ಕಬ್ಬು ಬೆಳೆಗಾರರಿಗಿಲ್ಲ “ಸಂಕ್ರಾಂತಿ’ ಸಿಹಿ
Team Udayavani, Jan 15, 2022, 12:40 PM IST
ಬೀದರ: ಮಕರ ಸಂಕ್ರಾಂತಿ ಹಬ್ಬದವರೆಗೆ ಸಿಹಿ ಸುದ್ದಿ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಕಬ್ಬು ಬೆಳೆಗಾರರಿಗೆ ಕಹಿ ಅನುಭವ ಆಗಿದೆ. ಕ್ರಷಿಂಗ್ ಶುರುವಾಗಿ ತಿಂಗಳುಗಳು ಕಳೆದರೂ ಕಬ್ಬಿನ ದರ ಘೋಷಿಸದಿರುವುದು ಸತತ ಆರ್ಥಿಕ ಹೊಡೆತಕ್ಕೆ ಒಳಗಾಗುತ್ತಿರುವ ಕೃಷಿಕರಲ್ಲಿ ಆತಂಕ ಹೆಚ್ಚಿದೆ.
ಕಾರ್ಖಾನೆಗಳು ಕ್ರಷಿಂಗ್ ಆರಂಭಕ್ಕೂ ಮುನ್ನವೇ ಕಬ್ಬಿನ ದರವನ್ನು ಘೋಷಿಸಬೇಕು. ಆದರೆ, ದರ ನಿಗದಿಪಡಿಸದೆ ಹಂಗಾಮು ಆರಂಭಿಸುವ ಪರಂ ಪರೆಯನ್ನು ಸಹಕಾರ ಮತ್ತು ಖಾಸಗಿ ಸಕ್ಕರೆ ಕಾರ್ಖಾನೆಗಳು ಮುಂದುವರೆಸಿಕೊಂಡು ಬರುತ್ತಿವೆ. ಹೀಗಾಗಿ ರೈತರು ವರ್ಷವಿಡೀ ಕಷ್ಟಪಟ್ಟು ಬೆಳೆದ ಟನ್ ಕಬ್ಬಿಗೆ ಎಷ್ಟು ಬೆಲೆ ಸಿಗುತ್ತದೆಯೋ ಎಂಬ ಗೊಂದಲದಲ್ಲೇ ಕಾರ್ಖಾನೆಗೆ ಕಬ್ಬನ್ನು ಸಾಗಿಸುವ ಸ್ಥಿತಿ ಬಂದಿದೆ.
ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ (ಎನ್‌ಎಸ್‌ಎಸ್‌ಕೆ), ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ (ಎಂಜಿಎಸ್‌ಎಸ್ ಕೆ), ಬೀದರ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ ಎಸ್‌ಕೆ)ಗಳು ಮತ್ತು ಖಾಸಗಿ ಕಾರ್ಖಾನೆಗಳಾದ ಭಾಲ್ಕೇಶ್ವರ, ಬೀದರ ಕಿಸಾನ್, ಭವಾನಿ ಶುಗರ್ ಇದ್ದು, ಎಲ್ಲ ಕಾರ್ಖಾನೆಗಳು ಪ್ರಸಕ್ತ ಸಾಲಿಗೆ ಕ್ರಷಿಂಗ್ ಆರಂಭಿಸಿ ಎರಡು ತಿಂಗಳು ಕಳೆಯುತ್ತ ಬಂದಿವೆ. ಆದರೆ, ಈವರೆಗೆ ಯಾವೊಂದು ಕಾರ್ಖಾನೆ ಸಹ ಕಬ್ಬಿನ ದರ ನಿಗದಿಪಡಿಸಿಲ್ಲ.
ಚುನಾಯಿತ ಪ್ರತಿನಿಧಿಗಳು ಮತ್ತು ಉದ್ಯಮಗಳನ್ನು ನಡೆಸುವವರೂ ಒಬ್ಬರೇ ಆಗುತ್ತಿರುವುದರಿಂದ ಜನಸಾಮಾನ್ಯರ, ರೈತರ ಹಿತಕ್ಕೆ ಧಕ್ಕೆ ಆಗುವುದನ್ನು ತಪ್ಪಿಸುವುದು ಯಾರಿಂದಲೂ ಸಾಧ್ಯವಿಲ್ಲ. ಜಿಲ್ಲಾಡಳಿತ ಮತ್ತು ಸರ್ಕಾರದ ಹಿಡಿತ ಇಲ್ಲವಾಗಿದೆ. ಇದೊಂದು ರೀತಿ ಕಾಯುವವರನ್ನೇ ಕೊಲ್ಲಲು ಸಜ್ಜಾದಂಥ ಪರಿಸ್ಥಿತಿ. ಕಬ್ಬು ಬೆಳೆಗಾರರು ಈಗ ಅಕ್ಷರಶಃ ಇಂಥದ್ದೆ ತೋಳಲಾಟದಲ್ಲಿ ಸಿಲುಕಿ ನರಳಾಡುತ್ತಿದ್ದಾರೆ.
ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಗಾಗಿ ರೈತರ ಕೂಗು ಅರಣ್ಯ ರೋದನವಾಗಿಯೇ ಉಳಿದಿದೆ. ಈ ಮಧ್ಯ ಪ್ರಕೃತಿ ವಿಕೋಪದ ನಡುವೆಯೂ ಬೆಳೆಯುವ ವಾಣಿಜ್ಯ ಬೆಳೆಗೆ ಮುಂಚಿತವಾಗಿ ಬೆಲೆ ನಿಗದಿಪಡಿಸಿ ರೈತರಿಗೆ ಅಭಯ ನೀಡಬೇಕಾದ ಕಾರ್ಖಾನೆ ಮಾಲೀಕರು ಮೌನಕ್ಕೆ ಜಾರಿದ್ದಾರೆ.
ಕಬ್ಬಿಗೆ ವೈಜ್ಞಾನಿಕ ದರ ಮತ್ತು ಕೃಷಿಂಗೂ ಮುನ್ನ ಬೆಲೆ ಘೋಷಣೆ ವಿಷಯಗಳ ಬಗ್ಗೆ ಕಾರ್ಖಾನೆ ಮಾಲೀಕರನ್ನು ಕೇಳುವ ಧೈರ್ಯವನ್ನು ಯಾರೊಬ್ಬ ಸಚಿವರು ಮತ್ತು ಶಾಸಕರು ತೋರುತ್ತಿಲ್ಲ. ಹೀಗಾಗಿ ಅವರು ಮಾಡಿದ್ದೇ ಸರಿ ಎಂಬಂಥ ಪರಿಸ್ಥಿತಿ ಇದೆ. ತಮಗಿಷ್ಟ ಬಂದಷ್ಟು ಮುಂಗಡ ಹಣ ಕೊಡುತ್ತಿವೆ. ನಂತರ ಹಂಗಾಮಿನ ಕೊನೆಗೂ ಇಂತಿಷ್ಟು ದರ ಹೇಳಿ ಕೈತೊಳೆದುಕೊಳ್ಳುತ್ತಿವೆ. ಇವರ ಧೋರಣೆ ಅನ್ನದಾತರನ್ನು ಅತಂತ್ರರನ್ನಾಗಿ ಮಾಡುತ್ತಿದೆ.
ಕ್ರಷಿಂಗ್ ಆರಂಭಕ್ಕೂ ಮುನ್ನವೇ ಕಬ್ಬಿಗೆ ದರ ನಿಗದಿ ನಿಯಮವನ್ನು ಯಾವುದೇ ಕಾರ್ಖಾನೆಗಳು ಪಾಲಿಸುತ್ತಿಲ್ಲ. ಪ್ರತಿ ಬಾರಿ ಅವರು ಕೊಟ್ಟಷ್ಟೇ ರೈತರು ಪಡೆಯುವಂತಾಗಿದೆ. ನಾವು ಬೊಬ್ಬೆ ಹೊಡೆದರೂ ನಮ್ಮ ಗೋಳು ಕೇಳುವರ್ಯಾರು ಇಲ್ಲ. ಈ ಬಾರಿ ಸರ್ಕಾರ ಕಬ್ಬಿಗೆ ಎಫ್‌ಆರ್‌ಪಿ ದರ ಹೆಚ್ಚಿಸಿದ್ದು, ಕಾರ್ಖಾನೆಗಳು ಟನ್ ಕಬ್ಬಿಗೆ 2,400 ರೂ. ನಿಗದಿಪಡಿಸಬೇಕು. ಜಿಲ್ಲಾಡಳಿತ, ಸಚಿವರು ರೈತ ಹಿತ ಕಾಪಾಡುವಲ್ಲಿ ಮುಂದಾಗಬೇಕು.-ಮಲ್ಲಿಕಾರ್ಜುನ ಸ್ವಾಮಿ ಜಿಲ್ಲಾಧ್ಯಕ್ಷ, ರೈತ ಸಂಘ, ಬೀದರ
-ಶಶಿಕಾಂತ ಬಂಬುಳಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.