ಶಾಪರ್ಸ್ ಸ್ಟಾಪ್ ಬಂತು!
Team Udayavani, May 18, 2020, 4:33 AM IST
ಕೊರೊನಾ ಕಾರಣಕ್ಕೆ ಲಾಕ್‌ಡೌನ್ ಶುರು ಆಯಿತಲ್ಲ, ಅದರಿಂದ ಸಾಮಾನ್ಯ ವರ್ಗದ ಜನರಿಗೆ ಕೆಲಸವೇ ಇಲ್ಲದಂತಾಯಿತು. ಕೆಲಸ ಇಲ್ಲ ಅಂದಮೇಲೆ, ಸಂಪಾದನೆ ಎಲ್ಲಿಂದ ಬರಬೇಕು? ಕಾಸಿಲ್ಲ ಎಂಬ ಕಾರಣಕ್ಕೆ, ಲಕ್ಷಾಂತರ ಜನರು ತಲೆ ಮೇಲೆ ಕೈ ಹೊತ್ತು ಕೂತುಬಿಟ್ಟಿದ್ದಾರೆ. ಸ್ವಾರಸ್ಯವೆಂದರೆ, ಮೊನ್ನೆಮೊನ್ನೆಯವರೆಗೂ ದಿನವೂ ಸಾವಿರ, ಲಕ್ಷ ಎಣಿಸುತ್ತಿದ್ದ ವ್ಯಾಪಾರಿಗಳು ಕೂಡ, ಈಗ ಬಿಸಿನೆಸ್ ಇಲ್ಲದ ಕಾರಣಕ್ಕೆ ಕಂಗಾಲಾಗಿ ಕುಳಿತಿದ್ದಾರೆ. ಬ್ಯುಸಿನೆಸ್ ಮಾಡದೆ ಬದುಕುವುದು ಕಷ್ಟ ಅನ್ನಿಸಿದಾಗ, ತಮ್ಮ ವ್ಯವಹಾರದ ರೀತಿಯಲ್ಲೇ ಹಲವು ಬದಲಾವಣೆ ಮಾಡಿಕೊಂಡು, ಸಾಕಷ್ಟು ಮುನ್ನೆಚ್ಚರಿಕೆಯೊಂದಿಗೆ ಮಳಿಗೆಗಳನ್ನು ಆರಂಭಿಸಲು ಸಜ್ಜಾಗಿದ್ದಾರೆ.
ಬೃಹತ್ ಮಾಲ್‌ಗಳಲ್ಲಿ ತಮ್ಮ ಅಂಗಡಿ, ಶೋ ರೂಮ್ ಆರಂಭಿಸಿರುವ ಹಾಗೂ ದೇಶಾದ್ಯಂತ ಸಾಕಷ್ಟು ಮಳಿಗೆಗಳನ್ನು ಹೊಂದಿರುವ ಕಂಪನಿಗಳು, ಲಾಕ್‌ಡೌನ್ ಅವಧಿ ಮುಗಿದ ತಕ್ಷಣ ಮಳಿಗೆ ಆರಂಭಿಸಲು ಸಜ್ಜಾಗಿವೆ. ಲಾಕ್‌ಡೌನ್ ಮುಗಿಯಿತು ಅಂದಾಕ್ಷಣ ಕೊರೊನಾ ಹೆಮ್ಮಾರಿ ದೂರವಾಗಿದೆ ಎಂದು ಅರ್ಥವಲ್ಲ, ಮುಂದಿನ ಕೆಲವು ತಿಂಗಳ ಕಾಲ ಎಲ್ಲರೂ ದೈಹಿಕ ಅಂತರ ಕಾಯ್ದುಕೊಳ್ಳಲೇಬೇಕು, ಇಲ್ಲವಾದರೆ, ಭಾರೀ ಅನಾಹುತ ಆಗಲಿದೆ ಎಂದು ಈಗಾಗಲೇ ವೈದ್ಯರು ಎಚ್ಚರಿಸಿದ್ದಾರೆ. ಇದನ್ನೆಲ್ಲಾ ಗಮನಿಸಿರುವ ಹಲವು ಕಂಪನಿಗಳು, ಸಾಕಷ್ಟು ಬದಲಾವಣೆಗಳೊಂದಿಗೆ ಕೆಲಸ ಆರಂಭಿಸಲು ಸಜ್ಜಾಗಿವೆ. ಅದರಂತೆ…
* ಹೆಸರಾಂತ ವಾಚ್ ಮತ್ತು ಆಭರಣ ತಯಾರಿಕಾ ಸಂಸ್ಥೆಯಾದ ಟೈಟಾನ್, ಪ್ರತಿಯೊಬ್ಬ ಗ್ರಾಹಕರಿಗೂ 6 ಅಡಿಗಳ ಅಂತರ ಇರುವಂತೆ ನೋಡಿಕೊಳ್ಳುವ ಪ್ಲಾನ್ ತಯಾರಿಸಿದೆ.
* ಮಾಲ್‌ಗಳಲ್ಲಿ ಇನ್ನು ಮುಂದೆ ನಗದು ಸ್ವೀಕಾರದ ಬದಲು, ಕ್ರೆಡಿಟ್ ಕಾರ್ಡ್, ಆನ್‌ಲೈನ್ ಮೂಲಕ ಹಣ ಸ್ವೀಕರಿಸುವ ವ್ಯವಸ್ಥೆ ಜಾರಿಗೆ ಬರಲಿದೆ.
* ಗ್ರಾಹಕರಿಂದ ಅಂತರ ಕಾಯ್ದುಕೊಂಡೇ ಮಾತಾಡುವಂತೆ, ಮಾಲ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸೂಚನೆ ಮತ್ತು ತರಬೇತಿ ನೀಡಲಾಗಿದೆ.
* ಬಟ್ಟೆ ಹಾಗೂ ಶೂ ಖರೀದಿಸಿದರೆ, ಅದು ಸರಿಹೊಂದುವುದೇ ಇಲ್ಲವೇ ಎಂದು ಟ್ರಯಲ್ ರೂಮ್ ನಲ್ಲಿ ಚೆಕ್ ಮಾಡಿ ನೋಡಬಹುದಿತ್ತು. ಇನ್ನು ಮುಂದೆ, ಟ್ರಯಲ್ ರೂಮ್ ಗಳನ್ನ ರದ್ದು ಪಡಿಸಿ, ಮನೆಗೇ ಒಯ್ದು ಚೆಕ್ ಮಾಡುವ ಅವಕಾಶ ದೊರೆಯಲಿದೆ.
* ಒಮ್ಮೆಗೇ ಹೆಚ್ಚು ಜನ ಬರದಂತೆ ತಡೆಯಲು, ಮೊದಲೇ ಅಪಾಯಿಂಟ್‌ಮೆಂಟ್ ಪಡೆದು ಬರುವಂತೆ, ಗ್ರಾಹಕರಿಗೇ ಫೋನ್ ಮಾಡಿ ತಿಳಿಸುವ ವ್ಯವಸ್ಥೆ ಆರಂಭಿಸಲೂ ಉದ್ದೇಶಿಸಲಾಗಿದೆ.
* ಕ್ಯಾಶ್ ಕೌಂಟರ್‌ನಲ್ಲಿ ಕುಳಿತವರು ಹೆಚ್ಚಾಗಿ ಗ್ರಾಹಕರ ಜೊತೆ ಮಾತಾಡಬೇಕಾದ ಅನಿವಾರ್ಯತೆ ಇರುತ್ತದೆ. ಅವರ ಸುರಕ್ಷತೆಯ ಉದ್ದೇಶದಿಂದ, ಗ್ರಾಹಕ ಮತ್ತು ಕ್ಯಾಶಿಯರ್ ಮಧ್ಯೆ ದಪ್ಪ ಗ್ಲಾಸ್ ಹಾಕಲೂ ಉದ್ದೇಶಿಸಲಾಗಿದೆ.
* ಮಾಲ್‌ಗಳಲ್ಲಿ ಮಳಿಗೆ ಹೊಂದಿರುವವರೇನೋ ಹೀಗೆ ಮಾಡುತ್ತಾರೆ ನಿಜ. ಆದರೆ, ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಅಥವಾ ದಾವಣಗೆರೆ, ಗದಗ್‌ನಂಥ ಸಿಟಿಯಲ್ಲಿ ಅಂಗಡಿ ಹೊಂದಿರುವವರು ಏನು ಮಾಡುತ್ತಾರೆ ಎಂಬುದು ಸದ್ಯಕ್ಕೆ ಉತ್ತರವಿಲ್ಲದ ಪ್ರಶ್ನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.