ISRO: “ಶಿವಶಕ್ತಿ ಹೆಸರಲ್ಲಿ ತಪ್ಪೇನಿಲ್ಲ”- ಇಸ್ರೋ ಮುಖ್ಯಸ್ಥ ಸೋಮನಾಥ್ ಪ್ರತಿಪಾದನೆ
Team Udayavani, Aug 28, 2023, 12:35 AM IST
ಹೊಸದಿಲ್ಲಿ: ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಇಳಿದಿರುವ ಜಾಗವನ್ನು “ಶಿವಶಕ್ತಿ’ ಎಂದು ಹೆಸರಿಸಿರುವುದಲ್ಲಿ ಯಾವುದೇ ತಪ್ಪಿಲ್ಲ ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ರವಿವಾರ ಸ್ಪಷ್ಟಪಡಿಸಿದ್ದಾರೆ.
ಕೇರಳದ ತಿರುವನಂತಪುರದ ಭದ್ರಕಾಳಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ ಅವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ದರು. ಈ ವೇಳೆ “ವಿಕ್ರಮ್ ಲ್ಯಾಂಡರ್ ಇಳಿದಿರುವ ಜಾಗವನ್ನು ಪ್ರಧಾನಿ ಮೋದಿ ಅವರು ಶಿವಶಕ್ತಿ ಎಂದು ಹೆಸರಿಸಿ, ನಮ್ಮೆಲ್ಲರಿಗೂ ಅನ್ವಯವಾಗುವಂತೆ ಇಡೀ ದೇಶಕ್ಕೆ ಅರ್ಥವಾಗುವಂತೆ ಅದನ್ನು ವಿವರಿ ಸಿದ್ದಾರೆ. ದೇಶದ ಪ್ರಧಾನಿಯಾಗಿ ಚಂದ್ರ ಯಾನ-3ರ ಲ್ಯಾಂಡಿಂಗ್ ಪಾಯಿಂಟ್‌ಗೆ ಹೆಸರನ್ನು ಇಡುವ ಹಕ್ಕು ಅವರಿಗಿದೆ. ಹಾಗಾಗಿ ಶಿವಶಕ್ತಿ ಹೆಸರಿನಲ್ಲಿ ತಪ್ಪೇನಿಲ್ಲ. ಅದಷ್ಟೇ ಅಲ್ಲದೇ ಚಂದ್ರಯಾನ-2ರ ಲ್ಯಾಂಡಿಂಗ್ ಪಾಯಿಂಟ್‌ಗೂ ತಿರಂಗಾ ಪಾಯಿಂಟ್ ಎಂದು ಹೆಸರನ್ನು ಸೂಚಿ ಸಿದ್ದು ಈ ಎರಡು ಭಾರತೀಯ ಹೆಸರು ಗಳು ಸಮಂಜಸವಾಗಿವೆ’ ಎಂದಿದ್ದಾರೆ.
ವಿಜ್ಞಾನ -ಅಧ್ಯಾತ್ಮ ಎರಡೂ ನನ್ನ ಪರಿಧಿ: ಚಂದ್ರಯಾನ-3ರ ಯಶಸ್ಸಿನ ಬೆನ್ನಲ್ಲೇ ದೇವಸ್ಥಾನ ಭೇಟಿ ಬಗ್ಗೆ ಮಾತನಾಡಿದ ಅವರು ನಂಬಿಕೆ ಮತ್ತು ವಿಜ್ಞಾನ ಎರಡೂ ವಿಭಿನ್ನ. ಅವುಗಳನ್ನು ಬೆರೆಸುವ ಅಗತ್ಯ ವಿಲ್ಲ. ಅಲ್ಲದೇ ನಾನೊಬ್ಬ ಅನ್ವೇಷಕ! ನಾನು ಚಂದ್ರನನ್ನು ಅನ್ವೇಷಿಸುತ್ತೇನೆ, ಅದೇ ರೀತಿ ನನ್ನ ಅಂತರಾಳವನ್ನೂ ಅನ್ವೇಷಿಸುತ್ತೇನೆ. ವಿಜ್ಞಾನ ಮತ್ತು ಅಧ್ಯಾತ್ಮ ಎರಡೂ ನನ್ನ ಜೀವನದ ಪರಿಧಿಯ ಭಾಗ. ದೇವಸ್ಥಾನಗಳಿಗೆ ಹೋಗುತ್ತೇನೆ, ಗ್ರಂಥಗಳನ್ನು ಓದುತ್ತೇನೆ, ಬ್ರಹ್ಮಾಂಡದಲ್ಲಿ ನನ್ನ ಅಸ್ತಿತ್ವ ಮತ್ತು ಅದರ ಅರ್ಥವನ್ನು ಅನ್ವೇಷಿಸಲು ಪ್ರಯತ್ನಿಸುತ್ತೇನೆ. ಹೊರಗಿನ ಪ್ರಪಂಚಕ್ಕಾಗಿ ಅಲ್ಲಿನ ನನ್ನ ಅಸ್ತಿತ್ವಕ್ಕಾಗಿ ವಿಜ್ಞಾನವನ್ನು ಆಧರಿಸುವಂತೆಯೇ, ಅಂತರಾತ್ಮಕ್ಕಾಗಿ ದೇವಸ್ಥಾನಗಳಿಗೆ ಭೇಟಿ ನೀಡುತ್ತೇನೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.