ಪುರುಷರ ನರಳಿಕೆಗೆ ಕಣ್ಣಾದ ವೆಡ್ಡಿಂಗ್ ಗಿಫ್ಟ್ ಟ್ರೈಲರ್!
ಕಥೆ ಬರೆದರೆ ಅದಕ್ಕೆ ಎಷ್ಟು ಬೇಕಾದರೂ ಒಗ್ಗರಣೆ ಹಾಕಬಹುದು.
Team Udayavani, Jun 17, 2022, 3:24 PM IST
ಬೆಂಗಳೂರು:ಗಂಡು-ಹೆಣ್ಣು ಎಂಬ ವಿಚಾರದಲ್ಲಿ ಈ ಹಿಂದೆಯೆಲ್ಲಾ ಹೆಣ್ಣಿನ ಮೇಲೆ ಸಾಕಷ್ಟು ದೌರ್ಜನ್ಯ ನಡೆದಿದೆ. ಅಷ್ಟೆ ಅನ್ಯಾಯಗಳು ಆಗಿದೆ. ಮದುವೆಯಾದ ಮೇಲೆ ಗಂಡನ ಮಾತಷ್ಟೇ ವೇದ ವಾಕ್ಯವಾಗಿತ್ತು. ದೌರ್ಜನ್ಯ ನಡೆದರು ಉಸಿರೆತ್ತುವ ಹಾಗಿರಲಿಲ್ಲ. ಕಾಲ ಬದಲಾದಂತೆ ಕಾಯ್ದೆಗಳು ಬಂತು. ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಶಿಕ್ಷೆ ವಿಧಿಸಲಾಗಿತ್ತು. ಆರಂಭದಲ್ಲಿ ಈ ಕಾಯ್ದೆ ನ್ಯಾಯಯುತವಾಗಿಯೇ ಉಪಯೋಗವಾಗುತ್ತಿತ್ತು. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಸ್ವಾರ್ಥಕ್ಕೂ ಉಪಯೋಗವಾಗುತ್ತಿದೆ, ದ್ವೇಷಕ್ಕೂ ಬಲಿಯಾಗುತ್ತಿದೆ. ಇಷ್ಟೆಲ್ಲಾ ಹೇಳಲು ಕಾರಣ ವೆಡ್ಡಿಂಗ್ ಗಿಫ್ಟ್ ಟ್ರೇಲರ್.
ಮೇಲೆ ಹೇಳಿದ ಅಷ್ಟು ವಿಚಾರ ನೈಜ ಘಟನೆ. ಈ ಅನ್ಯಾಯದ ಒಂದಷ್ಟು ಮಗ್ಗಲುಗಳನ್ನು ಎಲ್ಲರ ಮುಂದೆ ಅನಾವರಣ ಮಾಡಬೇಕೆಂಬ ಧ್ಯೇಯದಿಂದ ವಿಕ್ರಂ ಪ್ರಭು, 498-A ಕಾಯ್ದೆಯನ್ನು ಸಿನಿಮಾ ರೂಪದಲ್ಲಿ ತರಲು ಹೊರಡಿದ್ದಾರೆ. ಕಥೆ ಬರೆದರೆ ಅದಕ್ಕೆ ಎಷ್ಟು ಬೇಕಾದರೂ ಒಗ್ಗರಣೆ ಹಾಕಬಹುದು. ಪ್ರೇಕ್ಷಕರ ಮನಸ್ಸಿಗೆ ಹಿತವೆನಿಸುವ ಕಾಮಿಡಿಯನ್ನು ನೀಡಬಹುದು. ಆದರೆ ನೈಜ ಘಟನೆಯನ್ನು ಸಿನಿಮಾವಾಗಿಸಿ, ನೋಡುಗರ ಮನಸ್ಸಿನಾಳಕ್ಕೆ ಇಳಿಸುವ ಕೆಲಸ ಸುಲಭವಲ್ಲ. ಅದಕ್ಕೊಂದಿಷ್ಟು ಶ್ರದ್ಧೆ ಬೇಕು, ಸಾಕಷ್ಟು ತಯಾರಿ ಇರಬೇಕು. ಹಲವು ವರ್ಷಗಳಿಂದ ಹಲವು ನಿರ್ದೇಶಕರ ಗರಡಿಯಲ್ಲಿ ಪಳಗಿದ್ದ ವಿಕ್ರಂ ಪ್ರಭು ಈ ವಿಚಾರದಲ್ಲಿ ಆಸಕ್ತಿ ಬಂದಿದೆ. ತೆರೆ ಮೇಲೆ ಮುಗ್ಧ ಗಂಡು ಮಕ್ಕಳ ಜೀವನ ತರಲು ಹೊರಟಿದ್ದಾರೆ.
ವೆಡ್ಡಿಂಗ್ ಗಿಫ್ಟ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸಾಕಷ್ಡು ಜನರ ಜೀವನಗಾಥೆಯನ್ನು ನೆನಪಿಸುತ್ತಿದೆ. ನನ್ನ ಜೀವನದಲ್ಲೂ ಹೀಗೆ ಅನುಭವಿಸಿದೆ ಅಲ್ವಾ, ಛೇ ನಂಗೂ ಪ್ರೇಮಾ ಅಂತ ಲಾಯರ್ ಅವತ್ತು ಸಿಗಬೇಕಿತ್ತು ಅಲ್ವಾ ಎಂಬ ನೋವಿನ ನೆನಪುಗಳು ಗಂಡು ಮಕ್ಕಳಿಗಾದರೆ, ಇತ್ತ ಆ ರೀತಿ ಅನ್ಯಾಯದ ದಾರಿ ಹಿಡಿದ ಹೆಣ್ಣು ಮಕ್ಕಳಿಗೆ ಪಶ್ಚಾತ್ತಾಪ ಪಡುವಂತೆ ಮಾಡುತ್ತಿದೆ. ಟ್ರೇಲರ್ ನಲ್ಲಿ ಕರಾಳ ಮುಖದ, ಸನ್ನಿವೇಶದ ಪರಿಚಯವಾಗಿದೆ.
ಮೊದಲ ನೋಟದಲ್ಲಿಯೇ ಇವಳೇ ಪರ್ಫೆಕ್ಟ್ ಎಂದುಕೊಂಡು ಮದುವೆಯಾದರೆ ಕೊನೆಗಳಿಗೆಯಲ್ಲಿ ಅವಳೆ ಉರುಳಾಗಿದ್ದಾಳೆ. ಫೈನಲಿ ನ್ಯಾಯ ಯಾರಿಗೆ, ತಪ್ಪಲ್ಲ ಅಂತ ಪ್ರೂವ್ ಮಾಡೋದು ಹೇಗೆ, ತಪ್ಪಿಲ್ಲದೆ ಕೆಟ್ಟ ಹೆಸರು ಬಂದಾಯ್ತು, ಒಂದಷ್ಟು ಶಿಕ್ಷೆಯೂ ಅನುಭವಿಸಿಯಾಯ್ತು, ಇದಕ್ಕೆಲ್ಲಾ ಹೊಣೆ ಯಾರು..? ಈ ಎಲ್ಲಾ ಪ್ರಶ್ನೆಗಳು ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದರೆ ಉತ್ತರಕ್ಕೆ ಜುಲೈ 8ರ ತನಕ ಕಾಯಲೇಬೇಕಾಗಿದೆ. ವೆಡ್ಡಿಂಗ್ ಗಿಫ್ಟ್ ಸಿನಿಮಾಗೆ ವಿಕ್ರಂ ಪ್ರಭು ನಿರ್ದೇಶನ ಮಾಡಿದ್ದು, ಬಂಡವಾಳವನ್ನು ಅವರೇ ಹೂಡಿದ್ದಾರೆ. ಸೋನುಗೌಡ ಮತ್ತು ನಿಶಾನ್ ಮುಖ್ಯಭೂಮಿಕೆಯಲ್ಲಿದ್ದಾರೆ. ಉಳಿದಂತೆ ಪ್ರೇಮಾ, ಅಚ್ಯುತ ಕುಮಾರ್, ಪವಿತ್ರಾ ಲೋಕೇಶ್ ತಾರಾಬಳಗದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.