ಗಂಡನ ಕುರಿತು ಭಾವನ್ಮಾಕ ಪೋಸ್ಟ್ ಹಂಚಿಕೊಂಡ ವೈದ್ಯ ಲೀ ವೆನ್‌ಲಿಯಾಂಗ್ ಪತ್ನಿ
Team Udayavani, Jun 15, 2020, 2:49 PM IST
ಬೀಜಿಂಗ್: ಕೋವಿಡ್-19 ಹಾವಳಿ ಮಧ್ಯೆ ಸಾಕಷ್ಟು ಮನಕಲುಕುವ ಘಟನೆಗಳು ವಿಶ್ವದ್ಯಾಂತ ನಡೆಯುತ್ತಿದ್ದು, 2020 ವರ್ಷ ಸಾಕಷ್ಟು ನಕರಾತ್ಮಕ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತದೆಯೇ ಎಂಬ ಭಾವ ಎಲ್ಲರಲ್ಲೂ ಕವಲು ಒಡೆದಿದೆ. ಈಗಾಗಲೇ ಆರ್ಥಿಕ, ಸಾಮಾಜಿಕವಾಗಿ ಸಾಕಷ್ಟು ನಷ್ಟವಾಗಿದ್ದು, ಕೋವಿಡ್-19 ಮಹಾಮರಿಗೆ ಸಾಕಷ್ಟು ಮಂದಿ ಕೊನೆಯುಸಿರು ಎಳೆದಿದ್ದಾರೆ. ಈ ನಡುವೇ ಸೋಂಕಿನ ತವರೂರು ಎಂದೇ ಕುಖ್ಯಾತಿ ಪಡೆದ ಡ್ರ್ಯಾಗನ್ ದೇಶದಲ್ಲಿ ಮನಕಲುಕುವ ಘಟನೆಯೊಂದು ನಡೆದಿದ್ದು, ಮಗುವನ್ನು ಎತ್ತಾಡಿಸುವ ಮುನ್ನವೇ ವೈದ್ಯ ತಂದೆಯೋರ್ವ ಕೋವಿಡ್-19 ರಣಕೇಕೆಗೆ ಬಲಿಯಾಗಿದ್ದಾನೆ.
ಚೀನದಲ್ಲಿ ಕೋವಿಡ್ ಸೋಂಕು ಹರಡುವಿಕೆ ಕುರಿತು ಮೊದಲು ಎಚ್ಚರಿಕೆಯ ಗಂಟೆ ಬಾರಿಸಿ ಅನಂತರದ ದಿನಗಳಲ್ಲಿ ಸೋಂಕಿಗೆ ಬಲಿಯಾದ ವೈದ್ಯ ಲೀ ವೆನ್‌ಲಿಯಾಂಗ್ ಪತ್ನಿ ಇದೀಗ ಗಂಡುಮಗುವಿಗೆ ಜನ್ಮ ನೀಡಿದ್ದಾರೆ.
ಗಂಡನ ಕುರಿತು ಭಾವನ್ಮಾಕ ಪೋಸ್ಟ್
ವೀಚ್ಯಾಟ್ ಆ್ಯಪ್‌ನಲ್ಲಿ ವೆನ್‌ಲಿಯಾಂಗ್ ಪತ್ನಿ ಫೂ ಕ್ಸುಯೆಜಿ ಫೋಟೋವೊಂದನ್ನು ಹಂಚಿಕೊಂಡಿದ್ದು, “”ವೆನ್ಲಿಯಾಂಗ್ ಇದು ನಿಮ್ಮ ಅಂತಿಮ ಉಡುಗೊರೆ, ನೀವು ಇದನ್ನು ಸ್ವರ್ಗದಿಂದ ನೋಡಬಹುದೇ?” ಎಂದು ಬರೆದುಕೊಂಡಿದ್ದು, ಈ ಕುರಿತು ಅಂತಾರಾಷ್ಟ್ರೀಯ ಮಾಧ್ಯಮ ಬಿಬಿಸಿ ವರದಿ ಮಾಡಿದೆ. ಇನ್ನು ಫೂ ಕ್ಸುಯೆಜಿ ನಾನು ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ಮಕ್ಕಳನ್ನು ರಕ್ಷಿಸುತ್ತೇನೆ ಎಂದು ಅಗಲಿದ ಪತಿಗೆ ಫೂ ಕ್ಸುಯೆಜಿ ಭಾವನಾತ್ಮಕ ಸಂದೇಶ ಬರೆದಿದ್ದಾರೆ.
ಪ್ರಾರಂಭಿಕ ಹಂತದಲ್ಲೇ ವೈದ್ಯ ವೆನ್‌ಲಿಯಾಂಗ್ ಕೋವಿಡ್ ಹರಡುವಿಕೆ ಕುರಿತು ಮೊದಲು ಎಚ್ಚರಿಕೆಯ ಗಂಟೆ ಬಾರಿಸಿದ್ರು. ಸೋಂಕು ಹರಡುವಿಕೆ ಕುರಿತು ಎಲ್ಲರಿಗೂ ಎಚ್ಚರಿಕೆ ನೀಡಿದ್ದರು. ಆದರೆ ಚೀನ ಪೊಲೀಸರು ಲೀ ಅವರು ಸುಳ್ಳು ವದಂತಿ ಹರಡುತ್ತಿದ್ದಾರೆ ಎಂದು ಆರೋಪಿಸಿ ಅವರನ್ನು ಬಂಧಿಸಿದ್ದರು.
ಆದರೆ ಯಾವಾಗ ವೆನ್‌ಲಿಯಾಂಗ್ ಸೋಂಕಿಗೆ ಬಲಿಯಾದರು, ಅವರ ಸಾವಿನ ಬಗ್ಗೆ ಸಾರ್ವಜನಿಕರಿಂದ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾದ ಬಳಿಕ ಅವರನ್ನು ಆರೋಪ ಮುಕ್ತಗೊಳಿಸಲಾಯಿತು ಮತ್ತು ಚೀನ ಸರ್ಕಾರವು ಅವರನ್ನು ಹೀರೋ ಎಂದು ಗೌರವಿಸಿತು. ಆದರೆ ಅಷ್ಟರೊಳಗೆ ವೆನ್‌ಲಿಯಾಂಗ್ ಇಹಲೋಕ ತ್ಯಜಿಸಿದ್ದು, ತಮ್ಮ 2ನೇ ಮಗುವನ್ನು ಕಣ್ತುಂಬ ನೋಡಿ ಎತ್ತಾಡಿಸುವ ಮುನ್ನವೇ ಮಗನಿಂದ ದೂರಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.