ಲಾಕ್‌ಡೌನ್ ಮುಗಿದರೂ ಇಳಿಯದ ಮೀನಿನ ದರ
Team Udayavani, Jun 8, 2020, 5:56 AM IST
ವಿಶೇಷ ವರದಿ- ಮಹಾನಗರ: ಒಂದೆಡೆ ಈ ಬಾರಿಯ ಮೀನುಗಾರಿಕಾ ಋತು ಬಹುತೇಕ ಕೊನೆಗೊಳ್ಳುತ್ತಿದ್ದು, ಇನ್ನೊಂದೆಡೆ ಮೀನಿನ ದರದಲ್ಲಿಯೂ ಭಾರೀ ಏರಿಕೆಯಾಗುತ್ತಿದೆ.
ಲಾಕ್‌ಡೌನ್ ಆರಂಭವಾದ ಅನಂತರ ಮೀನಿನ ಅಲಭ್ಯತೆ ಯಿಂದಾಗಿ ಏರುಗತಿಯಲ್ಲಿದ್ದ ಮೀನಿನ ಬೆಲೆ ಈಗಲೂ ಅದೇ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಲಾಕ್‌ಡೌನ್ ತೆರವಾದ ಅನಂತರ ಹೊಟೇಲ್‌ಗಳು ತೆರೆಯಲ್ಪಟ್ಟಿವೆ. ಇದರಿಂದ ಮೀನಿಗೆ ಬೇಡಿಕೆ ಹೆಚ್ಚುತ್ತಿದೆ. ಜತೆಗೆ ಸದ್ಯ ಕರ್ನಾಟಕ ಕರಾವಳಿಯಲ್ಲಿ ಚಂಡಮಾರುತದಿಂದಾಗಿ ನಾಡ ದೋಣಿ ಮೀನುಗಾರಿಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ತಮಿಳು ನಾಡು, ಕೇರಳ, ಆಂಧ್ರ ಪ್ರದೇಶ ಗಳ ಮೀನು ಕರ್ನಾಟಕ ಕರಾವಳಿಗೆ ಸರಬ ರಾಜಾ ಗುತ್ತಿದೆ. ಅಲ್ಲಿನ ಮೀನನ್ನೇ ಖರೀದಿಸಬೇಕಾದ ಅನಿವಾ ರ್ಯದಿಂದಾಗಿ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ.
ಆಳಸಮುದ್ರ ಮೀನುಗಾರಿಕೆ ಸಂಶಯ
“ಮೀನಿನ ಕೊರತೆ ಇರುವುದರಿಂದ ಬೆಲೆ ಸಹಜ ವಾಗಿಯೇ ಹೆಚ್ಚಾಗಿದೆ. ಆದರೆ, ಒಂದೇ ಸಮನೆ ಏರಿಕೆಯಾಗಿಲ್ಲ. ಕೆಲವು ಕಡೆ ಮೀನು ಇದ್ದರೂ ಜನರ ಕೈಯಲ್ಲಿ ಹಣವಿಲ್ಲದೆ ವ್ಯಾಪಾರವಾಗುತ್ತಿಲ್ಲ. ಈಗ ಚಂಡಮಾರುತದಿಂದಾಗಿ ಸಮುದ್ರದಲ್ಲಿ ಯಾವ ಮೀನುಗಾರಿಕೆಯೂ ನಡೆಯುತ್ತಿಲ್ಲ. ಹೊಳೆಯ ಮೀನು ಹಾಗೂ ತಮಿಳುನಾಡಿನ ಮೀನು ಮಾತ್ರ ದೊರೆಯುತ್ತಿವೆ’ ಎನ್ನುತ್ತಾರೆ ಮೀನು ವ್ಯಾಪಾರಿ ನಿತಿನ್.
ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಮೀನುಗಳ ಬೆಲೆ ಕೆ.ಜಿ.ಯೊಂದಕ್ಕೆ 40ರಿಂದ 50ರೂ.ಗಳಷ್ಟು ಹೆಚ್ಚಾಗಿತ್ತು. ಅಲ್ಲದೆ ಲಾಕ್‌ಡೌನ್ ಸಂದರ್ಭದಲ್ಲಿ 50-60 ರೂ.ಗಳಷ್ಟು ಹೆಚ್ಚಳವಾಗಿತ್ತು. ಸದ್ಯ ಅದು ಇನ್ನೂ ಹೆಚ್ಚ ಳವಾಗಿದೆ.
ಕೋಳಿ ಮಾಂಸ ದರವೂ ಇಳಿದಿಲ್ಲ
ಲಾಕ್‌ಡೌನ್ ಆರಂಭದಿಂದಲೇ ಏರಿಕೆಯಾಗಿರುವ ಕೋಳಿ ಮಾಂಸದ ದರವೂ ಇನ್ನೂ ಕಡಿಮೆಯಾಗಿಲ್ಲ. ಸದ್ಯ ಮಂಗಳೂರು ಮತ್ತು ಸುತ್ತಲಿನ ಪ್ರದೇಶದಲ್ಲಿ ಕೆ.ಜಿ.ಯೊಂದಕ್ಕೆ (ಲೈವ್ ಚಿಕನ್) 175ರಿಂದ 180 ರೂ. ದರವಿದೆ. ಕೋಳಿಯ ಮಾಂಸಕ್ಕೆ (ಸ್ಕಿನ್ ಔಟ್/ ಫೆದರ್ ಔಟ್) 250-290 ರೂ.ಗಳಿವೆ. ಕೋಳಿ ಫಾರಂಗಳಿಗೆ ಫೀಡ್ಸ್, ಕೆಲಸದಾಳುಗಳು ಹಾಗೂ ನೀರಿನ ಕೊರತೆಯಿಂದಾಗಿ ಬೆಲೆ ಇಳಿಕೆಯಾಗಿಲ್ಲ. ಸದ್ಯ ಕೋಳಿಗಳ ಕೊರತೆಯೂ ಇದೆ. ಜು. 15ರ ಅನಂತರ ಬೆಲೆ ಇಳಿಕೆ ನಿರೀಕ್ಷಿಸಬಹುದು ಎಂದು ಮಂಗಳೂರಿನ ಪ್ರಮುಖ ಕೋಳಿ ವ್ಯಾಪಾರಿಯೋರ್ವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತೀರ್ಮಾನವಾಗಿಲ್ಲ
ಸಾಮಾನ್ಯವಾಗಿ ಮೀನಿನ ಲಭ್ಯತೆಗೆ ತಕ್ಕಂತೆ ಮೀನಿನ ದರ ನಿಗದಿಯಾಗುತ್ತದೆ. ಇದರ ಮೇಲೆ ಇಲಾಖೆಗೆ ನಿಯಂತ್ರಣವಿರುವುದಿಲ್ಲ. ಕೋವಿಡ್-19 ಲಾಕ್‌ಡೌನ್ ಆರಂಭದಲ್ಲೇ ಕರ್ನಾಟಕ ಕರಾವಳಿಯಲ್ಲಿ ನಿಷೇಧಿಸಲ್ಪಟ್ಟ ಆಳಸಮುದ್ರ ಮೀನುಗಾರಿಕೆಗೆ ಅನುಮತಿ ನೀಡುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.
-ಪಾರ್ಶ್ವನಾಥ್ ದ.ಕ. ಜಿಲ್ಲಾ ಉಪನಿರ್ದೇಶಕ, ಮೀನುಗಾರಿಕಾ ಇಲಾಖೆ.
ಪ್ರಸ್ತುತ ಮಂಗಳೂರು ಮಹಾನಗರ ಮತ್ತು ಸುತ್ತಮುತ್ತ ಹಾಗೂ ಜಿಲ್ಲೆಯ ವಿವಿಧೆಡೆ ಇರುವ ಮೀನಿನ ದರ ಈ ಕೆಳಗಿನಂತಿದೆ. ಆದರೆ ಮೀನಿನ ದರದಲ್ಲಿ ಜಿಲ್ಲೆಯಲ್ಲಿಯೇ ಒಂದು ಭಾಗದಿಂದ ಇನ್ನೊಂದು ಭಾಗದಲ್ಲಿ ಸ್ವಲ್ಪ ಪ್ರಮಾಣದ ವ್ಯತ್ಯಾಸವಿರುತ್ತದೆ.
ಮೀನು ದರ (ಕೆ.ಜಿ.ಗೆ ರೂ.ಗಳಲ್ಲಿ)
ಬಂಗುಡೆ 300-350
ಬೈಗೆ (ಬೂತಾಯಿ) 250-260
ಪಾಂಪ್ಲೆಟ್ 400-500
ನಂಗ್ (ಸಣ್ಣದು) 200-220
ನಂಗ್ (ದೊಡ್ಡದು) 300-350
ಮಾಂಜಿ (ಸಣ್ಣದು) 400-420
ಬೊಳಿಂಜಿರ್ 200
ಮಿಕ್ಸ್ ಮೀನು 100
ಸಿಗಡಿ 180
ಸಮುದ್ರದ ಸಿಗಡಿ 350
ಕಾಣೆ (ಸಣ್ಣದು) 800-900
ಕಾಣೆ (ದೊಡ್ಡದು) 1,000-1,100
ಹೊಳೆ ಮೀನು
ಕಾಣೆ (ದೊಡ್ಡದು) 1,100
ನಂಗ್ (ದೊಡ್ಡದು) 300
ಪಯ 500
ಕಲ್‌ದೆಂಜಿ 800-900
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.