ಅಮೆರಿಕ ಜತೆಗಿನ ಮಾತುಕತೆ ಮೂಲಕ ಅಲ್‌ಕಾಯಿದಾ ಜತೆ ಸಂಪರ್ಕ ಸಾಧಿಸಿದ ತಾಲಿಬಾನ್
ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸುವ ಭಾರತದ ಯತ್ನಕ್ಕೆ ಹಿನ್ನಡೆ
Team Udayavani, Jun 3, 2020, 9:19 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಅಮೆರಿಕ ಮತ್ತು ತಾಲಿಬಾನ್ ಜತೆಗಿನ ಮಾತುಕತೆಗೆ ಮಧ್ಯಸ್ಥಿಕೆ ವಹಿಸುವ ಮೂಲಕ ಅಫ್ಘಾನಿಸ್ಥಾನದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಯತ್ನಗಳ ಬಗ್ಗೆ ಭಾರತ ಯೋಚಿಸುತ್ತಿದ್ದರೆ, ತಾಲಿಬಾನ್, ಅಮೆರಿಕದ ಜತೆ ಮಾತುಕತೆ ನಡೆಸಿ ಅಲ್‌ಕಾಯಿದಾ ಭಯೋತ್ಪಾದಕ ಸಂಘಟನೆ ಜತೆ ಸಂಪರ್ಕ ಸಾಧಿಸಿದೆ. ಇದು ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸುವ ಭಾರತದ ಯತ್ನಕ್ಕೆ ಹಿನ್ನಡೆಯಾಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳಿದೆ.
ಈ ವರ್ಷದ ಫೆಬ್ರವರಿ 29ರಂದು ದೋಹಾದಲ್ಲಿ ಅಮೆರಿಕ ಮತ್ತು ತಾಲಿಬಾನ್ ಪ್ರತಿನಿಧಿಗಳ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದ ಪ್ರಕಾರ ಅಮೆರಿಕ ಹಂತ-ಹಂತವಾಗಿ ಅಫ್ಘಾನಿಸ್ಥಾನದಲ್ಲಿನ ತನ್ನ ಸೇನಾಪಡೆಯ ಬಲವನ್ನು ಹಿಂದೆ ಗೆದುಕೊಳ್ಳಬೇಕಿದೆ. ಅಲ್ ಕಾಯಿದಾ ಜತೆಗಿನ ಸಂಬಂಧವನ್ನು ತಾಲಿಬಾನ್ ಕೊನೆಗೊಳಿಸಬೇಕಿದೆ. ಆ ಮೂಲಕ ಅಲ್‌ಖೈದಾ ಸೇರಿದಂತೆ ಇತರ ಭಯೋತ್ಪಾದಕ ಸಂಘಟನೆಗಳು ಅಫ್ಘಾನಿಸ್ಥಾನದ ನೆಲ ಬಳಸಿಕೊಂಡು, ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳ ಮೇಲೆ ದಾಳಿ ನಡೆಸುವುದನ್ನು ತಡೆಯಲು ತಾಲಿಬಾನ್ ಬದ್ಧವಾಗಿರ ಬೇಕಾಗುತ್ತದೆ.
ಈ ಮಧ್ಯೆ, ದೋಹಾದಲ್ಲಿ ಶಾಂತಿ ಮಾತುಕತೆ ನಡೆಯುವ ವೇಳೆಯೇ ತಾಲಿ ಬಾನ್ ಹಾಗೂ ಅಲ್ ಕಾಯಿದಾ ಪ್ರತಿನಿಧಿಗಳ ಜತೆ ಮಾತುಕತೆಗಳು ನಡೆದಿವೆ. ಇದಕ್ಕೂ ಮೊದಲು ಕಳೆದ ಒಂದು ವರ್ಷದ ಅವಧಿಯಲ್ಲಿ ಉಭಯ ಸಂಘಟನೆಗಳ ನಡುವೆ ಸುಮಾರು 5 ಬಾರಿ ಮಾತುಕತೆಗಳು ನಡೆದಿದ್ದವು. ಅಲ್ಲದೆ, ಈ ಒಪ್ಪಂದದಲ್ಲಿ ಗಸಗಸೆ ವ್ಯಾಪಾರ ಸೇರಿದಂತೆ ತಾಲಿಬಾನ್ ಒಳಗೊಂಡಿರುವ ಯಾವುದೇ ಅಪರಾಧ ಚಟುವಟಿಕೆಗಳ ಬಗ್ಗೆ ಪ್ರಸ್ತಾವ ಮಾಡಲಾಗಿಲ್ಲ. ಇದು ಭಾರತದ ಹಿತಾಸಕ್ತಿಗೆ ಅನುಕೂಲಕರವಾಗಿಲ್ಲ. ಈ ಎರಡೂ ವಿಚಾರಗಳು ಭಾರತದ ಮಧ್ಯಸ್ಥಿಕೆ ಯತ್ನಕ್ಕೆ ಹಿನ್ನಡೆ ಉಂಟು ಮಾಡಿವೆ ಎಂದು ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
Ambedkar remarks; ಅಮಿತ್ ಶಾ ರಾಜೀನಾಮೆ ನೀಡಬೇಕು: ಕಾಂಗ್ರೆಸ್ ಒತ್ತಾಯ
Kasganj: ವಿವಾಹಿತನಿಗೆ ಪೊಲೀಸ್ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
MUST WATCH
ಹೊಸ ಸೇರ್ಪಡೆ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
Cold Weather: ಕೊನೆಗೂ ಚಳಿ ಶುರು ಆಯ್ತು ಗುರು
Ambedkar remarks; ಅಮಿತ್ ಶಾ ರಾಜೀನಾಮೆ ನೀಡಬೇಕು: ಕಾಂಗ್ರೆಸ್ ಒತ್ತಾಯ
BBK11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.