Ankola: ಅಂಕೋಲದ ಕೇಣಿಗೆ ಸಿಗಲಿದೆ ಬಂದರು
Team Udayavani, Nov 17, 2023, 9:16 PM IST
ಕರ್ನಾಟಕ ಕೇಣಿ ಎಂಬಲ್ಲಿ ಉದ್ಯಮಿ ಸಜ್ಜನ್ ಜಿಂದಾಲ್ ಒಡೆತನದ ಜೆಎಸ್‌ಡಬ್ಲೂ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಹೊಸ ಬಂದರು ಅಭಿವೃದ್ಧಿಪಡಿಸಲಿದೆ. ಅದಕ್ಕೆ ಬೇಕಾಗಿರುವ ಅನುಮತಿಯನ್ನು ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಕಡಲು ಅಭಿವೃದ್ಧಿ ಮಂಡಳಿಯಿಂದ ಪಡೆದುಕೊಳ್ಳಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಬಿಡ್ ಮಾಡಿದ್ದ ಅದಾನಿ ಪೋರ್ಟ್
ಉದ್ದೇಶಿತ ಯೋಜನೆಯನ್ನು ಕೈವಶ ಮಾಡಿಕೊಳ್ಳುವ ಉದ್ದೇಶದಿಂದ ಅದಾನಿ ಗ್ರೂಪ್‌ಗೆ ಸೇರಿದ ಅದಾನಿ ಪೋರ್ಟ್ಸ್ ಬಿಡ್ ಮಾಡಿತ್ತು. ಅಂತಿಮವಾಗಿ ಜೆಎಸ್‌ಡಬ್ಲೂ ಇನ್‌ಫ್ರಾಸ್ಟ್ರಕ್ಚರ್‌ಗೆ ಯೋಜನೆ ಒಲಿಯಿತು.
ಬಂದರು ಸ್ಥಾಪನೆ ಆಗುವುದು ಎಲ್ಲಿ
ಉದ್ದೇಶಿತ ಬಂದರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿ ಎಂಬಲ್ಲಿ ಸ್ಥಾಪನೆ ಆಗಲಿದೆ. ವ್ಯೂಹಾತ್ಮಕವಾಗಿ ನೋಡುವುದಿದ್ದರೆ ಮಂಗಳೂರು ಮತ್ತು ಗೋವಾದ ಮಡ್‌ಗಾಂವ್‌ಗೆ ಇರುವ ಮಧ್ಯದ ಸ್ಥಳದಲ್ಲಿ ಅದನ್ನು ಆರಂಭಿಸಲಾಗುತ್ತಿದೆ.
ಉದ್ದೇಶಿತ ಬಂದರಲ್ಲಿ ಏನೇನು ನಿರ್ವಹಣೆ?
– ಕಲ್ಲಿದ್ದಲು ಮತ್ತು ಕೋಕ್‌ಗಳನ್ನು ಇಳಿಸುವಿಕೆಗೆ ಬಳಕೆ.
– ಮುಂದಿನ ದಿನಗಳಲ್ಲಿ ಕಬ್ಬಿಣದ ಅದಿರು, ಸುಣ್ಣದ ಕಲ್ಲು, ಡೊಲೊಮೈಟ್‌ಗಳ ಸಾಗಣೆಗೆ ಉಪಯೋಗ
– ಅಂಕೋಲದಲ್ಲಿ ಕೊಂಕಣ ರೈಲು ಹಾದು ಹೋಗುವುದರಿಂದ ಬಂದರಿಗೆ ಅನುಕೂಲ.
ಏನೇನು ವಿಶೇಷತೆ, ಸೌಕರ್ಯಗಳು ಇರಲಿವೆ?
– ಕೇಪ್ ಗಾತ್ರದ ಹಡುಗಳ ನಿರ್ವಹಣೆಗೆ ಅಧುನಿಕ ಪರಿಸರ ಸ್ನೇಹಿ ಯಂತ್ರೋಪಕರಣಗಳು
– ಎಲ್ಲಾ ಹವಾಮಾನಗಳಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ
– ನೇರ ಬರ್ತಿಂಗ್, ಡೀಪ್ ವಾಟರ್ ಬಂದರು, ಹಲವು ರೀತಿಯ ಸರಕುಗಳ ನಿರ್ವಹಣೆ
ಯಾವ ಪ್ರದೇಶಗಳಿಗೆ ಇದರಿಂದ ಅನುಕೂಲ?
ಬಳ್ಳಾರಿ, ಹೊಸಪೇಟೆ, ಹುಬ್ಬಳ್ಳಿ, ಕಲಬುರಗಿ ಸೇರಿದಂತೆ ಉತ್ತರ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಗಳು. ಜತೆಗೆ ದಕ್ಷಿಣ ಮಹಾರಾಷ್ಟ್ರದ ಪ್ರದೇಶಗಳು.
4,119 ಕೋಟಿ ರೂ.- ಯೋಜನೆಯ ವೆಚ್ಚ
30 ಮಿಲಿಯ ಮೆಟ್ರಿಕ್ ಟನ್- ವಾರ್ಷಿಕ ಸರಕು ನಿರ್ವಹಣೆ ಸಾಮರ್ಥ್ಯ (ಆರಂಭಿಕ ಹಂತದಲ್ಲಿ)
44 ಮಿಲಿಯ ಮೆಟ್ರಿಕ್ ಟನ್- ರಾಜ್ಯದಲ್ಲಿ ವಾರ್ಷಿಕ ಸರಕು ನಿರ್ವಹಣೆ ಸಾಮರ್ಥ್ಯ
117 ಮಿಲಿಯ ಮೆಟ್ರಿಕ್ ಟನ್- 2035ಕ್ಕೆ ಹೆಚ್ಚಳವಾಗಬೇಕಾಹಿರುವ ಸರಕು ನಿರ್ವಹಣೆ
05 ವರ್ಷ- ಕಾಮಗಾರಿ ಪೂರ್ಣಕ್ಕೆ ನೀಡಲಾಗಿರುವ ಅವಧಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.