ಇಂದಿನಿಂದ ಸೈಯದ್‌ ಮುಷ್ತಾಖ್‌ ಟಿ20 ಆರಂಭ

ಮನೀಷ್‌ ಪಾಂಡೆ ನಾಯಕತ್ವದ ಕರ್ನಾಟಕಕ್ಕೆ ಮುಂಬೈ ಎದುರಾಳಿ

Team Udayavani, Nov 4, 2021, 5:30 AM IST

ಇಂದಿನಿಂದ ಸೈಯದ್‌ ಮುಷ್ತಾಖ್‌ ಟಿ20 ಆರಂಭ

ಮುಂಬೈ: ಗುರುವಾರದಿಂದ ಕೋವಿಡ್ ಒಡ್ಡಿರುವ ಅಡೆತಡೆಗಳನ್ನು ಮೀರಿ ಸೈಯದ್‌ ಮುಷ್ತಾಖ್‌ ಅಲಿ ಟಿ20 ಕ್ರಿಕೆಟ್‌ ಕೂಟ ಆರಂಭವಾಗಲಿದೆ.

ಇದು ಭಾರತದ ಬಹುಮುಖ್ಯ ದೇಶೀಯ ಟಿ20 ಕೂಟಗಳಲ್ಲೊಂದು. ಇಲ್ಲಿನ ಪ್ರದರ್ಶನ ಆಟಗಾರರ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ಬಹಳ ನೆರವಾಗುತ್ತದೆ. ಆದ್ದರಿಂದ ಆಟಗಾರರೆಲ್ಲ ಕುತೂಹಲದಿಂದ ಕಾಯುತ್ತಿದ್ದಾರೆ. ಗುರುವಾರ ಕರ್ನಾಟಕ ತಂಡ ಬಲಿಷ್ಠ ಮುಂಬೈ ವಿರುದ್ಧ ಪಂದ್ಯವಾಡಲಿದೆ.

ಎರಡೂ ತಂಡಗಳ ಪಾಲಿಗೆ ಇದು ಬಹುಮುಖ್ಯವಾದ ಪಂದ್ಯ. ಎರಡರಲ್ಲೂ ಖ್ಯಾತ ಅಂತಾರಾಷ್ಟ್ರೀಯ ತಾರೆಯರಿದ್ದಾರೆ. ಇಲ್ಲಿ ಎರಡು ರೀತಿಯ ಲಾಭಗಳಿವೆ. ಕೆಲವರು ಉದಯೋನ್ಮುಖ, ಛಾಪು ಮೂಡಿಸಿರುವ ಅಂತಾರಾಷ್ಟ್ರೀಯ ಆಟಗಾರರು ಇಲ್ಲಿದ್ದಾರೆ. ಇವರಿಗೆ ಅಂತಾರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನ ಭದ್ರ ಮಾಡಿಕೊಳ್ಳಲು ಇದೊಂದು ಅತ್ಯುತ್ತಮ ಅವಕಾಶ. ಇನ್ನೊಂದು ಕಡೆ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಟಿ20 ಆಡುವುದು ಸಾಧ್ಯವಿಲ್ಲದ ಮಾತು. ಆದರೆ ಅದ್ಭುತ ಪ್ರತಿಭಾವಂತರಾದ ಅವರಿಂದ ಯುವ ಆಟಗಾರರು ಕಲಿಯಲು ಸಾಕಷ್ಟು ವಿಷಯಗಳಿವೆ. ಉದಾಹರಣೆಗೆ ಅಜಿಂಕ್ಯ ರಹಾನೆ ವಿಶ್ವಶ್ರೇಷ್ಠ ಟೆಸ್ಟ್‌ ಆಟಗಾರ. ಅವರು ಅಂತಾರಾಷ್ಟ್ರೀಯ ಟಿ20 ತಂಡದಲ್ಲಿ ಆಡುವುದು ಬಹಳ ಕಷ್ಟ. ಆದರೆ ಅವರ ಬ್ಯಾಟಿಂಗ್‌ ಪರಿಣತಿ, ಅನುಭವ ಇತರೆ ಆಟಗಾರರ ಕಲಿಕೆಗೆ ಬಹಳ ನೆರವಾಗುತ್ತದೆ.

ಇದನ್ನೂ ಓದಿ:ಟಿ20 ವಿಶ್ವಕಪ್‌: ಸೆಮಿಫೈನಲ್‌ನತ್ತ ಕಿವೀಸ್‌ ದಾಪುಗಾಲು

ಕರ್ನಾಟಕ ತಂಡದಲ್ಲಿರುವ ಮನೀಷ್‌ ಪಾಂಡೆ, ದೇವದತ್ತ ಪಡಿಕ್ಕಲ್‌, ಮಾಯಾಂಕ್‌ ಅಗರ್ವಾಲ್‌, ಕೆ.ಗೌತಮ್‌, ಪ್ರಸಿದ್ಧಕೃಷ್ಣ ಅಂತಾರಾಷ್ಟ್ರೀಯ ಆಟಗಾರರು. ಅವರಿಗೆಲ್ಲ ಈ ಕೂಟ, ಅಂತಾರಾಷ್ಟ್ರೀಯ ತಂಡಕ್ಕೆ ತಮ್ಮ ಅಗತ್ಯವಿದೆ ಎಂದು ತೋರಿಸಿಕೊಳ್ಳಲು ವೇದಿಕೆಯಾಗಿದೆ. ಪಡಿಕ್ಕಲ್‌, ಮಾಯಾಂಕ್‌ ಇವರೆಲ್ಲ ಇನ್ನೂ ಅಂತಾರಾಷ್ಟ್ರೀಯ ತಂಡದಲ್ಲಿ ಭದ್ರ ನೆಲೆ ಕಂಡುಕೊಂಡಿಲ್ಲ. ಪಡಿಕ್ಕಲ್‌ಗ‌ಂತೂ ಬಹಳ ಅವಕಾಶಗಳೇ ಸಿಕ್ಕಿಲ್ಲ. ಮುಂಬೈ ತಂಡದ ನಾಯಕ ಅಜಿಂಕ್ಯ ರಹಾನೆಗೆ ಟಿ20 ವೇಗಕ್ಕೆ ಹೊಂದಿಕೊಳ್ಳಲು ಉತ್ತಮ ಅವಕಾಶವಾಗಿದೆ. ಕನಿಷ್ಠ ಪಕ್ಷ ಐಪಿಎಲ್‌ನಲ್ಲಾದರೂ ಅವರಿಗೆ ಇದು ಉಪಯೋಗಕ್ಕೆ ಬರುತ್ತದೆ.

ಮುಂಬೈ ಉಪನಾಯಕ ಪೃಥ್ವಿ ಶಾ ಆಕ್ರಮಣಕಾರಿ ಆಟಗಾರ, ಪ್ರತಿಭಾವಂತ ಎನ್ನುವುದೇನೋ ಸತ್ಯ. ಆದರೆ ಅದೇಕೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರೀಕ್ಷೆಗೆ ತಕ್ಕ ಸಾಧನೆ ಮಾಡಿಲ್ಲ. ಜೊತೆಗೆ ಅನಗತ್ಯ ವಿವಾದಗಳಿಗೂ ಕಾರಣವಾಗಿದ್ದಾರೆ. ಅವರೊಮ್ಮೆ ಭಾರತೀಯ ತಂಡದಿಂದ ಬೇರ್ಪಡಲು ಅಶಿಸ್ತೇ ಕಾರಣ ಎಂಬ ಮಾತುಗಳೂ ಇವೆ. ಅವರಿಗಂತೂ ಈ ಕೂಟ ಮಹತ್ವದ್ದಾಗಿದೆ. ಎರಡೂ ತಂಡಗಳ ಬೌಲಿಂಗ್‌, ಬ್ಯಾಟಿಂಗ್‌ ಅತ್ಯುತ್ತಮವಾಗಿದೆ. ಪ್ರತಿಭಾವಂತ ವೇಗಿಗಳಿದ್ದಾರೆ. ಇವರೆಲ್ಲರಿಗೂ ಪ್ರತೀ ಪಂದ್ಯವೂ ಮುಖ್ಯವಾಗಿದೆ.

ಕರ್ನಾಟಕ-ಮುಂಬೈ
ಪಂದ್ಯಾರಂಭ: ಮ.12.30
ಸ್ಥಳ: ಗುವಾಹಟಿ, ಅಸ್ಸಾಂ

ಟಾಪ್ ನ್ಯೂಸ್

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

High-Court

High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್‌

Nagendra-ED

Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ

CS-Shadakshari

Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್‌.ಷಡಾಕ್ಷರಿ

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

ಕ್ರಿಕೆಟಿಗ ಅಕ್ಷರ್‌ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್

ಕ್ರಿಕೆಟಿಗ ಅಕ್ಷರ್‌ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್

Swiss ಸ್ನೋಬೋರ್ಡ್‌ ಸ್ಪರ್ಧಿ ಹಿಮಕುಸಿತದಲ್ಲಿ ದುರ್ಮರಣ

Swiss ಸ್ನೋಬೋರ್ಡ್‌ ಸ್ಪರ್ಧಿ ಹಿಮಕುಸಿತದಲ್ಲಿ ದುರ್ಮರಣ

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

High-Court

High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್‌

Nagendra-ED

Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ

CS-Shadakshari

Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್‌.ಷಡಾಕ್ಷರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.