ಕಾಯ್ದೆ ಬಳಕೆಯಲ್ಲಿ ವಿವೇಚನೆ ಇರಲಿ
Team Udayavani, Feb 23, 2020, 7:15 AM IST
ಕಾಯಿದೆಗಳು ಒಂದೆಡೆ ಸಹಜ ಸಮಸ್ಯೆಯ ಪರಿಹಾರಕ್ಕೆ ಅನುವು ಮಾಡಿಕೊಟ್ಟಿವೆ. ಇನ್ನೊಂದೆಡೆ ಅವು ಅಸಹಜ ಸಮಸ್ಯೆಗಳ ಉಗಮಕ್ಕೂ ದಾರಿ ಮಾಡಿ ಕೊಟ್ಟಿದೆ. ಕಾರಣವಾಗಿದೆ. ಕಾಯಿದೆಗಳನ್ನು ದುರುಪಯೋಗ ಪಡಿಸಿಕೊಂಡವರ ಬಗ್ಗೆ ಆ ಕಾಯಿದೆಗಳ ನಿಲುವು ಸ್ಪಷ್ಟವಾಗಿಲ್ಲ ದಿರುವುದು ಇಂತಹ ಕೃತಕ ಸಮಸ್ಯೆಗಳ ಹುಟ್ಟಿಗೆ ಕಾರಣವಾಗಿದೆ.
ಮಾಹಿತಿ ಹಕ್ಕು ಕಾಯಿದೆ ಬಂದಂದಿನಿಂದ ಸಾರ್ವಜನಿಕರು ಆದನ್ನು ತಮ್ಮ ಅಗತ್ಯಕ್ಕಿಂತ ಪ್ರಯೋಗಕ್ಕೆ, ಪ್ರದರ್ಶನಕ್ಕೆ ಮತ್ತು ಸ್ವಾರ್ಥಕ್ಕೆ ಉಪಯೋಗಿಸಿಕೊಂಡ ಹಲವಾರು ನಿದರ್ಶನಗಳಿವೆ. ಯಾರೇ ಆದರೂ ಮತ್ತು ಎಲ್ಲರೂ ಮಾಹಿತಿ ಹಕ್ಕು ಕಾಯಿದೆಯಂತೆ ಮಾಹಿತಿಯನ್ನು ಪಡೆಯಬಹುದು. ಆದರೆ ಈ ರೀತಿಯ ಕಡಿವಾಣವಿಲ್ಲದ ಹಕ್ಕು ಆಡಳಿತವನ್ನು ಕುಂಠಿತಗೊಳಿಸುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ಇತ್ತೀಚೆಗೆ ಅಭಿಪ್ರಾಯ ಪಟ್ಟಿದೆ. ಅಲ್ಲದೆ, ಮಾಹಿತಿ ಹಕ್ಕಿನ ದುರ್ಬಳಕೆ ಮತ್ತು ಅದರಿಂದಾಗಬಹುದಾದ ಕೆಟ್ಟ ಪರಿಣಾಮಗಳನ್ನು ನಿಯಂತ್ರಿಸಲು ಸಲಹೆಯನ್ನು ಕೇಳಿದೆ. ಇನ್ನೊಂದೆಡೆ ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಸರಕಾರಿ ಆಡಳಿತದೊಂದಿಗೆ ಸಾರ್ವಜನಿಕರ ಸಂವಹನ ಬಹುತೇಕ ಉಚಿತವಾಗಿದೆ. ಯಾರೇ ಆದರೂ ಯಾವಾಗಲಾದರೂ ಸರಕಾರಿ ಆಡಳಿತವನ್ನು ಇ-ಮೈಲ್ ಅಥವಾ ಸಾಮಾಜಿಕ ಇ-ಮಾಧ್ಯಮದ ಮೂಲಕ ಸಂಪರ್ಕಿಸಬಹುದು. ಇಂತಹ ಅನಿಯಂತ್ರಿತ ಸಾರ್ವಜನಿಕ ಸಂಪರ್ಕವು ಸರಕಾರಿ ಅಧಿಕಾರಿಗಳಿಗೆ ಉತ್ತಮ ಆಡಳಿತವನ್ನು ನೀಡುವುದಕ್ಕೆ ಮಾರಕವಾಗಿ ಪರಿಣಮಿಸಿದೆ. ಕಾಯಿದೆಗಳು ಕೊಡಮಾಡುವ ಇಂತಹ ಅವಕಾಶಗಳು ಪ್ರಜೆಗಳ ಅನಗತ್ಯಕ್ಕೆ ಅನುಕೂಲವಾಗಿ, ಸರಕಾರಿ ಆಡಳಿತದ ಅಗತ್ಯಕ್ಕೆ ಪ್ರತಿಕೂಲವಾಗಿ ಪರಿಣಮಿಸುತ್ತಿವೆ.
ಕಾಯಿದೆಗಳು ಒಂದೆಡೆ ಸಹಜ ಸಮಸ್ಯೆಯ ಪರಿಹಾರಕ್ಕೆ ಅನುವು ಮಾಡಿಕೊಟ್ಟಿವೆ. ಇನ್ನೊಂದೆಡೆ ಅವು ಅಸಹಜ ಸಮಸ್ಯೆಗಳ ಉಗಮಕ್ಕೂ ಹೇತುವಾಗಿವೆ. ಕಾಯಿದೆಗಳನ್ನು ದುರುಪಯೋಗ ಪಡಿಸಿಕೊಂಡವರ ಬಗ್ಗೆ ಆ ಕಾಯಿದೆಗಳ ನಿಲುವು ಸ್ಪಷ್ಟವಾಗಿಲ್ಲ ದಿರುವುದು ಇಂತಹ ಕೃತಕ ಸಮಸ್ಯೆಗಳ ಹುಟ್ಟಿಗೆ ಕಾರಣವಾಗಿದೆ.
ದುರದೃಷ್ಟವಶಾತ್ ನಾವು ಈಗ ಸಾಮಾನ್ಯ ನಾಗರಿಕರನ್ನು ಅಪರಾಧೀಕರಿಸುವಂತಹ ವಿಪರೀತ ಶಾಸನವನ್ನು ಹೊಂದಿದ್ದೇವೆ. ಒಳ್ಳೆಯ ಕಾನೂನುಗಳು ನ್ಯಾಯೋಚಿತವಾಗಿರುತ್ತವೆ, ಯಾವುದೇ ಗುಂಪಿನ ವಿರುದ್ಧ ತಾರತಮ್ಯ ಮಡುವುದಿಲ್ಲ ಮತ್ತು ಅವುಗಳನ್ನು ಸಮಂಜಸವಾಗಿ ಕಾರ್ಯಗತಗೊಳಿಸಬಹುದು. ಕೆಟ್ಟ ಕಾನೂನುಗಳು, ಮತ್ತೂಂದೆಡೆ ವಿಪರೀತ ತಾರತಮ್ಯವನ್ನು ಸೃಷ್ಟಿಸಿ ಮುಗ್ಧ ಜನರಿಗೆ ಕಿರುಕುಳ ನೀಡಬಹುದು; ಪುರಾವೆಯ ಹೊಣೆಯನ್ನು ಆರೋಪಿ ಸುವವನ ಬದಲು ಸಾಮಾನ್ಯ ನಾಗರಿಕನ ಅಥವಾ ರಾಜ್ಯದ ಮೇಲೆ ಇರಿಸುತ್ತವೆ; ಉತ್ಪಾದಕತೆಯಿಲ್ಲದೆ ಹೆಚ್ಚುವರಿ ಸಂಪತ್ತನ್ನು ಪಡೆಯಲು ಆರೋಪಿಗೆ ಅನುಕೂಲವಾಗಿಸುತ್ತದೆ; ಅಂತಹ ಕಾನೂನನ್ನು ಜಾರಿಗೊಳಿಸುವಲ್ಲಿ ಭ್ರಷ್ಟಾಚಾರಕ್ಕೂ ಕಾರಣವಾಗಬಹುದು.
ಆದರೆ ಮಾನವನಲ್ಲಿ ಸಹಜವಾಗಿರುವ ವೈಫಲ್ಯಗಳನ್ನು ಮತ್ತು ದೌರ್ಬ ಲ್ಯಗಳನ್ನು ಅತಿ ಕ್ರಿಮಿನಲ… ಎಂದು ಅಪರಾಧೀಕರಿಸುವ ಪ್ರವೃತ್ತಿಗೆ ನಾಗರಿಕರು ಮತ್ತು ಸಮಾಜ ಹೆಚ್ಚು ಗಮನ ಹರಿಸಬೇಕು. ಕೆಲವು ಕಾನೂನುಗಳು ಸಮಸ್ಯೆಗಳನ್ನು ಸಿವಿಲ್ ವ್ಯಾಪ್ತಿಯಿಂದ ಕ್ರಿಮಿನಲ್ ವ್ಯಾಪ್ತಿಗೆ ವರ್ಗಾಯಿಸುತ್ತಿವೆ. ಇತ್ತೀಚಿನ ಸಂಸತ್ತು ಅಧಿವೇಶನಗಳು ಶಾಸಕರ ಹಾಜರಾತಿ ಮತ್ತು ಶಾಸನಗಳ ವಿಷಯದಲ್ಲಿ ಉತ್ತಮವಾಗಿದೆ. ಆದರೂ ಮಸೂದೆಗಳ ಬಗ್ಗೆ ಕಡಿಮೆ ಚರ್ಚೆಗಳು ನಡೆದಿವೆ. ಇದುವೆ ಸಾಮಾನ್ಯ ನಾಗರಿಕರನ್ನು ಅಪರಾಧೀಕರಿಸುವಂತಹ ವಿಪರೀತ ಶಾಸನಗಳಿಗೆ ಕಾರಣವಾಗಿದೆ. ಆದ್ದರಿಂದ ಉತ್ತಮ ಶಾಸನಗಳನ್ನು ತರಲು ಮತ್ತು ಎತ್ತಿ ಹಿಡಿಯಲು ನಾಗರಿಕರು ಶಾಸಕರನ್ನು ಕೇಳಬೇಕು ಮತ್ತು ಶಾಸಕರನ್ನು ಹೊಣೆಯಾಗಿಸಬೇಕು.
ಕಾಯಿದೆಗಳ ದುರ್ಬಳಕೆಯಲ್ಲಿ ಸಮಾಜದ ಶಿಕ್ಷಿತ ವರ್ಗದ ಪಾತ್ರವೆ ಹೆಚ್ಚಾಗಿರುತ್ತದೆ. ಇದನ್ನು ಶಿಕ್ಷಿತ ವರ್ಗದ ಅನಾಗರಿಕ ದೃಷ್ಟಿಕೋನವೆಂದೆ ಬಗೆಯಬಹುದು. ಉದಾಹರಣೆಗೆ: ಭವಿಷ್ಯ ನಿಧಿ ಕಾಯ್ದೆ ಬಂದು ಅದೆಷ್ಟೋ ವರ್ಷಗಳೇ ಸಂದರೂ ಅದನ್ನು ಪಾಲಿಸದೆ ಇರುವ ದೊಡ್ಡ ಸಂಸ್ಥೆಗಳು ಇವೆ. ನೌಕರರು ಈ ಬಗ್ಗೆ ದೂರನ್ನು ಕೊಟ್ಟಾಗ ಭವಿಷ್ಯನಿಧಿ ಅಧಿಕಾರಿಗಳು ತನಿಖೆ ಮಾಡಿ ಸೂಕ್ತ ಕ್ರಮವನ್ನು ತೆಗೆದುಕೊಂಡ ನಿದರ್ಶನಗಳು ಹಲವಿವೆ. ಆದರೆ ಕಾನೂನನ್ನು ತಿಳಿದ ಶಿಕ್ಷಿತ ಆಡಳಿತ ಮಂಡಳಿಗಳು, ಕೇವಲ ನೌಕರರಿಗೆ ತೊಂದರೆ ಕೊಡುವ ಉದ್ದೇಶದಿಂದ ಅಂತಹ ಕ್ರಮಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯದವರೆಗೂ ದಾವೆಯನ್ನು ಹೂಡಿವೆ. ನ್ಯಾಯಾಲಯದ ಆದೇಶದಂತೆ ಭವಿಷ್ಯ ನಿಧಿ ಪಾವತಿಸಲೇ ಬೇಕಾಗುತ್ತದೆ ಎಂದು ತಿಳಿದೂ ಶಿಕ್ಷಿತ ಆಡಳಿತ ಮಂಡಳಿಗಳ ಈ ಕ್ರಮವು ಅಧಿಕಾರಿಗಳ, ನ್ಯಾಯಾಲಯಗಳ ಮತ್ತು ಪರೋಕ್ಷವಾಗಿ ಸಾರ್ವಜನಿಕರ ಅಮೂಲ್ಯ ಸಮಯವನ್ನು ಮತ್ತು ಸಂಪನ್ಮೂಲಗಳನ್ನು ಹಾಳು ಮಾಡುತ್ತವೆ. ಮಾತ್ರವಲ್ಲ, ಹಾಗೆ ವ್ಯವಹರಿಸುವಲ್ಲಿ ಸಾರ್ವಜನಿಕ ಹಣವನ್ನೆ ಆಡಳಿತ ಮಂಡಳಿಗಳು ವ್ಯಯಿಸಿರುತ್ತವೆ.
ಅಂತೆಯೆ, ಪೋಷಕರು ಮತ್ತು ಹಿರಿಯ ನಾಗರಿಕರ ಪಾಲನೆ ಹಾಗೂ ಕಲ್ಯಾಣ ಕಾಯಿದೆಯು 2007ನೆ ಇಸವಿಯಲ್ಲಿ ಅಸ್ತಿತ್ವಕ್ಕೆ ಬಂದಿದೆ. ಸಂಬಂಧಿಸಿದವರೆಲ್ಲರಿಗೆ ಯಾವುದೆ ಕಾಯಿದೆಯು ಅನುಕೂಲವಾಗುವುದದಾರೆ ಮಾತ್ರ ಅಂತಹ ಕಾಯ್ದೆಗಳನ್ನು ಪೂರ್ವಾನ್ವಯವಾಗುವಂತೆ ಅನುಷ್ಠಾನವಾಗಿಸಲು ಸಾಧ್ಯ. ಆದರೆ ಹಿರಿಯ ನಾಗರಿಕರ ಕಾಯಿದೆಯನ್ನು ಪೂರ್ವಾನ್ವಯಗೊಳಿಸಿದರೆ, ಅದು ಸಂಬಧಿಸಿದವರನ್ನು ಪೋಷಕರು ಮತ್ತು ಮಕ್ಕಳು ಎಂದು ವಿಂಗಡಿಸಿ, ಒಬ್ಬರಿಗೆ ಅನುಕೂಲವಾಗಿಯೂ ಮತ್ತು ಇನ್ನೊಬ್ಬರಿಗೆ ಪ್ರತಿಕೂಲವಾಗಿಯೂ ಪರಿಣಮಿಸಬಹುದು.
ಆದರೆ ಆ ಕಾಯಿದೆ ಜಾರಿಗೆ ಬಂದ ಬಳಿಕ ಅದಕ್ಕೆ ಸರಿಯಾಗಿ ವ್ಯವಹರಿಸುವುದು ಪೋಷಕರ ಮತ್ತು ಮಕ್ಕಳ ಜವಾಬ್ದಾರಿ. ಇಲ್ಲೂ ಕೂಡ, ಶಿಕ್ಷಿತ ಮತ್ತು ಅನುಭವಿ ಹಿರಿಯ ನಾಗರಿಕರು, ಅನಿವಾರ್ಯತೆ ಇಲ್ಲದಿದ್ದರೂ, ಈ ಕಾಯಿದೆಯನ್ನು ದುರುಪಯೋಗ ಪಡಿಸಿಕೊಂಡದ್ದಿದೆ. ಉದಾಹರಣೆಗೆ: ಹಣ ಬಂದರೆ ಬರಲಿ ಎಂಬ ಉದ್ದೇಶಕ್ಕೆ ಪಿಂಚಣಿಯನ್ನು ಪಡೆಯುತ್ತಿರುವ ಹಿರಿಯ ನಾಗರಿಕರೂ ಈ ಕಾಯಿದೆಯಂತೆ ಅಧಿಕಾರಿಗಳ ಮೊರೆ ಹೋಗಿರುವುದು ಒಂದು ವಿಪರ್ಯಾಸ. ಕಾಯಿದೆಯೇ ತಿಳಿಸುವಂತೆ ಹಿರಿಯ ನಾಗರಿಕನು ತನ್ನ ಸಂಪಾದನೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಸಮರ್ಥನಾದರೆ ಮಾತ್ರ ಗರಿಷ್ಠ 10,000 ರೂಪಾಯಿಯವರೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ.
ಪೂರ್ವಾಪರ ವಿವೇಚನೆಯಿಲ್ಲದೆ ಯಾವುದೇ ಕಾಯಿದೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವುದು, ವಿವೇಕವಿಲ್ಲದ, ಶಿಕ್ಷಣವಿಲ್ಲದ, ಅಥವಾ ಅನುಭವವಿಲ್ಲದ ಅನಾಗರಿಕತೆಯ ಲಕ್ಷಣವಾಗುತ್ತದೆ. ವಿವೇಚನೆ ಯಿಂದ ಕಾಯಿದೆಗಳನ್ನು ಬಳಸಿಕೊಂಡಲ್ಲಿ, ಪ್ರಜಾಪ್ರಭುತ್ವದ ಸಂಪನ್ಮೂಲಗಳಿಂದ ತ್ವರಿತ, ಉತ್ತಮ ಆಡಳಿತವನ್ನು ಮತ್ತು ನ್ಯಾಯವನ್ನು ನಿರೀಕ್ಷಿಸಬಹುದು.
ರವಿರಾಜ ಹೊಳ್ಳ ಎಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.