ನದಿಯು ಭೂಪಟವನ್ನು ಅನುಸರಿಸುವುದಿಲ್ಲ!


Team Udayavani, Feb 22, 2021, 6:00 AM IST

ನದಿಯು ಭೂಪಟವನ್ನು ಅನುಸರಿಸುವುದಿಲ್ಲ!

ನಾಳೆ ಏನಾಗುತ್ತದೆ ಎಂಬುದನ್ನು ಯಾರೂ ಖಚಿತವಾಗಿ ಹೇಳಲಾರರು. ಕೆಲವನ್ನು ಊಹಿಸಬಹುದು – ಹೀಗಾಗ ಬಹುದು, ಹಾಗಾಗಬಹುದು. ಆದರೆ ನಿಜವಾಗಿಯೂ ಏನು ನಡೆಯುತ್ತದೆ ಎಂಬುದು ಆ ಕ್ಷಣದ ಸತ್ಯ. ನಾಳೆ ಬಿಡಿ, ಇವತ್ತು ಮಧ್ಯಾಹ್ನ, ಇವತ್ತು ಸಂಜೆ, ಮುಂದಿನ ಒಂದು ತಾಸಿನಲ್ಲಿ ನಾವು ಅಂದುಕೊಂಡದ್ದು ನಡೆಯದೇ ಇರ ಬಹುದು. ಅನಿರೀಕ್ಷಿತವಾದದ್ದು ಘಟಿಸ ಬಹುದು. ಬದುಕು ಅಷ್ಟು ಅನೂಹ್ಯ. ಹಾಗಾಗಿ ಆಶಾವಾದದ ಜತೆಗೆ ಬದುಕಿನ ಹರಿವಿನಲ್ಲಿ ತೇಲಿ ಹೋಗುವುದು ಮಾತ್ರ ನಮ್ಮ ಮುಂದಿನ ಆಯ್ಕೆ. ಬದುಕು ನಾವು ಕಟ್ಟಿ ಕೊಳ್ಳುವ ಯಾವುದೇ ತರ್ಕ, ಯೋಜನೆಗಳನ್ನು ಲೆಕ್ಕಿಸುವುದಿಲ್ಲ. ಹಾಗಾಗಿ ನಿರೀಕ್ಷೆಗಳನ್ನು ಇರಿಸಿ ಕೊಂಡರೆ ನಿರಾಶೆ ತಪ್ಪಿದ್ದಲ್ಲ.

ಇಲ್ಲೊಂದು ಕಥೆ.
ಒಂದೂರಿನಲ್ಲಿ ಒಬ್ಬ ಪಂಡಿತರಿದ್ದರು. ಅವರ ಊರಿನ ಬದಿಯಲ್ಲಿ ಒಂದು ನದಿ ಹರಿಯುತ್ತಿತ್ತು. ಒಂದು ದಿನ ನದಿಯಲ್ಲಿ ಸ್ನಾನ ಮುಗಿಸಿ ಏಳುವಾಗ ಈ ನದಿಯ ಗುಂಟ ಸಮುದ್ರದ ವರೆಗೆ ಒಮ್ಮೆ ಹೋಗಿ ಬಂದರೆ ಹೇಗೆ ಎಂಬ ಆಲೋಚನೆ ಅವರ ತಲೆಯಲ್ಲಿ ಮೊಳೆಯಿತು. ನದಿ ಯುದ್ದಕ್ಕೂ ಸಮುದ್ರ ಸೇರುವಲ್ಲಿಯ ವರೆಗೆ ಸಾಗುವುದು ಹೊಸ ಸಾಹಸ ವಾದೀತಲ್ಲ ಎಂಬುದು ಅವರ ಚಿಂತನೆ.

ಸರಿ, ಈ ಹಿಂದೆ ಇಂಥ ಸಾಹಸವನ್ನು ಯಾರಾದರೂ ಮಾಡಿದ್ದಾರೆಯೇ ಎಂದು ಅವರು ಸಂಶೋಧನೆ ಆರಂಭಿಸಿದರು. ಕೆಲವು ಶತಮಾನಗಳ ಅಂತರದಲ್ಲಿ ನಾಲ್ಕೈದು ಮಂದಿ ನದಿ ಪಾತ್ರದುದ್ದಕ್ಕೆ ಪ್ರಯಾಣಿಸಿದ್ದ ಮಾಹಿತಿ ಸಿಕ್ಕಿತು. ಇನ್ನಷ್ಟು ವಿವರಗಳಿಗಾಗಿ ಗ್ರಂಥಾ ಲಯಗಳಲ್ಲಿ ತಡಕಾಡಿದರೆ ಕೆಲವು ಗ್ರಂಥ ಗಳು, ನಕಾಶೆಗಳು ಕೂಡ ಲಭಿಸಿದವು.

ಗ್ರಂಥಗಳನ್ನು ಅಧ್ಯಯನ ಮಾಡಿ ದಾಗ ಪಂಡಿತರಿಗೆ ವಿವರಗಳಲ್ಲಿ ವ್ಯತ್ಯಾಸಗಳು ಇರುವುದು ಅರಿವಿಗೆ ಬಂತು. ನದಿಯಲ್ಲಿ ಹತ್ತು ಮೈಲು ಸಾಗಿದ ಮೇಲೆ ಒಂದು ಹಳ್ಳಿ ಸಿಗುತ್ತದೆ ಎಂದು ಒಂದು ಗ್ರಂಥದಲ್ಲಿ ಬರೆದಿದ್ದರೆ ಇನ್ನೊಂದು ಗ್ರಂಥದಲ್ಲಿ ಇಪ್ಪತ್ತು ಮೈಲು ಕಳೆದ ಬಳಿಕ ಒಂದು ನಗರ ಸಿಗುತ್ತದೆ ಎಂದಿತ್ತು. ಭೂಪಟಗಳು ಕೂಡ ಹೀಗೆಯೇ ಇದ್ದವು. ಒಂದರಲ್ಲಿ ನದಿ ಎಡಕ್ಕೆ ತಿರುಗುತ್ತದೆ ಎಂದಿದ್ದರೆ ಇನ್ನೊಂದ ರಲ್ಲಿ ಬಲಕ್ಕೆ ಹೊರಳುತ್ತದೆ ಎಂದಿತ್ತು.

ಗೊಂದಲಕ್ಕೀಡಾದ ಪಂಡಿತರು ನದಿ ಯಲ್ಲಿ ಪ್ರವಾಸ ಹೋದವರನ್ನು ಸಂದರ್ಶಿಸಲು ಆರಂಭಿಸಿದರು. ಜನರು ಕೊಟ್ಟ ಉತ್ತರಗಳು ಕೂಡ ಹಾಗೆಯೇ ಇದ್ದವು. ಕೆಲವರು ಸುಳ್ಳು ಸುಳ್ಳೇ ತಾವು ಕೂಡ ನದಿಯಲ್ಲಿ ಪ್ರವಾಸ ಹೋಗಿದ್ದೇವೆ ಎಂದು ಹೇಳಿ ಉಚಿತ ಸಲಹೆಗಳನ್ನು ಕೊಟ್ಟರು. ಒಟ್ಟಾರೆ ಗೊಂದಲವೋ ಗೊಂದಲ.

ಕೊನೆಗೆ ಲಭ್ಯವಿದ್ದ ಎಲ್ಲ ಮಾಹಿತಿ ಒಟ್ಟು ಗೂಡಿಸಿ ಪಂಡಿತರು ತಮ್ಮದೇ ಆದ ಒಂದು ಭೂಪಟ ತಯಾರಿಸಿದರು. ಅದನ್ನು ಹಿಡಿದು ಕೊಂಡು ಒಂದು ದೋಣಿಯೇರಿ ಯಾನ ಆರಂಭಿಸಿದರು.

ಯಾನದಲ್ಲಿ ಮತ್ತೆ ತೊಂದರೆಗಳು! ಐದು ಮೈಲು ದೂರ ಹೋಗಬೇಕಾದರೆ ನದಿ ಎಡಕ್ಕೆ ತಿರುಗಿತು. ಆದರೆ ಭೂಪಟದ ಪ್ರಕಾರ ಅದು ಬಲಕ್ಕೆ ತಿರುಗಬೇಕಿತ್ತು. ಇಪ್ಪತ್ತು ಮೈಲು ದೂರದಲ್ಲಿ ಒಂದು ಜಲಪಾತ ಸಿಕ್ಕಿತು. ಭೂಪಟದಲ್ಲಿ ಅದರ ಉಲ್ಲೇಖವೇ ಇರಲಿಲ್ಲ. ಐವತ್ತು ಮೈಲು ಕಳೆಯುವಷ್ಟರಲ್ಲಿ ಒಂದು ಹಳ್ಳಿ ಸಿಗುತ್ತದೆ, ಅಲ್ಲಿ ಊಟ ಪೂರೈಸಬಹುದು ಎಂದು ಲೆಕ್ಕಾಚಾರ ಹಾಕಿದ್ದರು. ಹಳ್ಳಿ ಸಿಗಲೇ ಇಲ್ಲ. ಭೂಪಟದಲ್ಲಿ ಹೇಳಿದ್ದನ್ನು ನದಿ ಅನುಸರಿಸುತ್ತಲೇ ಇರಲಿಲ್ಲ.

ಕೊನೆಗೆ ಅವರು ಸ್ವಲ್ಪ ಹೊತ್ತು ದೋಣಿ ಯನ್ನು ಅದರ ಪಾಡಿಗೆ ತೇಲಲು ಬಿಟ್ಟು ಮೌನವಾಗಿ ಕುಳಿತರು. ಆ ಮೌನದಲ್ಲಿ ಅವರ ತಲೆಯೊಳಗೆ ಒಂದು ಬೆಳಕು ಹುಟ್ಟಿತು- “ತೊಂದರೆ ಹುಟ್ಟಿಕೊಳ್ಳುತ್ತಿರು ವುದು ನನ್ನ ಭೂಪಟದಿಂದ; ನದಿಯಿಂದ ಅಲ್ಲ. ನದಿ ನನಗಿಂತ ಮೊದಲೇ ಇಲ್ಲಿತ್ತು. ಈಗ ನಾನು ಇಲ್ಲಿ ತೇಲುತ್ತಿದ್ದೇನೆ ಎಂಬುದು ಅದಕ್ಕೆ ಗೊತ್ತಿರಲಾರದು. ಹೀಗಾಗಿ ನಾನು ನದಿಯನ್ನು ಅನುಸರಿಸ ಬೇಕು, ನದಿ ನನ್ನನ್ನು ಅನುಸರಿಸುವುದು ಸಾಧ್ಯವೇ ಇಲ್ಲ’.

ಇಷ್ಟು ಹೊಳೆದದ್ದೇ ತಡ, ಪಂಡಿತರು ಭೂಪಟವನ್ನು ನದಿಗೆಸೆದರು, ನಿರುಮ್ಮಳ ವಾಗಿ ಹುಟ್ಟುಹಾಕಲು ತೊಡಗಿದರು.

( ಸಾರ ಸಂಗ್ರಹ)

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.