ಜಲ ಸಂಘರ್ಷಕ್ಕೆ ಕಾರಣವಾಯ್ತೇ ಸಚಿವರ ಆದೇಶ?
Team Udayavani, May 21, 2019, 6:00 AM IST
ಸಾಂದರ್ಭಿಕ ಚಿತ್ರ
ಬೆಳಗಾವಿ: ಭೀಕರ ಬರದಿಂದ ನಲುಗುತ್ತಿರುವ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಜಲ ಸಂಘರ್ಷ ಆರಂಭವಾಗಿದೆ. ಸತತ ಹೋರಾಟ ನಡೆದಿದ್ದರೂ ಇದುವರೆಗೆ ಕೃಷ್ಣಾ ನದಿಗೆ ನೀರು ಬಂದಿಲ್ಲ. ದಾಹ ತಣಿದಿಲ್ಲ. ಆದರೆ ಹಿಡಕಲ್ ಜಲಾಶಯದಿಂದ ಕೃಷ್ಣೆಗೆ ನೀರು ಬಿಡಬೇಕೆಂಬ ಜಲಸಂಪನ್ಮೂಲ ಸಚಿವರ ಆದೇಶ ನೀರು ಕೊಡುವ ಬದಲು ರಾಜಕೀಯದ ಬೆಂಕಿ ಹಚ್ಚಿದೆ. ಆದೇಶದ ವಿರುದ್ಧ ಆರಂಭವಾಗಿರುವ ಹೋರಾಟ ಹಲವಾರು ಆತಂಕಗಳನ್ನು ತಂದಿಟ್ಟಿದೆ.
ಇದಕ್ಕೆ ಸೋಮವಾರ ನಡೆದ ಪ್ರತಿಭಟನೆಗಳೇ ಸಾಕ್ಷಿ. ಅಥಣಿ ಭಾಗದಲ್ಲಿ ಕೃಷ್ಣಾ ನದಿಗೆ ನೀರು ಹರಿಸಬೇಕೆಂದು ಒತ್ತಾಯಿಸಿ ನಿರಂತರ ಹೋರಾಟ ನಡೆದಿದ್ದರೆ ಅದಕ್ಕೆ ಪ್ರತಿಯಾಗಿ ಬೆಳಗಾವಿಯಲ್ಲಿ ಹಿಡಕಲ್ ಜಲಾಶಯ ವ್ಯಾಪ್ತಿಯ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ರೈತರು ಯಾವುದೇ ಕಾರಣಕ್ಕೂ ಹಿಡಕಲ್ದಿಂದ ನೀರು ಬಿಡಬಾರದು. ಈ ಆದೇಶ ಕೈಬಿಡಬೇಕೆಂದು ಪ್ರತಿಭಟನೆ ನಡೆಸಿ ಇದಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲ ಇದೆ ಎಂಬ ಎಚ್ಚರಿಕೆಯ ಸಂದೇಶವನ್ನು ಡಿ.ಕೆ.ಶಿವಕುಮಾರ್ ಅವರಿಗೆ ರವಾನಿಸಿದರು.
ಈಗ ನಡೆದಿರುವ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಜಾರಕಿಹೊಳಿ ಮತ್ತು ಶಿವಕುಮಾರ್ ನಡುವೆ ಹೊಸ ಜಲ ಸಂಘರ್ಷ ಆರಂಭವಾಗುವ ಲಕ್ಷಣಗಳು ದಟ್ಟವಾಗಿ ಗೋಚರಿಸುತ್ತಿವೆ. ಸಚಿವ ಶಿವಕುಮಾರ್ ಆದೇಶ ಗೋಕಾಕ ಭಾಗದಲ್ಲಿ ರಾಜಕೀಯ ಬೆಂಕಿ ಹಚ್ಚಿದೆ.
ಮಹಾರಾಷ್ಟ್ರ ಸರಕಾರ ಕರ್ನಾಟಕದ ಮನವಿಗಳಿಗೆ ಸೊಪ್ಪು ಹಾಕದೇ ಇದ್ದಾಗ ಅಥಣಿ ಹಾಗೂ ಕಾಗವಾಡ ತಾಲೂಕಿನ ಜನರ ಕುಡಿಯುವ ನೀರಿನ ಸಂಕಷ್ಟ ಇನ್ನಷ್ಟು ಹೆಚ್ಚಾಯಿತು. ಅಲ್ಲಿನ ಹೋರಾಟಗಾರರ ಹಾಗೂ ಶಾಸಕರ ಒತ್ತಡ ತೀವ್ರವಾದಾಗ ಅದಕ್ಕೆ ಸ್ಪಂದಿಸಿದ ಸಚಿವರು ಹಿಡಕಲ್ ಜಲಾಶಯದಿಂದ ಒಂದು ಟಿಎಂಸಿ ನೀರು ಬಿಡುವ ನಿರ್ಧಾರ ಮಾಡಿ ಆದೇಶ ಹೊರಡಿಸಿದರು.
ಸಚಿವರು ಈ ಆದೇಶ ಹೊರಡಿಸುವ ಮುನ್ನ ಗೋಕಾಕ ಭಾಗದ ಶಾಸಕರ ಸಲಹೆ ಕೇಳಲಿಲ್ಲ. ಅವರ ಗಮನಕ್ಕೂ ಇದನ್ನು ತರಲಿಲ್ಲ ಎಂಬ ಅಸಮಾಧಾನ ಬೆಂಬಲಿಗರಲ್ಲಿ ಕಾಣುತ್ತಿದೆ. ಇದೇ ಕಾರಣದಿಂದ ಈಗ ಸಚಿವರ ಆದೇಶದ ವಿರುದ್ಧ ಪ್ರತಿಭಟನೆ ನಡೆದಿದೆ ಎಂಬ ಮಾತುಗಳು ಕೇಳಿಬಂದಿವೆ.
ಇಲ್ಲಿ ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಹಿಡಕಲ್ ಜಲಾಶಯ ನಿರ್ಮಾಣ ಆದಾಗಿನಿಂದ ಇದುವರೆಗೆ ಒಮ್ಮೆಯೂ ಕೃಷ್ಣಾ ನದಿಗೆ ನೀರು ಬಿಟ್ಟಿಲ್ಲ. ಏನೇ ಇದ್ದರೂ ಅಲ್ಲಿಗೆ ಮಹಾರಾಷ್ಟ್ರದಿಂದ ನೀರು ಬರಬೇಕು. ಅದಕ್ಕೆ ನಾವೆಲ್ಲ ಪ್ರಯತ್ನ ಮಾಡಿ ಮಹಾರಾಷ್ಟ್ರ ಸರಕಾರದ ಮನವೊಲಿಸಬೇಕು. ಅದನ್ನು ಬಿಟ್ಟು ಒಬ್ಬರಿಗೆ ನೆರವಾಗಲು ಇನ್ನೊಬ್ಬರಿಗೆ ತೊಂದರೆ ಕೊಡುವುದು ಸರಿಯಲ್ಲ. ನೀರು ಬಿಡುಗಡೆ ಆದೇಶ ಮಾಡುವ ಮೊದಲು ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಲಾಶಯ ವ್ಯಾಪ್ತಿಯ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಶಾಸಕರ ಸಭೆ ಕರೆಯಬೇಕು. ಅಂತಹ ಯಾವ ಪ್ರಯತ್ನಗಳೂ ನಡೆಯಲಿಲ್ಲ ಎಂಬುದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಾದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.