿತು.

* ಅಮರೇಗೌಡ ಗೋನವಾರ

ಟಾಪ್ ನ್ಯೂಸ್

ಸಿಲಿಂಡರ್‌ ಸ್ಫೋ*ಟ ಪ್ರಕರಣ: ಗಾಯಾಳು ಮಹಿಳೆ ಸಾವು; ಮತ್ತೋರ್ವರ ಸ್ಥಿತಿ ಗಂಭೀರ

Surathkal: ಸಿಲಿಂಡರ್‌ ಸ್ಫೋ*ಟ ಪ್ರಕರಣ: ಗಾಯಾಳು ಮಹಿಳೆ ಸಾವು; ಮತ್ತೋರ್ವರ ಸ್ಥಿತಿ ಗಂಭೀರ

Kasaragod: ಚಪ್ಪರ ತೆಗೆಯುತ್ತಿದ್ದಾಗ ವಿದ್ಯುತ್‌ ಶಾಕ್‌: ಕಾರ್ಮಿಕನ ಸಾವು

Kasaragod: ಚಪ್ಪರ ತೆಗೆಯುತ್ತಿದ್ದಾಗ ವಿದ್ಯುತ್‌ ಶಾಕ್‌: ಕಾರ್ಮಿಕನ ಸಾವು

Thokottu: ಸ್ಕೂಟರ್‌ ಪಲ್ಟಿಯಾಗಿ ಸವಾರ ಸಾವು

Thokottu: ಸ್ಕೂಟರ್‌ ಪಲ್ಟಿಯಾಗಿ ಸವಾರ ಸಾವು

PAK Vs SA: ಸೆಂಚುರಿಯನ್‌ ಟೆಸ್ಟ್‌ ಪಾಕಿಸ್ಥಾನ  211ಕ್ಕೆ ಆಲೌಟ್‌

PAK Vs SA: ಸೆಂಚುರಿಯನ್‌ ಟೆಸ್ಟ್‌ ಪಾಕಿಸ್ಥಾನ 211ಕ್ಕೆ ಆಲೌಟ್‌

Test cricket: ಮ್ಯಾಚ್‌ ರೆಫ‌ರಿಯಾಗಿ ನೂರು ಟೆಸ್ಟ್‌ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್

Test cricket: ಮ್ಯಾಚ್‌ ರೆಫ‌ರಿಯಾಗಿ ನೂರು ಟೆಸ್ಟ್‌ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್

Pro Kabaddi League: ಯುಪಿ ಯೋಧಾಸ್‌,ಪಾಟ್ನಾ ಪೈರೇಟ್ಸ್‌ ಸೆಮಿಫೈನಲಿಗೆ

Pro Kabaddi League: ಯುಪಿ ಯೋಧಾಸ್‌,ಪಾಟ್ನಾ ಪೈರೇಟ್ಸ್‌ ಸೆಮಿಫೈನಲಿಗೆ

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಸಿಲಿಂಡರ್‌ ಸ್ಫೋ*ಟ ಪ್ರಕರಣ: ಗಾಯಾಳು ಮಹಿಳೆ ಸಾವು; ಮತ್ತೋರ್ವರ ಸ್ಥಿತಿ ಗಂಭೀರ

Surathkal: ಸಿಲಿಂಡರ್‌ ಸ್ಫೋ*ಟ ಪ್ರಕರಣ: ಗಾಯಾಳು ಮಹಿಳೆ ಸಾವು; ಮತ್ತೋರ್ವರ ಸ್ಥಿತಿ ಗಂಭೀರ

Kasaragod: ಚಪ್ಪರ ತೆಗೆಯುತ್ತಿದ್ದಾಗ ವಿದ್ಯುತ್‌ ಶಾಕ್‌: ಕಾರ್ಮಿಕನ ಸಾವು

Kasaragod: ಚಪ್ಪರ ತೆಗೆಯುತ್ತಿದ್ದಾಗ ವಿದ್ಯುತ್‌ ಶಾಕ್‌: ಕಾರ್ಮಿಕನ ಸಾವು

Thokottu: ಸ್ಕೂಟರ್‌ ಪಲ್ಟಿಯಾಗಿ ಸವಾರ ಸಾವು

Thokottu: ಸ್ಕೂಟರ್‌ ಪಲ್ಟಿಯಾಗಿ ಸವಾರ ಸಾವು

PAK Vs SA: ಸೆಂಚುರಿಯನ್‌ ಟೆಸ್ಟ್‌ ಪಾಕಿಸ್ಥಾನ  211ಕ್ಕೆ ಆಲೌಟ್‌

PAK Vs SA: ಸೆಂಚುರಿಯನ್‌ ಟೆಸ್ಟ್‌ ಪಾಕಿಸ್ಥಾನ 211ಕ್ಕೆ ಆಲೌಟ್‌

Test cricket: ಮ್ಯಾಚ್‌ ರೆಫ‌ರಿಯಾಗಿ ನೂರು ಟೆಸ್ಟ್‌ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್

Test cricket: ಮ್ಯಾಚ್‌ ರೆಫ‌ರಿಯಾಗಿ ನೂರು ಟೆಸ್ಟ್‌ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.