ನೇಮಕವಾಗದ ನಿರ್ದೇಶಕರ ಹುದ್ದೆ, ಸಾಂಸ್ಕೃತಿಕ ಚಟುವಟಿಕೆ ಸ್ತಬ್ಧ- ರಂಗಾಯಣಗಳ ಅಂಗಳ ಭಣಭಣ
Team Udayavani, Dec 29, 2023, 11:21 PM IST
ಕಾರ್ಕಳ: ನಾಡಿನ ರಂಗ ಸಂಸ್ಕೃತಿಯನ್ನು ಶ್ರೀಮಂತಗೊಳಿಸಲು ರಾಜ್ಯದ 6 ಕಡೆ ಸರಕಾರ ಆರಂಭಿಸಿದ್ದ ರಂಗಾಯಣಗಳಿಗೆ ಇನ್ನೂ ನಿರ್ದೇಶಕರ ನೇಮಕವಾಗಿಲ್ಲ. ಜತೆಗೆ ನಿರೀಕ್ಷಿತ ಅನುದಾನವೂ ಬಿಡುಗಡೆಯಾಗದ ಕಾರಣ ರಂಗಾಯಣಗಳೆಲ್ಲಾ ಭಣಗುಡುತ್ತಿವೆ.
ಮೈಸೂರು, ಧಾರವಾಡ, ಶಿವಮೊಗ್ಗ, ಕಲಬುರ್ಗಿ, ದಾವಣೆಗೆರೆ, ಉಡುಪಿ (ಕಾರ್ಕಳ) ಯಕ್ಷರಂಗಾಯಣ ಸೇರಿ ಆರು ಕಡೆ ರಂಗಾಯಣಗಳು ಕಾರ್ಯ ನಿರತವಾಗಿವೆ. ಹೊಸ ಸರಕಾರ ಬಂದು ಆರು ತಿಂಗಳಾಗುತ್ತಿದ್ದರೂ ಈವರೆಗೂ ನೂತನ ನಿರ್ದೇಶಕರ ನೇಮಕವಾಗಿಲ್ಲ. ಇದರ ಆಡಳಿತ ಮಂಡಳಿಯಂತಿರುವ ರಂಗಸಮಾಜಕ್ಕೂ ಸದಸ್ಯರ ನೇಮಕವಾಗಿಲ್ಲ. ಹಾಗಾಗಿ ಬಹುತೇಕ ರಂಗಾಯಣಗಳು ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.
ಬಿಜೆಪಿ ಸರಕಾರವಿದ್ದಾಗ ಐದು ಕಡೆ ನಿರ್ದೇಶಕರು ತಮ್ಮ ಅಧಿಕಾರವಧಿ ಮೂರು ವರ್ಷ ಮುಗಿದು ಹೆಚ್ಚುವರಿಯಾಗಿ 5 ತಿಂಗಳು ಕಾರ್ಯ ನಿರ್ವಹಿಸಿದ್ದರು. ಬಳಿಕ ಬಂದ ಹೊಸ ನಿಗಮ ಮಂಡಳಿಗಳ ಅಧ್ಯಕ್ಷರು, ಅಕಾಡೆಮಿ, ರಂಗಾಯಣ ಅಧ್ಯಕ್ಷರು-ನಿರ್ದೇಶಕರ ನೇಮಕಾತಿ ರದ್ದುಗೊಳಿಸಿ ನಿರ್ದೇಶಕರ ನೇಮಕ ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಉಡುಪಿ (ಕಾರ್ಕಳ) ಯಕ್ಷರಂಗಾಯಣದ ನಿರ್ದೇಶಕರ ಅವಧಿ ಒಂದೇ ವರ್ಷದಲ್ಲಿ ಕೊನೆಗೊಂಡಿತ್ತು.
ಸದ್ಯಕ್ಕೆ ರಂಗಾಯಣದಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲವಾದ್ದರಿಂದ ರಂಗಶಾಲೆಯ ಕಲಾವಿದರು, ಸಿಬಂದಿಗೆ ಕೆಲಸವಿಲ್ಲದಂತಾಗಿದೆ. ಕೆಲವೆಡೆ ರಂಗಶಾಲೆಯ ಕಲಾವಿದರು ರಂಗಾಯಣದಿಂದ ಹೊರಬರುತ್ತಿದ್ದಾರೆ. ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳ ರಂಗಾಯಣ ದಲ್ಲಿ ಆಡಳಿತಾಧಿಕಾರಿಗಳಿದ್ದು, ತಿಂಗಳಿಗೆ ಒಂದು ಕಾರ್ಯಕ್ರಮವನ್ನು ಸಂಘಟಿಸಲಾಗುತ್ತಿದೆ.
ಅನುದಾನವೂ ಇಳಿಮುಖ
ಆರಂಭದಲ್ಲಿ ಪ್ರತೀ ವರ್ಷ 1 ಕೋ.ರೂ ಅನುದಾನ ರಂಗಾಯಣಕ್ಕೆ ಸಿಗುತ್ತಿತ್ತು. ಬಳಿಕ ರೂ. 75 ಲಕ್ಷ, ರೂ. 50 ಲಕ್ಷ, ರೂ. 40 ಲಕ್ಷ ರೂ. ಗೆ ಇಳಿಯಿತು. ಪ್ರಸಕ್ತ ಸಾಲಿನಲ್ಲಿ ಅದು 20 ಲಕ್ಷ ರೂ. ಗಳಿಗೆ ಮಿತಿಗೊಂಡಿದೆ. ಈ ಹಣ ಸಿಬಂದಿ ವೇತನ, ಕಲಾವಿದರ ವೇತನ, ತರಬೇತಿ ಇತ್ಯಾದಿಗೇ ಸಾಲುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಧೂಳು ತಿನ್ನುತ್ತಿವೆ ಪರಿಕರ
ಕೇಂದ್ರಗಳು ಚಟುವಟಿಕೆ ನಿಲ್ಲಿಸಿದ್ದರಿಂದ ಲಕ್ಷಾಂತರ ರೂ. ಮೌಲ್ಯದ ರಂಗ ಪರಿಕರಗಳು ಧೂಳು ಹಿಡಿದಿವೆ. ರಂಗಕಲೆಗೆ ಶಕ್ತಿ ತುಂಬಲು ಆರಂಭವಾದ ರಂಗಾಯಣಗಳ ಬಗ್ಗೆ ಸರಕಾರ ಕೂಡಲೇ ಗಮನಹರಿಸಬೇಕು ಎಂಬುದು ರಂಗಾಸಕ್ತರ ಆಗ್ರಹ.
ಅಕಾಡೆಮಿಗಳಿಗೆ ನೇಮಕ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯ ಕರ್ನಾಟಕ ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಸಂಗೀತ ನೃತ್ಯ ಅಕಾಡೆಮಿ, ಜಾನಪದ ಅಕಾಡೆಮಿ, ಶಿಲ್ಪಕಲಾ ಅಕಾಡೆಮಿ, ತುಳು ಅಕಾಡೆಮಿ, ಲಲಿತಾಕಲಾ ಅಕಾಡೆಮಿ, ಯಕ್ಷಗಾನ ಅಕಾಡೆಮಿ, ಅರೆಭಾಷೆ ಅಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ, ಕೊಡವ ಅಕಾಡೆಮಿ, ಬ್ಯಾರಿ ಅಕಾಡೆಮಿ, ಬಯಲಾಟ ಅಕಾಡೆಮಿ, ಲಂಬಾಣಿ ಭಾಷಾ ಅಕಾಡೆಮಿಗಳಿಗೆ ನಿರ್ದೇಶಕರ ನೇಮಕವಾಗಬೇಕಿದೆ.
ಈ ಕುರಿತು ಸರಕಾರದ ಮಟ್ಟದಲ್ಲಿ ತೀರ್ಮಾನವಾಗಿದ್ದು, ಒಂದು ತಿಂಗಳೊಳಗೆ ನಿರ್ದೇಶಕರ ಹೆಸರನ್ನು ಪ್ರಕಟಿಸಲಾಗುವುದು. ರಂಗಭೂಮಿ, ಸಾಂಸ್ಕೃತಿಕ ಚಟುವಟಿಕೆ ಕುಂಠಿತವಾಗದಂತೆ ಗಮನ ಹರಿಸಲಾಗುವುದು.
– ಡಾ| ಎಸ್. ಮಂಜುಳಾ, ಮುಖ್ಯ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.