Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು
Team Udayavani, Jan 10, 2025, 11:45 PM IST
ಸುಳ್ಯ: ಸುಳ್ಯದ ಹಳೆ ಬಸ್ ನಿಲ್ದಾಣದ ಬಳಿಯಲ್ಲಿರುವ ಮೋಹನ್ ಜುವೆಲರಿ ಮಾರ್ಟ್ನಿಂದ 2021ರ ಮಾರ್ಚ್ 31ರ ರಾತ್ರಿ ನಡೆಸಲಾಗಿದ್ದ ಚಿನ್ನಾಭರಣ ಮತ್ತು ನಗದು ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಅಪರಾಧ ಸಾಬೀತುಗೊಂಡ ಹಿನ್ನೆಲೆಯಲ್ಲಿ ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಲಾಗಿದೆ.
ತಂಗಚ್ಚ, ಬಶೀರ್ ಮಹಮ್ಮದ್, ಮ್ಯಾಥ್ಯೂ ಈ ಮೂವರು ಅಪಾದಿತರು ಅಂಗಡಿಯ ಶೆಟರ್ ಅನ್ನು ಕಬ್ಬಿಣದ ಹಾರೆಗೋಲು ಮತ್ತು ಕಬ್ಬಿಣದ ಪಿಕಾಸಿನಿಂದ ಮುರಿದು ಒಳಪ್ರವೇಶಿಸಿ ಅಂಗಡಿಯ ಒಳಗಿದ್ದ 48 ಚಿನ್ನದ ಉಂಗುರಗಳು, 72 ಜತೆ ಚಿನ್ನದ ಬೆಂಡೋಲೆ ಹಾಗೂ ಇನ್ನೊಂದು ಕಪಾಟಿನಲ್ಲಿದ್ದ 36 ಚಿನ್ನದ ಉಂಗುರ, 9 ಜತೆ ಬೆಂಡೋಲೆ, 8 ಚಿನ್ನದ ಸರ, 2 ಚಿನ್ನದ ಬ್ರಾಸ್ಲೆಟ್ ಹಾಗೂ ಕ್ಯಾಶ್ ಡ್ರಾವರಿನಲ್ಲಿ ನವೀಕರಿಸಲು ಬಂದ 4 ಚಿನ್ನದ ಬಳೆ, 1 ಜತೆ ಬೆಂಡೋಲೆ, 1 ನೆಕ್ಲೇಸ್ ಹಾಗೂ ಕೆಂಪು ಡಬ್ಬಿಯಲ್ಲಿ 2 ಚಿನ್ನದ ನಾಣ್ಯ ಲಕ್ಷ್ಮಿ ಮೀಸ್ರಿಗಳು ಹಾಗೂ ಸಣ್ಣ ಪುಟ್ಟ ಆಭರಣಗಳು 75 ಗ್ರಾಂ ಒಟ್ಟು ಚಿನ್ನಾಭರಣ 180 ಗ್ರಾಂ ಅದರ ಅಂದಾಜು ಮೌಲ್ಯ 7,50,000 ರೂ. ಹಾಗೂ ಕ್ಯಾಶ್ ಡ್ರಾವರಿನಲ್ಲಿದ್ದ ಅಂದಾಜು 50,000 ನಗದನ್ನು ಕಳವು ಮಾಡಿದ್ದರು.
ಈ ಪ್ರಕರಣದ 1ನೇ ಆರೋಪಿ ತಲೆಮರೆಸಿಕೊಂಡಿದ್ದರಿಂದ ಪ್ರಕರಣವನ್ನು ವಿಭಜಿಸಲಾಗಿ ಅನಂತರ 1ನೇ ಆರೋಪಿ ಸಿಕ್ಕ ಬಳಿಕ ಎರಡೂ ಪ್ರಕರಣಗಳು ಒಟ್ಟಾಗಿ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್ .ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶ ಬಿ. ಮೋಹನ್ ಬಾಬು ಮುಂದೆ ವಿಚಾರಣೆ ನಡೆದು ಆರೋಪಿತರ ಅಪರಾಧ ಸಾಬೀತಾಗಿ ದೋಷಿ ಎಂದು ಘೋಷಿಸಿ ತೀರ್ಪು ಪ್ರಕಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು
Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು
National Highway ಕಾಮಗಾರಿ ಪರಿಶೀಲನೆ: ಮಾರ್ಚ್ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.