World Cup: ಮಾರ್ಕ್‌ರಮ್ ಸಾಹಸ- ದ. ಆಫ್ರಿಕಾಕ್ಕೆ ರೋಚಕ ಗೆಲುವು
ಪಾಕಿಸ್ಥಾನ 270 ಆಲೌಟ್: ದಕ್ಷಿಣ ಆಫ್ರಿಕಾ 9 ವಿಕೆಟಿಗೆ 271
Team Udayavani, Oct 28, 2023, 12:36 AM IST
ಚೆನ್ನೈ: ಐಡೆನ್ ಮಾರ್ಕ್‌ರಮ್ ಅವರ ಅಮೋಘ ಪ್ರದರ್ಶನದಿಂದಾಗಿ ದಕ್ಷಿಣ ಆಫ್ರಿಕಾ ತಂಡವು ಶುಕ್ರವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ಥಾನವನ್ನು 1ವಿಕೆಟ್ ಅಂತರದಿಂದ ರೋಮಾಂಚಕವಾಗಿ ಸೋಲಿಸಿತಲ್ಲದೇ ಅಂಕಪಟ್ಟಿ ಯಲ್ಲಿ ಅಗ್ರಸ್ಥಾನಕ್ಕೇರಿತು.
ಒಂದು ಕಡೆಯಿಂದ ವಿಕೆಟ್ ಉರುಳುತ್ತಿದ್ದರೂ ಜವಾಬ್ದಾರಿಯುತ ಆಟದ ಪ್ರದರ್ಶನ ನೀಡಿದ ಮಾರ್ಕ್‌ರಮ್ ಉಳಿದ ಆಟಗಾರರ ಅಮೋಘ ಬೆಂಬಲ ಪಡೆದು ಏಕಾಂಗಿಯಾಗಿ ಹೋರಾಡಿ ದ್ದರಿಂದ ತಂಡವು 47.2 ಓವರ್‌ಗಳಲ್ಲಿ 9 ವಿಕೆಟಿಗೆ 271 ರನ್ ಪೇರಿಸಿ ಜಯಭೇರಿ ಬಾರಿಸಿತು. ಈ ಗೆಲುವಿನಿಂದ ¨ಕ್ಷಿಣ ಆಫ್ರಿಕಾ ತಾನಾಡಿದ ಆರು ಪಂದ್ಯಗಳಲ್ಲಿ ಐದನೇ ಗೆಲುವು ಸಾಧಿಸಿ ಭಾರತ ಜತೆ ಒಟ್ಟು 10 ಅಂಕ ಗಳಿಸಿತು. ಆದರೆ ಉತ್ತಮ ರನ್‌ಧಾರಣೆಯ ಆಧಾರದಲ್ಲಿ ದಕ್ಷಿಣ ಆಫ್ರಿಕಾ ಅಗ್ರಸ್ಥಾನಕ್ಕೇರಿತು.
ಈ ಮೊದಲು ಬಾಬರ್ ಆಜಂ ಮತ್ತು ಮೊಹಮ್ಮದ್ ಶಕೀಲ್ ಅವರ ಅರ್ಧಶತಕದ ನೆರವಿನಿಂದ ಪಾಕಿಸ್ಥಾನವು 46. 4 ಓವರ್‌ಗಳಲ್ಲಿ 270 ರನ್ನಿಗೆ ಆಲೌಟಾಯಿತು.
ದಕ್ಷಿಣ ಆಫ್ರಿಕಾ ಆರಂಭದಿಂದಲೇ ಎಚ್ಚರಿಕೆಯ ಆಟ ಆಡಿತು. ಆರಂಭಿಕರಾದ ಟೆಂಬ ಬವುಮ ಮತ್ತು ಕಾಕ್ ಮೊದಲ ವಿಕೆಟಿಗೆ 34 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಈ ಹಂತದಲ್ಲಿ ತಂಡ ಕಾಕ್ ಅವರ ವಿಕೆಟನ್ನು ಕಳೆದುಕೊಂಡಿತು. ಈ ವಿಶ್ವಕಪ್‌ನಲ್ಲಿ ಮೂರು ಶತಕ ಸಿಡಿಸಿ ಗಮನ ಸೆಳೆದಿದ್ದ ಕಾಕ್ ಇಲ್ಲಿ 24 ರನ್ ಗಳಿಸಲಷ್ಟೇ ಶಕ್ತರಾದರು. 67 ರನ್ ತಲುಪಿದ ವೇಳೆ ಬವುಮ ಅವರು ವಸೀಮ್‌ಗೆ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಕ್ರೀಸ್‌ಗೆ ಆಗಮಿಸಿದ ಮಾರ್ಕ್ ರಮ್ ಒಂದು ಕಡೆಯಿಂದ ತಾಳ್ಮೆಯಿಂದ ಆಡಿ ತಂಡವನ್ನು ದಡದತ್ತ ಕೊಂಡೊಯ್ಯುವ ಪ್ರಯತ್ನ ಮಾಡಿದರು. ಡೇವಿಡ್ ಮಿಲ್ಲರ್ ಜತೆ 70 ರನ್ನುಗಳ ಜತೆಯಾಟ ನಡೆಸಿದರು. ಈ ಹಂತದಲ್ಲಿ 29 ರನ್ ಗಳಿಸಿದ ಮಿಲ್ಲರ್ ಔಟಾದರು. ಮಿಲ್ಲರ್ ನಿರ್ಗಮನದ ಬಳಿಕ ಮಾರ್ಕ್ ರಮ್ ಎಚ್ಚರಿಕೆಯಿಂದ ಆಡಿದರೂ 91 ರನ್ ಗಳಿಸಿದ ವೇಳೆ ಶಾಹೀನ್ ಎಸೆತದಲ್ಲಿ ಔಟಾದರು. ಇದರಿಂದ ದ. ಆಫ್ರಿಕಾ ಬಹಳಷ್ಟು ಒತ್ತಡಕ್ಕೆ ಬಿತ್ತು. 93 ಎಸೆತ ಎದುರಿಸಿದ ಮಾರ್ಕ್‌ರಮ್ 91 ರನ್ ಹೊಡೆದರು. 7 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದ್ದರು.
ಮಾರ್ಕ್‌ರಮ್ ಔಟಾದ ವೇಳೆ ತಂಡ ಗೆಲ್ಲಲು 21 ರನ್ ಗಳಿಸಬೇಕಾಗಿತ್ತು. ಆದರೆ ಬಹಳಷ್ಟು ಓವರ್ ಬಾಕಿ ಉಳಿದ ಕಾರಣ ತಂಡದ ಬಾಲಂಗೋಚಿಗಳು ಎಚ್ಚರಿಕೆಯಿಂದ ಆಡಿ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟರು.
ಬಿಗು ದಾಳಿ ಸಂಘಟಿಸಿದ ಶಾಹೀನ್ ಶಾ ಅಫ್ರಿದಿ 45 ರನ್ನಿಗೆ ಮೂರು ವಿಕೆಟ್ ಪಡೆದರೆ ರವೂಫ್, ಮಿರ್ ಮತ್ತು ವಸೀಮ್ ತಲಾ ಎರಡು ವಿಕೆಟ್ ಉರುಳಿಸಿದರು.
ಬಾಬರ್, ಶಕೀಲ್ ಅರ್ಧಶತಕ
ಗೆಲುವಿನ ನಿರೀಕ್ಷೆಯೊಂದಿಗೆ ಆಡಿದ ಪಾಕಿಸ್ಥಾನ ಬಹಳಷ್ಟು ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿತು. ಮೊದಲ ವಿಕೆಟ್ ಬೇಗನೇ ಉರುಳಿದರೂ ನಾಯಕ ಬಾಬರ್ ಆಜಂ ತಂಡವನ್ನು ಆಧರಿಸುವ ಪ್ರಯತ್ನ ಮಾಡಿದರು. ಅವರ ಮತ್ತು ಉಳಿದ ಆಟಗಾರರ ಉತ್ತಮ ಆಟದಿಂದಾಗಿ ತಂಡ ಉತ್ತಮ ಸ್ಥಿತಿಗೆ ತಲಪುವಂತಾಯಿತು.
ಹರಿಣಗಳ ಹರಿತವಾದ ದಾಳಿಯನ್ನು ಮೆಟ್ಟಿ ನಿಲ್ಲಲು ಆಜಂ ಮತ್ತು ಸೌದ್ ಶಕೀಲ್ ಸ್ವಲ್ಪ ಮಟ್ಟಿಗೆ ಯಶಸ್ವಿಯಾದರು. ಆಜಂ 65 ಎಸೆತಗಳಿಂದ 50 ರನ್ ಹೊಡೆದರೆ ಶಕೀಲ್ ಎಸೆತಕ್ಕೊಂದು ರನ್ ಗಳಿಸಿ ಅರ್ಧಶತಕ ಪೂರೈಸಿದರು. ಶಾದಾಬ್ ಖಾನ್ ಬಿರುಸಿನ ಆಟ ಆಡಿದ್ದರಿಂದ ಪಾಕಿಸ್ಥಾನದ ಮೊತ್ತ ಏರತೊಡಗಿತು. ಅವರು 36 ಎಸೆತಗಳಿಂದ 43 ರನ್ ಹೊಡೆದರು. ಕೊನೆ ಹಂತದಲ್ಲಿ ಬ್ಯಾಟಿಂಗ್ ಕುಸಿತಕ್ಕೆ ಒಳಗಾದ ಪಾಕಿಸ್ಥಾನ 46.4 ಓವರ್‌ಗಳಲ್ಲಿ 270 ರನ್ನಿಗೆ ಆಲೌಟಾಯಿತು.
ಎರಡನೇ ಪಂದ್ಯವನ್ನಾಡಿದ ಎಡಗೈ ಸ್ಪಿನ್ನರ್ ಟಬ್ರೇಜ್ ಶಮಿÕ ಗಮನಾರ್ಹ ನೀಡಿ ಪಾಕಿಸ್ಥಾನದ ಕುಸಿತಕ್ಕೆ ಕಾರಣರಾದರು. 60 ರನ್ನಿಗೆ ನಾಲ್ಕು ವಿಕೆಟ್ ಕಿತ್ತು ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸುವಂತೆ ಮಾಡಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ಮಾರ್ಕೊ ಜಾನ್ಸೆನ್ 43 ರನ್ನಿಗೆ 3 ವಿಕೆಟ್ ಪಡೆದರೆ ಗೇರಾಲ್ಡ್ ಕೋಟಿj 42 ರನ್ನಿಗೆ 2 ವಿಕೆಟ್ ಹಾರಿಸಿದರು.
ಮೇಡನ್ ಓವರೊಂದಿಗೆ ಪಾಕಿಸ್ಥಾನದ ಇನ್ನಿಂಗ್ಸ್ ಆರಂಭಗೊರಡಿತ್ತು. ಜಾನ್ಸೆನ್ ಎಸೆದ ಈ ಓವರಿನಲ್ಲಿ ಅಬುœಲ್ಲ ಮತ್ತು ಇಮಾಮ್ ಯಾವುದೇ ರನ್ ತೆಗೆಯಲಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.