ಕರಾವಳಿಯ ದೇಗುಲಗಳಲ್ಲಿ ಭಾರೀ ಭಕ್ತ ಸಂದಣಿ
Team Udayavani, Jun 16, 2024, 11:26 PM IST
ಸುಬ್ರಹ್ಮಣ್ಯ/ಬೆಳ್ತಂಗಡಿ, ಕೊಲ್ಲೂರು: ವಾರಾಂತ್ಯ ಹಾಗೂ ಸೋಮವಾರ ಬಕ್ರೀದ್ ಹಿನ್ನೆಲೆಯಲ್ಲಿ ಮೂರು ದಿನ ರಜೆಯಿಂದಾಗಿ ಕರಾವಳಿಯ ಪ್ರಮುಖ ದೇಗುಲಗಳಾದ ಕುಕ್ಕೆ ಸುಬ್ರಹ್ಮಣ್ಯ, ಶ್ರೀಕ್ಷೇತ್ರ ಧರ್ಮಸ್ಥಳ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಕೊಲ್ಲೂರು ಶ್ರೀ ಮುಕಾಂಬಿಕಾ ದೇಗುಲದಲ್ಲಿ ಭಾರೀ ಸಂಖ್ಯೆಯ ಭಕ್ತರು ಭೇಟಿ ನೀಡಿ ಶ್ರೀದೇವರ ದರುಶನ ಪಡೆದರು.
ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು. ಕೆಎಸ್ಸಾರ್ಟಿಸಿ ಬಸ್ ಅಲ್ಲದೇ ಖಾಸಗಿ ವಾಹನಗಳಲ್ಲಿ ಭಕ್ತರು ಆಗಮಿಸಿ ಶ್ರೀದೇವರ ದರುಶನ ಪಡೆದಿದ್ದಾರೆ. ಸಾವಿರಾರು ಮಂದಿ ಭೋಜನ ಪ್ರಸಾಸ ಸ್ವೀಕರಿಸಿದ್ದಾರೆ. ಸೋಮವಾರ ರಜೆಯಾಗಿದ್ದರಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು ಶ್ರೀಕ್ಷೇತ್ರ ಸೂಕ್ತ ವ್ಯವಸ್ಥೆ ಮಾಡಿಕೊಂಡಿದೆ.
ಕುಕ್ಕೆಯಲ್ಲಿ ಭಾರೀ ಜನ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ರವಿವಾರ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಶ್ರೀ ದೇವರ ದರುಶನ ಪಡೆದರಲ್ಲದೇ ಭೋಜನ ಪ್ರವಾಸ ಸ್ವೀಕರಿಸಿದರು. ರಜಾ ದಿನದ ಹಿನ್ನಲೆಯಲ್ಲಿ ಬಾರೀ ಸಂಖ್ಯೆಯ ಭಕ್ತರು ಆಗಮಿಸಿ ಶ್ರೀ ದೇವರ ದರ್ಶನ ಪಡೆದರು.
ಶನಿವಾರ ರಾತ್ರಿಯಿಂದಲೇ ಭಕ್ತರು ಕ್ಷೇತ್ರಕ್ಕೆ ಆಗಮಿಸಲು ಆರಂಭಿಸಿದ್ದರು. ರವಿವಾರ ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯ ಭಕ್ತರ ಸಂಖ್ಯೆ ಕಂಡುಬಂದಿದೆ. ದೇವಸ್ಥಾನದ ಹೊರಾಂಗಣ ಹಾಗೂ ರಥಬೀದಿಯಲ್ಲಿ ಭಕ್ತರ ದಟ್ಟಣೆ ಕಂಡುಬಂದಿತ್ತು. ಪಾರ್ಕಿಂಗ್ ಪ್ರದೇಶದಲ್ಲೂ ವಾಹನ ದಟ್ಟಣೆ ಉಂಟಾಗಿತ್ತು. ಕಾಶಿಕಟ್ಟೆ ಬಳಿ ಒಂದು ಹಂತದಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ಬಳಿಕ ವಾಹನ ದಟ್ಟಣೆ ನಿಯಂತ್ರಿಸಲಾಯಿತು. ಭಕ್ತರಿಗೆ ದೇವರ ದರ್ಶನ, ಪ್ರಸಾದ ಸ್ವೀಕಾರಕ್ಕೂ ಪೂರಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಎಸ್ಸಾರ್ಟಿಸಿ ಬಸ್‌ಗಳಲ್ಲೂ ಪ್ರಯಾಣಿಕರು ತುಂಬಿ ತುಳುಕುತ್ತಿರುವುದು ಕಂಡುಬಂದಿದೆ.
ಪ್ರಮುಖ ದೇಗುಲಗಳಲ್ಲದೇ ಸೌತಡ್ಕ ಶ್ರೀ ಮಹಾಗಣಪತಿ, ಉಜಿರೆಯ ಸುರ್ಯ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಮಂಗಳದೇವಿ ದೇವಸ್ಥಾನ, ಉಡುಪಿಯ ಶ್ರಿಕೃಷ್ಣ ಮಠಕ್ಕೂ ಭಾರೀ ಸಂಖ್ಯೆಯ ಭಕ್ತರು ಭೇಟಿ ನೀಡಿ ಶ್ರೀ ದೇವರ ದರುಶರ ಪಡೆದರಲ್ಲದೇ ಭೋಜನ ಪ್ರಸಾದ ಸ್ವೀಕರಿಸಿದ್ದಾರೆ.
ಕೊಲ್ಲೂರು: ಭಕ್ತರಿಂದ ಶ್ರೀದೇವಿಯ ದರುಶನ
ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇಗುಲಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀದೇವಿಯ ದರುಶನ ಪಡೆದರು.ಕರ್ನಾಟಕ ಸಹಿತ ವಿವಿಧ ರಾಜ್ಯಗಳಿಂದ ಭಕ್ತ ಸಾಗರ ಹರಿದುಬಂದಿತ್ತು. ಭಕ್ತರನ್ನು ನಿಯಂತ್ರಿಸಲು ದೇಗುಲದ ಸಿಬಂದಿ ಹಾಗೂ ಪೋಲಿಸರು ಹರಸಾಹಸಪಡಬೇಕಾಯಿತು. ಭಕ್ತರ ಸರತಿ ಸಾಲು ಮುಖ್ಯ ರಸ್ತೆಯನ್ನು ದಾಟಿ ರಾ.ಹೆದ್ದಾರಿಯ ಅಂಚಿನವರೆಗೆ ತಲುಪಿತ್ತು. ದೂರ ಸರಿದ ಮಳೆಯಿಂದಾಗಿ ಅನಾಯಾಸ ದರ್ಶನ ಸಾಧ್ಯವಾಯಿತು. ಕಾರ್ಯನಿರ್ವಹಣಾ ಕಾರಿ ಪ್ರಶಾಂತ ಕುಮಾರ್ ಶೆಟ್ಟಿ ಉಪಕಾರ್ಯನಿರ್ವಹಣಾ ಕಾರಿ ಪುಷ್ಪಲತಾ ಉಪಸ್ಥಿತರಿದ್ದು, ಮುಂಜಾಗ್ರತ ಕ್ರಮ ಕೈಗೊಂಡಿದ್ದರು.
ಭಾರೀ ಸಂಖ್ಯೆಯ ಭಕ್ತರ ಆಗಮನದಿಂದಾಗಿ ದೇಗುಲ ಸಹಿತ ಖಾಸಗಿ ವಸತಿ ಗೃಹಗಳು ಭರ್ತಿಯಾಗಿದ್ದವು.
ಮಂದಾರ್ತಿಯಲ್ಲಿ ರಿಷಬ್ ಶೆಟ್ಟಿ
ಬ್ರಹ್ಮಾವರ: ಖ್ಯಾತ ಚಲನಚಿತ್ರ ನಟ ರಿಷಬ್ ಶೆಟ್ಟಿ ಅವರು ಕುಟುಂಬ ಸಮೇತರಾಗಿ ಆಗಮಿಸಿ ಶ್ರೀ ಕ್ಷೇತ್ರ ಮಂದಾರ್ತಿ ದೇವಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿ ಎಚ್. ಧನಂಜಯ ಶೆಟ್ಟಿ ಅವರಿಗೆ ಪ್ರಸಾದ ನೀಡಿದರು .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.