ಕುಡಾಕ್ಕೆ ಭೂಮಿ ನೀಡಿದ ರೈತರಿಗೆ ಬಂಗಾರದ ಬೆಲೆ
Team Udayavani, Dec 25, 2021, 10:26 AM IST
ಕಲಬುರಗಿ: ನಗರದ ಕೋಟನೂರ ಡಿ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ)ಕ್ಕೆ ಭೂಮಿ ನೀಡಿದ ರೈತರಿಗೆ ಪರಿಹಾರ ರೂಪವಾಗಿ ಬಂಗಾರದ ಬೆಲೆ ದೊರಕಿದೆ.
ಕುಡಾ ಸ್ವಾಧೀನಪಡಿಸಿಕೊಂಡ ಕೋಟನೂರ ಡಿ ಗ್ರಾಮದ 150 ಎಕರೆ ಭೂಮಿಗೆ ಚದರ ಅಡಿ ಭೂಮಿಗೆ 195 ರೂ. ಪರಿಹಾರ ನೀಡುವಂತೆ ಇಲ್ಲಿನ ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠ ಮಹತ್ವದ ಆದೇಶ ನೀಡಿದೆ.
ಹೈಕೋರ್ಟ್‌ನ ವಿಭಾಗೀಯ ಪೀಠವು ಪರಿಹಾರ ನಿಗದಿಗೊಳಿಸಿ ಮಹತ್ವದ ತೀರ್ಪು ನೀಡಿದೆ. ಕಲಬುರಗಿ ಹೈಕೋರ್ಟ್ ಪೀಠದ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಆರ್. ದೇವಿದಾಸ್, ನ್ಯಾ| ರಾಜೇಂದ್ರ ಬದಾಮಿಕರ್ ಮಹತ್ವದ ಆದೇಶ ನೀಡಿದ್ದಾರೆ.
ಚದರ ಅಡಿಗೆ 195ರೂ. ದರ ನಿಗದಿಯಾದರೆ ಒಂದು ಎಕರೆಗೆ (43560 ಚದರ ಅಡಿ) 85 ಲಕ್ಷ ರೂ. ಆಗುತ್ತದೆ. ಅಂದರೆ 2007ರಿಂದ ಇಲ್ಲಿವರೆಗಿನ ಬಡ್ಡಿ ಸೇರಿಸಿದರೆ ಎಕರೆಗೆ 3.50 ಕೋಟಿ ರೂ. ಪರಿಹಾರವಾಗುತ್ತದೆ ಎಂದು ಅಂದಾಜಿಸಲಾಗಿದೆ.
ಜಿಲ್ಲೆಯ ಇತಿಹಾಸದಲ್ಲೇ ಇಷ್ಟೊಂದು ಪರಿಹಾರ ಯಾವ ಭೂಮಿಗೆ ದೊರಕಿಲ್ಲ. ಈ ಹಿಂದೆ ಬೀದರ್ ರೈಲು ಮಾರ್ಗಕ್ಕೆ ಆಳಂದ ರಸ್ತೆಯಲ್ಲಿ ಒಂದು ಎಕರೆಗೆ ಒಂದು ಕೋಟಿ ರೂ. ಸಮೀಪ ಪರಿಹಾರ ದೊರಕಿದ್ದೇ ಈ ವರೆಗಿನ ಅತ್ಯಧಿಕ ಪರಿಹಾರವಾಗಿದೆ. ಅಟಲ್ ಬಿಹಾರಿ ವಾಜಪೇಯಿ ಕುಡಾ ಬಡಾವಣೆಗೆ ಒಟ್ಟಾರೆ 15 ರೈತರ 150 ಎಕರೆ ಭೂಮಿಯನ್ನು 2017ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಅಂದಿನ ದಿನದಿಂದ ರೈತರಿಗೆ ಪರಿಹಾರ ನೀಡುವ ದಿನದ ವರೆಗೆ ಬಡ್ಡಿ ಸೇರಿಸಿ ಹಣ ಕೊಡಬೇಕಾಗುತ್ತದೆ. ಬಡ್ಡಿಗೆ ಬಡ್ಡಿ ಸೇರಿದರೆ ಕನಿಷ್ಠ 500 ಕೋಟಿ ರೂ. ಪರಿಹಾರವನ್ನು ರೈತರಿಗೆ ಕೊಡಬೇಕು. ಇಷ್ಟೊಂದು ಹಣವನ್ನು ಕುಡಾ ಹೊಂದಿಸುವುದು ಕಷ್ಟಕರ. ಬಹಳವೆಂದರೆ ಈಗಾಗಲೇ ಹಂಚಿಕೆ ಮಾಡಿದ ನಿವೇಶನದಾರರಿಂದ ಇನ್ನೂ ಸ್ವಲ್ಪ ಹೆಚ್ಚುವರಿ ಹಣ ಪಡೆಯಬಹುದು. ಆದರೆ ಇಷ್ಟೊಂದು ಹಣ ನಿವೇಶನದಾರರಿಂದ ವಸೂಲಿ ಮಾಡುವುದು ಕಷ್ಟ. ಹೀಗಾಗಿ ಪರಿಹಾರ ಕಂಡುಕೊಳ್ಳುವುದು ಕುಡಾದ ಮುಂದಿರುವ ದೊಡ್ಡ ಸವಾಲಾಗಿದೆ.
ತಾವು ನೀಡಿದ ಭೂಮಿಗೆ ತಕ್ಕ ಪರಿಹಾರ ಬೇಕು ಎಂಬುದಾಗಿ ನ್ಯಾಯಾಲಯದಲ್ಲಿ ಕಳೆದ 14 ವರ್ಷಗಳಿಂದ ರೈತರು ಮಾಡುತ್ತಿರುವ ಹೋರಾಟಕ್ಕೆ ಈಗ ಜಯ ಸಿಕ್ಕಂತಾಗಿದೆ. ಆದರೆ ಕುಡಾಗೆ ಭಾರಿ ಪೆಟ್ಟು ಬಿದ್ದಿದೆ. ಕುಸನೂರದ ಕುಡಾ ಬಡಾವಣೆಗೆ ಭೂಮಿ ನೀಡಿದ ರೈತರಿಗೆ ಒಪ್ಪಂದದ ಮೇರೆಗೆ ಎಕರೆಗೆ 48 ಲಕ್ಷ ರೂ ಪರಿಹಾರ ನೀಡಿದ್ದರೆ ಹಾಗರಗಾ ಬಡಾವಣೆಯನ್ನು 50:50 ಆಧಾರದ ಮೇಲೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಆದರೆ ಕುಡಾಗೆ ಅತ್ಯಂತ ಪ್ರತಿಷ್ಠೆ ಹಾಗೂ ದುಬಾರಿಯಾಗಿದ್ದೇ ಈ ಕೋಟನೂರ ಬಡಾವಣೆ. ಕುಡಾದ ಪರವಾಗಿ ಎಎಜಿ ಆರ್. ಸುಬ್ರಹ್ಮಣ್ಯ, ಅಮೀತ್ ಕುಮಾರ ದೇಶಪಾಂಡೆ, ಶಿವಕುಮಾರ ಟೆಂಗಳಿ ವಾದಿಸಿದರೆ ರೈತರ ಪರವಾಗಿ ಶಿವಾನಂದ ಪಾಟೀಲ ವಾದಿಸಿದ್ದರು.
ಇದನ್ನೂ ಓದಿ:ಚಾರ್ಮಾಡಿ ಘಾಟ್: ಬಸ್ ನಿರ್ವಾಹಕ ಹೃದಯಾಘಾತದಿಂದ ಸಾವು
ಮತ್ತೆ ಹಣ ತುಂಬಿ ಎಂದರೆ ಹೇಗೆ?
ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ 150 ಎಕರೆ ಭೂಮಿಯಲ್ಲಿ ಅಂದಾಜು 200 ನಿವೇಶನಗಳ ಪೈಕಿ ನಿವೇಶನ ಲಾಟರಿ ಮೂಲಕ ಹಂಚಿಕೆ ಮಾಡಲಾಗಿದೆ. ನಿವೇಶನ ಪಡೆದವರು ಕುಡಾಗೆ ದುಡ್ಡು ತುಂಬಿದ್ದಾರೆ. ಆದರೆ ಈಗ ತುಂಬಲಾಗಿರುವಷ್ಟೇ, ಇಲ್ಲವೇ ಅದಕ್ಕಿಂತ ಹೆಚ್ಚಿನ ಮೊತ್ತ ತುಂಬು ಎಂದರೆ ಯಾರಿಂದಲೂ ಸಾಧ್ಯವಿಲ್ಲ. ಹೈಕೋರ್ಟ್ ಆದೇಶದಿಂದ ನಿವೇಶನದಾರರು ಆತಂಕಕ್ಕೆ ಒಳಗಾಗಿದ್ದಾರೆ. ಕಷ್ಟಪಟ್ಟು ಈಗಾಗಲೇ ಹಣ ತುಂಬಲಾಗಿದೆ. ಮನೆ ಕಟ್ಟಬೇಕು ಎಂದಿದ್ದೆವು. ಆದರೆ ನಿವೇಶನಕ್ಕೆ ಮತ್ತಷ್ಟು ಹಣ ತುಂಬಿ ಎಂದರೆ ಎಲ್ಲಿಗೆ ಹೋಗಬೇಕು. ತಮ್ಮ ಮೇಲೆ ಮತ್ತಷ್ಟು ಭಾರ ಬಿದ್ದರೆ ಸಹಿಸಿಕೊಳ್ಳಲು ಆಗುವುದಿಲ್ಲ. ರೈಲ್ವೆ ಮಾರ್ಗ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಬೇಕಾಗುವ ಭೂಮಿಗೆ ಸರ್ಕಾರವೇ ಪರಿಹಾರ ನೀಡುತ್ತದೆ. ಆದರೆ ಸಂಸ್ಥೆಯೊಂದು ಇಷ್ಟು ಪರಿಹಾರ ನೀಡುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ.
ಹೈಕೋರ್ಟ್ ನೀಡಿರುವ ತೀರ್ಪಿನ ಪ್ರತಿ ಕುಡಾಗೆ ಇನ್ನೂ ಬಂದಿಲ್ಲ. ಆದರೆ ಆದೇಶ ಗೊತ್ತಾಗಿದೆ. ಮೇಲ್ಮನವಿ ಹೋಗುವುದರ ಕುರಿತು ಹಿರಿಯ ನ್ಯಾಯವಾದಿಗಳೊಂದಿಗೆ ಚರ್ಚಿಸಲಾಗುವುದು. ಒಟ್ಟಾರೆ ವ್ಯಾಪಕವಾಗಿ ಕಾನೂನಾತ್ಮಕ ಸಲಹೆ ಪಡೆದು ದೃಢ ಹೆಜ್ಜೆ ಇಡಲಾಗುವುದು. ನ್ಯಾಯಾಲಯ ಆದೇಶದಿಂದ ಕುಡಾ ಹಾಗೂ ನಿವೇಶನದಾರರ ಮೇಲೆ ಹೆಚ್ಚಿನ ಭಾರ ಬೀಳುತ್ತದೆ. -ದಯಾಘನ್ ಧಾರವಾಡಕರ್, ಅಧ್ಯಕ್ಷ, ಕುಡಾ
ಭೂಮಿ ನೀಡಿದ ತಮಗೆ ಸೂಕ್ತ ಪರಿಹಾರ ನೀಡುವಂತೆ 14 ವರ್ಷದಿಂದ ನಡೆಸಲಾಗುತ್ತಿರುವ ಹೋರಾಟಕ್ಕೆ ನ್ಯಾಯ ಸಿಕ್ಕಂತಾಗಿದೆ. ಕಾನೂನು ಹೋರಾಟದಲ್ಲಿ ಜಯ ದೊರಕಿದೆ. -ಶಿವರಾಜ ಕೋಟನೂರ ಭೂಮಿ ನೀಡಿದ ರೈತ
ಚದರ ಅಡಿಗೆ 196 ರೂ. ಪರಿಹಾರ ನಿಗದಿ ಮಾಡಿ ಹೊರಡಿಸಲಾದ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಜತೆಗೆ ರಿಮ್ಯಾಂಡ್ ಬ್ಯಾಕ್ ಹೋಗಿ ವಾಸ್ತವ ಸ್ಥಿತಿ ಮನವರಿಕೆ ಮಾಡಲಾಗುವುದು. ಆದೇಶದ ಅನ್ವಯ ಪರಿಹಾರ ನೀಡುವುದು ಕಷ್ಟಸಾಧ್ಯ. ಮುಖ್ಯವಾಗಿ ಭೂಮಿ ನೀಡಿದ ರೈತರೊಂದಿಗೂ ಸಮಾಲೋಚನೆ ನಡೆಸಲಾಗುವುದು. 50:50 ಸೂತ್ರ ಎಲ್ಲದಕ್ಕೂ ಪರಿಹಾರವಾಗಿದೆ. -ಎಂ. ರಾಚಪ್ಪ ಆಯುಕ್ತರು,ಕುಡಾ
-ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Editorial: ಗಿಫ್ಟ್ ಡೀಡ್: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
ಪಟ್ನಾದಲ್ಲಿ ಸುಮಾರು 500 ವರ್ಷಗಳ ಹಿಂದಿನ ದೇಗುಲ ಪತ್ತೆ
ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗಳ ದರವೂ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.