ತೆಕ್ಕಟ್ಟೆ ಆಟಿ ಅಮಾವಾಸ್ಯೆ ಸಂಭ್ರಮ : ಕೊಮೆ-ಕೊರವಡಿಯಲ್ಲಿ ಸಮುದ್ರ ಸ್ನಾನ
Team Udayavani, Jul 20, 2020, 4:27 PM IST
ತೆಕ್ಕಟ್ಟೆ : ಪ್ರತಿ ವರ್ಷ ಆಷಾಢ ಮಾಸದ ಆಟಿ ಅಮಾವಾಸ್ಯೆಯಂದು ನಂಬಿಕೆಯಂತೆ ಕೊಮೆ, ಕೊರವಡಿ ಕಡಲಿನಲ್ಲಿ ಜು.20 ರಂದು ಮುಂಜಾನೆಯಿಂದಲೇ ಜನ ಸಮುದ್ರ ಸ್ನಾನಕ್ಕಾಗಿ ಬಹು ಉತ್ಸಾಹದಿಂದ ಪಾಲ್ಗೊಂಡಿರುವ ದೃಶ್ಯ ಕಂಡು ಬಂತು.
ಕಡಲಿಗೆ ಹಿಡಿ ಮರಳು ಸಮರ್ಪಣೆ : ಸಮುದ್ರ ಸ್ನಾನಕ್ಕೆ ಕಡಲ ತೀರದೆಡೆಗೆ ಆಗಮಿಸುತ್ತಿದ್ದ ಸ್ಥಳೀಯರು ಬರಿಗೈಯಲ್ಲಿ ಬಂದು ಸಮುದ್ರ ಸ್ನಾನಕ್ಕೆ ಇಳಿಯ ಬಾರದು ಎಂಬ ನಂಬಿಕೆ ಇದ್ದು ಅದಕ್ಕೆ ಪೂರಕವಾಗಿ ಸಮುದ್ರ ತೀರದಲ್ಲಿರುವ ಮರಳು ಅಥವಾ ಒಂದು ಗುಲಗುಂಜಿಯನಾದರೂ ಕೈಯಲ್ಲಿ ಹಿಡಿದು ಸಮುದ್ರಕ್ಕೆ ಸಮರ್ಪಿಸಿ ತಮ್ಮ ಗ್ರಹಚಾರ ಪೀಡೆಯನ್ನು ಪರಿಹರಿಸಿಕೊಳ್ಳಬೇಕು ಎನ್ನುವ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಸ್ನಾನಕ್ಕೆ ತೆರಳುವ ಮುನ್ನ ನೆರೆದವರು ಕೈನಲ್ಲಿ ಒಂದು ಹಿಡಿ ಮರಳು ಹಿಡಿದುಕೊಂಡು ಸಮುದ್ರದ ನೀರಿಗೆ ಅರ್ಪಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂತು.
ಹೆಚ್ಚಿದ ಕಡಲ ಅಲೆಗಳ ಅಬ್ಬರ : ಆಷಾಢ ಮಾಸದ ಆಟಿ ಅಮಾವಾಸ್ಯೆಯ ದಿನದಂದು ಕಡಲ ಅಬ್ಬರ ಹೆಚ್ಚಾಗಿದ್ದು ಕೊರೊನಾ ಆತಂಕದ ನಡುವೆಯೂ ಕೂಡಾ ಪರಿಸರದ ಮಂದಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು.
ಯುವಕರಲ್ಲಿ ಹೆಚ್ಚಿದ ಸೆಲ್ಫಿ ಕ್ರೇಜ್ : ಸಮುದ್ರ ಸ್ನಾನಕ್ಕೆ ತೆರಳಿದ ಕೆಲವೊಂದು ಯುವಕರ ತಂಡ ಅಲೆಗಳ ಅಬ್ಬರದ ನಡುವೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬಂತು .
ಮೀನುಗಾರಿಕೆ : ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಸ್ಥಳೀಯ ಮೀನುಗಾರರು ಬಲೆ ಬೀಸಿ ಮೀನುಗಾರಿಕೆ ನಡೆಸುತ್ತಿರುವ ದೃಶ್ಯ ಕಂಡು ಬಂತು.
ಚಿತ್ರ : ಟಿ. ಲೋಕೇಶ್ . ಆಚಾರ್ಯ ತೆಕ್ಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.