ಗಿಡ ನೆಡಲು ನೆಲಕ್ಕಿಂತ ಮನಸ್ಸು ಮುಖ್ಯ


Team Udayavani, Jun 13, 2021, 6:20 AM IST

ಗಿಡ ನೆಡಲು ನೆಲಕ್ಕಿಂತ ಮನಸ್ಸು ಮುಖ್ಯ

ಎತ್ತರದ ಬಹುಮಹಡಿ ಕಟ್ಟಡದ ಫ್ಲ್ಯಾಟ್‌ಗಳಲ್ಲಿ ವಾಸಿಸುತ್ತಿದ್ದೇವೆ. ಅಂಗಳವೇ ಇಲ್ಲ ಎಂದು ಹಸುರನ್ನೇ ಮರೆಯುವವರಿದ್ದಾರೆ. ಆದರೆ ಗಿಡ ನೆಡಲು ಮಣ್ಣಿನ ನೆಲವೇ ಬೇಕಿಲ್ಲ. ಗ್ರೋ ಬ್ಯಾಗ್‌ಗಳಲ್ಲಿ, ಮಣ್ಣು / ಸಿಮೆಂಟ್‌/ ಪ್ಲಾಸ್ಟಿಕ್‌ ಪಾಟ್‌ಗಳಲ್ಲಿ ಗಿಡಗಳನ್ನು ಬೆಳೆಸಬಹುದು. ಈ ಪಾಟ್‌ಗಳನ್ನು ಇಂಟರ್‌ಲಾಕ್‌ ಅಳವಡಿಸಿದ ಅಂಗಳ, ಕಾಂಪೌಂಡ್‌ ಗೋಡೆ, ಫ್ಲ್ಯಾಟ್‌ನ ಬಾಲ್ಕನಿ, ಟೆರೆಸ್‌, ಮನೆಯ ಸಿಟೌಟ್‌, ಹಾಲ್‌, ಬೆಡ್‌ರೂಮ್‌, ಕಿಚನ್‌ನಲ್ಲೂ ಗಿಡದ ಪಾಟ್‌ಗಳನ್ನಿಡಬಹುದು.

ದಿನ 1: ಸಹಜವಾದ ಮನೆಯ ಒಳಾಂಗಣ ದೃಶ್ಯ. ದಿನ 365: ಎಲ್ಲೆಂದರಲ್ಲಿ ಹಸುರು ಗಿಡಗಳು ತುಂಬಿದ ಒಳಾಂಗಣ. ಇತ್ತೀಚೆಗೆ ವಾಟ್ಸ್‌ಆ್ಯಪ್‌ ನಲ್ಲಿ ಬಂದ ಚಿತ್ರವಿದು. ಇದು ನಗು ತರಿಸಬೇಕಾದ ಕಾಟೂìನ್‌ ಅಲ್ಲ. ಚಿಂತನೆಗೆ ಹಚ್ಚ ಬೇಕಾದ ಚಿತ್ರ.
ಇತ್ತೀಚೆಗೆ ಪ್ರಪಂಚ ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳಲ್ಲೊಂದು ಶುದ್ಧ ಗಾಳಿಯ ಕೊರತೆ. ವಾಯುಮಾಲಿನ್ಯದ ಭೀಕರ ಪರಿಣಾಮವಾಗಿ ಶ್ವಾಸಕೋಶ ಸಂಬಂಧೀ ಕಾಯಿಲೆಗಳು ಹೆಚ್ಚಾಗುತ್ತಿವೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲೇ ಶ್ವಾಸಕೋಶ ವನ್ನು ಹಾನಿಗೆಡಹುವ ಕೋವಿಡ್‌ -19 ಎಂಬ ಮಹಾಮಾರಿಯೂ ಲಗ್ಗೆಯಿಟ್ಟಿದೆ.

ಕಲುಷಿತವಾದ ಪರಿಸರವನ್ನು ಸ್ವತ್ಛಗೊಳಿಸುವುದು, ವಾಯುಮಾಲಿನ್ಯ ತಗ್ಗಿಸುವುದು, ಪ್ರಾಣವಾಯು ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುವುದು ಪ್ರಪಂಚದ ತುರ್ತು ಅಗತ್ಯಗಳಲ್ಲೊಂದು. ದಿನೇ ದಿನೆ ಹೆಚ್ಚುತ್ತಿರುವ ಜನಸಂಖ್ಯೆ, ವಾಹನ ದಟ್ಟಣೆ, ಹೊಸ ಕಾರ್ಖಾನೆಗಳ ಸ್ಥಾಪನೆ ವಾಯು ಶುದ್ಧವಾಗುವ ಸಾಧ್ಯತೆಯನ್ನು ಮತ್ತಷ್ಟೂ ದುರ್ಬಲಗೊಳಿಸುತ್ತಿದೆ. ಹಲವು ಆಕ್ರಮಣ ಕಾರಿ ರೋಗಗಳಿಂದ ನಮ್ಮನ್ನು ರಕ್ಷಿಸಲು ನಮ್ಮ ಶ್ವಾಸಕೋಶಗಳನ್ನು ಬಲಿಷ್ಠವಾಗಿಡಲೇ ಬೇಕು. ಮಲಿನ ವಾಯುವನ್ನು ಉಸಿರಾಡುತ್ತಾ ಹೋದಂತೆ ನಮ್ಮ ಶ್ವಾಸಕೋಶ ದುರ್ಬಲವಾಗುತ್ತಾ ಹೋಗುತ್ತದೆ. ನಮ್ಮ ಶ್ವಾಸಕೋಶಗಳ ಸುಸ್ಥಿತಿಗಾಗಿ, ತನ್ಮೂಲಕ ನಮ್ಮ ಶರೀರದ ಆರೋಗ್ಯಕ್ಕಾಗಿ ಒಂದಷ್ಟು ಶುದ್ಧಗಾಳಿಯನ್ನು ನಾವೇ ಉತ್ಪಾದಿಸಿದರೆ ಹೇಗೆ?

ಸಸ್ಯಗಳೆಂಬ ಆಮ್ಲಜನಕದ ಕಾರ್ಖಾನೆಗಳು
ಭೂಮಿಯಲ್ಲಿನ ಆಮ್ಲಜನಕವನ್ನು ಬಳಸಿ ಬದುಕುವ ಜೀವಿಗಳಿಂದಾಗಿ ಭೂಮಿಯ ಆಮ್ಲಜನಕ ಬರಿದಾಗದಿರಲೆಂದು ದೇವರು ಆ ಜೀವಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಸ್ಯಗಳನ್ನು ಸೃಷ್ಟಿಸಿದರು. ಸಸ್ಯಗಳೂ ಆಮ್ಲಜನಕವನ್ನು ಉಸಿ ರಾಟಕ್ಕೆ ಬಳಸುತ್ತವೆ. ಆದರೆ ಅವುಗಳ ಆಹಾರ ತಯಾರಿಕೆ (ದ್ಯುತಿ ಸಂಶ್ಲೇಷಣೆ) ಕ್ರಿಯೆಯಲ್ಲಿ ಉಪ ಉತ್ಪನ್ನವಾಗಿ ಆಮ್ಲಜನಕ ಬಿಡುಗಡೆಯಾಗುತ್ತದೆ. ಪ್ರಪಂಚದಲ್ಲಿರುವ ಸಸ್ಯಗಳಲ್ಲಿ ಎಲ್ಲವೂ ಆಮ್ಲ ಜನಕವನ್ನು ಉತ್ಪಾದಿಸುತ್ತವೆಯಾದರೂ ಕೆಲವು ಸಸ್ಯಗಳು ಉಳಿದವುಗಳಿಗಿಂತ ಹೆಚ್ಚಿನ ಪ್ರಮಾಣ ದಲ್ಲಿ ಆಮ್ಲಜನಕ ಬಿಡುಗಡೆ ಮಾಡುತ್ತವೆ. ಅಂತಹ ಸಸ್ಯಗಳನ್ನು ನಮ್ಮ ಮನೆಯ ಪರಿಸರದಲ್ಲಿ ಹೆಚ್ಚು ಹೆಚ್ಚಾಗಿ ನೆಟ್ಟು ಬೆಳೆಸಬೇಕು. ಹಿಂದಿನ ಕಾಲದಲ್ಲಿ ಪ್ರತಿಯೊಂದು ಊರಲ್ಲೂ ಕನಿಷ್ಠ ಒಂದಾದರೂ ಅರಳಿ ಮರ, ಅದರ ಸುತ್ತ ಒಂದು ಕಟ್ಟೆ ಇರುತ್ತಿತ್ತು. ಊರ ಪಂಚಾಯತ್‌ ಅದರ ಕೆಳಗೆ ಸೇರುತ್ತಿತ್ತು. ಆ ಮರ ಅತ್ಯಧಿಕ ಪ್ರಮಾಣದಲ್ಲಿ ಆಮ್ಲಜನಕ ಬಿಡುಗಡೆ ಮಾಡುತ್ತದೆಯೆಂಬುದು ಅನಕ್ಷರಸ್ಥರಾದ ನಮ್ಮ ಪೂರ್ವಿಕರಿಗೆ ಹೇಗೋ ತಿಳಿದಿತ್ತು. ಇಂದು ರಸ್ತೆ ವಿಸ್ತರಣೆ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳ ಹೆಸರಲ್ಲಿ ಈ ಅರಳಿಮರದ ಕಟ್ಟೆಗಳು ನಾಶವಾಗಿವೆ. ಟನ್‌ಗಟ್ಟಲೆ ಆಮ್ಲಜನಕ ದಿನವೂ ಅದರಿಂದ ನಷ್ಟವಾಗಿದೆಯೆಂಬ ಘೋರ ಸತ್ಯವಂತೂ ಅಭಿವೃದ್ಧಿಯ ಜಪ ಮಾಡುವ ನಮಗೆ ಬೇಕಿಲ್ಲ.

ಲಾಕ್‌ಡೌನ್‌ ಮತ್ತು ಗಾರ್ಡನಿಂಗ್‌
ಕಳೆದ ಲಾಕ್‌ಡೌನ್‌ ಸಮಯದಲ್ಲಿ ಅನೇಕರು ತಮ್ಮ ಮನೆಯೆದುರು ಚಂದದ ಹೂತೋಟ ನಿರ್ಮಿಸಿಕೊಂಡರು. ಪರಿಸರ ಪ್ರಜ್ಞೆಯಿಂದ ಹೀಗೆ ಮಾಡಿದವರು ವಿರಳ. ಆದರೂ ಇದು ಕೂಡಾ ಪರಿಸರದಲ್ಲಿ ಆಮ್ಲಜನಕದ ಪ್ರಮಾಣ ಏರುವಲ್ಲಿ ಸಣ್ಣ ಮಟ್ಟಿನಲ್ಲಾದರೂ ಸಹಕರಿಸುತ್ತಿದೆ ಎಂಬುದಂತೂ ಸತ್ಯ. ಮನೆಯ ಅಂಗಳಕ್ಕೆಲ್ಲ ಇಂಟರ್‌ಲಾಕ್‌ ಹಾಕಿದ್ದೇವೆ. ಮನೆ ಹಾಗೂ ಅಂಗಳದ ಹೊರತಾಗಿ ಬೇರೆ ಜಾಗವಿಲ್ಲ, ಎತ್ತರದ ಬಹುಮಹಡಿ ಕಟ್ಟಡದ ಫ್ಲ್ಯಾಟ್‌ಗಳಲ್ಲಿ ವಾಸಿಸುತ್ತಿದ್ದೇವೆ. ಅಂಗಳವೇ ಇಲ್ಲ ಎಂದು ಹಸುರನ್ನೇ ಮರೆಯುವವರಿದ್ದಾರೆ. ಆದರೆ ಗಿಡ ನೆಡಲು ಮಣ್ಣಿನ ನೆಲವೇ ಬೇಕಿಲ್ಲ. ಗ್ರೋ ಬ್ಯಾಗ್‌ಗಳಲ್ಲಿ, ಮಣ್ಣು / ಸಿಮೆಂಟ್‌/ ಪ್ಲಾಸ್ಟಿಕ್‌ ಪಾಟ್‌ಗಳಲ್ಲಿ ಗಿಡಗಳನ್ನು ಬೆಳೆಸಬಹುದು. ಈ ಪಾಟ್‌ಗಳನ್ನು ಇಂಟರ್‌ಲಾಕ್‌ ಅಳವಡಿಸಿದ ಅಂಗಳ, ಕಾಂಪೌಂಡ್‌ ಗೋಡೆ, ಫ್ಲ್ಯಾಟ್‌ನ ಬಾಲ್ಕನಿ, ಟೆರೆಸ್‌, ಮನೆಯ ಸಿಟೌಟ್‌, ಹಾಲ್‌, ಬೆಡ್‌ರೂಮ್‌, ಕಿಚನ್‌ನಲ್ಲೂ ಗಿಡದ ಪಾಟ್‌ಗಳನ್ನಿಡಬಹುದು.

ಒಳಾಂಗಣ ಗಿಡಗಳ ಆಯ್ಕೆ ಹೇಗೆ?
ಬಿಸಿಲಿಲ್ಲದೇ ಗಿಡ ಬೆಳೆಯುತ್ತವೆಯೇ? ಒಳಾಂಗಣದಲ್ಲಿ ಎಲ್ಲಿದೆ ಬಿಸಿಲು? ಪಾಟ್‌ಗಳನ್ನು ಒಳಗಿಟ್ಟು ನೀರು ಹಾಕಿ ಗಿಡ ಬೆಳೆಸುವಾಗ ನೆಲವೆಲ್ಲ ಹಾಳಾಗದೇ? ಒಳಾಂಗಣಕ್ಕೆ ಸೂಕ್ತ ವಾದ ಗಿಡಗಳು ಯಾವುವು? ಇತ್ಯಾದಿ ನೂರೆಂಟು ಪ್ರಶ್ನೆಗಳು ನಿಮ್ಮಲ್ಲಿರಬಹುದು. ಹೊರಗೆ ಬಿಸಿಲಿ ನಲ್ಲಿ, ಮಣ್ಣಿನಲ್ಲಿ ಬೆಳೆಯುವ ಎಲ್ಲ ಗಿಡಗಳೂ ಒಳಾಂಗಣದಲ್ಲಿ ಬೆಳೆಯ ಲಾರವು. ಕಡಿಮೆ ಬೆಳಕಿನಲ್ಲಿ ಬೆಳೆ ಯುವ, ಕಡಿಮೆ ಬೆಳಕು ಅಥವಾ ನೆರಳನ್ನೇ ಬಯಸುವ ಗಿಡಗಳು ಹಲವಿವೆ. ಅವನ್ನು ಒಳಾಂಗಣದಲ್ಲಿ ಬೆಳೆಸಬಹುದು. ಪೀಸ್‌ ಲಿಲ್ಲಿ ಎಂಬ ಗಾಢ ಹಸುರು ವರ್ಣದ ಎಲೆಯ ಬಿಳಿ ಹೂ ಬಿಡುವ ಗಿಡ ಅತ್ಯಂತ ಸುಂದರವಾದೊಂದು ಒಳಾಂಗಣ ಹೂ ಬಿಡುವ ಸಸ್ಯ. ಹಾಗೆಯೇ ಆಂಥೂರಿಯಂ ಗಿಡಗಳು ಸಹಾ ಬಹಳ ಕಾಲ ಬಾಳಿಕೆ ಬರುವ/ತಾಜಾ ಆಗಿ ಉಳಿಯುವ ಹೂಗಳನ್ನು ಹೊಂದಿರುವ ಸಸ್ಯ. ಸಿಂಗೋನಿಯಂ ಅಥವಾ ಆ್ಯರೋಹೆಡ್‌ ಪ್ಲಾಂಟ್‌, ಅಲೋಕೇಶಿಯಾ, ಸ್ನೇಕ್‌ ಪ್ಲಾಂಟ್‌, ಅರೆಕ್ಯಾ ಪಾಮ…, ರಬ್ಬರ್‌ ಪ್ಲಾಂಟ್‌, ಝೀ ಝೀ ಪ್ಲಾಂಟ್‌, ಲಕ್ಕಿ ಬ್ಯಾಂಬೂ ಇತ್ಯಾದಿಗಳು ಅತ್ಯುತ್ತಮ ಒಳಾಂಗಣ ಸಸ್ಯಗಳು. ಸ್ಪೆ  „ಡರ್‌ ಪ್ಲಾಂಟ್‌, ಟರ್ಟಲ್‌ ವೈವ್‌, ಇಂಗ್ಲಿಷ್‌ ಐವಿ, ಮನಿಪ್ಲಾಂಟ್‌ ಇತ್ಯಾದಿ ಹ್ಯಾಂಗಿಂಗ್‌ ಪ್ಲಾಂಟ್‌ಗಳನ್ನೂ ಒಳಾಂಗಣದಲ್ಲಿ ಬೆಳೆಸಬಹುದು. ಖಾಲಿ ಬಾಟಲ್‌ಗ‌ಳಲ್ಲಿ ನೀರು ತುಂಬಿಸಿ ಅದರಲ್ಲಿ ಮನಿಪ್ಲಾಂಟ್‌, ಸಿಂಗೋನಿಯಂ, ಕೆಲವು ರೀತಿಯ ಕ್ರಾಟನ್‌ ಗಿಡಗಳ ಗೆಲ್ಲುಗಳನ್ನಿಟ್ಟರೆ ಅವು ಅಲ್ಲಿ ಬೇರು ಬಿಟ್ಟು ಚಿಗುರಿ ಚೆನ್ನಾಗಿ ಬೆಳೆಯುತ್ತವೆ. ಡೈನಿಂಗ್‌ ಟೇಬಲ್, ಟೀಪಾಯ್, ಫ್ರಿಜ್‌, ವಾಷಿಂಗ್‌ ಮೆಷಿನ್‌, ಸ್ಟಡಿ ಟೇಬಲ್, ಬೆಡ್‌ ಸೈಡ್‌ ಟೇಬಲ್, ಕಿಟಕಿಗಳು, ಅಡುಗೆ ಮನೆಯ ಕೌಂಟರ್‌ ಟಾಪ್‌, ಮಹಡಿಯ ಮೆಟ್ಟಿಲುಗಳು.. ಹೀಗೆ ಎಲ್ಲೆಂದರಲ್ಲಿ ನೀವು ಗಿಡಗಳನ್ನು ನಿಮ್ಮ ಕಲ್ಪನೆಗನುಸಾರ ಅಂದವಾಗಿ ಜೋಡಿಸಬಹುದು. ಮಾರುಕಟ್ಟೆಯಲ್ಲಿ ಒಳಾಂಗಣ ಗಿಡಗಳಿಗೆಂದೇ ಸೆರಾಮಿಕ್‌, ಮೆಟಲ್‌ ಹಾಗೂ ಫೈಬರ್‌ನ ಅಂದವಾದ ವಿನ್ಯಾಸ ಹಾಗೂ ಬಣ್ಣಗಳ ಪಾಟ್‌ಗಳು ಲಭ್ಯವಿವೆ. ನೀರನ್ನೇ ಬಯಸದ ಕ್ಯಾಕ್ಟಸ್‌ ಜಾತಿಯ ಸುಂದರ ಹಾಗೂ ವೈವಿಧ್ಯಮಯ ಗಿಡಗಳು, ಮಣ್ಣು- ನೀರು ಏನೂ ಬೇಡದ, ದಾರದಲ್ಲಿ ಸುಮ್ಮನೆ ನೇತುಹಾಕಿ ಬೆಳೆಸಬಹು ದಾದ ಏರ್‌ ಪ್ಲಾಂಟ್‌ (ಗಾಳಿ ಗಿಡಗಳು), ಗಾಳಿಯ ತೇವಾಂಶ ಹೀರಿ ಬದುಕುವ ಸಕ್ಕಲೆಂಟ್‌ಗಳು ಇತ್ಯಾದಿ ಅತೀ ಸುಂದರವಾದ ಸಸ್ಯಗಳು ಮನೆಯ ಒಳಾಂಗಣವನ್ನು ಸುಂದರವಾಗಿಡುವುದಷ್ಟೇ ಅಲ್ಲ, ಒಳಗಿನ ಗಾಳಿಯಲ್ಲಿರಬಹುದಾದ ಮಾಲಿನ್ಯಗಳನ್ನು ಹೀರಿ ಶುದ್ಧಗಾಳಿಯನ್ನು ತುಂಬಿಸುತ್ತವೆ.

ಒಳಾಂಗಣ ಗಿಡಗಳಲ್ಲಿ ಕೆಲವನ್ನು ಏರ್‌ ಪ್ಯೂರಿಫೈಯರ್ಸ್‌ ಎನ್ನುತ್ತಾರೆ. ಸ್ನೇಕ್‌ ಪ್ಲಾಂಟ್‌, ಅಲೋವೆರಾ ಇತ್ಯಾದಿ ಗಿಡಗಳು ಆ ಗುಂಪಿಗೆ ಸೇರಿವೆ. ಸ್ನೇಕ್‌ ಪ್ಲಾಂಟ್‌ಗಳನ್ನು ಬೆಡ್‌ರೂಮ್‌ನಲ್ಲಿಡುವುದು ಉಸಿರಾಟದ ಸಮಸ್ಯೆ ಇರುವವರಿಗೆ ಒಳ್ಳೆಯದೆನ್ನುತ್ತಾರೆ ತಜ್ಞರು. ಈ ಲಾಕ್‌ಡೌನ್‌ ಅವಧಿಯಲ್ಲಿ ನಮಗೆ ಪುಕ್ಕಟೆಯಾಗಿ ಸಿಕ್ಕಿರುವ ಧಾರಾಳ ಸಮಯವನ್ನು ಗಿಡ ನೆಡುವ ಕಾರ್ಯದ ಮೂಲಕ ಸದುಪಯೋಗಪಡಿಸೋಣ. ಗಿಡ ನೆಡಲು ನೆಲ ಬೇಡ. ಮನಸ್ಸೊಂದೇ ಸಾಕು.

– ಜೆಸ್ಸಿ ಪಿ.ವಿ. ಪುತ್ತೂರು

ಟಾಪ್ ನ್ಯೂಸ್

Allegation against Amit Shah: Canadian diplomats summoned

Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್

1-a-ccc

INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ

1-a-shaina

Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್

Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್‌ ಮುಂಡಾಡಿ

Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್‌ ಮುಂಡಾಡಿ

Singham Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

Singham Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ!

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾ*ಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-festival

Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ

Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ

8-book

Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Allegation against Amit Shah: Canadian diplomats summoned

Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್

1-a-ccc

INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ

arrested

Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್

1-a-shaina

Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್

Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್‌ ಮುಂಡಾಡಿ

Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್‌ ಮುಂಡಾಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.