ಪಠ್ಯದಲ್ಲಿ ಹುತಾತ್ಮ ಡೋಣಿ ಹೆಸರೇ ತಪ್ಪು

4ನೇ ತರಗತಿ ಪುಸ್ತಕದಲ್ಲಿ ಯಡವಟ್ಟು ; ಗಮನಕ್ಕೆ ತಂದರೂ ಸರಿಪಡಿಸದ ಅಧಿಕಾರಿಗಳು

Team Udayavani, Jun 28, 2022, 11:43 AM IST

6

ಹುಬ್ಬಳ್ಳಿ: “ಅಮ್ಮಾ ಬ್ರಿಟಿಷರ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದೆ. ಅದನ್ನು ಕೂಡಿಕೊಳ್ಳಲು ನಾನು ಹೋಗುತ್ತಿದ್ದೇನೆ’ ಎಂದು ಹುತಾತ್ಮನಾಗುವ 13 ವರ್ಷದ ಬಾಲಕನ ಹೆಸರನ್ನು ಇಂದಿಗೂ ವಿದ್ಯಾರ್ಥಿಗಳು ತಪ್ಪಾಗಿ ಕಲಿಯುತ್ತಿದ್ದಾರೆ. ಪಠ್ಯ ಪುಸ್ತಕದಲ್ಲಿ ಬಾಲಕನ ತಂದೆಯ ಹೆಸರು ಹಾಗೂ ಮನೆತನದ ಹೆಸರನ್ನು ತಪ್ಪಾಗಿ ಮುದ್ರಿಸಿದ್ದು, ಕಳೆದ ನಾಲ್ಕು ವರ್ಷಗಳಿಂದ ವಿದ್ಯಾರ್ಥಿಗಳು ಪುಸ್ತಕದಲ್ಲಿರುವ ತಪ್ಪನ್ನೇ ನೈಜವೆಂದು ಅಭ್ಯಾಸ ಮಾಡುತ್ತಿದ್ದಾರೆ.

ಭಾರತ ಬಿಟ್ಟು ತೊಲಗಿ (ಕ್ವಿಟ್‌ ಇಂಡಿಯಾ ಮೂವ್‌ಮೆಂಟ್‌) ಚಳವಳಿಯ ಮೆರವಣಿಗೆಯಲ್ಲಿ ಪಾಲ್ಗೊಂಡು ಪೊಲೀಸರ ಗುಂಡಿಗೆ ಎದೆಯೊಡ್ಡಿ ವೀರಮರಣ ಹೊಂದಿದ ನಾರಾಯಣ ಗೋವಿಂದಪ್ಪ ಡೋಣಿ ವೀರಬಾಲಕನ ಇತಿಹಾಸ ಮಕ್ಕಳಲ್ಲಿ ದೇಶಪ್ರೇಮ ಮೂಡಿಸುತ್ತದೆ. 13ನೇ ವರ್ಷದವನಿದ್ದಾಗ ಸ್ವತಂತ್ರ ಭಾರತದ ಕನಸು ಕಂಡಿದ್ದ ಬಾಲಕನ ಹೆಸರನ್ನು ಪಠ್ಯ ಪುಸ್ತಕದಲ್ಲೇ ತಪ್ಪಾಗಿ ಮುದ್ರಿಸಲಾಗಿದೆ. ಬಾಲಕನ ವೀರ, ಶೌರ್ಯವನ್ನು ಇಂದಿನ ಮಕ್ಕಳಿಗೆ ತಿಳಿಸುವ ಕಾರ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಎಡವಿದೆ. ನಾಲ್ಕು ವರ್ಷದ ಹಿಂದೆ ಪರಿಷ್ಕೃತ ಪಠ್ಯಪುಸ್ತಕದಲ್ಲಿಯೇ ಈ ಪ್ರಮಾದವಾಗಿದ್ದು, ಗಂಡು ಮೆಟ್ಟಿದ ನಾಡಿನ ವೀರ ಬಾಲಕನ ಹೆಸರನ್ನೇ ಪಠ್ಯದಲ್ಲಿ ತಪ್ಪಾಗಿ ಬರೆಯಲಾಗಿದೆ. ವಿಪರ್ಯಾಸ ಎಂದರೆ ಇಂದಿಗೂ ಮಕ್ಕಳು ಹುತಾತ್ಮ ವೀರ ಬಾಲಕನ ಹೆಸರನ್ನು ತಪ್ಪಾಗಿಯೇ ಕಲಿಯುತ್ತಿದ್ದಾರೆ.

ನಾಲ್ಕನೇ ತರಗತಿ ಪಠ್ಯದಲ್ಲಿದೆ ತಪ್ಪು: ಕ್ವಿಟ್‌ ಇಂಡಿಯಾ ಚಳವಳಿಗೆ ಬೆಂಬಲ ವ್ಯಕ್ತಪಡಿಸಿ ನಡೆಯುತ್ತಿದ್ದ ಮೆರವಣಿಗೆಯಲ್ಲಿ ಪಾಲ್ಗೊಂಡ ವೀರ ಬಾಲಕನ ಇತಿಹಾಸವನ್ನು ನೆನಪಿಸುವ ಕೆಲಸ ಆಗಿದ್ದು, ಪ್ರಸ್ತುತ ನಾಲ್ಕನೇ ತರಗತಿಯ ಸವಿ ಕನ್ನಡ ಪಠ್ಯ ಪುಸ್ತಕದಲ್ಲಿ ಹೆಸರನ್ನು ತಪ್ಪಾಗಿ ಬರೆಯಲಾಗಿದೆ. ವೀರ ಮರಣ ಹೊಂದಿದ ಬಾಲಕನ ನೈಜ ಹೆಸರು ನಾರಾಯಣ ಗೋವಿಂದಪ್ಪ ಡೋಣಿ. ಆದರೆ ಪಠ್ಯಪುಸ್ತಕದಲ್ಲಿ ನಾರಾಯಣ ಮಹದೇವ ದೋನಿ ಎಂದು ಬರೆದಿದ್ದಾರೆ. ಇಲ್ಲಿ ತಂದೆಯ ಹೆಸರನ್ನೇ ಬದಲಿಸಲಾಗಿದೆ. ಅವರ ಮನೆತನದ ಹೆಸರನ್ನು ಕೂಡ ತಪ್ಪಾಗಿ ಬರೆಯಲಾಗಿದೆ. ಕಳೆದ ನಾಲ್ಕು ವರ್ಷದಿಂದ ಇಂದಿಗೂ ವಿದ್ಯಾರ್ಥಿಗಳು ಬಾಲಕನ ಹೆಸರನ್ನು ತಪ್ಪಾಗಿ ಕಲಿಯುತ್ತಿದ್ದಾರೆ.

ಪರಿಷ್ಕರಣೆ ಸಮಿತಿಯ ಪಾಠ: ನಾಲ್ಕನೇ ತರಗತಿಯ ಸವಿ ಕನ್ನಡ ಅಭ್ಯಾಸ ಸಹಿತ ಪಠ್ಯಪುಸ್ತಕದಲ್ಲಿ ಹುತಾತ್ಮ ಬಾಲಕ ಎನ್ನುವ ಗದ್ಯ 14ನೇ ಪಾಠವಾಗಿದ್ದು, ಇದು ಪರಿಷ್ಕರಣೆ ಸಮಿತಿ ರಚನೆಯ ಪಾಠವಾಗಿದೆ. 2014 ನವೆಂಬರ್‌ನಲ್ಲಿ ಅಂದಿನ ಸರ್ಕಾರ 1ರಿಂದ 10ನೇ ತರಗತಿಯವರೆಗಿನ ಪುಸ್ತಕಗಳ ಪರಿಷ್ಕರಣೆಗೆ ಆದೇಶಿಸಿತ್ತು. 2015 ಸೆಪ್ಟೆಂಬರ್‌ನಲ್ಲಿ ಹೊಸ ಆದೇಶ ಹೊರಡಿಸಿತ್ತು. 2017-18ನೇ ಸಾಲಿನಿಂದ ಪರಿಷ್ಕೃತ ಪಠ್ಯಪುಸ್ತಕಗಳು ಜಾರಿಯಾಗುವುದಿತ್ತು. ಸಂಘಟನೆಗಳು, ಶಿಕ್ಷಕರು, ಪ್ರಾಧ್ಯಾಪಕರ, ವಿಷಯ ಪರಿವೀಕ್ಷಕರು ಹೀಗೆ ಹಲವರೊಂದಿಗೆ ಸಭೆ, ವಿಮರ್ಶೆ, ಚರ್ಚೆಗಳು ನಡೆದ ನಂತರ ವಿದ್ಯಾರ್ಥಿಗಳ ಕೈ ಸೇರಿತ್ತು. ಪ್ರೊ| ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆ ಹಾಗೂ ಡಾ| ರಾಜಪ್ಪ ದಳವಾಯಿ ಅಧ್ಯಕ್ಷತೆಯ ಪರಿಷ್ಕರಣೆ ಸಮಿತಿ ಹಾಗೂ ಉನ್ನತ ಪರಿಶೀಲನಾ ಸಮಿತಿ ಆ ಸಂದರ್ಭದಲ್ಲಿ ಪಠ್ಯಪುಸ್ತಕ ಪರಿಷ್ಕರಿಸಿತ್ತು.

ನೈಜತೆ ಕುರುಹುಗಳು: ಇಲ್ಲಿನ ಬ್ರಾಡ್‌ ವೇನಲ್ಲಿ ನಿರ್ಮಿಸಿರುವ ಪ್ರತಿಮೆಯಲ್ಲಿ ನಾರಾಯಣ ಗೋವಿಂದಪ್ಪ ಡೋಣಿ ಎಂದು ಹೆಸರಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರ ತಾಯಿ ಗಂಗಮ್ಮ ಎಸ್‌. ಬೊಮ್ಮಾಯಿ ಅವರು ಬಾಲಕನ ದೇಶ ಪ್ರೇಮ, ಧೈರ್ಯ ಮೆಚ್ಚಿ ಮೂರ್ತಿ ದಾನ ಮಾಡಿದ್ದರು. 2020ರಲ್ಲಿ ಮೂರ್ತಿ ಅನಾವರಣ ಮಾಡಿರುವ ಫಲಕದಲ್ಲಿ ನಾರಾಯಣ ಗೋವಿಂದಪ್ಪ ಡೋಣಿ ಎಂದು ಸರಿಯಾಗಿ ಕೆತ್ತಲಾಗಿದೆ. ನಾರಾಯಣ ಡೋಣಿ ಕಿರಿಯ ಸಹೋದರರ ಮಕ್ಕಳು ಇಂದಿಗೂ ಶಹರ ಠಾಣೆ ಹಿಂಭಾಗದಲ್ಲಿರುವ ಮರಾಠ ಗಲ್ಲಿಯ ಕೋಳಿ ಪ್ಲಾಟ್‌ನಲ್ಲಿ ವಾಸವಿದ್ದಾರೆ.

ಗೋವಿಂದಪ್ಪ ಡೋಣಿ ಅವರಿಗೆ ನಾರಾಯಣ ಮೊದಲನೇ ಮಗ, ಲಕ್ಷ್ಮಣ, ಪರಶುರಾಮ, ರಾಮ ಸಹೋದರರಿದ್ದರು. 9ನೇ ಪಠ್ಯಪುಸ್ತಕದಲ್ಲಿ ತಪ್ಪಾಗಿ ಮುದ್ರಿಸುವ ಕುರಿತು ಸಾಕಷ್ಟು ಬಾರಿ ಅಧಿಕಾರಿಗಳಿಗೆ ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ ಎನ್ನುತ್ತಾರೆ ನಾರಾಯಣ ಡೋಣಿ ಅವರ ಸಹೋದರ ಪರಶುರಾಮ ಅವರ ಪುತ್ರ ಖಂಡೋಬ ಡೋಣಿ.

ಹಿಂದೆಯೂ ತಪ್ಪಾಗಿತ್ತು ಈ ಪಠ್ಯಪುಸ್ತಕಕ್ಕೂ ಮುಂಚೆ 9ನೇ ತರಗತಿಯ ಇಂಗ್ಲಿಷ್‌ ಭಾಷಾ ಪಠ್ಯದಲ್ಲಿಯೂ ನಾರಾಯಣ ಮಹದೇವ ಡೋಣಿ ಎಂದು ತಪ್ಪಾಗಿ ಮುದ್ರಿಸಲಾಗಿತ್ತು. ಇಲ್ಲಿ ಆಗಿದ್ದ ತಪ್ಪು ನಾಲ್ಕನೇ ಪುಸ್ತಕದಲ್ಲಿಯೂ ಪುನರಾವರ್ತನೆಯಾಗಿದೆ. ಅಲ್ಲಿನ ಪಾಠವನ್ನು ಯಥಾವತ್ತಾಗಿ ನಾಲ್ಕನೇ ತರಗತಿ ಕನ್ನಡ ಪುಸ್ತಕಕ್ಕೆ ಭಾಷಾಂತರ ಮಾಡಿರುವುದು ಈ ಪ್ರಮಾದಕ್ಕೆ ಕಾರಣ ಎನ್ನಲಾಗಿದೆ. ತಪ್ಪಾಗಿರುವ ಕುರಿತು ನಾರಾಯಣ ಡೋಣಿ ಕುಟುಂಬಸ್ಥರು ಸಂಬಂಧಿಸಿದ ಅಧಿಕಾರಿಗಳಿಗೆ ಲಿಖಿತವಾಗಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂದು ತಪ್ಪನ್ನು ತಿದ್ದಿಕೊಂಡಿದ್ದರೆ ಈಗ ತಪ್ಪು ಮರುಕಳಿಸುತ್ತಿರಲಿಲ್ಲ. ಗದಗ ರಸ್ತೆಯ ಲಾಮಿಂಗ್ಟನ್‌ ಶಾಲೆ ಬಳಿ ಸ್ಮಾರಕದಲ್ಲಿಯೂ ಕೂಡ ನಾರಾಯಣ ಮಹದೇವ ದೋನಿ ಎಂದೇ ಕೆತ್ತಿಸಲಾಗಿದೆ.

ಮಗಳು ಒಂಭತ್ತನೇ ಕ್ಲಾಸ್‌ ಓದುತ್ತಿದ್ದಾಗ ಅಜ್ಜನ ಹೆಸರು ತಪ್ಪಾಗಿ ಬರೆದಿದ್ದಾರೆ ಎಂದು ಹೇಳಿದಾಗ ನಮ್ಮ ಗಮನಕ್ಕೆ ಬಂತು. ಆಗ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಆಗಿರುವ ತಪ್ಪಿನ ಬಗ್ಗೆ ಲಿಖಿತವಾಗಿ ತಿಳಿಸಿದರೂ ಪ್ರಯೋಜನವಾಗಲಿಲ್ಲ. ಇದೀಗ ನಾಲ್ಕನೇ ತರಗತಿ ಪಠ್ಯದಲ್ಲೂ ತಪ್ಪಾಗಿ ಬರೆದಿದ್ದಾರೆ. ಬರೆಯುವುದಕ್ಕೂ ಮುಂಚಿತವಾದರೂ ನಮ್ಮನ್ನು ಸಂಪರ್ಕಿಸಿದ್ದರೆ ನಾವಾದರೂ ಹೇಳುತ್ತಿದ್ದೆವು. ಇಂದಿನ ಮಕ್ಕಳು ತಪ್ಪಾಗಿ ಓದಬಾರದು ಎಂಬುದು ನಮ್ಮ ಭಾವನೆ. ಹಿಂದಿನ ಕಹಿ ಘಟನೆಯ ಪರಿಣಾಮ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಭೇಟಿಯಾಗಿಲ್ಲ. ಸ್ವತಂತ್ರ ದಿನದಂದು ಅವರನ್ನು ನೆನೆಯುವ ಕೆಲಸ, ಧ್ವಜಾರೋಹಣ ಮಾಡುವುದಕ್ಕೆ ಸೀಮಿತವಾಗಿ ಬಿಟ್ಟಿದ್ದೇವೆ. –ಖಂಡೋಬ ಡೋಣಿ, ನಾರಾಯಣ ಡೋಣಿ ಅವರ ಸಹೋದರನ ಪುತ್ರ

„ಹೇಮರಡ್ಡಿ ಸೈದಾಪುರ

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-

NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ

4-

ಸಿಎಂ ಆಗಿದ್ದವರು ಈ‌ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ

ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

CM-siddu

Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ

b s yediyurappa

By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್‌ ವೈ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.