ಕಲಿಕಾ ಸಾಮರ್ಥ್ಯ ಅಳೆಯಲು ಪರೀಕ್ಷೆ ಬೇಕೇ ಬೇಕು

Team Udayavani, May 31, 2021, 6:50 AM IST

ಕಲಿಕಾ ಸಾಮರ್ಥ್ಯ ಅಳೆಯಲು ಪರೀಕ್ಷೆ ಬೇಕೇ ಬೇಕು

ವಿದ್ಯಾರ್ಥಿಯ ಕಲಿಕಾ ಸಾಮರ್ಥ್ಯವನ್ನು ಅಳೆಯಲು ಮೌಲ್ಯಮಾಪನವು ಒಂದು ಮಾನದಂಡ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವವೂ ಕೂಡ ಅಷ್ಟೇ ಮುಖ್ಯ. ಆದ ಕಾರಣ, ಪರೀಕ್ಷೆ ವಿಚಾರದಲ್ಲಿ ಮಕ್ಕಳಿಗೆ ತೊಂದರೆ ಕೊಡದೇ ಬೇಗನೇ ನಿರ್ಧಾರ ತೆಗೆದುಕೊಳ್ಳಬೇಕು. ಹಾಗೆಯೇ ಪರೀಕ್ಷೆಯನ್ನೂ ಸುರಕ್ಷಿತವಾಗಿ ನಡೆಸಬೇಕು.

ಇದು ರಾಜ್ಯದ ಪೋಷಕರ ಮನವಿ. ಉದಯವಾಣಿ ನಡೆಸಿದ ಸಮೀಕ್ಷೆಯಲ್ಲಿ ಬಹು ಉತ್ಸಾಹದಿಂದ ಪಾಲ್ಗೊಂಡಿದ್ದವರು ಇವರೇ. ಮಕ್ಕಳಿಗೆ ಪರೀಕ್ಷೆ ಮಾಡುವುದಕ್ಕೆ ಸಹಮತ ವ್ಯಕ್ತಪಡಿಸಿರುವ ಹೆತ್ತವರು, ಎಸೆಸೆಲ್ಸಿ ಮತ್ತು ಪಿಯುಸಿ ಜೀವನದ ಅತ್ಯಂತ ಪ್ರಮುಖ ಘಟ್ಟ ಎಂದೂ ಹೇಳಿದ್ದಾರೆ. ಈ ವರ್ಷ ಪಿಯುಸಿ ಪರೀಕ್ಷೆ ಮಾಡಿ ಅಂತ ಶೇ.57ರಷ್ಟು ಹೆತ್ತವರು ಸರಕಾರಕ್ಕೆ ಸಲಹೆ ನೀಡಿದ್ದಾರೆ. ಉಳಿದವರಲ್ಲಿ ಈ ವರ್ಷ ಬೇಡ ಎಂದವರು ಶೇ.23.5.

ಆಫ್ ಲೈನ್‌ ಆದ್ರೂ ಆಗಲಿ, ಆನ್‌ ಲೈನ್‌ ಆದ್ರೂ ಆಗಲಿ ಒಟ್ಟಾರೆಯಾಗಿ ಪರೀಕ್ಷೆಯಾದರೆ ಸಾಕು ಎಂದವರು ಶೇ.65.6ರಷ್ಟು ಮಂದಿ. ತರಗತಿ ಪರೀಕ್ಷೆಗಳ ಅಂಕದಲ್ಲಿ ಪಾಸ್‌ ಮಾಡಿ ಎಂದು ಶೇ.34.4ರಷ್ಟು ಮಂದಿ ಹೇಳಿದ್ದಾರೆ. ಅದರಲ್ಲೂ ಆಫ್ ಲೈನ್‌ ಪರೀಕ್ಷೆಯೇ ಇರಲಿ ಅಂತ ಶೇ.38.9ರಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಶೇಷವೆಂದರೆ ಹೆತ್ತವರು ಪರೀಕ್ಷೆ ಜತೆಗೆ, ಮಕ್ಕಳ ಆರೋಗ್ಯದ ಬಗ್ಗೆಯೂ ಗಮನ ಕೊಟ್ಟಿದ್ದಾರೆ. ಬಹುತೇಕ ಹೆತ್ತವರು ಶಾಲಾ- ಕಾಲೇಜು ಮಟ್ಟದಲ್ಲೇ ಪರೀಕ್ಷೆ ನಡೆಯಲಿ ಎಂದು ಕೇಳಿಕೊಂಡಿದ್ದಾರೆ. ಅಂದರೆ ನಾವು ಶಾಲಾ-ಕಾಲೇಜು ಮಟ್ಟದಲ್ಲಿ ಪರೀಕ್ಷೆ ನಡೆದರೆ ಸಾಕೇ ಎಂಬ ಪ್ರಶ್ನೆ ಕೇಳಿದ್ದೆವು. ಇದಕ್ಕೆ ಶೇ.59.6ರಷ್ಟು ಮಂದಿ ಸಾಕು ಎಂದು ಉತ್ತರಿಸಿದ್ದಾರೆ. ರಾಜ್ಯಮಟ್ಟದ ಪರೀಕ್ಷೆ ಬೇಕು ಎಂದವರು ಶೇ.29.9ರಷ್ಟು ಮಂದಿ. ಜಿಲ್ಲಾ ಮಟ್ಟದಲ್ಲಿ ನಡೆಯಲಿ ಅಂತ ಶೇ.10.5ರಷ್ಟು ಮಂದಿ ಹೇಳಿದ್ದಾರೆ. ಒಟ್ಟಾರೆಯಾಗಿ ಇಲ್ಲಿ ಸಿಕ್ಕಿರುವ ಉತ್ತರವೇನೆಂದರೆ, ಮನೆಯ ಹತ್ತಿರದಲ್ಲೇ ಮಕ್ಕಳು ಪರೀಕ್ಷೆ ಬರೆದು ಬರಲಿ ಎಂಬುದಾಗಿದೆ.
ಪರೀಕ್ಷಾ ವಿಷಯದ ವಿಚಾರದಲ್ಲೂ ಹೆತ್ತವರು ಬುದ್ಧಿವಂತಿಕೆ ತೋರಿದ್ದಾರೆ. ಪ್ರಮುಖ ವಿಷಯಗಳ ಮೇಲೆ ಪರೀಕ್ಷೆ ನಡೆಸಿ ಅಂತ ಶೇ.41.3ರಷ್ಟು ಹೆತ್ತವರು ಹೇಳಿದ್ದಾರೆ. ಪಠ್ಯಕ್ರಮದ ಅರ್ಧ ವಿಷಯದ ಮೇಲೆ ಪರೀಕ್ಷೆ ನಡೆಯಲಿ ಎಂದು ಶೇ.34.3ರಷ್ಟು ಮಂದಿ ಅಭಿಪ್ರಾಯ ಪಟ್ಟಿದ್ದಾರೆ. ಶೇ.24.4ರಷ್ಟು ಹೆತ್ತವರು ಪೂರ್ಣ ವಿಷಯದ ಮೇಲೆ ಪರೀಕ್ಷೆ ನಡೆಯಲಿ ಎಂದಿದ್ದಾರೆ. ಇನ್ನು ಪ್ರತಿ ರೂಮಿನಲ್ಲಿ 20 ಮಕ್ಕಳನ್ನು ಕೂರಿಸಿ ಪರೀಕ್ಷೆ ಬರೆಸಿದರೆ ಸಾಕು ಎಂದು ಕೆಲವರು ಹೇಳಿದರೆ, ಕಳೆದ ವರ್ಷದಂತೆಯೇ ಸುರಕ್ಷಿತವಾಗಿ ಪರೀಕ್ಷೆ ಮಾಡಲಿ ಎಂದು ಹೇಳಿ ಸರಕಾರದ ಬೆನ್ನನ್ನೂ ತಟ್ಟಿದ್ದಾರೆ. ಹಾಗೆಯೇ ಪರೀಕ್ಷೆ ಮುಂದೂಡುತ್ತಾ ಹೋದರೆ ಅವರಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಹೀಗಾಗಿ ಬೇಗನೇ ಮುಗಿಯಲಿ ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಾಗಿಯೇ ಬಹಳಷ್ಟು ಹೆತ್ತವರು ಜುಲೈಯಲ್ಲೇ ಪರೀಕ್ಷೆ ನಡೆಯಲಿ ಎಂದೂ ಹೇಳಿದ್ದಾರೆ.

ಪರೀಕ್ಷೆ ನಡೆಸುವುದಾದರೆ ಈ ಕೆಳಗಿನ ಯಾವ ವಿಧಾನ ಉತ್ತಮ?

ಟಾಪ್ ನ್ಯೂಸ್

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.