ನಾವು ನೋಡುವ ದೃಷ್ಟಿಕೋನ ಬದಲಾಗಬೇಕಿದೆ


Team Udayavani, Apr 9, 2022, 5:10 AM IST

ನಾವು ನೋಡುವ ದೃಷ್ಟಿಕೋನ ಬದಲಾಗಬೇಕಿದೆ

ಯಾವುದೇ ವಿಚಾರವನ್ನು ವಿಶಾಲ ದೃಷ್ಟಿಕೋನದಿಂದ ಪ್ರತಿಯೊಬ್ಬರೂ ಆಲೋಚಿಸಿದರೆ ಮತ್ತೂಬ್ಬರ ಮೇಲೆ ಹಗೆ ಸಾಧಿಸುವ, ಪರರನ್ನು ನಿಂದಿಸುವ ಪ್ರಸಂಗವೇ ಎದುರಾಗುವುದಿಲ್ಲ. ಪ್ರತಿಯೊಂದರ ಆಸ್ವಾದಿಸುವಿಕೆ, ಅರಿಯುವಿಕೆ, ನಿರ್ಣಯಿಸುವಿಕೆ, ತಾನು ಹೇಗೆ ನೋಡುತ್ತೇನೆ ಎಂಬುದರ ಮೇಲೆ ನಿಂತಿದೆ. ವೈಯಕ್ತಿಕ ದೃಷ್ಟಿಯಿಂದ ಸಮಾಜವನ್ನು ಕಂಡರೆ ಎಲ್ಲವೂ ತದ್ವಿರುದ್ಧವಾಗಿಯೇ ಕಾಣು ತ್ತದೆ. ಅನುಭೂತರಾಗಿ ಯೋಚಿಸುವುದಕ್ಕಿಂತಲೂ ಸಹಾನುಭೂತಿಶೀಲರಾಗಿ ಯೋಚಿಸಿದಾಗ ದ್ವೇಷ, ಅಸೂಯೆ, ಸಂಘರ್ಷ ದೂರವಾಗಲು ಸಾಧ್ಯವಾಗುತ್ತದೆ. ಪರಸ್ಪರ ಸಹಕಾರಯುತ ಸಹಬಾಳ್ವೆಯ ಬದುಕಿಗೆ ಅಡಿಪಾಯವಾಗುತ್ತದೆ.

ಅಲ್ಲೊಂದು ಮನೆ. ಆ ಮನೆಯಲ್ಲಿ ಪತಿ-ಪತ್ನಿ ಬಹುದಿನಗಳಿಂದ ಅನ್ಯೋನ್ಯ ಭಾವದಿಂದ ಸಂಸಾರ ನಡೆಸುತ್ತಿದ್ದರು. ಅದೇ ಮನೆ ಪಕ್ಕದಲ್ಲಿ ಒಂದು ಸಣ್ಣ ನದಿ ಹರಿಯುತ್ತಿತ್ತು. ಪ್ರತಿನಿತ್ಯ ಹೆಂಡತಿ ಮುಂಜಾನೆ ಎದ್ದ ತತ್‌ಕ್ಷಣ ಪಾರದರ್ಶಕ ಕಿಟಕಿಯಿಂದ ಒಮ್ಮೆ ಆ ನದಿಯನ್ನು ನೋಡುತ್ತಾ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಗಂಡನ ಬಳಿ ನದಿಯನ್ನು ವರ್ಣಿಸುವುದು ಅಭ್ಯಾಸವಾಗಿ ಹೋಗಿತ್ತು. ಹೀಗೆ ದಿನಗಳು ಕಳೆಯುತ್ತಿರುವಾಗ ಒಂದಿಷ್ಟು ದಿನಗಳ ಕಾಲ ಮನೆಬಿಟ್ಟು ಇನ್ನೆಲ್ಲೋ ಹೋಗಿ ವಾಸಿಸುವ ಸಂದರ್ಭ ಎದುರಾಗಿ ಅವರಿಬ್ಬರು ಸಿದ್ಧರಾಗಿ ಪ್ರವಾಸ ನೆಪದಲ್ಲಿ ಕೆಲವು ದಿನಗಳ ಕಾಲ ಮನೆಯಿಂದ ದೂರ ಇದ್ದರು. ಬಹುದಿನಗಳ ಬಳಿಕ ಮತ್ತೆ ತಮ್ಮ ಮನೆ ಸೇರಿದರು. ಎಂದಿನಂತೆ ಮನೆಯಲ್ಲಿ ತಮ್ಮ ದೈನಂದಿನ ಚಟುವಟಿಕೆಗಳನ್ನು ಮುಂದುವರಿಸಿದರು.

ಮುಂಜಾನೆ ಕೊಂಚ ತಡವಾಗಿ ಎದ್ದ ಮಡದಿ ಕಿಟಕಿಯಿಂದ ಅದೇ ಹರಿಯುವ ನದಿಯನ್ನು ನೋಡುತ್ತಾ ಒಂದೇ ಸಮನಾಗಿ ಹರಿಯುತ್ತಿದ್ದ ಈ ನದಿಗೆ ಏನಾಯಿತು? ನಾನು ಪ್ರವಾಸ ಹೋಗುವವರೆಗೆ ಸ್ವಚ್ಛಂದವಾಗಿ ಶುಭ್ರತೆಯಿಂದ ಹರಿಯುತ್ತಿತ್ತು. ಇವತ್ತು ಯಾಕಿಷ್ಟು ಕಲುಷಿತವಾಗಿ ಕೆಂಬಣ್ಣದಿಂದ ಕೂಡಿದೆ. ನಾನು ಮನೆಯಲ್ಲಿರುವ ತನಕ ಬೆಳಗ್ಗೆ ಹಾಲಿನಂತೆ ಕಂಗೊಳಿಸುತ್ತಿದ್ದ ನೀನು ಯಾಕೆ ಇಷ್ಟೊಂದು ಮಲಿನವಾಗಿದ್ದೀಯಾ ಎಂದು ನದಿಯನ್ನು ಶಪಿಸಲಾರಂಭಿಸಿದಳು.

ಇದನ್ನು ಕಂಡು ಆಕೆಯ ಮಾತುಗಳನ್ನು ಆಲಿಸುತ್ತಿದ್ದ ಗಂಡ ತನ್ನ ಹೆಂಡತಿಯ ಬಳಿ ಬಂದು ನೋಡು ಯಾಕಿಷ್ಟು ರೇಗಾಡುತ್ತೀಯಾ, ಆ ನದಿ ತನ್ನ ಪಾಡಿಗೆ ತಾನು ಹರಿಯುತ್ತಿದೆ. ಅದರಲ್ಲಿ ಯಾವುದೇ ಮಾಲಿನ್ಯ ಇಲ್ಲ. ಆ ನೀರು ಕೊಳಕಾಗಿಲ್ಲ. ತೊಂದರೆ ಇರುವುದು ನಮ್ಮ ಬಳಿಯೇ, ನೀನು ನೋಡುತ್ತಿರುವ ಈ ಕಿಟಕಿಯ ಗಾಜಿನ ಬಣ್ಣ ಬದಲಾಗಿದೆ. ನಾವು ಕೆಲವು ದಿನಗಳಿಂದ ಮನೆಯಲ್ಲಿ ಇಲ್ಲದೇ ಇದ್ದುದರಿಂದ ಕಿಟಕಿಯ ಗಾಜಿನ ತುಂಬೆಲ್ಲ ಧೂಳು ತುಂಬಿದೆ. ಕಿಟಕಿಯ ಗಾಜು ಕೊಳಕಾಗಿದೆ. ಮೊದಲು ನಮ್ಮ ಮನೆ ಕಿಟಕಿಯ ಗಾಜು ಸ್ವಚ್ಛಗೊಳಿಸುವ. ಅನಂತರ ಎಲ್ಲವೂ ಇದ್ದ ರೂಪದಲ್ಲಿಯೇ ಕಾಣುತ್ತದೆ. ನೀನು ನೋಡುವ ದೃಷ್ಟಿಕೋನದಲ್ಲಿ ಬದಲಾವಣೆ ಬೇಕಿದೆ ಎಂದ. ಪತಿಯ ಈ ಮಾತನ್ನು ಮನವರಿಕೆ ಮಾಡಿಕೊಂಡ ಆಕೆ ನದಿಯನ್ನು ಶಪಿಸುವ ಬದಲಾಗಿ ಕಿಟಕಿಯ ಗಾಜುಗಳನ್ನು ಸ್ವಚ್ಛಗೊಳಿಸಿ ಈ ಹಿಂದಿನಂತೆ ನದಿಯತ್ತ ದೃಷ್ಟಿ ಹರಿಸಿದಾಗ ನದಿ ಮಾಲಿನ್ಯರಹಿತವಾಗಿರುವುದು ಭಾಸವಾಯಿತು.

ಅನೇಕ ಬಾರಿ ನಾವು ಇಂತಹುದೇ ಪ್ರಸಂಗಕ್ಕೆ ಒಳಗಾಗುತ್ತೇವೆ. ಮೊದಲು ನಮ್ಮನ್ನು ನಾವೇ ಸರಿಪಡಿಸಿಕೊಳ್ಳದೆ ಪರರನ್ನು ಶಪಿಸುತ್ತಾ ಕಾಲ ಕಳೆಯುತ್ತಿರುತ್ತೇವೆ. ನಮ್ಮಲ್ಲಿರುವ ದೋಷಗಳನ್ನು ಕಂಡುಕೊಳ್ಳದೆ ಇತರರ ಮೇಲೆ ಇತರ ವಸ್ತುಗಳ ಮೇಲೆ ಭಾರ ಹೇರುತ್ತಾ ಬರುತ್ತೇವೆ. ಇದರ ಬದಲಾಗಿ ನಾವು ನೋಡುವ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು. ಆಗ ನಿಜಾಂಶ ಏನೆಂಬುದು ಅರ್ಥವಾಗುತ್ತದೆ. “ಸೃಷ್ಟಿಯನ್ನು ಅದರ ದೃಷ್ಟಿಯಿಂದಲೇ ನೋಡು ನಿನ್ನ ದೃಷ್ಟಿಯಿಂದ ಯಾಕೆ ಸೃಷ್ಟಿಯನ್ನು ನೋಡುವೆ’ ಎಂಬ ಮಾತಿನಂತೆ ಪ್ರಕೃತಿಯ ಅರಿಯುವಿಕೆಯನ್ನು ಪ್ರಕೃತಿಯ ನೋಟದಿಂದಲೇ ಅರಿತುಕೊಳ್ಳಲು ಸಾಧ್ಯವಾದಾಗ ನಮ್ಮೊಳಗಿನ ಕುಂದುಕೊರತೆಗಳನ್ನು ಅವಲೋಕಿಸಿಕೊಳ್ಳುವಷ್ಟು ಪ್ರಬುದ್ಧರಾದಾಗ ಪ್ರತಿಯೊಂದರ ವಾಸ್ತವ ವಿಚಾರಗಳನ್ನು ಮನಗಾಣಲು ಸಾಧ್ಯವಾಗುತ್ತದೆ.

- ಅರವಿಂದ, ಉಜಿರೆ

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.