ಸಾರ್ವಜನಿಕ ಗ್ರಂಥಾಲಯ ಈಗ ಸ್ಮಾರ್ಟ್‌

Team Udayavani, May 2, 2020, 5:25 AM IST

ಸಾರ್ವಜನಿಕ ಗ್ರಂಥಾಲಯ ಈಗ ಸ್ಮಾರ್ಟ್‌

ಉಡುಪಿ: ಲಾಕ್‌ಡೌನ್‌ನಿಂದಾಗಿ ಎಲ್ಲ ಕೆಲಸ ಕಾರ್ಯಗಳು ಇ-ತಂತ್ರಜ್ಞಾನದ ಮೂಲಕ ನಡೆಯುತ್ತಿವೆ. ಗ್ರಂಥಾಲಯವೂ ಮುಚ್ಚಿರುವುದ ರಿಂದ ಸಾರ್ವಜನಿಕರು ಸಹಿತ ವಿದ್ಯಾರ್ಥಿಗಳಿಗೆ ಅನು ಕೂಲವಾಗಲು ಇ -ಲೈಬ್ರರಿಗೆ ಒತ್ತು ನೀಡಲಾಗಿದೆ.

ಇ-ಲೈಬ್ರರಿಯ ಮೂಲಕ ಸಾವಿರಾರು ಪಠ್ಯ ವಿಷಯ, ಲ್ಯಾಬ್‌ಗಳ ಆಡಿಯೋ ವಿಡಿಯೋ, ಜರ್ನಲ್‌ ಮೊದಲಾದ ಸೌಲಭ್ಯ ಸಿಗುತ್ತಿವೆ. ಹೆಚ್ಚಿನ ವಿದ್ಯಾರ್ಥಿಗಳು ಈ ಸರಕಾರಿ ಇ-ಲೈಬ್ರರಿ ಆ್ಯಪ್‌ ಮತ್ತು ವೆಬ್‌ಸೈಟ್‌ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ.

ಕರ್ನಾಟಕ ಡಿಜಿಟಲ್‌ ಪಬ್ಲಿಕ್‌ ಲೈಬ್ರರಿ ಎ. 29ರ ವರದಿ ಪ್ರಕಾರ ಈಗಾಗಲೇ ರಾಜ್ಯದಲ್ಲಿ 89,239 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ದ.ಕ.ದಲ್ಲಿ 1,807 ಮತ್ತು ಉಡುಪಿ ಜಿಲ್ಲೆಯಲ್ಲಿ 605 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ನೋಂದಣಿ ಹೇಗೆ?
www.karnatakadigitalpubliclibrary.org ಮೂಲಕ ಡಿಪಾರ್ಟ್‌ಮೆಂಟ್‌ ಆಫ್ ಪಬ್ಲಿಕ್‌ ಲೈಬ್ರರಿ ಪೇಜ್‌ಗೆ ಹೋಗಬೇಕು. ಅಲ್ಲಿ ಲಾಗಿನ್‌ ಅಥವಾ ರಿಜಿಸ್ಟರ್‌ ಬಟನ್‌ ಕ್ಲಿಕ್‌ ಮಾಡಬೇಕು. ಕ್ರಿಯೇಟ್‌ ನ್ಯೂ ಆಯ್ಕೆ ಮಾಡಿ, ಹೆಸರು ಮೊಬೈಲ್‌ ಸಂಖ್ಯೆ, ಇ-ಮೇಲ್‌ ಐಡಿ ಮತ್ತು ರಾಜ್ಯದ ವಿವಿಧ ವ್ಯಾಪ್ತಿಯ ಗ್ರಂಥಾಲಯಗಳಲ್ಲಿ ನಮ್ಮ ಜಿಲ್ಲೆಯ ಗ್ರಂಥಾಲಯವನ್ನು ಆಯ್ಕೆ ಮಾಡಿ ಲಾಗಿನ್‌ ಆಗಬೇಕು. ಅನಂತರ ನಾವು ನೀಡಿದ ನಂಬರ್‌ಗೆ ಒಟಿಪಿ ಬಂದು ಬಳಿಕ ಪಾಸ್‌ವರ್ಡ್‌ ಹಾಕಿದಾಗ ಲಾಗಿನ್‌ ಆಗುತ್ತದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲೂ ಇ-ಸಾರ್ವಜನಿಕ ಗ್ರಂಥಾಲಯ ಲಭ್ಯವಿದ್ದು ಅದನ್ನು ನೇರವಾಗಿ ಡೌನ್‌ಲೋಡ್‌ ಮಾಡಬಹುದಾಗಿದೆ.

ಸಾವಿರಾರು ಆಯ್ಕೆ
35,500 ಇ-ಪುಸ್ತಕ, 4,800 ವಿಡಿಯೋ ಮಾದರಿಯ ಲ್ಯಾಬ್‌, ಇತರ ಪಠ್ಯ ವಿಷಯ, 59,980 ಜರ್ನಲ್‌, 1,112 ಕಿಡ್‌ ಜೋನ್‌ಗಳ ಮಾಹಿತಿಗಳ ಭಂಡಾರ ಲಭ್ಯವಿದೆ.

ಆರ್ಟ್‌ ಆ್ಯಂಡ್‌ ಹ್ಯುಮಾನಿಟಿ ಸಂಬಂಧಿಸಿದಂತೆ ಸಮಾಜಶಾಸ್ತ್ರ, ಇತಿಹಾಸ, ಮನಃಶಾಸ್ತ್ರ, ರಾಜ್ಯಶಾಸ್ತ್ರ, ಲೀಗಲ್‌ ಸ್ಟಡೀಸ್‌, ಪತ್ರಿಕೋದ್ಯಮ ವಿಷಯಗಳು, ಕ್ಲಾಸಿಕ್‌ ಆ್ಯಂಡ್‌ ಲಿಟರೇಚರ್‌ನಲ್ಲಿ ಪ್ರಬಂಧ, ಕಾದಂಬರಿ, ಸಾಹಿತ್ಯ ಕೃತಿ, ವಿಮರ್ಶೆ, ವ್ಯಾಕರಣಗಳು ಲಭ್ಯವಿವೆ.

ಕಾಮರ್ಸ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ನಲ್ಲಿ ಬ್ಯಾಂಕಿಂಗ್‌, ಮಾರ್ಕೆಟ್‌ -ಮ್ಯಾನೇಜ್‌ಮೆಂಟ್‌, ಇನ್ಶೂರೆನ್ಸ್‌, ಇಕಾನಮಿ, ಫಿನಾನ್ಶಿಯಲ್‌, ಅಕೌಂಟ್‌ ಮೊದಲಾದ ವಿಷಯ. ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿಯಲ್ಲಿ ಕೆಮಿಸ್ಟ್ರಿ, ಫಿಸಿಕ್ಸ್‌, ಮ್ಯಾಥಮ್ಯಾಟಿಕ್ಸ್‌, ಮೆಡಿಸಿನ್‌, ಹೆಲ್ತ್‌ ಸೈನ್ಸ್‌, ಕಂಪ್ಯೂಟರ್‌ ಸೈನ್ಸ್‌, ಐಟಿ ವಿಷಯ ಲಭ್ಯ.

ಉಳಿದಂತೆ ಸಿಮ್ಯುಲೇಶನ್‌ ಲ್ಯಾಬ್‌, ಮ್ನಾಗಜಿನ್‌, ನ್ಯೂಸ್‌ ಪೇಪರ್‌ಗಳು ಹೀಗೆ ಸಾವಿರಕ್ಕೂ ಹೆಚ್ಚಿನ ಪುಸ್ತಕಗಳು, ವಿಡಿಯೋ ರೀತಿಯ ಮಾಹಿತಿಗಳು ಲಭ್ಯವಿವೆ. ಜತೆಗೆ ಸಿಇಟಿ, ನೆಟ್‌, ಯುಪಿಎಸ್‌ಸಿ, ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಯ ವಿವಿಧ ಪುಸ್ತಕಗಳು, ಹಳೆಯ ಪ್ರಶ್ನೆಪತ್ರಿಕೆಗಳು ಲಭ್ಯವಿವೆ.ಇಂಗ್ಲಿಷ್‌ ಹಿಂದಿ, ಕನ್ನಡ, ಮರಾಠಿ, ಸಂಸ್ಕೃತ, ತಮಿಳು, ತೆಲುಗು ಉರ್ದು ಹಿಂದಿ ಹೀಗೆ 9 ಬಗೆಯ ಭಾಷೆಗಳ ಆಯ್ಕೆ ಇದೆ.

ಉತ್ತಮ ಅವಕಾಶ
ಈ ಲಾಕ್‌ಡೌನ್‌ ಸಮಯದಲ್ಲೂ ಇ-ಲೈಬ್ರರಿ ಬಳಸಿ ಬೇಕಾದ ಮಾಹಿತಿಯನ್ನು ಪಡೆಯಲು ಸಾಧ್ಯವಿದೆ. ಪರೀಕ್ಷೆಗೆ ತಯಾರಾಗುತ್ತಿರುವ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಪುಸ್ತಕಗಳು ಲಭ್ಯವಿದ್ದು, ಪ್ರಯೋಜನ ಪಡೆದುಕೊಳ್ಳಬಹುದು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವವರಿಗೂ ಬೇಕಾದ ಪುಸ್ತಕಗಳು ಲಭ್ಯವಿವೆ. ಮೊಬೈಲ್‌ ಮೂಲಕ ಸುಲಭವಾಗಿ ಎಲ್ಲ ಮಾಹಿತಿ ಪಡೆಯಬಹುದು.
-ನಳಿನಿ ಜಿ.,
ಮುಖ್ಯ ಗ್ರಂಥಾಲಯ ಅಧಿಕಾರಿ,
ಜಿಲ್ಲಾ ಕೇಂದ್ರ ಗ್ರಂಥಾಲಯ, ಉಡುಪಿ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

court

Painting; ಅಶ್ಲೀ*ಲತೆಗೆ ಸರಕಾರದ ವಿವರಣೆ ಏನು?: ಹೈಕೋರ್ಟ್‌ ತರಾಟೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kharge (2)

BJP ಟ್ರಿಪಲ್‌ ಎಂಜಿನ್‌ ಸರಕಾರ ಜನರ ಆಹಾರ ಕಸಿಯುತ್ತಿದೆ: ಖರ್ಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: ವೈನ್‌ಶಾಪ್‌ನಲ್ಲಿ ಕಳ್ಳತನ; ಪ್ರಕರಣ ದಾಖಲು

Udupi: ವೈನ್‌ಶಾಪ್‌ನಲ್ಲಿ ಕಳ್ಳತನ; ಪ್ರಕರಣ ದಾಖಲು

Udupi: ನಿಯಮ ಮೀರಿ ಕಾರ್ಯಾಚರಣೆ: ಪರವಾನಿಗೆ ರದ್ದತಿಗೆ ಸೂಚನೆ

Udupi: ನಿಯಮ ಮೀರಿ ಕಾರ್ಯಾಚರಣೆ: ಪರವಾನಿಗೆ ರದ್ದತಿಗೆ ಸೂಚನೆ

Kaup: ಪಾಂಗಾಳ: ಕರು ಅಕ್ರಮ ಸಾಗಾಟ ಪತ್ತೆ

Kaup: ಪಾಂಗಾಳ: ಕರು ಅಕ್ರಮ ಸಾಗಾಟ ಪತ್ತೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

AATISHI (2)

Kejriwal ಮೇಲೆ ಹಲ್ಲೆ: ಆರೋಪ ತಿರಸ್ಕರಿಸಿದ ಬಿಜೆಪಿ

police crime

Dog ಕೊಂ*ದು ಮರಕ್ಕೆ ಕಟ್ಟಿದ ತಾಯಿ-ಮಗನ ಮೇಲೆ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.