ಅಮೂಲ್ಯವಿದು ಮಾನವ ಜನ್ಮ
Team Udayavani, Nov 16, 2021, 5:11 AM IST
ಈ ಭೂಮಿಯ ಮೇಲಿರುವ ಸಕಲ ಜೀವಿಗಳಲ್ಲಿ ಮಾನವನಿಗೆ ಉನ್ನತ ಸ್ಥಾನ. ಆದರೆ ಇದು ಆತ ಈ ಜನ್ಮವನ್ನು ಎಷ್ಟು ಸಾರ್ಥಕತೆಯಿಂದ ಬಾಳಿ ಬದುಕುತ್ತಾನೆ ಎಂಬುದನ್ನು ಆಧ ರಿಸಿರುತ್ತದೆ. ಯಾವುದೋ ಒಂದು ಸಮಸ್ಯೆ, ದುಗುಡ, ದುಮ್ಮಾನದಿಂದ ಬೇಸತ್ತು ಈ ಜನ್ಮವನ್ನು ನಾವು ಹಳಿಯ ಲಾರಂಭಿಸುತ್ತೇವೆ. ನಮ್ಮ ಬದುಕನ್ನು ಸವಾಲಾಗಿ ಸ್ವೀಕರಿಸಿ ಮೌಲ್ಯಯುತ ಹಾದಿಯಲ್ಲಿ ಸಾಗಿದ್ದೇ ಆದಲ್ಲಿ ಮಾನವ ಜನ್ಮದ ನಿಜವಾದ ಮಹತ್ವವನ್ನು ಅರಿತು ಕೊಳಕ್ಷೆು ಸಾಧ್ಯ.
ಜೀವನದಲ್ಲಿ ಬೇಸರ ಹೊಂದಿದ್ದ ವ್ಯಕ್ತಿದುಯೊಬ್ಬ ಸಂತನೆಡೆಗೆ ಹೋಗಿ ಜೀವನಕ್ಕೆ ಬೆಲೆ ಏನು ಗುರುಗಳೇ ತಿಳಿಸಿಕೊಡಿ, ಎಲ್ಲವೂ ಶೂನ್ಯ ಸಾಯು ವುದೊಂದೇ ಪರಿಹಾರ ಅನಿಸುತ್ತಿದೆ ಎಂದನಂತೆ. ಶಾಂತನಾಗಿ ಕೇಳಿದ ಸಂತ ಕಲ್ಲೊಂದನ್ನು ಆತನ ಕೈಯಲ್ಲಿಟ್ಟು ಈ ಕಲ್ಲಿನ ಬೆಲೆ ಏನೆಂದು ತಿಳಿದುಕೊಂಡು ಬಾ. ಆದರೆ ಕಲ್ಲನ್ನು ಯಾವ ಕಾರಣಕ್ಕೂ ಮಾರಾಟ ಮಾಡಕೂಡದು ಅನಂತರ ನಿನ್ನ ಪ್ರಶ್ನೆಗೆ ಉತ್ತರಿಸುತ್ತೇನೆ ಎಂದ. ಕಲ್ಲನ್ನು ಹಿಡಿದು ಕೊಂಡು ಹೊರಟ ಆತ ಸಾಗುತ್ತಾ ಸಾಗುತ್ತಾ ಹಣ್ಣಿನ ವ್ಯಾಪಾರಿಯ ಬಳಿ ಬಂದ. ತನ್ನಲ್ಲಿರುವ ಕಲ್ಲನ್ನು ತೋರಿಸುತ್ತಾ ಅದರ ಬೆಲೆ ಕೇಳಿದ. ವ್ಯಾಪಾರಿ ಆ ಕಲ್ಲಿಗೆ ಹನ್ನೆರಡು ಕಿತ್ತಳೆ ಕೊಡಬಲ್ಲೆ ಎಂದ. ಸಂತ ಹೇಳಿದ ಮಾತಿನ ನೆನಪಾಗಿ ಕಲ್ಲನ್ನು ಮಾರಾಟ ಮಾಡದೆ ಮುಂದೆ ನಡೆದ. ತರಕಾರಿ ಅಂಗಡಿಯೊಂದು ಕಾಣಿಸಿತು. ಅಂಗಡಿಯಲ್ಲಿ ಹೋಗಿ ಕಲ್ಲಿನ ಬೆಲೆ ಕೇಳಿದ. ವ್ಯಾಪಾರಿ ಆ ಕಲ್ಲಿಗೆ 5 ಕೆ. ಜಿ. ಆಲೂ ಬರಬಹುದು ಎಂದ. ಮತ್ತೆ ಕಲ್ಲನ್ನು ಮಾರಾಟ ಮಾಡಬಾರದೆಂದು ಸಂತ ಹೇಳಿದ ಮಾತು ನೆನಪಾಗಿ ಮುಂದಕ್ಕೆ ನಡೆದ. ಮುಂದೆ ಸಾಗುತ್ತಾ ಬಂಗಾರದ ಅಂಗಡಿ ಬಳಿ ಬಂದ. ಕಲ್ಲಿನ ಬೆಲೆಗೆ ಅದೆಷ್ಟು ಚಿನ್ನ ಸಿಗಬಹುದು ಎಂದು ವಿಚಾರಿಸಿದ. ಬಂಗಾರದ ಅಂಗಡಿಯವ ಬೆಲೆ ಬಾಳುವ ಹಾರವನ್ನು ಇದಕ್ಕೆ ಪ್ರತಿಯಾಗಿ ನೀಡುತ್ತೇನೆಂದ. ಆಸೆ ಚಿಗುರಿ ದರೂ ಸಂತನ ಮಾತು ಮತ್ತೆ ನೆನಪಾ ಯಿತು. ಮುಂದಕ್ಕೆ ನಡೆದಾಗ ಅತ್ಯ ಮೂಲ್ಯ ಬೆಲೆಯಿರುವ ಹರಳು ಕಲ್ಲುಗಳ ದೊಡ್ಡ ಅಂಗಡಿ ಎದುರಾಯಿತು. ತನ್ನಲ್ಲಿರುವ ಕಲ್ಲು ತೋರಿಸಿ ಅದರ ಬೆಲೆ ಕೇಳಿದ. ನನ್ನ ಅಂಗಡಿಯಲ್ಲಿ ಇರುವ ಬೆಲೆಬಾಳುವ ಎಲ್ಲ ಕಲ್ಲುಗಳನ್ನು ಮಾತ್ರ ವಲ್ಲದೆ ತನ್ನ ಅಂಗಡಿಯನ್ನೇ ನೀಡಿದರೂ ಇದರ ಬೆಲೆಗೆ ಸಮಾನವಾಗದು. ಈ ಅಮೂಲ್ಯವಾದ ಕಲ್ಲು ಎಲ್ಲಿ ಸಿಕ್ಕಿತು ಕೊಟ್ಟು ಬಿಡು ಎಂದ. ಆದರೆ ಸಂತನ ಮಾತು ನೆನಪಾಗಿ ಕಲ್ಲನ್ನು ಮಾರಾಟ ಮಾಡದೆ ಹಿಂದಿರುಗಿ ಬಂದು ಎಲ್ಲವನ್ನೂ ಹೇಳಿದ. ಈಗ ಹೇಳಿ ಬದುಕಿನ ಬೆಲೆ ಏನು? ಅಂತ ದೈನ್ಯನಾಗಿ ಕೇಳಿದ.
ಸಂತ ಮುಗುಳ್ನಗುತ್ತಾ ಜೀವನಕ್ಕೆ ಬೆಲೆ ಕಟ್ಟಲಾಗದು. ಅವರವರ ದೃಷ್ಟಿಕೋನ ತಿಳಿವಳಿಕೆಗಳಿಗೆ ತೋಚಿದಂತೆ, ಅವರ ಮಾಹಿತಿಗೆ ತಕ್ಕಂತೆ ಬೆಲೆ ಕಟ್ಟಬಹುದೇ ಹೊರತು ಅದಕ್ಕೆ ನಿರ್ದಿಷ್ಟ ಬೆಲೆ ಕಟ್ಟಲಾಗದು. ಜೀವನ ಅಷ್ಟೊಂದು ಅಮೂಲ್ಯ. ನಮ್ಮ ನಮ್ಮ ಅನುಭವಕ್ಕೆ ಏನು ಸಿಗುತ್ತದೋ ಅಷ್ಟೇ ಜೀವನ ಎಂದು ಕೊಳ್ಳುತ್ತೇವೆ. ಆದರೆ ನಮ್ಮ ಜೀವನಕ್ಕೆ ಬೆಲೆ ತುಂಬಬೇಕಾದವರು ನಾವೇ. ಅದು ಹುಡುಕಾಡಿದರೆ ಸಿಗಲಾರದು ಎಂದು ನುಡಿದ. ಜೀವನ ಸಾಗರದ ಹಾಗೆ. ಸಾಗರದಲ್ಲೇನಿದೆ? ಬರೀ ಅಲೆಗಳು ಮತ್ತು ಉಪ್ಪುನೀರು ಎಂದು ಅಂದು ಕೊಂಡರೆ ಬೇರೇನೂ ಕಾಣದು. ಅಲ್ಲಿರುವ ಅಲೆಗಳು, ದಡದಲ್ಲಿ ಬಿದ್ದಿರುವ ಚಿಪ್ಪುಗಳು, ಆಳದಲ್ಲಿ ರುವ ಮುತ್ತು ರತ್ನಗಳು, ತೇಲುತ್ತಿರುವ ಹಡಗು ಗಳು, ಸಾವಿರಾರು ಪ್ರಾಣಿಗಳು ಇವೆಲ್ಲವೂ ಸಾಗರದಲ್ಲಿ ಅಡಗಿರುವ ಸಂಪತ್ತು. ನಾವು ಯಾವುದನ್ನು ನಮಗೆ ಎಂದು ಆಯ್ದು ಕೊಳ್ಳುತ್ತೇವೆಯೋ ಅದೇ ಬದುಕು. ಹಾಗೆಂದು ಬದುಕು ಇಷ್ಟೇ ಎನ್ನುವ ತೀರ್ಮಾನಕ್ಕೆ ಬರಲಾ ಗದು ಎಂದರು.
ಎಷ್ಟೋ ಬಾರಿ ನಾವು ಸೋತಾಗ, ನಿರಾಶರಾದಾಗ ಜೀವನಕ್ಕೇನು ಬೆಲೆ ಎಂದು ಗೊಣಗುತ್ತೇವೆ. ಸೋತಾಗ ಹತಾಶರಾಗುತ್ತೇವೆ. ಮಾನಸಿಕ ತೊಳ ಲಾಟಕ್ಕೊಳಗಾಗುತ್ತೇವೆ. ಆದರೆ ಈ ಬದುಕು ಅತ್ಯಮೂಲ್ಯ. ಸೋತಾ ಗಲೂ ಹತಾಶರಾಗದೆ ಸೋಲನ್ನು ಎದುರಿಸಿ ದಾಗ ಗೆಲುವಿನ ದಾರಿಯೊಂದು ಕಾಣಿಸಬಹುದು. ಸೋಲು ಅಂತಿಮ ನಿಲ್ದಾಣವಲ್ಲ. ಬದುಕಿನ ಮೌಲ್ಯ ನಮ್ಮ ಕೈಯಲ್ಲಿಯೇ ಇದೆ. ಸಂತ ನೀಡಿದ ಕಲ್ಲಿನ ಹಾಗೆ. ತರಕಾರಿಯವನಿಗೆ ಮಾರಾಟ ಮಾಡಿದರೆ ತರಕಾರಿಯ ಬೆಲೆ, ಅಮೂಲ್ಯವಾದ ವಜ್ರಕ್ಕೆ ಹೋಲಿಸಿದರೆ ಬೆಲೆ ಕಟ್ಟಲಾಗದಷ್ಟು ಅಮೂಲ್ಯ. ಕೈಯಲ್ಲಿರುವ ಕಲ್ಲನ್ನು ಯಾವುದಕ್ಕೆ ಪರಿವರ್ತಿಸಬೇಕೆಂದು ನಿರ್ಧರಿಸ ಬೇಕಾದವರು ನಾವೇ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.