ತೆಕ್ಕಟ್ಟೆ: ಕಾರುಗಳು ಪರಸ್ಪರ ಢಿಕ್ಕಿ
Team Udayavani, Feb 11, 2023, 1:40 AM IST
ತೆಕ್ಕಟ್ಟೆ: ಇಲ್ಲಿನ ರಾ.ಹೆ. 66ರ ರೈಸ್‌ಮಿಲ್ ಎದುರು ಚಲಿಸುತ್ತಿದ್ದ ಕಿಯಾ ಸೆಲ್ಟೋಸ್ ವಾಹನಕ್ಕೆ ಟಾಟಾ ಇಂಡಿಕಾ ಕಾರು ಏಕಾಏಕಿ ಅಡ್ಡ ಬಂದು ಢಿಕ್ಕಿಯಾಗಿ ಜಖಂಗೊಂಡ ಘಟನೆ ಫೆ. 10ರಂದು ಅಪರಾಹ್ನ ಸಂಭವಿಸಿದೆ.
ಮೊಬೈಲ್ ಟವರ್‌ನ ದುರಸ್ತಿ ಕಾರ್ಯದ ಉದ್ಯೋಗಿಗಳು ಆಗಮಿ ಸಿದ್ದ ಇಂಡಿಕಾ ಕಾರಿನ ಬ್ಯಾಟರಿ ನಿಷ್ಕ್ರಿಯಗೊಂಡ ಪರಿಣಾಮ ರಸ್ತೆಯ ಒಂದು ಬದಿಯಿಂದ ವಾಹನವನ್ನು ತಳ್ಳಿ ಪ್ರಾರಂಭ ಮಾಡುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಾ.ಹೆ. 66 ಪ್ರವೇಶಿಸಿತು. ಅದೇ ಸಂದರ್ಭ ಕೋಟೇಶ್ವರದಲ್ಲಿ ಮದುವೆ ಸಮಾರಂಭ ಮುಗಿಸಿ ಕೋಟದ ಕಡೆಗೆ ಸಾಗುತ್ತಿದ್ದ ಕಿಯಾ ಸೆಲ್ಟೋಸ್ ವಾಹನಕ್ಕೆ ನೇರವಾಗಿ ಬಂದು ಢಿಕ್ಕಿ ಹೊಡೆದಿದೆ.
ತೆರೆದುಕೊಂಡ 2 ಏರ್‌ಬ್ಯಾಗ್
ಸೆಲ್ಟೋಸ್ ವಾಹನದ ಮುಂಭಾಗದ ಎರಡು ಏರ್ ಬ್ಯಾಗ್‌ಗಳು ತೆರೆದಿವೆ. ಅದೃಷÌವಶಾತ್ ಸಂಭವನೀಯ ಭಾರೀ ಅವಘಡ ತಪ್ಪಿದೆ. ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆೆ.
ಬೈಕ್-ಟಿಪ್ಪರ್ ಢಿಕ್ಕಿ: ಸವಾರ ಗಂಭೀರ
ಕೊಲ್ಲೂರು: ಜಡ್ಕಲ್ ಗ್ರಾ.ಪಂ. ವ್ಯಾಪ್ತಿಯ ಬೀಸಿನಪಾರೆ ನಿವಾಸಿ ರಾಜೇಶ(26) ಅವರು ಸ್ನೇಹಿತನೊಡನೆ ಕಾರ್ಯನಿಮಿತ್ತ ಬೈಕ್‌ನಲ್ಲಿ ತೆರಳಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭ ಜಡ್ಕಲ್ ಗ್ರಾ.ಪಂ. ಬಳಿ ಮುದೂರು ಕಡೆಯಿಂದ ಜಡ್ಕಲ್‌ಗೆ ಅತೀ ವೇಗದಲ್ಲಿ ಸಾಗುತ್ತಿದ್ದ ಟಿಪ್ಪರ್ ಢಿಕ್ಕಿ ಹೊಡೆದಿದೆ. ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಾಂಜಾ ಸೇವನೆ: ಮೂವರು ವಶಕ್ಕೆ
ಮಣಿಪಾಲ: ಪೆರಂಪಳ್ಳಿ ರಸ್ತೆಯ ಬಳಿ ಗಾಂಜಾ ಸೇವಿಸುತ್ತಿದ್ದ ಬ್ರಹ್ಮಗಿರಿಯ ಫೈಜಲ್ ಅಹಮ್ಮದ್ (23), ಕೇರಳದ ಅಂಜಲಿ ಎಸ್. ಮೆನನ್ (26) ಮತ್ತು ಮಣಿಪಾಲದ ಶುೃತಿ ಬಂಗೇರ (24) ಅವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಫಾರೆನ್ಸಿಕ್ ವರದಿಯಲ್ಲಿ ಅವರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.