

Team Udayavani, Jun 2, 2020, 4:07 AM IST
ನಟ ಜಗ್ಗೇಶ್ ಮೇಕಪ್ ಎಂಬ ಸಿನಿಮಾ ಮಾಡಿರೋದು ನಿಮಗೆ ಗೊತ್ತೇ ಇದೆ. ಆ ಸಿನಿಮಾದಲ್ಲಿ ನಟಿಸುವ ಜೊತೆಗೆ ನಿರ್ಮಾಣದ ಜವಾಬ್ದಾರಿ ಕೂಡಾ ವಹಿಸಿಕೊಂಡಿದ್ದರು ಜಗ್ಗೇಶ್. ಆದರೆ, ಆ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿಲ್ಲ. ಆ ಚಿತ್ರವನ್ನು ಜಗ್ಗೇಶ್ ಆ ಕಾಲಕ್ಕೆ ಅದ್ಧೂರಿಯಾಗಿಯೇ ನಿರ್ಮಿಸಿದ್ದರು.
ಆದರೆ ಚಿತ್ರ ಹಿಟ್ ಆಗದ ಪರಿಣಾಮ ಅವತಿಗೆ 75ಲಕ್ಷ ರೂಪಾಯಿ ನಷ್ಟವಾಯಿತಂತೆ. ಆ ನಷ್ಟ ಭರಿಸಲು ಜಗ್ಗೇಶ್ ತಮ್ಮ ಮನೆಯನ್ನು ಮಾರಿದರಂತೆ. ಆ ಮನೆ ಈಗ 35 ಕೋಟಿ ರೂಪಾಯಿ ಬೆಲೆ ಬಾಳುತ್ತಂತೆ. ಆ ಮನೆಯನ್ನುಕೊಂಡ ಅವರ ಸ್ನೇಹಿತನಿಗೆ ಈಗ 16 ಲಕ್ಷ ಬಾಡಿಗೆ ಬರುತ್ತಿದೆಯಂತೆ.
ತಮ್ಮ ಪ್ರತಿಭೆಯನ್ನು ಹೊರ ರಾಜ್ಯಗಳಿಗೂ ಪಸರಿಸಬೇಕೆಂಬ ಉದ್ದೇಶದಿಂದ ಜಗ್ಗೇಶ್ ಈ ಸಿನಿಮಾ ನಿರ್ಮಿಸಿದರಂತೆ. ಈ ಚಿತ್ರದಲ್ಲಿ ಅವರ ದೊಡ್ಡಮ್ಮನ ಪಾತ್ರ ಸಖತ್ ಹಿಟ್ ಆಗಿತ್ತು. ಆದರೆ ಚಿತ್ರಮಂದಿರದಲ್ಲಿ ಮಾತ್ರ ಆ ಚಿತ್ರ ಓಡಲಿಲ್ಲ. ಜಗ್ಗೇಶ್ ಆ ಚಿತ್ರದಿಂದ ಕಳೆದುಕೊಂಡದ್ದನ್ನು ಅದೇ ವರ್ಷ ಪಡೆದರಂತೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ, ಕಾಸಿದ್ದವನೇ ಬಾಸ್ ಚಿತ್ರಗಳು ವಾಪಾಸ್ ಕೊಟ್ಟವಂತೆ.
You seem to have an Ad Blocker on.
To continue reading, please turn it off or whitelist Udayavani.