ನಾವು ಮರೆತ ಹಳೆಯ ಆಟ: ಹಾವು- ಏಣಿ


Team Udayavani, Apr 21, 2020, 12:46 PM IST

ನಾವು ಮರೆತ ಹಳೆಯ ಆಟ: ಹಾವು- ಏಣಿ

ವಿಧಿಯಾಟದಂತೆ ನಡೆಯುವುದಷ್ಟೇ ನಮ್ಮ ಕೆಲಸ ಎಂದು ಸ್ಪಷ್ಟವಾಗಿ ಮನದಟ್ಟು ಮಾಡುವುದೇ ಹಾವು- ಏಣಿ ಆಟದ ವೈಶಿಷ್ಟ್ಯ

ಎಲ್ಲಾ ವಯೋಮಾನದವರೂ ಆಡಬಹುದಾದ, ದೇಶದ ಉದ್ದಗಲಕ್ಕೂ ಜನಪ್ರಿಯವಾಗಿರುವ ಆಟಗಳ ಪೈಕಿ ಹಾವು-ಏಣಿ ಆಟವೂ ಒಂದು. ರಂಜನೆ ಮತ್ತು ಕುತೂಹಲ ಈ ಆಟದ ವೈಶಿಷ್ಟ್ಯ. ಬೇರೆ ಆಟಗಳಲ್ಲಿಯಾದರೆ, ನಮ್ಮ ಜಾಣ್ಮೆ ಪ್ರದರ್ಶನಕ್ಕೆ, ಲೆಕ್ಕಾಚಾರದ ನಡೆಗೆ ಅವಕಾಶ ಇರುತ್ತದೆ. ಆದರೆ, ಹಾವು-ಏಣಿ ಆಟದಲ್ಲಿ ಅಂಥ ಯಾವ ಸಂದರ್ಭವೂ ಸಿಗುವುದಿಲ್ಲ. ಅಲ್ಲೇನಿದ್ದರೂ, ದಾಳದಲ್ಲಿ ಬಿದ್ದ ಸಂಖ್ಯೆಗೆ ಅನುಗುಣವಾಗಿ ಆಟ ಸಾಗುತ್ತದೆ, ಅಷ್ಟೇ. ಹಾವು- ಏಣಿ ಆಟದ ಸ್ವಾರಸ್ಯ ಅಂದರೆ, ಇಡೀ ಆಟ 1 ರಿಂದ 100ರ ಅಂಕಿಯೊಳಗಿನ ಒಂದು ಪ್ರೇಮ್‌ನ ಒಳಗೇ ನಡೆಯುವುದು. ಇಲ್ಲಿ ಕೂಡ, ದಾಳದ ರೂಪದಲ್ಲಿ ಹುಣಸೆ ಬೀಜ, ಕವಡೆ ಅಥವಾ ಪಗಡೆಯ ದಾಳಗಳನ್ನು ಬಳಸುವುದುಂಟು. ಸ್ವಾರಸ್ಯವೇನೆಂದರೆ, ಇಲ್ಲಿ ಇಬ್ಬರು ಆಟಗಾರರು
ಇರುತ್ತಾರೆ. ಇಬ್ಬರಿಗೂ ಒಂದೊಂದು ಕಾಯಿ ಮಾತ್ರ ಇರುತ್ತದೆ.

ಮೊದಲೇ ಹೇಳಿದಂತೆ, ದಾಳದಲ್ಲಿ ಬೀಳುವ ಸಂಖ್ಯೆಗೆ ಅನುಗುಣವಾಗಿ ಕಾಯಿ ನಡೆಸಬೇಕು. 100ನೇ ಸಂಖ್ಯೆಗೆ, ಯಾರು ಮೊದಲು ಕಾಯಿ ಕೊಂಡೊಯ್ಯುತ್ತಾರೋ, ಅವರು
ಗೆದ್ದಂತೆ! ಈ ಆಟದಲ್ಲಿ ಸ್ವಾರಸ್ಯವಿದೆ. ಕುತೂಹಲವಿದೆ. ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ… ಎಂಬ ಸಾಲುಗಳು ಇವೆಯಲ್ಲ, ಅವು, ಈ ಆಟವನ್ನು ಕಂಡಮೇಲೇ
ಬರೆದವೇನೋ ಅನ್ನುವಷ್ಟರ ಮಟ್ಟಿಗೆ, ಆ ಆಟಕ್ಕೆ ಹೊಂದಿಕೊಳ್ಳುತ್ತವೆ. ಏಕೆಂದರೆ, ಇಲ್ಲಿ ತಂತ್ರಗಾರಿಕೆಯ ಪ್ರದರ್ಶನಕ್ಕೆ ಅವಕಾಶವಿಲ್ಲ. ಜಾಣ್ಮೆಯ ನಡೆಯೂ ಸಾಧ್ಯವಿಲ್ಲ. ದಾಳ ಉರುಳಿಸಿದಾಗ ಇಷ್ಟೇ ಸಂಖ್ಯೆ ಬೀಳುತ್ತದೆಂದು ಖಚಿತವಾಗಿ ಹೇಳಲಿಕ್ಕೆ ಸಾಧ್ಯವೂ ಇಲ್ಲ. ಬಿದ್ದ ದಾಳದ ಸಂಖ್ಯೆಗೆ ತಕ್ಕಂತೆ ಕಾಯಿ ನಡೆಸುತ್ತಾ ಹೋಗಬೇಕು. ಕಾಯಿ ನಡೆಸುವಾಗ, ಏಣಿ ಇರುವ ಜಾಗದಲ್ಲಿ ಕಾಯಿ ಬಂದು ನಿಂತರೆ, ತಕ್ಷಣ ಆ ಏಣಿಯ ತುದಿ ಇರುವ ಸ್ಥಳದವರೆಗೂ ಜಂಪ್‌ ಹೊಡೆಯುವ ಅದೃಷ್ಟ ನಮ್ಮದಾಗುತ್ತದೆ.

ಅಕಸ್ಮಾತ್‌, ಹಾವಿನ ಬಾಯಿ ಇರುವ ಜಾಗಕ್ಕೆ ನಮ್ಮ ಕಾಯಿ ಬಂದು ನಿಂತರೆ, ಗೆಲುವಿನ ಓಟಕ್ಕೆ ಬ್ರೇಕ್‌ ಬಿದ್ದಂತಾಗಿ, ತಕ್ಷಣವೇ ಹಾವಿನ ಬಾಲ ಇರುವ ಸ್ಥಳಕ್ಕೆ ಬಂದು ನಿಲ್ಲಬೇಕಾಗುತ್ತದೆ. ಮತ್ತೆ ಅಲ್ಲಿಂದ ಆಟ ಶುರು. ಆದರೆ, ಏಣಿ ಹತ್ತಿದ ನಮ್ಮ ಪ್ರತಿಸ್ಪರ್ಧಿ, ಗುರಿ ಮುಟ್ಟುವ ತವಕದಲ್ಲಿ ಮುಂದೆಲ್ಲೂ ಇರುತ್ತಾನೆ. ಅಕಸ್ಮಾತ್‌, ಅವನ ಕಾಯಿ ಕೂಡ ಹಾವಿನ ಬಾಯಿಗೆ ಸಿಕ್ಕಿ ಕೆಳಗೆ ಬಂದರೆ ಮಾತ್ರ, ಆಟದಲ್ಲಿ ಫೈಟ್‌ ಕೊಡಲು ಅವಕಾಶ ಸಿಗುತ್ತದೆ. ಇಲ್ಲವಾದರೆ ಇಲ್ಲ. ಅದು ಜೀವನ ಆಗಿರಬಹುದು. ಬ್ಯುಸಿನೆಸ್‌ ಆಗಿರಬಹುದು. ಎದುರಾಳಿಯನ್ನು ಹಿಂದಿಕ್ಕಲು
ಹೊರಟಾಗ ನಮಗೆ ಯಾವ್ಯಾವ ಥರದ ತೊಂದರೆಗಳು ಎದುರಾಗಬಹುದು, ಗೆಲುವಿನ ಹಿಂದಿನ ಓಟ, ಏನೇನು ತಿಳಿವಳಿಕೆ ಕೊಡಬಹುದು ಎಂಬುದಕ್ಕೆ, ಹಾವು- ಏಣಿ ಆಟ ಒಂದು ಸ್ಪಷ್ಟ ಉದಾಹರಣೆ. ಈ ಆಟದ ಸೊಗಸನ್ನು ಆಡಿಯೇ ಅನುಭವಿಸಬೇಕು.

(ನೀವು ಆಡುತ್ತಿದ್ದ ಆಟವನ್ನು ಈ ಅಂಕಣಕ್ಕೆ ಬರೆಯಬಹುದು: uvani.josh@ gmail.com)

ಟಾಪ್ ನ್ಯೂಸ್

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Devadurga

Karkala: ಅಕ್ರಮ ಮದ್ಯ ದಾಸ್ತಾನು; ಆರೋಪಿ ಸೆರೆ

Brahmavar

Malpe: ಅಸ್ವಾಭಾವಿಕ ಸಾವು; ಪ್ರಕರಣ ದಾಖಲು

WhatsApp Image 2024-11-17 at 21.09.50

Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ

ssa

Malpe: ನಿಲ್ಲಿಸಲಾಗಿದ್ದ ಬುಲೆಟ್‌ ಕಳವು

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.