Theater, Stage Artist: ನಗುವಿನ ಸವಿ ಹಂಚಿದ ಅಮ್ಮ ಮನೋರಮಾ

ನುಡಿ ನಮನ; ಕಾಸರಗೋಡು ಸಹಿತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ "ಕರಾವಳಿ ಲೇಖಕಿಯರ ವಾಚಕಿಯರ ಸಂಘ'ದ ಸ್ಥಾಪಕ ಸದಸ್ಯೆ

Team Udayavani, Sep 28, 2024, 6:05 PM IST

Manorama-Bhat

ಮನೋರಮಾ ಎಂಬ ಹೆಸರು ಅನ್ವರ್ಥಗೊಂಡಿರುವುದು ನಮ್ಮ ಹಿರಿಯ ಲೇಖಕಿ, ಚಿಂತನಶೀಲೆ ಮನೋರಮಾ ಎಂ. ಭಟ್ಟರಲ್ಲಿ. ಅವರನ್ನು ಭೇಟಿಯಾದ ಎಲ್ಲರೂ ಅವರ ವ್ಯಕ್ತಿತ್ವದಿಂದ ಮನಸೂರೆಗೊಂಡವರೇ. ಮೊನ್ನೆ ಮೊನ್ನೆಯವರೆಗೆ ಅಂದರೆ ಸೆ. 7ರ ಗಣೇಶ ಚತುರ್ಥಿಯ ದಿನದ ವರೆಗೆ ಸಿಹಿಯನ್ನು ಇಷ್ಟಪಡುತ್ತಾ ತಿಂದು, ಸಿಹಿಯಾದ ನಗೆಯೊಂದಿಗೆ ಇದ್ದವರು ಒಂದಿಷ್ಟು ಸುಸ್ತು ಎಂದು ಒತ್ತಾಯಕ್ಕೆ ಆಸ್ಪತ್ರೆ ಸೇರಿದವರು ಅಲ್ಲಿಂದಲೇ ನಮಗೆ ಹೇಳದೇ ತಿರುಗಿ ಬಾರದ ಊರಿಗೆ ಪಯಣಿಸಿದರು.

ಇದೇ ಜುಲೈ 15ರಂದು 93ನೇ ವರ್ಷಕ್ಕೆ ಕಾಲಿಟ್ಟಿದ್ದ ಮನೋರಮಾ ಅವರು, ತಮ್ಮೆಲ್ಲ ನಿತ್ಯಕರ್ಮಗಳನ್ನು ತಾವೇ ಮಾಡಿಕೊಳ್ಳುತ್ತಾ ದೇಹ, ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡಿಕೊಂಡಿದ್ದವರು, ಮಾತ್ರವಲ್ಲ ಜೀವನ ಪ್ರೀತಿ, ಜೀವನೋತ್ಸಾಹದ ಮಾತುಗಳಿಂದ, ನಿತ್ಯವೂ ಆಕಾಶವಾಣಿಯ ಕಾರ್ಯಕ್ರಮಗಳನ್ನು ಕೇಳುತ್ತಾ ಅದರ ಬಗ್ಗೆ ವಿಮರ್ಶೆ ಮಾಡುತ್ತಾ ಅಂದಿನ ಕಾರ್ಯಕ್ರಮಗಳನ್ನು ನೀಡಿದವರು ಪರಿಚಿತರಾಗಿದ್ದರೆ ಅವರಿಗೇ ಆಗಲೇ ಫೋನ್‌ ಮಾಡಿ ತನ್ನ ಸಂತೋಷವನ್ನು ಹಂಚಿಕೊಂಡು ಅವರಿಗೆ ಉತ್ಸಾಹ ತುಂಬುತ್ತಿದ್ದರು.

ಅಪರಿಚಿತರಾದರೆ ಅವರ ಬಗ್ಗೆ ಯಾರಿಂದಲಾದರೂ ಫೋನ್‌ ನಂಬರ್‌ ಪಡೆದು ಫೋನ್‌ ಮಾಡಿ ಅವರಿಗೆ ಅಭಿನಂದನೆ ತಿಳಿಸುವುದು ಅವರ ಏಕಾಂಗಿ ಜೀವನದ ದಿನಗಳ ಬಹುಮುಖ್ಯ ಕೆಲಸ. ತಾನು ಒಂಟಿಯಲ್ಲ ಎನ್ನುವುದನ್ನು ಹಳಬರ ಜತೆಗಿನ ಸಂಪರ್ಕವನ್ನು ನಿರಂತರವಾಗಿಸುತ್ತಾ, ಹೊಸಬರ ಪರಿಚಯ ಮಾಡಿಕೊಳ್ಳುತ್ತಾ ಅಕ್ಕರೆಯ ಅಮ್ಮನಾಗಿ ತಾನಿರುವ “ಅವತಾರ್‌’ ವಿಶ್ರಾಂತಿ ಧಾಮಕ್ಕೆ ಕರೆಸಿ ಕೊಳ್ಳುವ ಆಯಸ್ಕಾಂತದ ಶಕ್ತಿ ಅವರ ಮಾತಿ ನಲ್ಲಿರುತ್ತಿತ್ತು.

ಬಂದವರನ್ನು ಸುಮ್ಮನೆ ಕಳುಹಿಸದೆ ತನ್ನಲ್ಲಿದ್ದ ಪುಸ್ತಕದ ಪ್ರತಿಯೊಂದಿಗೆ ಹೆಣೆದು ಮುಗಿಸಿದ್ದ ಉಣ್ಣೆಯ ಶಾಲು ಇದ್ದರೆ ಅದನ್ನು ಅವರಿಗೆ ತೊಡಿಸಿ ನೀಡಿ ಸಂತೋಷಪಡುತ್ತಿದ್ದರು. ಅದು ಅವರ ಉಚಿತ ಕಾಣಿಕೆ. ಆದರೆ ಒತ್ತಾಯದಲ್ಲಿ ಕೆಲವೇ ಕೆಲವರು ಒಂದಿಷ್ಟು ಮೊತ್ತವನ್ನು ನೀಡಿದಾಗ ಉಣ್ಣೆಯ ನೂಲಿ ನದು ಕೊಡಿ ಎಂದು ಹೇಳಿ ಅಷ್ಟೇ ಪಡೆದಿರಬಹುದು. ಕಳೆದ ಸುಮಾರು ಐದೂವರೆ ವರ್ಷಗಳಿಂದ ಅವರು ಹೆಣೆದ ಶಾಲುಗಳ ಸಂಖ್ಯೆ ಮುನ್ನೂರಕ್ಕೂ ಹೆಚ್ಚು.

ಮಂಗಳೂರಿನ ಉರ್ವಾಸ್ಟೋರ್‌ ಬಳಿಯ “ಸೌಗಂಧಿಕ’ ಮನೆಯಲ್ಲಿ ಮಂಗಳೂರಿನ ಖ್ಯಾತ ವಕೀಲರಾಗಿದ್ದ ಪತಿ ಮುಳಿಯ ಮಹಾಬಲ ಭಟ್ಟರನ್ನು 1999ರಲ್ಲಿ ಅಗಲಿದ ಬಳಿಕ ಒಂಟಿಯಾಗಿ ಸುಮಾರು ಇಪ್ಪತ್ತು ವರ್ಷದಷ್ಟು ಕಾಲ ಸುತ್ತಮುತ್ತಲಿರುವ ಮಂದಿಯನ್ನು ಬೇರೆ ಬೇರೆ ಕಾರಣಗಳೊಂದಿಗೆ ತನ್ನವರನ್ನಾಗಿಸಿ ಮಾತನಾಡಿಸುತ್ತಾ ಇದ್ದ ಸರಸ ಮಾತುಗಾರ್ತಿ ಮನೋರಮಾ ಅವರನ್ನು ಅವರ ಅಂಗಳದಲ್ಲಿ ಅರಳಿದ ವೈವಿಧ್ಯ ಮಯವಾದ ಹೂಗಳು ಮಾತನಾಡಿಸುತ್ತಿತ್ತು.

ಜತೆಗೆ ಬರವಣಿಗೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆ, ಕರಾವಳಿ ಲೇಖಕಿಯರ ವಾಚಕಿಯರ ಸಂಘದ “ಸಾಹಿತ್ಯ ಸದನ’ದ ಸ್ವತ್ಛತೆಯ ಹೊಣೆಗಾರಿಕೆಯೊಂದಿಗೆ ಬಂದವರಿಗೆಲ್ಲ ಅವರದ್ದೇ ಆದ ವಿಶಿಷ್ಟ ಶುಂಠಿ ಜ್ಯೂಸ್‌ನ ಆತಿಥ್ಯ ಇವೆಲ್ಲವು ಗಳೊಂದಿಗೆ ನಿತ್ಯವೂ ತನ್ನನ್ನು ಕ್ರಿಯಾಶೀಲರಾಗಿಸಿ ಕೊಂಡುದುದು ನಮಗೆಲ್ಲ ಮಾದರಿ. ಉರ್ವಾಸ್ಟೋರ್‌ ಪೊಲೀಸ್‌ ಠಾಣೆಯ ಆರಕ್ಷಕರೆಲ್ಲರು ಈ ಅಮ್ಮನ ದೈನಂದಿನ ಭೇಟಿಗೆ ಕಾಯುತ್ತಿದ್ದುದು ಕೂಡ ಸತ್ಯ.

ಆರು ಮಕ್ಕಳುಳ್ಳ ತುಂಬಿದ ಕುಟುಂಬದಲ್ಲಿ 5ನೆಯವಳಾಗಿ ಮೂರು ಮಂದಿ ಅಣ್ಣಂದಿರ ಪ್ರೀತಿಯ ತಂಗಿಯಾಗಿ, ಅಕ್ಕನೋರ್ವಳ ಅಕ್ಕರೆಯ ತಂಗಿಯಾಗಿ, ಒಬ್ಬ ತಂಗಿಗೆ ಪ್ರೀತಿಯ ಅಕ್ಕನಾಗಿ ಇದ್ದ ಮನೋರಮಾ ಬಾಲ್ಯದಿಂದಲೇ ಇದ್ದ ಬಹಳ ಚುರುಕಿನ ಮಾತ್ರವಲ್ಲ ಅಣ್ಣಂದಿರಿಗೆ ಸಮನಾಗಿ ಗಂಡು ಮಕ್ಕಳಂತೆಯೇ ಬೆಳೆದವರು. ಇದಕ್ಕೆ ಕಾರಣ ಅವರ ತಂದೆ ಪುತ್ತೂರಿನ ಸಂಸ್ಕೃತ ಮಹೋಪಾಧ್ಯಾಯರಾಗಿದ್ದ ಕನ್ನೆಪ್ಪಾಡಿ ಪರಮೇಶ್ವರ ಶಾಸ್ತ್ರಿಗಳು. ಹೆಣ್ಣುಮಕ್ಕಳೂ ವಿದ್ಯೆ ಯನ್ನು ಕಲಿಯಬೇಕೆಂದು ಬಯಸಿದವರು. ಮನೋರಮಾರವರು ಬಾಲ್ಯದಲ್ಲಿ ಸಂಗೀತ ಕಲಿತವರು. ಕಛೇರಿ ನೀಡದಿದ್ದರೂ ಕೊನೆಯವರೆಗೂ ರಾಗ, ತಾಳ, ಜ್ಞಾನವುಳ್ಳವರು. ನಮ್ಮಿಬ್ಬರ ಮಾತುಕತೆಯ ವಿಷಯಗಳೇ ಸಾಹಿತ್ಯ ಮತ್ತು ಸಂಗೀತ.

ಮನೋರಮಾರವರನ್ನು ಮೆಚ್ಚಿ ಮದುವೆಯಾದವರು ಕನ್ನಡ ಸಾಹಿತ್ಯ ಕ್ಷೇತ್ರದ ನಾಡೋಜನೆಂದೇ ಪ್ರಸಿದ್ಧರಾದ ಮುಳಿಯ ತಿಮ್ಮಪ್ಪಯ್ಯನವರ ಮಗ ವಕೀಲರಾದ ಮುಳಿಯ ಮಹಾಬಲ ಭಟ್ಟರು. ಸಾಹಿತ್ಯಾಸ್ತಕರು, ಯಕ್ಷಗಾನ ಅರ್ಥಧಾರಿಗಳಾಗಿದ್ದವರು. ಹೀಗೆ ಅನುರೂಪ ದಾಂಪತ್ಯದ ಈ ದಂಪತಿಗೆ ಈರ್ವರು ಪುತ್ರರು. ಎರಡೂ ಕುಟುಂಬಗಳ ಹಿರಿಯರು, ಕಿರಿಯರು ಎಲ್ಲರೂ ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆಗಳನ್ನು ತಮ್ಮ ನೆಮ್ಮದಿಯ ಬದುಕುಗಳಿಗೆ ಉಸಿರಾಗಿಸಿಕೊಂಡವರು.

ಈ ಎಲ್ಲ ಹಿನ್ನೆಲೆಯೊಂದಿಗೆ ಪುತ್ತೂರಿನ ಸಾಹಿತ್ಯ ಸಾಂಸ್ಕೃತಿಕ ವಲಯದಲ್ಲಿ ಉಸಿರಾಡಿದ ಮನೋರಮಾ 1987ರಲ್ಲಿ ಪುತ್ತೂರಿನಲ್ಲಿ ಮಹಿಳಾ ವಿಚಾರ ಗೋಷ್ಠಿ ಯೊಂದನ್ನು ಏರ್ಪಡಿಸಿ ಅಲ್ಲಿಯೇ ತಾತ್ಕಾಲಿಕವಾಗಿ ಲೇಖಕಿಯರ ಸಂಘವೊಂದು ಸ್ಥಾಪನೆಯಾಗುವುದಕ್ಕೆ ಕಾರಣರಾದವರು. ಮುಂದೆ ಅವಿಭಜಿತ ದ.ಕ. ಜಿಲ್ಲೆ ಕಾಸರಗೋಡು ಸಹಿತವಾದ ವ್ಯಾಪ್ತಿಯ “ಕರಾವಳಿ ಲೇಖಕಿಯರ ವಾಚಕಿಯರ ಸಂಘ’ ಸ್ಥಾಪನೆಯಾದಾಗ ಸ್ಥಾಪಕ ಸದಸ್ಯೆಯಾಗಿ, ಕಾರ್ಯದರ್ಶಿಯಾಗಿ, ಉಪಾಧ್ಯಕ್ಷೆಯಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ಕ.ಲೇ.ವಾ.ಸಂಘಕ್ಕೆ ಸ್ವಂತ ಜಾಗಕ್ಕಾಗಿ ಆಗ ಸಂಘದ ಉಪಾಧ್ಯಕ್ಷೆಯಾಗಿದ್ದ ಮನೋರಮಾ ಮತ್ತು ಅಧ್ಯಕ್ಷರಾಗಿದ್ದ ಸಾರಾ ಅಬೂಬಕ್ಕರ್‌ಮತ್ತು ಲೀಲಾವತಿ ಎಸ್‌. ರಾವ್‌ ಅವರೊಂದಿಗೆ ತನ್ನ ವಯಸ್ಸನ್ನೂ ಮರೆತೂ ಜಿಲ್ಲಾಧಿಕಾರಿಗಳ ಕಚೇರಿಯ ಮೆಟ್ಟಲುಗಳನ್ನು ಹತ್ತಿ ಇಳಿದು ಸ್ವಂತ ಜಾಗವನ್ನು ಸಾಧ್ಯವಾಗಿಸಿದವರು. “ಸಾಹಿತ್ಯ ಸದನ’ದ ಕನಸನ್ನು ನನಸು ಮಾಡಿದವರಲ್ಲಿ ಮುಖ್ಯರು.

ವಿಧವೆಯಾದ ಹೆಣ್ಣು ತಲೆ ಬೋಳಿಸುವ ಕಾಲವನ್ನು ಬಾಲ್ಯದಲ್ಲಿ ನೋಡಿದ್ದ, ಆ ಬಗೆಗೆ ಕಾನೂನಾತ್ಮಕವಾದ ಹೋರಾಟಗಳ ಇತಿಹಾಸ, ಸಾಹಿತ್ಯಗಳನ್ನು ತಿಳಿದ ಮನೋರಮಾ ಆಧುನಿಕ ಕಾಲದ ವಿಧವೆಯ ಅಮಂಗಳೆಯ ರೂಪವನ್ನು ಪ್ರಶ್ನಿಸಿದವರು. “ಹೆಣ್ಣಿಗೇಕೆ ಈ ಶಿಕ್ಷೆ’ ಎಂಬ ಅವರ ಲೇಖನ ಪತ್ರಿಕೆಗಳಿಗೆ ಮಾತ್ರವಲ್ಲದೆ ನೇರವಾಗಿ ಮಠಾಧಿಪತಿಗಳಿಗೆ, ಸ್ವಾಮೀಜಿಗಳಿಗೆ, ನ್ಯಾಯಾಧೀಶರುಗಳಿಗೆ, ವಕೀಲರುಗಳಿಗೆ ಕಳುಹಿಸಿ ಸಮಾಜದಲ್ಲಿ ಸಂಚಲನ ಉಂಟು ಮಾಡಿದ ಹೋರಾಟ ಗಾರ್ತಿ, ತಾನು ಸ್ವತಃ ಮಂಗಳೆಯಾಗಿಯೇ ಬದುಕಿ ಇತರರಿಗೆ ಮಾದರಿಯಾದುದು ಇಂದು ಇತಿಹಾಸ.

ಮಂಗಳೂರು ಆಕಾಶವಾಣಿಯಲ್ಲಿ ನಾಟಕ ಕಲಾವಿದೆಯಾಗಿ, ರಂಗ ಕಲಾವಿದೆಯಾಗಿ, ಅಭಿನಯಿಸಿರುವ ಇವರು ಸಿನೆಮಾದಲ್ಲೂ ನಟಿಸಿದ್ದಾರೆ ಎನ್ನುವುದು ಅವರ ಜೀವನೋತ್ಸಾಹಕ್ಕೆ ಸಾಕ್ಷಿ. ಕಥೆಗಾರ್ತಿಯಾಗಿ, ಆಶು ಕವಯತ್ರಿಯಾಗಿ, ರೇಡಿಯೋ ನಾಟಕಗಳ ಸಂಕಲನ, ಪುಸ್ತಕ ಪ್ರಕಟನೆ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ತನ್ನ ಮಾವ ಮುಳಿಯ ತಿಮ್ಮಪ್ಪಯ್ಯನವರ ಹೆಸರಲ್ಲಿ “ಮುಳಿಯ ಪ್ರಶಸ್ತಿ’ಗಳನ್ನು ಕಾರ್ಯದರ್ಶಿಯಾಗಿ 25 ವರ್ಷಗಳ ಕಾಲ ನಿರ್ವಹಿಸಿದ್ದಾರೆ. ಉಡುಪಿಯಲ್ಲಿ ನಡೆದ ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತನ್ನ ಅನಾರೋಗ್ಯವನ್ನು ಲೆಕ್ಕಿಸದೆ ಭಾಗವಹಿಸಿ, ಭಾಷಣ ಮಾಡಿದ್ದು ಅವರ ಇಚ್ಛಾಶಕ್ತಿ, ಬದ್ಧತೆಗೆ ಸಾಕ್ಷಿ.

ಹತ್ತು ಹಲವು ಪ್ರಶಸ್ತಿ, ಗೌರವಗಳಿಗೆ ಭಾಜನರಾಗಿದ್ದ ಮನೋರಮಾ ಅವರು ಕಿನ್ನಿಗೋಳಿಯಲ್ಲಿ ಸೆಪ್ಟಂಬರ್‌ 1ರಂದು ನಡೆದ “ಅನಂತ ಪ್ರಕಾಶ’ ಪತ್ರಿಕೆಯ 29ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ನಗುನಗುತ್ತಾ ಭಾಷಣ ಮಾಡಿದುದು ಅವರ ಕೊನೆಯ ಸಾರ್ವಜನಿಕ ಕಾರ್ಯಕ್ರಮ. ಕೇವಲ ನಾಲ್ಕು ದಿನಗಳ ವಯೋಸಹಜ ಕಾರಣಗಳಿಂದ ಸೆಪ್ಟಂಬರ್‌ 15ರಂದು ನಮ್ಮನ್ನಗಲಿದ ಮನೋರಮಾ ಅವರು ತಮ್ಮ ತುಂಬು ಜೀವನವನ್ನು ಸಾರ್ಥಕಗೊಳಿಸಿಕೊಂಡವರು.

ಅವರ ಬದುಕಿನ ಭಗವದ್ಗೀತೆಯಂತೆ ಇದ್ದ ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗದ “ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ, ನಗುತ ನಗಿಸುವುದು ಅತಿಶಯದ ಧರ್ಮ’ ಎಂಬಂತೆ ಬದುಕಿದರು. “ನಗುತ ನಲಿಸುವ ವರವಮಿಗೆ ಬೇಡಿಕೊಳ್ಳಿರೋ’ ಎಂದು ನಮಗೆ ಸಾರುತ್ತಾ ಸಾಗಿದರು. ಜಾತಿ, ಧರ್ಮ ಭೇದವಿಲ್ಲದ, ಗಂಡು ಹೆಣ್ಣುಗಳೆಂಬ ಭಿನ್ನತೆ ಇಲ್ಲದ ಅನಕ್ಷರಸ್ಥರಿಂದ ಹಿಡಿದು ವಿದ್ಯಾವಂತರ ವರೆಗೆ ಹಲವು ಊರುಗಳಲ್ಲಿ ಹಬ್ಬಿರುವ ಅವರ ಮಾನಸ ಮಕ್ಕಳ ಪರವಾಗಿ ಮನೋರಮಾ ಅಮ್ಮನಿಗೆ ಪ್ರೀತಿಯ ಗೌರವದ ನುಡಿನಮನಗಳು.

– ಚಂದ್ರಕಲಾ ನಂದಾವರ

ಟಾಪ್ ನ್ಯೂಸ್

Allegation against Amit Shah: Canadian diplomats summoned

Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್

1-a-ccc

INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ

1-a-shaina

Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್

Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್‌ ಮುಂಡಾಡಿ

Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್‌ ಮುಂಡಾಡಿ

Singham Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

Singham Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ!

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾ*ಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-festival

Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ

Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ

8-book

Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

abhimanyu kashinath next movie suri loves sandhya

Abhimanyu Kashinath; ಸೂರಿ ಲವ್‌ ಗೆ ಉಪ್ಪಿ ಮೆಚ್ಚುಗೆ

Allegation against Amit Shah: Canadian diplomats summoned

Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್

1-a-ccc

INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ

arrested

Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್

1-a-shaina

Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.