50 ಕಂಪನಿಗಳಿದ್ದರೂ ನೌಕರಿ ಸಿಕ್ಕಿದ್ದು 50 ಮಂದಿಗಷ್ಟೆ!

4,004 ಹುದ್ದೆ ಗಳಿಗೆ 50 ಮಂದಿಯಷ್ಟೇ ಆಯ್ಕೆ! ಉದ್ಯೋಗ ಮೇಳಕ್ಕೆ 3122 ಉದ್ಯೋಗಾಕಾಂಕ್ಷಿಗಳು ಹಾಜರು

Team Udayavani, Aug 31, 2021, 3:56 PM IST

50 ಕಂಪನಿಗಳಿದ್ದರೂ ನೌಕರಿ ಸಿಕ್ಕಿದ್ದು 50 ಮಂದಿಗಷ್ಟೆ!

ಮೈಸೂರು: ನಗರದಲ್ಲಿ ನಡೆದ ಮಿನಿ ಉದ್ಯೋಗ ಮೇಳದಲ್ಲಿ 50 ಮಂದಿ ವಿವಿಧ ಕಂಪನಿಗಳಿಗೆ ನೇಮಕಾತಿ ಮೂಲಕ ಆಯ್ಕೆಯಾದರೆ, 685 ಮಂದಿ ಸಂದರ್ಶನಕ್ಕೆ ಆಯ್ಕೆಯಾದರು.

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಕೌಶಲ್ಯಭಿವೃದ್ಧಿ ಇಲಾಖೆ ಕಾರ್ಮಿಕ ಇಲಾಖೆ ಮತ್ತು ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಏರ್ಪಡಿಸಿದ್ದ ಮಿನಿ ಉದ್ಯೋಗ ಮೇಳದಲ್ಲಿ ಕೊರೊನಾ ಸಮಯದಲ್ಲಿ ಕೆಲಸ ಕಳೆದುಕೊಂಡವರು ಹಾಗೂ ಕೊರೊನೋತ್ತರ ಉದ್ಯೋಗದ ಆಸೆ ಹೊತ್ತ 3,122ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.

ಸೋಮವಾರ ದಿನವಿಡೀ ನಡೆದ ಉದ್ಯೋಗ ಮೇಳಕ್ಕೆಗ್ರಾಮೀಣಭಾಗದಯುವಕ,ಯುವತಿಯರ ಹೆಚ್ಚಾಗಿ ಆಗಮಿಸಿದ್ದರು. ಉದ್ಯೋಗ ಮೇಳಕ್ಕೆ ಬಂದವರಲ್ಲಿ ಬಹುತೇಕರು ಬಿಎ, ಬಿಕಾಂ, ಬಿಎಸ್ಸಿ ಹಾಗೂ ಎಂ.ಎ. ವಿದ್ಯಾರ್ಥಿಗಳೇ ಇದ್ದರು.

ಇದನ್ನೂ ಓದಿ:ಕ್ರಿಕೆಟ್ ಗೆ ವಿದಾಯ ಘೋಷಿಸಿದ ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್

ಫ್ರೆಷರ್ ಗೆ ನಿರಾಸೆ: ಕೆಲವೊಂದು ಕಂಪನಿಗಳು ಫ್ರೆಷರ್ ಗಳನ್ನು ತೆಗೆದುಕೊಳ್ಳಲು ನಿರಾಸಕ್ತಿ ತೋರಿದವು. ಬಹುತೇಕ ಕಂಪನಿಗಳು ವಿದ್ಯಾರ್ಥಿಗಳಿಂದ ರೆಸ್ಯೂಮೆ ಪಡೆದು ತಿಳಿಸುವುದಾಗಿ ಹೇಳಿದವು. ಅನೇಕ ಕಂಪನಿಗಳು ಅನುಭವಿಗಳನ್ನು ನೋಡುತ್ತಿದ್ದ ವಾದವೂ ಕಡಿಮೆ
ಸಂಬಳಕ್ಕೆ ಬರುವಂತೆ ಆಹ್ವಾನಿಸಿದ್ದರಿಂದ ಅನೇಕರು ಹಿಂದೆ ಸರಿಯುತ್ತಿದ್ದ ದೃಶ್ಯ ಕಂಡುಬಂದಿತು. ಇನ್ನೂ ಕೆಲವರು ಕೌಶಲಗಳಲ್ಲಿ ಹಿನ್ನಡೆಯಾಗಿದ್ದರಿಂದ ಖಾಲಿಯಿದ್ದ 4004 ಹುದ್ದೆಗಳಿಗೆ ಕೇವಲ 50 ಮಂದಿಯಷ್ಟೇ ನೇಮಕಾತಿ ಆದೇಶ ಪಡೆದಿದ್ದುಕಂಡು ಬಂದಿತು.

ಬಹುತೇಕರು ಇಂಗ್ಲಿಷ್‌ ಭಾಷಾ ಕೊರತೆ, ಟ್ಯಾಲಿ ಮತ್ತು ಫೀಲ್ಡ್‌ ವರ್ಕ್‌ ಕೆಲಸವಾಗಿದ್ದರಿಂದಲೂ ಅನೇಕರು ನಿರಾಸಕ್ತಿ ತೋರಿದರು. ಇನ್ನೂ ಅನೇಕ ವಿದ್ಯಾರ್ಥಿಗಳು ಇಂತಹ ಮೇಳಗಳು ಮತ್ತಷ್ಟು ಹೆಚ್ಚಾಗಿ ನಡೆಯ ಬೇಕಿದೆ. ಅಲ್ಲದೆ ಬಂದಿರುವ ಕಂಪನಿಗಳಲ್ಲಿ ಸಾಕಷ್ಟು ಫಿಲ್ಡ್‌ ವರ್ಕ್‌ ಆಧಾರಿತ ಕಂಪನಿಗಳಾಗಿದ್ದು, ಆಫೀಸ್‌ ವರ್ಕ್‌ ಕಂಪನಿಗಳು ಬಂದೆ ಇಲ್ಲ ಎಂದು ದೂರಿದರು. ಒಟ್ಟಾರೆ ಕೋವಿಡ್‌ ನಂತರ ನಡೆದ ಉದ್ಯೋಗ
ಮೇಳಕ್ಕೆ ನಿರೀಕ್ಷೆಗೂ ಮೀರಿದ ವಿದ್ಯಾರ್ಥಿಗಳ ಸ್ಪಂದನೆ ದೊರೆತಿತ್ತಾದರೂ ಉದ್ಯೋಗಾಕಾಂಕ್ಷಿಗಳು ಸೂಕ್ತಕೆಲಸ ಪಡೆಯುವಲ್ಲಿ ವಿಫ‌ಲರಾದರು.

ಉದ್ಯೋಗ ಮೇಳಕ್ಕೆ ಶಾಸಕ ರಾಮದಾಸ್‌ ಚಾಲನೆ ನೀಡಿದರು. ಇದೇ ವೇಳೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಲಿಂಗರಾಜು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

50ಕ್ಕೂ ಹೆಚ್ಚು ಪ್ರತಿಷ್ಟಿತ ಕಂಪನಿಗಳು ಭಾಗಿ
ಉದ್ಯೋಗ ಮೇಳದಲ್ಲಿ ಎಕ್ಸೆಲ್‌ ಸಾಫ್ಟ್, ತಿಯರಮ್ಸ್‌, ದೊಡ್ಡಕೈಗಾರಿಕೆಗಳ ಪೈಕಿ ಪ್ರಮುಖವಾಗಿ ಬೆಮಲ್‌, ಜೆ.ಕೆ. ಟೈರ್, ರಾಣೆ ಮದ್ರಾಸ್‌, ದುರ್ಗಾ ಸಲ್ಯೂಷನ್‌, ಗ್ರಾಸ್‌ ರೂಟ್ಸ್‌, ಆದಿತ್ಯಾ ಬಿರ್ಲಾ,ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ನಂಜನಗೂಡಿನ ನೆಸ್ಲೆ, ಜುಬಿಲಿಯಂಟ್‌, (ಯು.ಬಿ)ಯುನೈಟೆಡ್‌ ಬ್ರಿವರೀಸ್‌, ಸೆಕ್ಯೂರಿಟಿ ಏಜನ್ಸಿಗಳು, ಗಾರ್ಮೆಂಟ್ಸ್‌, ಹೆಲ್ತ್‌ ಸೆಕ್ಟರ್‌ನಂತಹ50ಕ್ಕೂ ಹೆಚ್ಚು ಪ್ರತಿಷ್ಟಿತಕಂಪನಿಗಳು ಭಾಗವಹಿಸಿದ್ದವು.

ಟಾಪ್ ನ್ಯೂಸ್

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

National Mourning: Postponement of Mangaluru Beach Festival

National Mourning: ಮಂಗಳೂರಿನ ಬೀಚ್‌ ಉತ್ಸವ ಮುಂದೂಡಿಕೆ

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

2-gangavathi

Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

pratap-Simha

Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್‌ ಸಿಂಹ

3-hunsur

Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

National Mourning: Postponement of Mangaluru Beach Festival

National Mourning: ಮಂಗಳೂರಿನ ಬೀಚ್‌ ಉತ್ಸವ ಮುಂದೂಡಿಕೆ

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.