Karnataka: ರಾಜ್ಯದಲ್ಲಿ ಬರವಿದ್ದರೂ ಸಚಿವರ ವಿಲಾಸಿತನಕ್ಕೆ ತಡೆಯಿಲ್ಲ
ಮನೆ, ಕಚೇರಿ ದುರಸ್ತಿ, ಹೊಸ ಕಾರು ಖರೀದಿಗೆ ಅಸ್ತು- ಸಿಎಂ ದಿಲ್ಲಿಯಲ್ಲಿ ಓಡಾಡಲು 40.83 ಲಕ್ಷ ರೂ.ಯ ವಿಲಾಸಿ ಕಾರು
Team Udayavani, Sep 9, 2023, 11:04 PM IST
ಬೆಂಗಳೂರು: ರಾಜ್ಯದ ನೂರಾರು ತಾಲೂಕುಗಳು ಭೀಕರ ಬರದ ಬೇಗೆಯಲ್ಲಿ ಬೇಯುತ್ತಿದ್ದರೆ, ಸರಕಾರ ಮಾತ್ರ ಹೊಸ ಕಾರು ಖರೀದಿ ಹಾಗೂ ಸಚಿವರ ಮನೆ, ಕಚೇರಿ ದುರಸ್ತಿಗೆ ಮುಂದಾಗಿದೆ!
ಸರಕಾರಕ್ಕೆ 100 ದಿನಗಳಾಗುತ್ತಿದ್ದಂತೆಯೇ 33 ಹೊಸ ಕಾರುಗಳ ಖರೀದಿಗೆ ಅನುಮತಿ ನೀಡಲಾಗಿತ್ತು. ಈಗ ಕಚೇರಿ ದುರಸ್ತಿ ಹಾಗೂ ವಸತಿ ಗೃಹಕ್ಕೆ ಗೃಹೋಪಯೋಗಿ ವಸ್ತುಗಳ ಖರೀದಿಗೆ ಮುಂದಾಗಿದೆ.
ಅನಗತ್ಯ ಖರ್ಚು ಹಾಗೂ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ, ಆರ್ಥಿಕ ಶಿಸ್ತು ಕಾಪಾಡಿ ಎಂದು ಅಧಿಕಾರಿಗಳಿಗೆ ಕಟ್ಟಪ್ಪಣೆಗಳನ್ನು ಮಾಡುವ ಸಿಎಂ ಮತ್ತು ಸಚಿವರು ತಮಗಾಗಿ ಖರ್ಚು ಮಾಡಲಿರುವ ಮೊತ್ತಕ್ಕೆ ಪಾರದರ್ಶಕ ಕಾಯ್ದೆಯ ವಿನಾಯಿತಿಯನ್ನೂ ಪಡೆದಿದ್ದಾರೆ.
ಟೆಂಡರ್ ಇಲ್ಲದೆ 33 ಕಾರು ಖರೀದಿಗೆ 9.90 ಕೋಟಿ ರೂ.
ಯಾವುದೇ ಟೆಂಡರ್ ಇಲ್ಲದೆಯೇ ರಾಮನಗರದಲ್ಲಿರುವ ಟೊಯೋಟೋ ಕಿರ್ಲೋಸ್ಕರ್‌ನಿಂದ ನೇರವಾಗಿ ಕಾರು ಖರೀದಿಸಲು ಅವಕಾಶ ಕಲ್ಪಿಸಲಾಗಿದ್ದು, 33 ಕಾರುಗಳಿಗೆ 9.90 ಕೋಟಿ ರೂ.ಗಳನ್ನು ಖರ್ಚು ಮಾಡಲು ಈ ಹಿಂದೆ ಆದೇಶಿಸಿದೆ. ಸಿಎಂ ಹಾಗೂ ಮಂತ್ರಿಮಂಡಲದ ಸಚಿವರು ಮಾತ್ರವಲ್ಲದೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಪೊನ್ನಣ್ಣ ಅವರಿಗೆ 26 ಲಕ್ಷ ರೂ. ಇನ್ನೋವಾ ಕ್ರಿಸ್ಟಾ ಹಾಗೂ ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ 30 ಲಕ್ಷ ರೂ. ಮೌಲ್ಯದ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಝಡ್‌ಎಕ್ಸ್ ಕಾರುಗಳ ಹಂಚಿಕೆಗೆ ಅನುಮತಿ ನೀಡಲಾಗಿದೆ. ಜತೆಗೆ ಸಿಎಂ ಸಿದ್ದರಾಮಯ್ಯ ಅವರು ದಿಲ್ಲಿಯಲ್ಲಿ ಓಡಾಡಲು 40.83 ಲಕ್ಷ ರೂ. ಬೆಲೆಬಾಳುವ ಟೊಯೋಟೋ ಫಾಚ್ಯುìನರ್ ಕಾರು ಖರೀದಿಗೆ ಒಪ್ಪಿಗೆ ನೀಡಲಾಗಿದೆ.
ಕಚೇರಿ ದುರಸ್ತಿಗೆ 3.80 ಕೋ. ರೂ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಸಚಿವರ ಕಚೇರಿ ದುರಸ್ತಿ ಮತ್ತು ಬಣ್ಣ ಬಳಿಯಲು 3.80 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಇದಕ್ಕೂ ಯಾವುದೇ ಟೆಂಡರ್ ಕರೆದಿಲ್ಲ. ಯಾಕೆಂದರೆ, ಇದಕ್ಕೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಅಧಿನಿಯಮದಡಿ ವಿನಾಯಿತಿ ನೀಡ ಲಾಗಿದೆ.
ಗೃಹೋಪಯೋಗಿ ವಸ್ತುಗಳಿಗೆ 3.40 ಕೋ.ರೂ.
ಸಚಿವರ ವಸತಿ ಗೃಹಗಳಿಗೆ ಗೃಹೋ ಪಯೋಗಿ ವಸ್ತುಗಳು ಹಾಗೂ ಪೀಠೊ ಪಕರಣಗಳ ಪೂರೈಕೆಗಾಗಿ 3.40 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಅಧಿಸೂಚಿಸಿದ್ದು, ಈ ಎರಡೂ ಕಾಮಗಾರಿ ಗಳಿಗೂ ಪಾರದರ್ಶಕ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ. ಆದರೆ ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಒದಗಿಸುವ ಹೊಣೆಯನ್ನು ಲೋಕೋಪಯೋಗಿ ಇಲಾಖೆಗೆ ಕೊಡಲಾಗಿದೆ.
ಮನೆ ದುರಸ್ತಿಗೆ ಟೀಕೆ
ಸತತ 3 ವರ್ಷಗಳ ಕಾಲ ಬಳಸಿದ್ದರೆ ಅಥವಾ ಗರಿಷ್ಠ 1 ಲಕ್ಷ ಕಿ.ಮೀ. ಸಂಚರಿಸಿದ್ದರೆ ಕಾರುಗಳನ್ನು ಬದಲಿಸಲು ಅವಕಾಶವಿದೆ. ಈಗಾಗಲೇ ಕೆಲವು ಕಾರುಗಳು ಗರಿಷ್ಠ ಮಿತಿಯನ್ನೂ ಮೀರಿ ಸಂಚರಿಸಿದ್ದು, ಜೀವರಕ್ಷಣೆಯ ದೃಷ್ಟಿಯಿಂದ ಇವುಗಳನ್ನು ಬದಲಿಸುವುದು ಸೂಕ್ತ. ಆದರೆ ಮನೆ, ಕಚೇರಿ ದುರಸ್ತಿಗೆ ಮುಂದಾಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.