Uppinangady ಪೆರಿಯಡ್ಕ ಹಾಲು ಉತ್ಪಾದಕರ ಸೊಸೈಟಿಯಿಂದ ಕಳ್ಳತನ
Team Udayavani, Mar 21, 2024, 12:50 AM IST
ಉಪ್ಪಿನಂಗಡಿ: ಪೆರಿಯಡ್ಕದ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ನುಗ್ಗಿದ ಕಳ್ಳನೋರ್ವ ಹಣಕ್ಕಾಗಿ ತಡಕಾಡಿದ ಘಟನೆ ಮಾ. 20ರಂದು ಬೆಳಕಿಗೆ ಬಂದಿದೆ.
ಮಾ. 19ರ ಸಂಜೆ ಸಂಘದ ಕಚೇರಿಯನ್ನು ಬಂದ್ ಮಾಡಿ ಸಿಬಂದಿ ತೆರಳಿದ್ದು, ಬೆಳಗ್ಗೆ ಬರುವಾಗ ಕಚೇರಿಯ ಷಟರ್‌ನ ಬೀಗ ಮುರಿದು ಕಳ್ಳನೋರ್ವ ಒಳಗೆ ನುಗ್ಗಿದ್ದು ಬೆಳಕಿಗೆ ಬಂದಿದೆ. ಈತ ಹಣಕ್ಕಾಗಿ ಮೇಜಿನ ಡ್ರಾವರ್‌ಗಳನ್ನು ಮುರಿದು ಸುಮಾರು ಒಂದೂವರೆ ಸಾವಿರ ರೂ. ಎಗರಿಸಿ, ಪರಾರಿಯಾಗಿದ್ದಾನೆ.
ಸ್ಥಳೀಯ ಮನೆಯೊಂದರಿಂದ ಪಿಕ್ಕಾಸನ್ನು ತಂದು ಷಟರ್‌ನ ಬೀಗ ಮುರಿಯಲು ಬಳಸಿದ್ದ ಎಂದು ತಿಳಿದು ಬಂದಿದೆ. ಗುರುತು ಸಿಗದಂತೆ ಮುಖಕ್ಕೆ ಬಟ್ಟೆಯನ್ನು ಸುತ್ತಿಕೊಂಡಿದ್ದ ಈತನ ಚಲನವಲನಗಳು ಸಂಘದ ಸಿಸಿ ಕೆಮರಾದಲ್ಲಿ ಪತ್ತೆಯಾಗಿವೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.