ಕುಶಲವೇ ಕ್ಷೇಮವೇ: ಪಿ.ಜಿ.ಯಲ್ಲಿ ಉಳಿದ ಮಗಳೂ, ಊರಲ್ಲಿ ಇರುವ ಅಮ್ಮನೂ…
Team Udayavani, Apr 22, 2020, 2:47 PM IST
ಸಾಂದರ್ಭಿಕ ಚಿತ್ರ
“ಇನ್ನೊಂದಿನ ಮುಂಚೆ ರಜೆ ಸಿಕ್ಕಿದ್ರೆ ನೀನೂ ಮನೆಗೆ ಬಂದು ಬಿದ್ದಾದಿತ್ತು. ಇದೆಲ್ಲ ಮುಗಿಯೋಕೆ ಇನ್ನೂ ಎಷ್ಟು ಸಮಯ ಬೇಕೋ ಏನೋ…’ ದಿನಾ ರಾತ್ರಿ, ಅಮ್ಮ ಈ ಮಾತು ಹೇಳದೆ ಫೋನ್ ಇಡುವುದೇ ಇಲ್ಲ. ಲಾಕ್‌ಡೌನ್ ಘೋಷಣೆ ಆಗುವ ಹಿಂದಿನ ದಿನದ ತನಕ, ಆಫಿಸ್ ಇದ್ದ ಕಾರಣದಿಂದ ನನಗೆ ಎಲ್ಲರಂತೆ ಊರು ಸೇರಲಾಗಲಿಲ್ಲ. ನಾಳೆ ಇಂದ ವರ್ಕ್ ಫ್ರಮ್ ಹೋಂ ಮಾಡಿ ಅಂತ ಆಫಿಸ್‌ನವರು ಹೇಳುವುದಕ್ಕೂ, ನಾಳೆಯಿಂದ ಮನೆಯಿಂದ ಹೊರಗೆ ಬರಲೇಬೇಡಿ ಅಂತ ಮೋದಿ ಹೇಳುವುದಕ್ಕೂ ಸರೀ ಆಯ್ತು. ಹಾಗಾಗಿ, ನಾನು ಬೆಂಗಳೂರಿನಲ್ಲಿಯೇ, ಅದೂ ಪಿಜಿಯಲ್ಲಿಯೇ ಉಳಿಯುವಂತಾಯ್ತು.
ಲಾಕ್‌ಡೌನ್‌ಗೂ ಒಂದು ವಾರದ ಮುಂಚೆಯೇ ಐಟಿ ಕಂಪನಿಯಲ್ಲಿದ್ದ ಗೆಳತಿಯರೆಲ್ಲಾ ವರ್ಕ್ ಫ್ರಮ್ ಹೋಂ ತಗೊಂಡು ಊರಿಗೆ ಹೋಗಿಬಿಟ್ಟಿದ್ದರು. ಹೊರಡುವ ಮುನ್ನ, “ನೀನೂ ರಜೆ ಕೇಳಿ ಹೊರಟು ಬಿಡು. ಮನೆಯಿಂದಲೇ ಕೆಲಸ ಮಾಡು. ಹೊರಗೆಲ್ಲಾ ಓಡಾಡೋದು ಸೇಫ್ ಅಲ್ಲ…’ ಅಂತ ಹೇಳಿ ಹೋಗಿದ್ದರು. ಪರಿಸ್ಥಿತಿ ಇಷ್ಟೊಂದು ಸೀರಿಯಸ್ ಆಗಿದೆಅಂತ ನನಗಾಗ ಅರಿವಿಗೆ ಬಂದಿರಲಿಲ್ಲ. ಈಗ ನೋಡಿದರೆ, ಹೊರಗೆ ಹೋಗೋದು ಸೇಫ್ ಅಷ್ಟೇ ಅಲ್ಲ, ಲೀಗಲ್ ಕೂಡ ಅಲ್ಲ!
ಛೇ, ಅನಾಯಾಸವಾಗಿ ಸಿಕ್ಕಿದ ರಜೆಯಲ್ಲಿ ಮನೆಗೆ ಹೋಗಲು ಆಗುತ್ತಿಲ್ಲವಲ್ಲ ಅಂತ ಬೇಸರ. ಎಂಟನೇ ತರಗತಿಗೆ ಹಾಸ್ಟೆಲ್ ಸೇರಿದವಳಿಗೆ, ತಿಂಗಳುಗಟ್ಟಲೆ ರಜೆ ಅಂತ ಸಿಕ್ಕೇ ಇರಲಿಲ್ಲ. ಎಸ್ಸೆಸ್ಸೆಲ್ಸಿ ಟ್ಯೂಷನ್, ಪಿಯುಸಿ ಕ್ಲಾಸ್, ಕಾಂಪಿಟಿಟಿವ್ ಎಕ್ಸಾಮ್, ಡಿಗ್ರಿ, ಕೆಲಸ ಅಂತೆಲ್ಲಾ ಜೀವನ ಓಡುತ್ತಲೇ ಇತ್ತು. ಕುರಿ ಮಂದೆಯಲ್ಲಿ ಕುರಿಯಾಗಿ ನಾನೂ ಓಡುತ್ತಲೇ ಇದ್ದೆ. ಆರಾಮಾಗಿ ಹದಿನೈದಿಪ್ಪತ್ತು ದಿನ ಮನೆಯಲ್ಲಿ ಇದ್ದ ನೆನಪೇ ಇಲ್ಲ. ಈಗ ರಜೆ ಸಿಕ್ಕರೂ ಕೋಣೆಯೊಳಗೆ ಬಂಧಿಯಾಗಿ ಇರಬೇಕಾಯ್ತಲ್ಲ ಅನ್ನೋ ಸಂಕಟ ನನ್ನದಾದರೆ, ಊಟ- ತಿಂಡಿಗೆ ಮಗಳು ಏನು ಮಾಡ್ತಾಳ್ಳೋ ಅನ್ನೋ ಸಂಕಟ ಅಮ್ಮನಿಗೆ. “ಸೊಪ್ಪು, ತರಕಾರಿ ಎಲ್ಲ ಸರಿಯಾಗಿ ಸಿಕ್ಕುತ್ತಿಲ್ಲ. ಬೆಳಗ್ಗೆ ಏನು ತಿಂಡಿ ಮಾಡುತ್ತೇವೋ ಅದನ್ನೇ ಮಧ್ಯಾಹ್ನದ ಊಟಕ್ಕೂ ಎತ್ತಿಟ್ಟುಕೊಳ್ಳಿ. ಇಂಥ ಸಮಯದಲ್ಲಿ ನಿಮಗೆಲ್ಲ ಉಳಿಯೋಕೆ ಜಾಗ ಕೊಟ್ಟಿರುವುದೇ ಹೆಚ್ಚು. ಊಟ, ತಿಂಡಿ ಬಗ್ಗೆ ನಮ್ಮಿಂದ ಹೆಚ್ಚೇನೂ ಕೇಳಬೇಡಿ’ ಅಂತ ಪಿಜಿ ಮಾಲೀಕರು ಹೇಳಿಬಿಟ್ಟಿದ್ದಾರೆ. ಮೊದಲಾಗಿದ್ದರೆ, “ನಾನು ಹೋಟೆಲ್ ಅಲ್ಲೇ ತಿಂದ್ಕೋತೀನಿ ಬಿಡ್ರೀ’ ಅಂತ ಮುಖ ತಿರುಗಿಸಿ ಬರುತ್ತಿದ್ದೆನೇನೋ. ಆದರೀಗ ಹೋಟೆಲ್‌ಗಳೇ ಇಲ್ಲವಲ್ಲ. ಸ್ವಿಗ್ಗಿ, ಝೊಮ್ಯಾಟೋ ಸರ್ವಿಸ್ ಇದ್ದರೂ, ವೈರಸ್‌ನಿಂದಾಗಿ ಅವರ ಸಹಾಯ ಪಡೆಯಲೂ ಭಯ. ಪರೀಕ್ಷಿತ ರಾಜನನ್ನು ಕೊಲ್ಲಲು ಬಂದ ಹಾವು, ಹಣ್ಣಿನೊಳಗೆ ಅಡಗಿಕೊಂಡ ಕತೆ ಗೊತ್ತಲ್ಲ? ಹಾಗೆಯೇ, ಪಾರ್ಸೆಲ್ ಫುಡ್‌ನ ನೆಪದಲ್ಲಿ ಕಾಣದ ವೈರಸ್ ದೇಹ ಹೊಕ್ಕುಬಿಟ್ಟರೆ? ಒಟ್ಟಿನಲ್ಲಿ, ಅರ್ಧಂಬರ್ಧ ಹಸಿವಿನಲ್ಲಿ ಬದುಕುವ ಪರಿಸ್ಥಿತಿ. ಬೆಳಗ್ಗೆ ಕೊಟ್ಟದ್ದನ್ನೇ ಮಧ್ಯಾಹ್ನವೂ ತಿನ್ನುತ್ತಾ, ಸಂಜೆಯಾಗು ತ್ತಿದ್ದಂತೆ ಪಾನಿಪುರಿ, ಮಸಾಲಾಪುರಿ, ಬೋಂಡಾ, ಗೋಬಿ ಅಂತೆಲ್ಲ ನೆನಪಿಸಿಕೊಳ್ಳುತ್ತಾ, ಮನೆಗೆ ಹೋಗಿದ್ದರೆ ಅಮ್ಮನ ಕೈಯಲ್ಲಿ ಏನೇನೆಲ್ಲ ಮಾಡಿಸಿಕೊಂಡು ತಿನ್ನಬಹುದಿತ್ತು
ಅಂತ ಕನಸು ಕಾಣುತ್ತಾ, ಕಾಲ ದೂಡುತ್ತಿದ್ದೇನೆ. ಇದನ್ನೆಲ್ಲಾ ಅಮ್ಮನ ಹತ್ತಿರ ಹೇಳಿಕೊಳ್ಳಲಾದೀತೇ? ದಿನಾ ಫೋನಿನಲ್ಲಿ, ರೋಗ ನಿರೋಧಕ ಶಕ್ತಿ ಹೆಚ್ಚಿಸೋಕೆ ಏನೇನು ತಿನ್ನಬೇಕು ಅಂತ ಹೇಳುತ್ತಾ, ಅರಿಶಿನ, ಶುಂಠಿ ಇದೆಯಾ? ಪಿಜಿ ಅಲ್ಲಿ ಹಾಲು ಕೊಡ್ತಾರೆ ತಾನೇ…?- ಅಂತೆಲ್ಲಾ ಕಾಳಜಿ ಮಾಡುವ ಅಮ್ಮನಿಗೆ, ಇಲ್ಲಿ ಊಟವೇ ಸರಿಯಾಗಿ ಸಿಗ್ತಿಲ್ಲ ಅಂತ ಹೇಳ್ಳೋಕೆ ಮನಸ್ಸಾಗುವುದಿಲ್ಲ.
“ಇನ್ನೊಂದಿನ ಮುಂಚೆ ರಜೆ ಸಿಕ್ಕಿದ್ರೆ ನೀನೂ ಮನೆಗೆ ಬಂದು ಬಿಡ್ಬೋದಿತ್ತು….’ ಅಂತ ಆಕೆ ನಿಟ್ಟುಸಿರು ಬಿಡುವಾಗ, “ಅಮ್ಮಾ, ನಾನಿಲ್ಲಿ ಆರಾಮಾಗಿದ್ದೇನೆ. ಇನ್ನೊಂದು ವಾರ ಅಷ್ಟೇ. ಆಮೇಲೆ ಬಸ್ಸು- ಕಾರು ಎಲ್ಲ ಓಡಾಡ್ತವಂತೆ. ಆಗ ಮನೆಗೆ ಬಂದುಬಿಡ್ತೀನಿ. ನೀವ್ಯಾಕೆ ಸುಮ್ಮನೆ ಚಿಂತೆ ಮಾಡ್ತೀರಿ?’… ಅಂತ ಸಮಾಧಾನಿಸುತ್ತೇನೆ. “ಇನ್ನೊಂದು ವಾರಕ್ಕೆ ಎಲ್ಲವೂ ಮೊದಲಿನಂತೆ
ಆಗುತ್ತಾ?’ ಎಂದು ನನ್ನೊಳಗೇ ಪ್ರಶ್ನೆ ಎದ್ದಾಗ ನಿಟ್ಟುಸಿರೇ ಉತ್ತರವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.