Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು
Team Udayavani, May 7, 2024, 1:26 AM IST
ಕುಂದಾಪುರ: ರಾಜ್ಯದ ಕರಾವಳಿ ಪ್ರದೇಶದಲ್ಲಿ ರವಿವಾರ ರಾತ್ರಿ ಹಾಗೂ ಸೋಮವಾರ ಕಡಲ ಅಲೆಗಳ ಅಬ್ಬರವೂ ತುಸು ಜೋರಾಗಿತ್ತು. ಸಾಮಾನ್ಯವಾಗಿ ಈ ವೇಳೆ ಅಲೆಗಳ ಅಬ್ಬರ ಇಷ್ಟು ಇರುವುದಿಲ್ಲ. ಆದರೆ ಹವಾಮಾನ ವೈಪರೀತ್ಯದ ಪರಿಣಾಮ ಕಡಲಬ್ಬರ ಜಾಸ್ತಿಯಾಗಿದೆ. ಗಾಳಿಯ ತೀವ್ರತೆ ತುಸು ಜಾಸ್ತಿಯಾಗಿತ್ತು.
ಮರವಂತೆ, ಗಂಗೊಳ್ಳಿ, ಮಂಗಳೂರು, ಮಲ್ಪೆ, ಭಟ್ಕಳ, ಹೊನ್ನಾವರ, ತದಡಿ, ಕಾರವಾರ ಸಹಿತ ಎಲ್ಲೆಡೆಯ ಕಡಲ ತೀರದ ಪ್ರದೇಶಗಳಲ್ಲಿ ಅಲೆಗಳ ಎತ್ತರ ಗರಿಷ್ಠ 1 ಅಡಿಯಿಂದ 2 ಅಡಿಯವರೆಗೆ ಇದ್ದುದು ಕಂಡು ಬಂದಿದೆ. ಗಾಳಿಯೂ ಹಗಲಿನಲ್ಲಿ ಗಂಟೆಗೆ ಗರಿಷ್ಠ 14ರಿಂದ 21 ಕಿ.ಮೀ. ವೇಗದಲ್ಲಿ ಬೀಸುತ್ತಿತ್ತು.
ಕಡಲಿನಲ್ಲಿ ಈ ರೀತಿಯಾದ ಅಲೆಗಳ ಅಬ್ಬರ ಜಾಸ್ತಿ ಇರುವುದರಿಂದ ಕರಾವಳಿ ಭಾಗದಲ್ಲಿ ಮೇ 10, 11 ಹಾಗೂ 12ರಂದು ಮಳೆಯಾಗುವ ಸಾಧ್ಯತೆ ಇದೆ ಎನ್ನುವುದಾಗಿ ಮೀನುಗಾರರು ಹೇಳುತ್ತಾರೆ.
ತ್ರಿಕ್ಕನ್ನಾಡು, ಬೇಕಲದಲ್ಲಿ ಅಬ್ಬರದ ಅಲೆ
ಪ್ರವಾಸಿಗರನ್ನು ವಾಪಸು ಕಳುಹಿಸಿದ ಪೊಲೀಸರು
ಕಾಸರಗೋಡು: ಕೋಟಿಕುಳಂ ಗ್ರಾಮ ವ್ಯಾಪ್ತಿಯ ತ್ರಿಕ್ಕನ್ನಾಡು ಮತ್ತು ಬೇಕಲ ಪ್ರದೇಶದಲ್ಲಿ ಸಮುದ್ರದ ತೆರೆಗಳು ಒಂದೂವರೆ ಮೀಟರಿಗೂ ಹೆಚ್ಚು ಎತ್ತರಕ್ಕೆ ಅಪ್ಪಳಿಸಿದ್ದು, ಆತಂಕಕ್ಕೂ ಕಾರಣವಾಯಿತು. ಅಬ್ಬರದ ಅಲೆಯ ಹಿನ್ನೆಲೆಯಲ್ಲಿ ಕೇರಳ ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸ ಲಾಗಿದ್ದು, ಜನರು ಜಾಗ್ರತೆ ಪಾಲಿಸಬೇಕೆಂದು ರಾಷ್ಟ್ರೀಯ ಸಮುದ್ರ ಸ್ಥಿತಿಗತಿ ಸಂಶೋಧನೆ ಅಧ್ಯಯನ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ. ಸಮುದ್ರ ಕಿನಾರೆಗೆ ಬರುತ್ತಿರುವ ಪ್ರವಾಸಿಗರನ್ನು ಅಬ್ಬರದ ಅಲೆಗೆ ಸಾಧ್ಯತೆಯಿದೆಯೆಂದು ಪೊಲೀಸರು ಮುನ್ನೆಚ್ಚರಿಕೆ ನೀಡಿ ವಾಪಸು ಕಳುಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Team India; ಡ್ರೆಸ್ಸಿಂಗ್ ರೂಂ ರಹಸ್ಯ: ಕೋಚ್ ಗಂಭೀರ್ ವಿರುದ್ಧ ಮಾಜಿ ಕ್ರಿಕೆಟಿಗರ ಅಸಮಾಧಾನ
Mangaluru: ಕೈಕೊಡುವ ವೆಟ್‌ವೆಲ್; ನಂದಿನಿ, ಬಾವಿ ನೀರು ಕಲುಷಿತ
Bajpe: ಪಂಚ ಭಾಷೆಗಳಲ್ಲಿ ಎಕ್ಕಾರು ಶಾಲಾ ವಾರ್ತೆಗಳು
ಇನ್ಮುಂದೆ ಶಿವಣ್ಣನಿಗೆ ಡಬಲ್ ಪವರ್ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್ ಹೀರೋ ಮಾತು
New year 2025: ಬೆಳಗಾವಿ- ನಿರೀಕ್ಷೆಗಳು ನೂರಾರು..ಬೇಡಿಕೆಗಳು ಬೆಟ್ಟದಷ್ಟು..!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.