ರಿಯಲ್‌ ಎಸ್ಟೇಟ್‌ ಉದ್ಯಮಕ್ಕಿದೆ ಉಜ್ವಲ ಭವಿಷ್ಯ

ಉದ್ಯಮದ ಒಳಿತಿಗೆ ಪೂರಕವಾಗಲಿವೆ ಸರಕಾರದ ಕ್ರಮಗಳು

Team Udayavani, Jun 28, 2020, 2:00 AM IST

ರಿಯಲ್‌ ಎಸ್ಟೇಟ್‌ ಉದ್ಯಮಕ್ಕಿದೆ ಉಜ್ವಲ ಭವಿಷ್ಯ

ಹುಬ್ಬಳ್ಳಿ: ವಿದೇಶಗಳಲ್ಲಿ ನೆಲೆಸಿದ ಭಾರತಿಯರು ಕೋವಿಡ್‌-19 ಕಾರಣದಿಂದ ತಮ್ಮ ಊರುಗಳಿಗೆ ಮರಳುತ್ತಿದ್ದು, ತಮ್ಮ ಊರಿನಲ್ಲಿಯೇ ಯಾವುದಾದರೂ ಉದ್ಯೋಗ, ಉದ್ಯಮ ಮಾಡಲು ಮುಂದಾಗುವುದರಿಂದ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಉಜ್ವಲ ಭವಿಷ್ಯವಿದೆ ಎಂದು ಶ್ರೀದತ್ತ ಇನ್‌ಫ್ರಾಟೆಕ್‌ ಪ್ರೈವೇಟ್‌ ಲಿಮಿಟೆಡ್‌ನ‌ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ ಜೋಶಿ ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್‌-19 ಸಂಕಷ್ಟ ಹಾಗೂ ಲಾಕ್‌ಡೌನ್‌ನಿಂದ ಉಂಟಾಗಿರುವ ಸ್ಥಿತಿ, ಆರ್ಥಿಕ ಸಂಕಷ್ಟ ಸ್ಥಿತಿ ನಡುವೆಯೂ ರಿಯಲ್‌ ಎಸ್ಟೇಟ್‌ಗೆ ಭವಿಷ್ಯದಲ್ಲಿರುವ ಅವಕಾಶ-ಬೆಳವಣಿಗೆ, ಚೀನಾ ಉತ್ಪನ್ನಗಳಿಗೆ ಪರ್ಯಾಯವಾಗಿ ದೇಶೀಯವಾಗಿಯೇ ಉತ್ಪನ್ನಗಳ ತಯಾರಿಗೆ ಆದ್ಯತೆ ಕುರಿತಾಗಿ “ಉದಯವಾಣಿ’ಯೊಂದಿಗೆ ತಮ್ಮ ಮನದಾಳದ ಅನಿಸಿಕೆ ಹಂಚಿಕೊಂಡಿದ್ದಾರೆ.

ಕೋವಿಡ್‌-19 ಅನಿವಾಸಿ ಭಾರತೀಯರಿಗೆ ತಮ್ಮ ತಾಯ್ನಾಡನ್ನು ನೆನಪಿಸಿದೆ. ತಮ್ಮ ಊರಿಗೆ ಹೋಗಿ ಅಲ್ಲಿಯೇ ನೆಲೆಸಬೇಕೆಂಬ ಆಸೆ ಮೂಡಿಸಿದೆ. ಲಕ್ಷಾಂತರ ಜನರು ತಮ್ಮ ಊರುಗಳಿಗೆ ಮರಳುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಇಲ್ಲಿಯೇ ಉಳಿಯುತ್ತಾರೆ. ಇಲ್ಲೇ ನೆಲೆಸಲು ಮುಂದಾಗುವುದರಿಂದ ಕಟ್ಟಡ ನಿರ್ಮಾಣ ಕ್ಷೇತ್ರ ನಿಸ್ಸಂಶಯವಾಗಿ ಬೆಳೆಯಲಿದೆ. ನಗರಗಳು ಬೆಳೆಯುವುದು ಅನಿವಾರ್ಯವಾಗಲಿದೆ. ನಗರ ಬೆಳೆದಂತೆ ಮೂಲಭೂತ ಸೌಲಭ್ಯಗಳೂ ಲಭ್ಯವಾಗಬೇಕಾಗುತ್ತದೆ.

ಹುಬ್ಬಳ್ಳಿ ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ನಗರವಾಗಿದ್ದು, ನಗರದ ಬೆಳವಣಿಗೆ ಇನ್ನಷ್ಟು ತ್ವರಿತಗೊಳ್ಳಲಿದೆ. ಉತ್ತಮ ಸಾರಿಗೆ ವ್ಯವಸ್ಥೆ, ವಿಶಾಲ ರಸ್ತೆಗಳು, ಅಗತ್ಯ ಸೌಲಭ್ಯಗಳು ಸಿಗುವುದರಿಂದ ಹುಬ್ಬಳ್ಳಿಯಲ್ಲಿಯೇ ನೆಲೆಯೂರಲು ಬಯಸುವವರ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ಸುತ್ತಮುತ್ತಲಿನ ಗ್ರಾಮಗಳು ನಗರದ ಭಾಗವಾಗುತ್ತಿವೆ.

ಭೂ ಕಾಯ್ದೆ ತಿದ್ದುಪಡಿಗೊಂಡಿರುವುದರಿಂದ ರೈತರಲ್ಲದವರು ಕೃಷಿಭೂಮಿಯನ್ನು ಕೊಳ್ಳಲು ಮುಂದಾಗುವುದರಿಂದ ಭೂಮಿ ಮಾಲಿಕರಿಗೆ ದೊಡ್ಡ ಮೊತ್ತ ಸಿಗಲಿದೆ. ಭೂಮಿಯ ಮೌಲ್ಯ ಇನ್ನಷ್ಟು ಹೆಚ್ಚಾಗಲಿದೆ. ಅಪಾರ್ಟ್‌ಮೆಂಟ್‌ಗಳ ಸ್ಟಾಂಪ್‌ ಡ್ಯುಟಿ ಶುಲ್ಕ ಕಡಿಮೆ ಮಾಡಲಾಗಿದೆ. ಸರಕಾರ ಕೂಡ ರಿಯಲ್‌ ಎಸ್ಟೇಟ್‌ ಉದ್ಯಮ ಪುನಶ್ಚೇತನಗೊಳಿಸುವ ದಿಸೆಯಲ್ಲಿ ಕಾರ್ಯೋನ್ಮುಖವಾಗಿದೆ. ಸರಕಾರದ ಕ್ರಮಗಳು ಉದ್ಯಮದ ಒಳಿತಿಗೆ ಖಂಡಿತಾ ಪೂರಕವಾಗಲಿವೆ.

ಸಾಮಾಜಿಕ ಅಂತರ ಕಾಪಾಡಬೇಕಿರುವುದು ಮನೆಯ ವಾಸ್ತವ್ಯದ ಅವಧಿ ಹೆಚ್ಚಿಸಲಿದೆ. ವರ್ಕ್‌ ಫ್ರಾಮ್‌ ಹೋಮ್‌ ಪರಿಕಲ್ಪನೆ ಬರುತ್ತಿದೆ. ಜನರು ಹೊಟೇಲ್‌ಗ‌ಳಿಗೆ, ರೆಸ್ಟೊರೆಂಟ್‌ಗಳಿಗೆ ಹೋಗುವ ಪರಿಪಾಠ ಕಡಿಮೆಯಾಗುತ್ತಿದೆ. ಚಿತ್ರಮಂದಿರಗಳಿಗೆ ಹೋಗದೆ ಮನೆಯಲ್ಲೇ ಟಿವಿ, ಮೊಬೈಲ್‌ ಮೂಲಕ ಮನರಂಜನೆ ಪಡೆಯಲು ಆಸಕ್ತಿ ತೋರುತ್ತಿದ್ದಾರೆ.

ವಿದೇಶಗಳಲ್ಲಿ ಉದ್ಯೋಗ ಮಾಡಿದರೆ ಮಾತ್ರ ಹಣ ಗಳಿಸಲು ಸಾಧ್ಯ ಎಂಬ ಮನೋಭಾವ ಬದಲಾಗುತ್ತಿದೆ. ಭಾರತವೂ ಕಡಿಮೆಯಿಲ್ಲ ಎಂಬ ವಿಶ್ವಾಸ ಅನಿವಾಸಿ ಭಾರತೀಯರಲ್ಲಿ ಮೂಡುತ್ತಿದೆ. ನಮ್ಮ ದೇಶದಲ್ಲೂ ಅಗಾಧ ಅವಕಾಶಗಳು ಸೃಷ್ಟಿಯಾಗುತ್ತಿರುವುದರಿಂದ ಹೊಸ ಉದ್ಯಮ ಆರಂಭಿಸಲು ಮುಂದಾಗುತ್ತಿದ್ದಾರೆ.

ಲಾಕ್‌ಡೌನ್‌ ಕಾರಣದಿಂದ ಎಷ್ಟೋ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಎಲ್ಲರಿಗೂ ಉದ್ಯೋಗ ಸಿಗುವ ಸಾಧ್ಯತೆಯಿಲ್ಲ. ಆದ್ದರಿಂದ ಸ್ವ ಉದ್ಯೋಗ ಆರಂಭಿಸಲು ಇದು ಸಕಾಲವಾಗಿದೆ. ಉದ್ಯಮಶೀಲತೆ ಇದ್ದರೆ ಅಭಿವೃದ್ಧಿಗೊಳ್ಳಲು ಸಾಧ್ಯ. ಜೀವನಪೂರ್ತಿ ಒಂದು ಕಂಪನಿಗಾಗಿ ದುಡಿಯುವವರು ಯಶಸ್ಸು ಗಳಿಸಲು ಸಾಧ್ಯವಾಗಲ್ಲ. ಕೆಲಸದಲ್ಲಿ ಮೇಲು-ಕೀಳೆಂಬ ಭೇದ ಸಲ್ಲದು. ಯುವಕರು ಯಾವುದಾದರೂ ಆಗಲಿ ಕಷ್ಟಪಟ್ಟು, ಪ್ರಾಮಾಣಿಕತೆಯಿಂದ ದುಡಿಯುವುದನ್ನು ರೂಢಿಸಿಕೊಳ್ಳಬೇಕು.

ಅವಕಾಶ ಸದ್ಬಳಕೆ ಮಾಡಿಕೊಂಡರೆ ಮಾತ್ರ ಚೀನಾದೊಂದಿಗೆ ಪೈಪೋಟಿ ನಡೆಸಲು ಸಾಧ್ಯವಾಗುತ್ತದೆ. ಎಲ್ಲದಕ್ಕೂ ಸರಕಾರಗಳನ್ನು ಅವಲಂಬಿಸದೆ ನಮ್ಮ ಏಳ್ಗೆಗೆ ನಾವೇ ಯೋಜನೆ ರೂಪಿಸಿಕೊಳ್ಳಬೇಕು.ಆರ್ಥಿಕ ಭದ್ರತೆ ಕಾರಣದಿಂದ ಸರಕಾರಿ ಉದ್ಯೋಗಕ್ಕೆ ಸೀಮಿತಗೊಳ್ಳುವುದು ಸರಿಯಲ್ಲ. ಎಲ್ಲರಿಗೂ ಸರಕಾರಿ ಉದ್ಯೋಗಗಳು ಸಿಗುವುದು ಸಾಧ್ಯವಿಲ್ಲ. ಸ್ವಂತ ಉದ್ಯೋಗದಿಂದ ಮಾತ್ರ ಸಾಧನೆ ಮಾಡಬಹುದೆಂಬ ನಂಬಿಕೆ ಯುವಜನರಲ್ಲಿ ಮೂಡಬೇಕಿದೆ. ಚೀನಾದ ಕಾಯಕ ಸಂಸ್ಕೃತಿಯನ್ನು ನಾವು ರೂಢಿಸಿಕೊಳ್ಳದಿದ್ದರೆ ನಾವು ಅವರೊಂದಿಗೆ ಸೆಣಸುವುದು ಕಷ್ಟವಾಗುತ್ತದೆ.

ಭಾರತೀಯರು ಆಚರಿಸುವ ದೀಪಾವಳಿ, ಗಣೇಶೋತ್ಸವ ಮೊದಲಾದ ಹಬ್ಬಗಳಿಗಾಗಿ ಚೀನಾದಲ್ಲಿ ಉತ್ಪಾದನೆಯಾಗುವ ಸಾಮಗ್ರಿಗಳನ್ನು ಖರೀದಿಸುವುದನ್ನು ನಿಲ್ಲಿಸಬೇಕಲ್ಲದೇ ಸ್ಥಳಿಯ ಉತ್ಪಾದನೆಗೆ ಹೆಚ್ಚು ಆದ್ಯತೆ ಸಿಗಬೇಕಿದೆ. ಚೀನಾದಿಂದ ಬರುವ ಉತ್ಪನ್ನಗಳನ್ನು ಸ್ಥಳಿಯವಾಗಿ ಉತ್ಪಾದಿಸಲು ಮುಂದಾಗಬೇಕು. ಆಗ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗಲಿದೆ, ಭಾರತ ವಿಶ್ವಗುರುವಾಗಲಿದೆ ಎಂದು ಪ್ರಕಾಶ ಜೋಶಿ ಹೇಳುತ್ತಾರೆ.

-ಅನಿವಾಸಿ ಭಾರತೀಯರಿಗೆ ತಾಯ್ನಾಡು ನೆನಪಿಸಿದ ಕೋವಿಡ್‌-19
-ತಮ್ಮೂರುಗಳಿಗೆ ಮರಳುತ್ತಿದ್ದಾರೆ ಜನ
-ಹೆಚ್ಚುತ್ತಿದೆ ಭೂಮಿ ಮೌಲ್ಯ
-ದೇಶದಲ್ಲೂ ಅಗಾಧ ಅವಕಾಶಗಳ ಸೃಷ್ಟಿ
-ಹೊಸ ಉದ್ಯಮಕ್ಕೆ ಚಿಂತನೆ

ಶ್ರೀ ದತ್ತಾ ಇನ್‌ಫ್ರಾಟೆಕ್‌ ಪ್ರೈವೇಟ್‌ ಲಿಮಿಟೆಡ್‌, ಬಿಲ್ಡರ್ ಡೆವಲಪರ್ಸ್‌ ಆ್ಯಂಡ್‌ ಕಾಂಟ್ರಾಕ್ಟರ್ಸ್‌, 12, ದತ್ತ ಪ್ಲಾಜಾ, ಮಂಜುನಾಥ ನಗರ ಕ್ರಾಸ್‌, ಗೋಕುಲ ರಸ್ತೆ, ಹುಬ್ಬಳ್ಳಿ-580030, ದೂರವಾಣಿ: 0836-2331013.

ಟಾಪ್ ನ್ಯೂಸ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

BJP ಡಬಲ್‌ ಗೇಮ್‌; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು

BJP ಡಬಲ್‌ ಗೇಮ್‌; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು

Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್

Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್

siddaramaiah

Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ

siddaramaiah

Hubli: ಜನರ ದಿಕ್ಕು ತಪ್ಪಿಸಲು ಬಿಜೆಪಿಯಿಂದ ವಕ್ಫ್‌ ಹೋರಾಟ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

1

Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.